ಸಂಚಾರ ನಿಲ್ಲಿಸಿದ್ದ ‘ಸಿಟಿ ಟೂರ್ ಬಸ್’ ಮತ್ತೆ ಆರಂಭ?
Team Udayavani, Jul 3, 2019, 5:00 AM IST
ಸಾಂದರ್ಭಿಕ ಚಿತ್ರ
ಮಹಾನಗರ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ (ಕೆಎಸ್‌ಟಿಡಿಸಿ)ಯಿಂದ ಪ್ರವಾಸಿಗರಿಗೆ ಮಂಗಳೂರು ನಗರದಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವುದಕ್ಕೆ ವ್ಯವಸ್ಥೆ ಮಾಡಿದ್ದ ‘ಸಿಟಿ ಟೂರ್ ಬಸ್’ ಸೇವೆಯು ಸ್ಥಗಿತಗೊಂಡು ಮೂರು ವರ್ಷ ಕಳೆದಿದ್ದು, ಈಗ ಬಹು ಜನರ ಬೇಡಿಕೆಯಿಂದಾಗಿ ಪುನರಾರಂಭಗೊಳ್ಳುವ ಲಕ್ಷಣ ಕಾಣಿಸುತ್ತಿದೆ.
ಸ್ಮಾರ್ಟ್ ಸಿಟಿಯಾಗಿ ಮಂಗಳೂರು ನಗರ ಬೆಳೆಯುತ್ತಿದ್ದು, ದಿನದಿಂದ ದಿನಕ್ಕೆ ಕರಾವಳಿಗೆ ಆಗಮಿಸುವ ಪ್ರವಾಸಿಗರು ಕೂಡ ಹೆಚ್ಚುತ್ತಿದ್ದಾರೆ. ಅದರಲ್ಲಿಯೂ ವಿದೇಶಿ ಪ್ರವಾಸಿಗರ ಫೆವರೆಟ್ ತಾಣವಾಗಿ ಮಂಗಳೂರು ಮಾರ್ಪಾಡಾಗುತ್ತಿದೆ. ಇದಕ್ಕೆ ತಕ್ಕಂತೆ ಪ್ರವಾಸಿಗರನ್ನು ಸೆಳೆಯಲು ಬೀಚ್ ಉತ್ಸವ, ನದಿ ಉತ್ಸವ, ಸರ್ಫಿಂಗ್, ಅಂತಾರಾಷ್ಟ್ರೀಯ ಗಾಳಿಪಟ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.
ಮಂಗಳೂರಿಗೆ ಆಗಮಿಸುವ ಪ್ರವಾಸಿಗರು ಸ್ವಂತ ವಾಹನಗಳಿಲ್ಲದಿದ್ದರೆ, ಸುತ್ತಮುತ್ತಲಿನ ಪ್ರೇಕ್ಷಣೀಯ ಜಾಗಗಳನ್ನು ವೀಕ್ಷಿಸಬೇಕಾದರೆ ಹೆಚ್ಚಿನ ಹಣ ನೀಡಿ ಬಾಡಿಗೆ ವಾಹನಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಈಗ ಸಿಟಿ ಟೂರ್ ಬಸ್ ಪುನಃ ಆರಂಭಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಕಚೇರಿಯಿಂದ ರಾಜ್ಯ ಕಚೇರಿಗೆ ಮನವಿ ಮಾಡಲು ನಿರ್ಧರಿಸಿದೆ.
ಇದರ ಜತೆಗೆ ಈ ಪ್ರದೇಶದ ಜನಪ್ರತಿನಿಧಿಗಳು ಕೂಡ ರಾಜ್ಯ ಸರಕಾರಕ್ಕೆ ಒತ್ತಡ ಹಾಕಿದರೆ ಕೆಲವೇ ದಿನಗಳಲ್ಲಿ ಮಂಗಳೂರು ನಗರದ ಪ್ರವಾಸಿ ತಾಣಗಳಿಗೆ ಟೂರಿಂಗ್ ಬಸ್ ಓಡಲಿದೆ.
2016ರಲ್ಲಿ ಮಂಗಳೂರಿನಲ್ಲಿತ್ತು
2016ರ ಎ. 17ರಂದು ಪಿಲಿಕುಳ ಡಾ| ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಅವರು ಕೆಎಸ್‌ಟಿಡಿಸಿ ಬಸ್‌ಗೆ ಚಾಲನೆ ನೀಡಿದ್ದರು. ಆರಂಭದಲ್ಲಿ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಇತ್ತು. ಮಳೆಗಾಲ ಕೊನೆಗೊಳ್ಳುವುದರಲ್ಲಿ ಬಸ್‌ನ ಕೆಲವೊಂದು ಬಿಡಿ ಭಾಗಗಳು ಹದಗೆಟ್ಟಿತ್ತು. ಕೆಲವು ದಿನಗಳ ಬಳಿಕ ಈ ಬಸ್ ಅನ್ನು ಬೆಂಗಳೂರಿಗೆ ಸಾಗಿಸಲಾಗಿತ್ತು. ಅದಾದ ಬಳಿಕ ಟೂರಿಂಗ್ ಬಸ್ ಮಂಗಳೂರಿನಲ್ಲಿ ಓಡಲಿಲ್ಲ.
ಈ ಹಿಂದೆ ಇದ್ದಂತಹ ಕೆಎಸ್‌ಟಿಡಿಎಂಸಿ ಪ್ರವಾಸಿ ಬಸ್ ಲಾಲ್ಬಾಗ್‌ನಿಂದ ಹೊರಟು ಕುದ್ರೋಳಿ, ಕದ್ರಿ, ಮಂಗಳಾದೇವಿ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಪಿಲಿಕುಳ ನಿಸರ್ಗಧಾಮ, ಜೈವಿಕ ಉದ್ಯಾನವನ, ತಣ್ಣೀರುಬಾವಿ ಟ್ರೀಪಾರ್ಕ್, ಕಡಲತೀರದಿಂದ ