ಮಕ್ಕಳ ಕಲೆ, ಕೌಶಲಗಳನ್ನು ಹೆತ್ತವರು ಪೋಷಿಸಬೇಕು: ಕಿಶೋರ್ ಆಳ್ವ
"ಉದಯವಾಣಿ-ಕೆನರಾ ಚಿಣ್ಣರ ಬಣ್ಣ' ಜಿಲ್ಲಾ ಮಟ್ಟದ ವಿಜೇತರಿಗೆ ಬಹುಮಾನ ವಿತರಣೆ
Team Udayavani, Nov 4, 2019, 2:18 AM IST
ಮಂಗಳೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳು ವಿವಿಧ ಆಯಾಮಗಳಲ್ಲಿ ತೆರೆದುಕೊಂಡಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಚಿತ್ರಕಲೆಯೂ ಸೇರಿದಂತೆ ಕಲೆ, ಕೌಶಲಗಳಿಗೆ ಪ್ರೋತ್ಸಾಹ ನೀಡಿದರೆ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ. ಹೆತ್ತವರು ಇದನ್ನು ಗಮನದಲ್ಲಿ ಇರಿಸಿಕೊಂಡು ಮಕ್ಕಳ ಕಲಾಸಕ್ತಿಯನ್ನು ಪೋಷಿಸುವ ಮೂಲಕ ಅದನ್ನು ಗೌರವಿಸಬೇಕು ಎಂದು ಅದಾನಿ ಸಮೂಹ ಸಂಸ್ಥೆಗಳ ಕರ್ನಾಟಕದ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಡೊಂಗರಕೇರಿ ಕೆನರಾ ಗರ್ಲ್ಸ್
ಹೈಸ್ಕೂಲ್ ಸಭಾಂಗಣದಲ್ಲಿ ಉದಯವಾಣಿ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಮತ್ತು ಉಡುಪಿ ಆರ್ಟಿಸ್ಟ್ಸ್ ಫೋರಂ ಆಶ್ರಯದಲ್ಲಿ ರವಿವಾರ ನಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ “ಚಿಣ್ಣರ ಬಣ್ಣ-2019′ ಚಿತ್ರಕಲಾ ಸ್ಪರ್ಧೆಯ ವಿಜೇತ ಮಕ್ಕಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಪ್ರತಿಭೋಜ್ವಲನಕ್ಕೆ ಪೂರಕವಾಗಿ “ಉದಯವಾಣಿ’ಯು ಚಿತ್ರಕಲೆಯೂ ಸೇರಿದಂತೆ ಹಲವು ಚಟುವಟಿಕೆ ಗಳನ್ನು ಹಲವು ವರ್ಷಗಳಿಂದ ನಡೆಸುತ್ತ ಬರುತ್ತಿರು ವುದು ಶ್ಲಾಘನೀಯ ಎಂದು ಅವರು ಹೇಳಿದರು.
ಉದಯವಾಣಿ ಪತ್ರಿಕೆಯು ನಮ್ಮೆಲ್ಲರ ಹೆಮ್ಮೆ. ಜನಮನದ ಒಟ್ಟು ವಿಚಾರಗಳನ್ನು ಪ್ರಾಮಾಣಿಕ ನೆಲೆಯಲ್ಲಿ ನೀಡುವ ಪತ್ರಿಕೆ. ಬೇರೆ ಬೇರೆ ಸ್ಪರ್ಧೆಗಳ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ಒತ್ತು ನೀಡುತ್ತಾ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್ ಮಾತನಾಡಿ, ಮಕ್ಕಳ ಸೃಜನಶೀಲತೆಯನ್ನು ಉದ್ದೀಪನಗೊಳಿಸುವ ನೆಲೆಯಲ್ಲಿ ಉದಯವಾಣಿಯು “ಚಿಣ್ಣರ ಬಣ್ಣ’ ಸೇರಿದಂತೆ ವಿವಿಧ ಕಾರ್ಯಚಟು ವಟಿಕೆಗಳನ್ನು ನಡೆಸುತ್ತ ಬಂದಿದೆ. “ಚಿಣ್ಣರ ಬಣ್ಣ’ಕ್ಕೆ ವರ್ಷದಿಂದ ವರ್ಷಕ್ಕೆ ಶೇ.25ರಷ್ಟು ಹೆಚ್ಚುವರಿ ಸ್ಪಂದನೆ ದೊರೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕೆನರಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಬಸ್ತಿ ಪುರುಷೋತ್ತಮ ಶೆಣೈ ಮಾತ ನಾಡಿ, ಪುಟಾಣಿಗಳ ಭವಿಷ್ಯಕ್ಕೆ ಪೂರಕವಾಗುವ ಆಶಯದೊಂದಿಗೆ ಉದಯವಾಣಿ ಆಯೋಜಿಸಿದ ಈ ಚಿತ್ರಕಲಾ ಸ್ಪರ್ಧೆಯು ನಿಜಕ್ಕೂ ಮಾದರಿ ಎಂದರು. ಉಡುಪಿಯ ಆರ್ಟಿಸ್ಟ್ಸ್ ಫೋರಂ ಅಧ್ಯಕ್ಷ ರಮೇಶ್ ರಾವ್ ಮಾತ ನಾಡಿ, ಯಾವುದೇ ಕ್ಷೇತ್ರದಲ್ಲಿ ಶಾಂತ ವಾತಾವರಣ ನೆಲೆಯಾಗಬೇಕಾದರೆ ಚಿತ್ರಕಲೆಯ ಪಾತ್ರ ಮಹತ್ವದ್ದು ಎಂದರು. ಉದಯವಾಣಿ ಸಂಪಾದಕ ಅರವಿಂದ ನಾವಡ ಮಾತನಾಡಿದರು.
