ಮಕ್ಕಳ ಹಕ್ಕುಗಳ ಗ್ರಾಮಸಭೆ
Team Udayavani, Dec 21, 2017, 12:24 PM IST
ಹಳೆಯಂಗಡಿ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮಾತ್ರ ಯಾಕೆ ಹಾಲು ಮತ್ತು ಮೊಟ್ಟೆಯನ್ನು ಕೊಡುತ್ತಾರೆ ನಮಗೆ ಯಾಕೆ ಕೊಡುವುದಿಲ್ಲ, ನಾವು ಮಕ್ಕಳಲ್ಲವೇ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಕ್ಕಳು ಆಗ್ರಹಿಸಿದರು.
ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಪದವಿ ಪೂರ್ವ ಕಾಲೇಜಿನಲ್ಲಿ ಡಿ.20ರಂದು ನಡೆದ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ನಾರಾಯಣ ಸನಿಲ್ ಪ್ರೌಢಶಾಲೆಯ ವಿದ್ಯಾರ್ಥಿ ಮಹಮ್ಮದ್ ಶಿಯಾನ್ ಪ್ರಶ್ನಿಸಿ, ನಮ್ಮದು ಸಹ ಸರಕಾರಿ ಶಾಲೆಯಾಗಿದೆ. ನಮಗೂ ಹಾಲು, ಮೊಟ್ಟೆ ಬೇಕು ಎಂದು ಆಗ್ರಹಿಸಿದಾಗ ಸಭೆಯಲ್ಲಿನ ಮಕ್ಕಳಲ್ಲೂ ಸಂಚಲನ ಮೂಡಿತಲ್ಲದೇ ಚಪ್ಪಾಳೆ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಫಲಕ ಬೇಕು ಎಂದು ಸಸಿಹಿತ್ಲು ಶಾಲೆಯ ಪೂಜಾ ಆಗ್ರಹಿಸಿದರು. ನಾರಾಯಣ ಸನಿಲ್ ಪ್ರೌಢಶಾಲೆಯಲ್ಲಿ ಶೌಚಾಲಯ ಹೆಚ್ಚಬೇಕು ಎಂದು ಪ್ರಣಿತ್ ಕೇಳಿಕೊಂಡರೇ, ಯುಬಿಎಂಸಿ ಶಾಲೆಯ ಶೌಚಾಲಯದ ಛಾವಣಿ ಸರಿಯಿಲ್ಲ ಎಂದು ವಿದ್ಯಾ ದೂರಿಕೊಂಡರು. ಆಟದ ಮೈದಾನ ಸಮತಟ್ಟಿಲ್ಲ, ಶಾಲೆಗೆ ಆವರಣ ಗೋಡೆ ಬೇಕು ಎಂದು ನಾರಾಯಣ ಸನಿಲ್ ಶಾಲೆಯ ಸುಶ್ಮಿತ್ ಹೇಳಿದರು.
ಶ್ರೀ ನಾರಾಯಣ ಸನಿಲ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆಯ ಮನ್ವಿತ್,
ಹಳೆಯಂಗಡಿ ಯುಬಿಎಂಸಿ ಶಾಲೆಯ ಸಪ್ತಮಿ, ಸಿಎಸ್‌ಐ ಶಾಲೆಯ ರಕ್ಷಣ್, ಸಸಿಹಿತ್ಲು ಇದಕ್ಕೆ ಪ್ರತಿಕ್ರಿಯಿಸಿದ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಶೀಲಾವತಿ, ಈ ಬೇಡಿಕೆಯನ್ನು ಶಿಕ್ಷಣ ಇಲಾಖೆಗೆ ತಲುಪಿಸಲಾಗುವುದು ಎಂದರು.
ಸೂಚನ ಫಲಕ ಅಳವಡಿಸಿ
ಶಾಲಾ ವಠಾರದಲ್ಲಿ ಸೂಚನ ಶಾಲೆಯ ಕಾರ್ತಿಕ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕಾರ್ಯದರ್ಶಿ ಕೇಶವ ದೇವಾಡಿಗ, ಅಂಗನವಾಡಿ ಮೇಲ್ವಿಚಾರಕಿ ಶೀಲಾವತಿ, ಆರೋಗ್ಯ ಇಲಾಖೆಯ ಪ್ರದೀಪ್ ಕುಮಾರ್, ಸಿ.ಆರ್.ಪಿ. ಕುಸುಮಾ, ಮುಖ್ಯ ಶಿಕ್ಷಕ ಮೈಕಲ್ ಡಿ’ಸೋಜಾ, ಪ್ರಾಂಶುಪಾಲೆ ಜಯಶ್ರೀ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ನಾರಾಯಣ ಸನಿಲ್ ಪದವಿ ಪೂರ್ವ ಕಾಲೇಜಿನ ಅಶ್ವಿನ್ ಸ್ವಾಗತಿಸಿದರು. ದೀಪ್ತಿ ವಂದಿಸಿದರು. ನಮಿತಾ ನಿರೂಪಿಸಿದರು.
