ಹಿರಿಯರ ಕ್ರೀಡಾಕೂಟಕ್ಕೆ ನಗರ ಸಜ್ಜು 


Team Udayavani, Apr 11, 2018, 9:49 AM IST

11-April-1.jpg

ಮಹಾನಗರ: ನಗರದ ಮಂಗಳಾ ಕ್ರೀಡಾಂಗಣದಲ್ಲಿ ಎ. 12ರಿಂದ 15ರ ವರೆಗೆ 38ನೇ ರಾಷ್ಟ್ರೀಯ ಹಿರಿಯರ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು, ತರುಣ- ತರುಣಿಯರ ಕ್ರೀಡಾಕೂಟಗಳ ಮೂಲಕ ಗಮನ ಸೆಳೆದ ಮಂಗಳೂರು ಈಗ ಹಿರಿಯರ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿದೆ.

85ರ ವಯೋಮಿತಿಯ ಹಿರಿಯರಿಂದ ಆರಂಭವಾಗಿ 35ರ ಹರೆಯದವರೆಗಿನವರಿಗೆ ಕೂಟದಲ್ಲಿ ಪಾಲ್ಗೊಳ್ಳಬಹುದು. ಬಹುತೇಕ 50 ವರ್ಷಕ್ಕಿಂತ ಮೇಲ್ಪಟ್ಟವರು ಈ ಕೂಟದಲ್ಲಿ ಭಾಗವಹಿಸುವುದು ವಿಶೇಷ.

ಭಾರತ ಹಿರಿಯರ ಆ್ಯತ್ಲೆಟಿಕ್‌ ಫೆಡರೇಶನ್‌ (ಇಂಡಿಯನ್‌ ಮಾಸ್ಟರ್ ಆ್ಯತ್ಲೆಟಿಕ್ಸ್‌)ನ ಅನುಮೋದನೆಯೊಂದಿಗೆ ಜಿಲ್ಲಾ ಹಿರಿಯರ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಹಾಗೂ ಕರ್ನಾಟಕ ರಾಜ್ಯ ಹಿರಿಯರ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಹಿರಿಯ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ ಆಯೋಜನೆಗೊಂಡಿದೆ. ಇದರಲ್ಲಿ ವಿಜೇತರಾದವರು ಆಗಸ್ಟ್‌ನಲ್ಲಿ ಏಷ್ಯನ್‌ ಹಿರಿಯರ ಆ್ಯತ್ಲೆಟಿಕ್‌ ಫೆಡರೇಶನ್‌ ವತಿಯಿಂದ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆಯಲಿದ್ದಾರೆ.

ಉದ್ಘಾಟನೆ ಸಮಾರಂಭ
ಎ. 12ರಂದು ಬೆಳಗ್ಗೆ 9 ಗಂಟೆಗೆ ಕರಾವಳಿ ಮೈದಾನದಿಂದ ಕ್ರೀಡಾತಂಡಗಳ ಪಥಸಂಚಲನ ಪ್ರಾರಂಭವಾಗಲಿದೆ. ಬಳಿಕ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಬಳಿಕ ಸತತ ನಾಲ್ಕು ದಿನಗಳಲ್ಲಿ 30ರಿಂದ 85 ವಯೋಮಿತಿಯ ವಿವಿಧ ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಲಿದೆ. ವಿಜೇತರಾದವರಿಗೆ ಪ್ರಥಮ ಮೂರು ಸ್ಥಾನದ ಸರ್ಟಿಫಿಕೇಟ್‌ ಹಾಗೂ ಪದಕ ಪ್ರದಾನ ಮಾಡಲಾಗುತ್ತದೆ.