ತಾಲೂಕು, ಜಿಲ್ಲಾ ಮಟ್ಟದ
ವಿಜೇತರಿಗೆ ಬಹುಮಾನ ವಿತರಣೆ
ಅವಿಭಜಿತ ಜಿಲ್ಲೆಯ 8 ತಾಲೂಕುಗಳ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ 72 ವಿದ್ಯಾರ್ಥಿಗಳಿಗೆ ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಾದ 24 ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಕುಂದಾಪುರದ ವಿ.ಕೆ.ಆರ್. ಆಚಾರ್ಯ ಹೈಸ್ಕೂಲ್‌ನ ವಿದ್ಯಾರ್ಥಿ ಸತ್ಯೇಂದ್ರ ಭಟ್, ಬೆಳ್ತಂಗಡಿ- ಅಳದಂಗಡಿಯ ಸೈಂಟ್ ಪೀಟರ್ ಆಂಗ್ಲಮಾಧ್ಯಮ ಶಾಲೆಯ ಅಕ್ಷರ ಎ.ಎನ್., ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಅದಿತಿ ಕೆ. ಅನಿಸಿಕೆ ವ್ಯಕ್ತಪಡಿಸಿದರು.
ಉದಯವಾಣಿ ಮ್ಯಾಗಸಿನ್ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಆನಂದ್ ಕೆ. ಸ್ವಾಗತಿಸಿ-ಪ್ರಸ್ತಾವಿಸಿದರು. ಬಹುಮಾನ ವಿಜೇತರ ಹೆಸರನ್ನು ಉದಯವಾಣಿ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ಸತೀಶ್ ಮಂಜೇಶ್ವರ ವಾಚಿಸಿದರು. ಉದಯವಾಣಿ ಮಂಗಳೂರು ಸುದ್ದಿ ವಿಭಾಗದ ಉಪಮುಖ್ಯಸ್ಥ ಸುರೇಶ್ ಪುದುವೆಟ್ಟು ವಂದಿಸಿದರು. ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಮಟ್ಟದ ಸ್ಪರ್ಧೆ: ಬಹುಮಾನ ವಿಜೇತರು
ಸಬ್ ಜೂನಿಯರ್ ವಿಭಾಗ
ಪ್ರಥಮ-ವಿನೀಶ್ ಆಚಾರ್ಯ (ಎಸ್.ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿ), ದ್ವಿತೀಯ-ಕೆ. ಸಂಯುಕ್ತ ಆಚಾರ್ಯ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ), ತೃತೀಯ- ಸಾತ್ವಿಕ್ ಎಸ್. ರಾವ್, (ಎಸ್.ಬಿ.ವಿ. ಕಾರ್ಕಳ). ಪ್ರೋತ್ಸಾಹಕರ ಬಹುಮಾನಗಳು- ಅದ್ವಿತ್ ಜಿ. (ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು), ಪ್ರಣಮ್ ಸಂಕಡ್ಕ (ಸೈಂಟ್ ಆ್ಯನ್ಸ್ ಸ್ಕೂಲ್ ಕಡಬ), ಶಾರ್ವರಿ ಜಿ. ರಾವ್ (ಮುಕುಂದಕೃಪಾ ಉಡುಪಿ), ಅವನಿ ಎಂ. ಮೇಸ್ತ (ವಾಸುದೇವ ಕೃಪಾ ಬೈಲೂರು), ಪ್ರೀಶಾ ನಾಯಕ್ (ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮಂಗಳೂರು).