ಮಕ್ಕಳಿಂದ ಕೇಳಿ ಬಂದ ದೂರು-ದುಮ್ಮಾನ
ಉಡುಪಿ/ಮಂಗಳೂರು ಕಡೆಗಳಲ್ಲಿ ಸಂಚರಿಸುವ ಲೋಕಲ್ ಬಸ್‌ಗಳು ಶಾಲಾ ಮುಂಭಾಗದಲ್ಲಿ ನಿಲ್ಲುವುದೇ ಇಲ್ಲ. ಬಸ್ ತಂಗುದಾಣ ಅಗತ್ಯವಾಗಿ ಬೇಕಾಗಿದೆ. ಇಲ್ಲದಿದ್ದಲ್ಲಿ ಒಂದು ಕಿ.ಮೀ. ನಡೆಯಬೇಕು.
ನಿಶ್ಮಿತಾ,
ನಾರಾಯಣ ಸನಿಲ್ ಪ.ಪೂ. ಕಾಲೇಜು.
ಶಾಲೆಯ ಬಾವಿಯಿಂದ ನೀರು ಎಳೆಯಲು ಕಷ್ಟವಾಗುತ್ತದೆ. ಟಾಂಕಿಗೆ ನೀರು ಸುರಿಯದ ಕಾರಣ ಶಾಲೆಯಲ್ಲಿ ನೀರಿನ ಸಮಸ್ಯೆ ಕಾಡಿದೆ.
ವಿದ್ಯಾ, ಯುಬಿಎಂಸಿ ಶಾಲೆ.
ಶಾಲಾ ಮೈದಾನಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಾರೆ. ಮದ್ಯಪಾನ ಮಾಡಿ,ಬಾಟಲಿ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಹೆಂಚುಗಳನ್ನು ಕದಿಯುತ್ತಿದ್ದಾರೆ.
ರಜಾಕ್ ಮತ್ತು ನಮಿತಾ,
ನಾರಾಯಣ ಸನಿಲ್
ಪ್ರೌಢಶಾಲೆಯ ಕಿಟಕಿ ಬಾಗಿಲು ಬೀಳುವ ಸ್ಥಿತಿಯಲ್ಲಿವೆ. ಭದ್ರತೆ ಇಲ್ಲ, ಕಸ, ಕಡ್ಡಿಗಳನ್ನು ಪಕ್ಕದ ನಿವಾಸಿಗಳು ಶಾಲಾ ಆವರಣಕ್ಕೆ ಬಿಸಾಡುತ್ತಾರೆ.
ಶಬ್ರಿನಾ, ಬೊಳ್ಳೂರು ಸರಕಾರಿ ಶಾಲೆ.
ಪೋಷಕರಿಲ್ಲದ ಮಕ್ಕಳ ಪಾಲನೆ, ಪೋಷಣೆಗೆ ಸರಕಾರದಿಂದ ಮಾಸಿಕ ಪೋಷಕ ಧನ ಬರುವುದು ನಿಂತಿದೆ.
ಜುನೈದ್, ನಾರಾಯಣ ಸನಿಲ್
ಮಕ್ಕಳ ದೂರುಗಳು ಇಲಾಖೆಗೆ
ಮಕ್ಕಳ ಗ್ರಾಮ ಸಭೆಯಲ್ಲಿ ಬಂದಂತಹ ದೂರುಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗುವುದು. ಕೆಲವೊಂದು ಖಾಸಗಿ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯತ್‌ನಿಂದ ಸಾಧ್ಯವಾದಷ್ಟು ನೆರವು ನೀಡಲು ಪ್ರಯತ್ನ ನಡೆಸಲಿದ್ದೇವೆ. ಶಾಲಾ ಪರಿಸರದಲ್ಲಿನ ನಿವಾಸಿಗಳಿಗೆ ಮಕ್ಕಳ ದೂರಿನಂತೆ ನೋಟಿಸ್ ನೀಡುವ ಬಗ್ಗೆ ಆಡಳಿತದ ಗಮನಕ್ಕೆ ತರಲಾಗುವುದು.
– ಅಬೂಬಕ್ಕರ್
ಪಂಚಾಯತ್ ಅಭಿವೃದ್ಧಿ ಅಧಿಕಾರಿ.
ಮಕ್ಕಳ ಧ್ವನಿಗೆ ಪರಿಹಾರ
ಮಕ್ಕಳು ಮುಗ್ದªರಾದರೂ ಅವರಿಗೆ ಸ್ಥಳೀಯ ಸಮಸ್ಯೆಗಳ ಗ್ರಹಿಕೆ ಅತಿ ಅಗತ್ಯವಾದುದರಿಂದ ಯಾವುದೇ ಅಂಜಿಕೆ ಇಲ್ಲದೇ ಇಂದು ಮಕ್ಕಳ ಗ್ರಾಮ ಸಭೆಯಲ್ಲಿ ತಮ್ಮ ಶಾಲಾ ವಠಾರದಲ್ಲಿನ ಸಮಸ್ಯೆಗಳನ್ನು ನಿರ್ಭಯದಿಂದ ಹೇಳುತ್ತಿದ್ದಾರೆ. ಮಕ್ಕಳ ಗ್ರಾಮ ಸಭೆಯಲ್ಲಿನ ಅವರ ಧ್ವನಿಗೆ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದು, ವಿಶೇಷ ಗಮನ ಹರಿಸಬೇಕು. ಅವರ ಹಕ್ಕುಗಳಿಗೆ ಆಸರೆಯಾಗಬೇಕು.
– ನಂದಾ ಪಾಯಸ್
ಶಿಕ್ಷಣ ಸಂಪನ್ಮೂಲ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.