ಗುಂಡಿ ಮುಚ್ಚಲು ಆರಂಭಿಸಿದ ಮನಪಾ
Team Udayavani, Jun 20, 2018, 10:40 AM IST
ಮಹಾನಗರ: ಮಳೆಯ ಕಾರಣದಿಂದ ನಗರದ ರಸ್ತೆಗಳಲ್ಲಿ ಕಾಣಿಸಿಕೊಂಡಿರುವ ಅಪಾಯಕಾರಿ ಗುಂಡಿಗಳನ್ನು
ಮುಚ್ಚುವ ಕೆಲಸಕ್ಕೆ ಈಗ ಪಾಲಿಕೆ ಮುಂದಾಗಿದೆ. ‘ಉದಯವಾಣಿ- ಸುದಿನ’ ಕಳೆದ ಎರಡು ವಾರದಿಂದ
ಅಪಾಯಕಾರಿ ಗುಂಡಿಗಳ ಕುರಿತ ವಿಶೇಷ ವರದಿಯನ್ನು ಬರೆದಿದ್ದು, ಮಂಗಳವಾರದಿಂದಲೇ ಗುಂಡಿ ಮುಚ್ಚಲು ಪಾಲಿಕೆ ಶುರುಮಾಡಿದೆ.ಕೊಟ್ಟಾರಚೌಕಿ ವ್ಯಾಪ್ತಿಯಲ್ಲಿರುವ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರವಾಗಿದ್ದ ಹೊಂಡಕ್ಕೆ ತಾತ್ಕಾಲಿಕ ತೇಪೆ ಹಚ್ಚಲಾಯಿತು. ಮಳೆಯ ಮಧ್ಯೆಯೇ ಮನಪಾದ ಕೆಲವು ಕಾರ್ಮಿಕರು ಹೊಂಡ ಮುಚ್ಚುವ ಕೆಲಸದಲ್ಲಿ ತೊಡಗಿದರು. ಪಾಲಿಕೆ ಮೇಯರ್ ಭಾಸ್ಕರ್, ಮುಖ್ಯಸಚೇತಕ ಶಶಿಧರ ಹೆಗ್ಡೆ ಈ ಸಂದರ್ಭ ಉಪಸ್ಥಿತರಿದ್ದರು.
ಪಾಲಿಕೆ ಎಂಜಿನಿಯರ್ಗಳ ಸಭೆ
‘ಸುದಿನ’ ಜತೆಗೆ ಮಾತನಾಡಿದ ಮೇಯರ್ ಭಾಸ್ಕರ್ ಅವರು, ‘ಉದಯವಾಣಿ ಸುದಿನದಲ್ಲಿ ಬಂದ ವರದಿಯನ್ವಯ ಮಂಗಳವಾರದಿಂದ ಗುಂಡಿ ಮುಚ್ಚುವ ಕೆಲಸವನ್ನು ಆರಂಭಿಸಿದ್ದೇವೆ. ಸುದ್ದಿಯ ಆಧಾರದಂತೆ ಸಾರ್ವಜನಿಕರಿಗೆ ಹೆಚ್ಚು ತೊಂದರೆ ಆಗುವ ರಸ್ತೆಯನ್ನು ಮೊದಲ ಹಂತದಲ್ಲಿ ಕೈಗೊಳ್ಳಲಾಗುವುದು. ಬುಧವಾರ ಪಾಲಿಕೆ ಎಂಜಿನಿಯರ್ಗಳ ಸಭೆ ಕರೆದು ಈ ಬಗ್ಗೆ ವಿಶೇಷ ತಂಡ ರಚಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.