ಆಯೋಗದ ಕಣ್ಗಾವಲು
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಎಲ್ಲ ಕ್ರೀಡಾಳುಗಳಿಗೆ ಆಯೋಜಕರು ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ಸಂಜೆ ಕಾಫಿ/ ಟೀ ವ್ಯವಸ್ಥೆ ಆಯೋಜಿಸಿದ್ದಾರೆ. ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಈ ಎಲ್ಲ ಚಟುವಟಿಕೆಗಳ ಬಗ್ಗೆ ಆಯೋಗವು ಗಮನಹರಿಸಲಿರುವುದು ಈ ಕ್ರೀಡಾಕೂಟದ ಇನ್ನೊಂದು ವಿಶೇಷ. ಬೇರೆ ರಾಜ್ಯದಿಂದ ಆಗಮಿಸುವ ಕ್ರೀಡಾಳುಗಳಿಗೆ ಮಂಗಳೂರಿನ ಹೊಟೇಲ್‌ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು..!
ನಾಲ್ಕು ದಿನಗಳಲ್ಲಿ ಬರೋಬ್ಬರಿ 350 ಸ್ಪರ್ಧೆಗಳು ನಡೆಯಲಿವೆ. 35ರಿಂದ 40ರ ವಯೋಮಿತಿ, 40ರಿಂದ 45 ಹೀಗೆ 5 ವರ್ಷದ ಮಧ್ಯೆ ಅಂತರವಿರಿಸಿ ವಿಭಾಗಗಳನ್ನು ಮಾಡಿ ಸ್ಪರ್ಧೆ ಆಯೋಜಿಸಲಾಗಿದೆ.

ಬಿಸಿಲು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಭಾರತೀಯರಿಗೆ ಹಾಗೂ ಹಿರಿಯರಿಗೆ ಬಿಸಲಿನ ತಾಪ ಸಹಿಸಲು ಕಷ್ಟವಾಗಬಹುದು ಎಂಬ ಹಿನ್ನೆಲೆಯಲ್ಲಿ ಆಟೋಟದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಇದರಂತೆ ಮುಂಜಾನೆ 6.30ರಿಂದ 11.30ರ ವರೆಗೆ ಆಟೋಟ ನಡೆದು ಆ ಬಳಿಕ ಅಪರಾಹ್ನ 3ರಿಂದ ಸಂಜೆ 6ರ ವರೆಗೆ ಸ್ಪರ್ಧೆ ನಡೆಯಲಿದೆ. 

18 ರಾಜ್ಯದ 1,600 ಕ್ರೀಡಾಳುಗಳು
ದೇಶದ 18 ರಾಜ್ಯಗಳ ಕ್ರೀಡಾ ತಂಡಗಳ ಸುಮಾರು 1,600ರಷ್ಟು ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಮಧ್ಯಪ್ರದೇಶ, ಛತ್ತೀಸ್‌ಘಡ್‌, ಹರಿಯಾಣ, ಚಂಡೀಗಢ, ಪಂಜಾಬ್‌, ಕಾಶ್ಮೀರ, ಉತ್ತರ ಪ್ರದೇಶ, ಉತ್ತರಾಖಂಡ್‌, ಒರಿಸ್ಸಾ, ಹಿಮಾಚಲ ಪ್ರದೇಶ ಹಾಗೂ ಅಸ್ಸಾಂನ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. 100 ಕ್ರೀಡಾ ತೀರ್ಪುಗಾರರು ಭಾಗವಹಿಸಲಿದ್ದಾರೆ.

ಶ್ರೀಲಂಕಾದಿಂದಲೂ ಹಿರಿಯ ಕ್ರೀಡಾಳುಗಳು! 
ರಾಷ್ಟ್ರೀಯ ಹಿರಿಯರ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬೇರೆ ಬೇರೆ ರಾಜ್ಯದ ಕ್ರೀಡಾಳುಗಳು ಭಾಗವಹಿಸುವ ಜತೆಗೆ ಶ್ರೀಲಂಕಾದಿಂದಲೂ ಹಿರಿಯ ಕ್ರೀಡಾಳುಗಳು ಮಂಗಳೂರು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ 52 ಕ್ರೀಡಾಳುಗಳು ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಪ್ರಶಸ್ತಿ ವಿಭಾಗಗಳನ್ನು ನಿಯುಕ್ತಿಗೊಳಿಸಲಾಗಿದೆ. 

ಟಾಪ್ ನ್ಯೂಸ್

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.