ಸಿಟಿ ಬಸ್: ವಿದ್ಯಾರ್ಥಿಗಳಿಗೆ ಟಿಕೆಟ್ ರಹಿತ ಸ್ಮಾರ್ಟ್ ಬಸ್ ಪಾಸ್ !
Team Udayavani, Jan 23, 2021, 7:00 AM IST
ಮಹಾನಗರ: ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಪ್ರಯಾಣಿಸುವ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಟಿಕೆಟ್ ರಹಿತ ಸೇವೆ ಒದಗಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಸಿಟಿ ಬಸ್ ಮಾಲಕರ ಸಂಘವು ಸ್ಮಾರ್ಟ್ ಬಸ್ ಪಾಸ್ ವ್ಯವಸ್ಥೆಯನ್ನು ಪರಿಚಯಿಸಿದೆ.
ಈ ನೂತನ ಯೋಜನೆಯಿಂದಾಗಿ ಓರ್ವ ವಿದ್ಯಾರ್ಥಿಗೆ 3.47 ರೂ.ರಷ್ಟು ಕಡಿಮೆ ದರದಲ್ಲಿ ಬಸ್ ಪ್ರಯಾಣ ಮಾಡುವಂತಹ ಅವಕಾಶ ನೀಡಲಾಗಿದೆ. ಈ ಬಸ್ ಪಾಸ್ ಅನ್ನು ಚಲೋ ಕಾರ್ಡ್‌ನಲ್ಲಿ ಖರೀದಿಸಬಹುದಾಗಿದ್ದು, ಖರೀದಿಸಿದ ದಿನದಿಂದ 30 ದಿನಗಳವರೆಗೆ ಚಾಲ್ತಿಯಲ್ಲಿರುತ್ತದೆ. ವಿದ್ಯಾರ್ಥಿಗಳು ತಮ್ಮ ಏಕಮುಖ ಪ್ರಯಾಣದ ದರ ಮತ್ತು ದಿನದಲ್ಲಿ ಕೈಗೊಳ್ಳುವ ಪ್ರಯಾಣದ ಸಂಖ್ಯೆಗೆ ಅನುಗುಣವಾಗಿ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಸಾಮಾನ್ಯವಾಗಿ ಒಂದು ಪ್ರಯಾಣಕ್ಕೆ 10 ರೂ. ನೀಡುವ ವಿದ್ಯಾರ್ಥಿಯು 434 ರೂ.ನ ಬಸ್ ಪಾಸ್ ಪಡೆದರೆ, ಆತ 30 ದಿನಗಳಲ್ಲಿ 104 ಪ್ರಯಾಣಗಳನ್ನು ಕೈಗೊಂಡರೆ, ಆಗ ತಲಾ ಒಂದು ಪ್ರಯಾಣದ ದರ ಕೇವಲ 3.47 ರೂ.ಗೆ ಆಗುತ್ತದೆ.
ಬಸ್ ಪಾಸ್ ಪಡೆಯುವುದು ಹೇಗೆ? :
ವಿದ್ಯಾರ್ಥಿಗಳು ಬಸ್ ಪಾಸ್ ಅನ್ನು ಹಂಪನಕಟ್ಟೆಯ ಮಿಲಾಗ್ರಿಸ್ ಕಟ್ಟದಲ್ಲಿರುವ ದ.ಕ. ಬಸ್ ಮಾಲಕರ ಸಂಘದ ಕಚೇರಿ, ಸ್ಟೇಟ್‌ಬ್ಯಾಂಕ್ ಬಳಿಯ ಸಿಟಿ ಟವರ್ 2ನೇ ಮಹಡಿಯಲ್ಲಿರುವ ಚಲೋ ಕಚೇರಿ, ಬಲ್ಮಠರಸ್ತೆಯ ಹಂಪನಕಟ್ಟೆಯಲ್ಲಿರುವ ಮಾಂಡವಿ ಮೋಟರ್ಸ್ ಎದುರಿನ ಸಾಗರ್ ಟೂರಿಸ್ಟ್‌ನಲ್ಲಿ ಪಡೆಯಬಹುದಾಗಿದೆ.
ವಿದ್ಯಾರ್ಥಿ ಬಸ್ ಪಾಸ್‌ಗೆ ಒಂದಿ ಬಾರಿ 50 ರೂ. ಪಾವತಿಸಿ ನೋಂದಣಿ ಮಾಡಬೇಕು. ವಿದ್ಯಾರ್ಥಿಗಳು ಅರ್ಜಿ ಫಾರಂ ಅನ್ನು ಭರ್ತಿ ಮಾಡಿ, ಅದರಲ್ಲಿ ಆಯಾ ಕಾಲೇಜು/ಶಾಲೆಗಳ ಮುಖ್ಯಸ್ಥರಿಂದ ಸಹಿ ಮಾಡಿಸಿ ಮೊಹರು (ಸೀಲ್) ಹಾಕಿಸಿಕೊಂಡು ಮೇಲೆ ಈ ಮೇಲಿನ ಯಾವುದೇ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಬಳಿಕ ತಮ್ಮ ಆಯ್ಕೆಯ ಪ್ಲ್ರಾನ್ ಅನ್ನು ಆಯ್ಕೆ ಮಾಡಿ ಅದನ್ನು ಚಲೋ ಕಾರ್ಡ್‌ಗೆ ಲೋಡ್ ಮಾಡಬೇಕು. ವಿದ್ಯಾರ್ಥಿ ಪಾಸ್‌ಗಳನ್ನು ಜ. 22ರಿಂದ ನೀಡಲಾಗುತ್ತಿದೆ.
ಸಿಟಿ ಬಸ್ ಮಾಲಕರ ಸಂಘದಿಂದ ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆಯನ್ನು ಜಾರಿಗೆ ತರಲಿದ್ದೇವೆ. ಸ್ಮಾರ್ಟ್ ಬಸ್ ಪಾಸ್‌ಗಳನ್ನು ಉಪಯೋಗಿಸುವುದರಿಂದ ಬಸ್ ಪ್ರಯಾಣವು ನಗದು ರಹಿತವಾಗಿರುತ್ತದೆ. ಕೊರೊನಾ ಸಮಯದಲ್ಲಿ ನಗದು ನಿಯಮಯದಿಂದಾಗುವ ಸಂಪರ್ಕ ಇಲ್ಲವಾಗಿಸಿ ಸುರಕ್ಷೆ ನೀಡುತ್ತದೆ.–ದಿಲ್‌ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅದ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.