ಮಕ್ಕಳ ಸೃಜನಶೀಲತೆಗೆ ಕಾವು ಕೊಟ್ಟ ಚಿಣ್ಣರ ಹಬ್ಬ-2018


Team Udayavani, Apr 21, 2018, 8:40 AM IST

Chinnara-Habba-20-4.jpg

ಕಡಬ: ಇಲ್ಲಿನ ಸೈಂಟ್‌ ಜೋಕಿಮ್ಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಒಂದು ವಾರ ಕಾಲ ಜರಗಿದ ಚಿಣ್ಣರ ಹಬ್ಬ-2018 ಮಕ್ಕಳ ಬೇಸಿಗೆ ಶಿಬಿರವು ಮಕ್ಕಳಲ್ಲಿ ಹುಗುಗಿದ್ದ ಸೃಜನಶೀಲ ಕೌಶಲಗಳಿಗೆ ಕಾವು ಕೊಡುವ ಮೂಲಕ ಗಮನ ಸೆಳೆಯಿತು. ಕಡಬ ಪರಿಸರದ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ತಮ್ಮ ತಮ್ಮ ಆಸಕ್ತಿಯ ವಿಚಾರಗಳಲ್ಲಿ ಹೆಚ್ಚಿನ ತರಬೇತಿ ಪಡೆದುಕೊಂಡರು. ಕೃಷಿ, ರಂಗಕಲೆ, ಪ್ರಸಾದನ ಕಲೆ, ಕಸದಿಂದ ರಸ, ಚಿತ್ರಕಲೆ, ಸುಲಭ ಗಣಿತ, ಅಭಿನಯ ಗೀತೆ, ಪೇಪರ್‌ ಕ್ರಾಫ್ಟ್‌, ವಿಜ್ಞಾನ ಮಾದರಿ ತಯಾರಿ, ಮೋಜಿನ ಗಣಿತ, ಮಿಮಿಕ್ರಿ, ಶ್ಯಾಡೋ ಪ್ಲೇ, ಗಿಡಗಳಿಗೆ ಕಸಿ ಕಟ್ಟುವುದು ಮುಂತಾದ ವಿಷಯಗಳನ್ನೊಳಗೊಂಡು ವಾರಪೂರ್ತಿ ಜರಗಿದ ಶಿಬಿರವು ಮಕ್ಕಳಿಗೆ ಶೈಕ್ಷಣಿಕ ಸೇರಿದಂತೆ ಎಲ್ಲ ರೀತಿಯ ಕಲಿಕೆ ಮತ್ತು ಅನುಭವಗಳಿಗೆ ತೆರೆದುಕೊಂಡಿತು.


200 ಶಿಬಿರಾರ್ಥಿಗಳು

ಸುಳ್ಯದ ರೋಟರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಶ್ರೀಹರಿ ಪೈಂದೋಡಿ (ಚಿತ್ರಕಲೆ, ಪೇಪರ್‌ಕಟ್ಟಿಂಗ್‌), ಗ್ರೇಸಿ ಪಿಂಟೋ (ಅಭಿನಯ ಗೀತೆ, ಮೋಜಿನ ಗಣಿತ), ಚಿತ್ರಕಲಾ ಶಿಕ್ಷಕ ಸತೀಶ್‌ ಪಂಜ (ಮೇಕಪ್‌ ಕಲೆ, ಚಿತ್ರಕಲೆ) ಯೋಗ ಶಿಕ್ಷಕಿ ಕುಸುಮಾವತಿ (ಯೋಗ ತರಬೇತಿ), ಪ್ರಸನ್ನ ಐವರ್ನಾಡು (ಚಿತ್ರಕಲೆ), ಜಯಪ್ರಕಾಶ ಮೋಂಟಡ್ಕ (ನಾಟಕ, ರಂಗಕಲೆ) ಶೈಲಿ ಪ್ರಭಾಕರ್‌ (ಪೇಪರ್‌ ಕ್ರಾಫ್ಟ್‌), ಪಿ.ಎನ್‌.ಭಟ್‌ (ಸುಲಭ ಗಣಿತ, ವಿಜ್ಞಾನ ಪ್ರಯೋ), ಪಟ್ಟಾಭಿರಾಮ ಸುಳ್ಯ (ಮಿಮಿಕ್ರಿ, ಶ್ಯಾಡೋ ಪ್ಲೇ), ಪುರುಷೋತ್ತಮ ಎಂ.ಎಸ್‌.(ವಿಜ್ಞಾನ ಮಾದರಿ ತಯಾರಿ), ಜಾನ್‌ವೇಗಸ್‌ (ಕೃಷಿ, ಕಸಿ ಕಟ್ಟುವುದು) ಮುಂತಾದ ಪ್ರತಿಭಾನ್ವಿತರು ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸಿ ಶಿಬಿರವನ್ನು ನಡೆಸಿಕೊಟ್ಟರು. ಪರಿಸರದ ವಿವಿಧ ಶಾಲೆಗಳ ಸುಮಾರು 200 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು.

ಇನ್ನು ಪ್ರತಿ ವರ್ಷ
ಶಿಕ್ಷಣ ಎನ್ನುವುದು ಕೇವಲ ತರಗತಿ ಕೊಠಡಿಗಳಿಗಷ್ಟೇ ಸೀಮಿತಗೊಳ್ಳಬಾರದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯಪೂರಕ ಚಟುವಟಿಕೆಗಳ ಅತ್ಯಂತ ಅಗತ್ಯ ಎನ್ನುವ ದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಪರಿಸರದ ಸುಮಾರು 8 ಶಾಲೆಗಳ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. ಮಕ್ಕಳ ಪ್ರತಿಭೆಗಳಿಗೆ ನೀರೆರೆದು ಪೋಷಿಸುವ ಈ ರೀತಿಯ ಶಿಬಿರವನ್ನು ಪ್ರತಿ ವರ್ಷ ಹಮ್ಮಿಕೊಳ್ಳುವ ಉದ್ದೇಶ ಇದೆ.
– ವಂ| ವಂ|ರೋನಾಲ್ಡ್‌ ಲೋಬೋ, ಸಂಚಾಲಕರು, ಸೈಂಟ್‌ ಜೋಕಿಮ್ಸ್‌ ಸಮೂಹ ಶಿಕ್ಷಣ ಸಂಸ್ಥೆಗಳು, ಕಡಬ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

Gangolli

Puttur: ಗಾಯಾಳು ವಿದ್ಯಾರ್ಥಿನಿ ಸಾವು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.