ದೇವರು ಮಾನವನಾಗಿ ಹುಟ್ಟಿದ ಘಟನೆಯ ಸಂಭ್ರಮ ಕ್ರಿಸ್ಮಸ್: ಬಿಷಪ್
Team Udayavani, Dec 20, 2018, 10:47 AM IST
ಮಂಗಳೂರು: ಕ್ರಿಸ್ಮಸ್ ಹಬ್ಬವು ದೇವರು ಮಾನವನಾಗಿ ಹುಟ್ಟಿದ ಘಟನೆಯ ಸಂಭ್ರಮವಾಗಿದೆ. ದೇವರು – ಮನುಷ್ಯನ ಸಮಾಗಮವೇ ಕ್ರಿಸ್ಮಸ್ ಹಬ್ಬದ ಸಾರ ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್ ರೈ|ರೆ| ಡಾ| ಪೀಟರ್ ಪಾವ್É ಸಲ್ಡಾನ್ಹಾ ಅವರು ಹೇಳಿದರು.
ಅವರು ಬುಧವಾರ ಕೊಡಿಯಾಲ ಬೈಲಿನಲ್ಲಿರುವ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ಮಾಧ್ಯಮದವರ ಜತೆ ಕ್ರಿಸ್ಮಸ್ ಆಚರಿಸಿ ಸಂದೇಶ ನೀಡಿದರು.
ಮನುಷ್ಯ ದೇವರ ಸೃಷ್ಟಿ ಎನ್ನುವುದು ಕ್ರೈಸ್ತರ ನಂಬಿಕೆ. ಪ್ರತಿಯೊಬ್ಬ ಮನುಷ್ಯನೂ ದೇವರನ್ನು ಅರಸುತ್ತಾನೆ. ಈ ಹುಡುಕಾಟದಲ್ಲಿ ಮನುಷ್ಯನಿಗೆ ತೃಪ್ತಿ ಸಿಗಲೆಂದು ದೇವರೇ ಮನುಷ್ಯನ ಬಳಿಗೆ ಮಾನವನಾಗಿ ಬಂದಿದ್ದಾರೆ ಎಂದವರು ವಿವರಿಸಿದರು.
ಧರ್ಮಪ್ರಾಂತವು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದ್ದು, ಮಂಗಳೂರು ಧರ್ಮಪ್ರಾಂತ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ತಾಲೂಕಿನಲ್ಲಿರುವ ತನ್ನ ಎಲ್ಲ ಚರ್ಚ್ ಗಳ ಮೂಲಕ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. “ಬಂಧುತ್ವ’ ಯೋಜನೆಯನ್ನು ಎಲ್ಲ 124 ಚರ್ಚ್ ಗಳಲ್ಲಿ ಅನುಷ್ಠಾನಿಸ ಲಾಗುತ್ತಿದೆ. ಸಿಒಡಿಪಿ ಸಂಸ್ಥೆಯ ಮೂಲಕ ಇಂಗು ಗುಂಡಿ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಷಪ್ ವಿವರಿಸಿದರು.
ಯುವಜನರ ವರ್ಷಾಚರಣೆ
2019ನೇ ವರ್ಷವನ್ನು ಕ್ರೈಸ್ತ ಸಭೆಯು ಅಂತಾರಾಷ್ಟ್ರೀಯ ಯುವಜನ ವರ್ಷವನ್ನಾಗಿ ಆಚರಿಸಲಿದೆ. ಈ ಸಂದರ್ಭದಲ್ಲಿ ಯುವಜನರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಈ ಕುರಿತಂತೆ ಐಸಿವೈಎಂ ಮತ್ತಿತರ ಯುವಜನ ಸಂಘಟನೆಗಳನ್ನು ಸೇರಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಡಾ| ಪೀಟರ್ ಪಾವ್É ಸಲ್ಡಾನ್ಹಾ ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಬಿಷಪ್ ಅವರು ಕ್ರಿಸ್ಮಸ್ ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧರ್ಮಪ್ರಾಂತದ ಶ್ರೇಷ್ಠ ಗುರು ಮೊ| ಮ್ಯಾಕ್ಸಿಂ ಎಲ್. ನೊರೋನ್ಹಾ, ಛಾನ್ಸಲರ್ ವಂ| ವಿಕ್ಟರ್ ಜಾರ್ಜ್ ಡಿ’ಸೋಜಾ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂ| ವಿಕ್ಟರ್ ವಿಜಯ್ ಲೋಬೊ ಮತ್ತು ಮಾರ್ಸೆಲ್ ಮೊಂತೇರೊ, ಪಾಲನಾ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ವಂ| ರಿಚಾರ್ಡ್ ಡಿ’ಸೋಜಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.