ಜೂನಿಯರ್ ವಿಭಾಗ
ಪ್ರಥಮ- ಸ್ಪಶಾì ಪ್ರದೀಪ್ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ), ದ್ವಿತೀಯ-ಅಥರ್ವಾ ಹೆಗ್ಡೆ (ಆಳ್ವಾಸ್ ಸೆಂಟರ್ ಸ್ಕೂಲ್ ಮೂಡುಬಿದಿರೆ), ತೃತೀಯ-ಅಕ್ಷರ ಎ.ಎನ್. (ಸೈಂಟ್ ಪೀಟರ್ ಆಂಗ್ಲ ಮಾಧ್ಯಮ ಶಾಲೆ ಅಳದಂಗಡಿ), ಪ್ರೋತ್ಸಾಹಕರ ಬಹುಮಾನ- ಅಗಮ್ಯ (ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು), ದೀಪೇಶ್ (ಕ್ರೈಸ್ಟ್ ಸ್ಕೂಲ್ ಮಣಿಪಾಲ), ಯಶಸ್ ಆಚಾರ್ಯ (ಕೆನರಾ ಆಂಗ್ಲಮಾಧ್ಯಮ ಹಿ.ಪ್ರಾ. ಶಾಲೆ ಮಂಗಳೂರು), ವಿಭಾ ಶೆಟ್ಟಿ (ರೋಟರಿ ಸ್ಕೂಲ್ ಮೂಡುಬಿದಿರೆ), ಪೃಥ್ವಿನ್ ಎ.ಕೆ. (ಜಿ.ಎಚ್.ಎ.ಎಸ್. ಪೆರುವಾಜೆ ಬೆಳ್ಳಾರೆ).
ಸೀನಿಯರ್ ವಿಭಾಗ
ಪ್ರಥಮ-ಹರ್ಷಿತ್ ಎ.ಎಸ್. (ಮೌಂಟ್ ರೋಸರಿ ಇಂಗ್ಲಿಷ್ ಸ್ಕೂಲ್ ಸಂತೆಕಟ್ಟೆ ಕಲ್ಯಾಣಪುರ), ದ್ವಿತೀಯ-ಮೋಕ್ಷಿತ್ ಸುರೇಶ್ (ದೆಹಲಿ ಪಬ್ಲಿಕ್ ಸ್ಕೂಲ್ ಎಂಆರ್‌ಪಿಎಲ್ ಮಂಗಳೂರು), ತೃತೀಯ-ಶ್ರಾವ್ಯಾ ಆರ್. (ಕೆನರಾ ಪ್ರೌಢಶಾಲೆ ಡೊಂಗರಕೇರಿ ಮಂಗಳೂರು), ಪ್ರೋತ್ಸಾಹಕ ಬಹುಮಾನ-ನಮ್ರತಾ (ಕ್ರೈಸ್ಟ್ ಸ್ಕೂಲ್, ಮಣಿಪಾಲ), ಸುಧಾಂಶು (ಸ.ಪ.ಪೂರ್ವ ಕಾಲೇಜು ಕೊಂಬೆಟ್ಟು), ಆದಿತ್ಯ ಪ್ರಭು (ಜ್ಞಾನಸುಧಾ ಗಣಿತನಗರ), ಸೃಜನ್ ಮೂಲ್ಯ (ಎಸ್.ಆರ್. ಪಬ್ಲಿಕ್ ಸ್ಕೂಲ್ ಹೆಬ್ರಿ), ಕಾರ್ತಿಕ್ (ಶ್ರೀ ರಾಮ ಶಾಲೆ ಉಪ್ಪಿನಂಗಡಿ).
ಸ್ಪರ್ಧೆಗೆ 8,500ಕ್ಕೂ ಹೆಚ್ಚು ಮಕ್ಕಳು
ಅವಿಭಜಿತ ದ.ಕ. ಜಿಲ್ಲೆಯ 8 ತಾಲೂಕುಗಳಲ್ಲಿ ಪ್ರತ್ಯೇಕ ವಾಗಿ ಚಿಣ್ಣರ ಬಣ್ಣ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಬಾರಿಯ ಸ್ಪರ್ಧೆಯಲ್ಲಿ ಸುಮಾರು 8,500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿತ್ತು. ಎಲ್ಲ 8 ತಾಲೂಕು ವ್ಯಾಪ್ತಿಯ ಸ್ಪರ್ಧೆಗಳಿಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಕಲಾ ಭಿರುಚಿಯನ್ನು ಅನಾವರಣ ಗೊಳಿಸುವುದಕ್ಕೆ ಹಲವು ವರ್ಷಗಳಿಂದ ನಡೆಯುತ್ತಿರುವ ಉದಯವಾಣಿಯ ಈ ಚಿಣ್ಣರ ಬಣ್ಣ ಸ್ಪರ್ಧೆಯನ್ನು ವೇದಿಕೆ ಮಾಡಿಕೊಂಡಿದ್ದು ಗಮನಾರ್ಹ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.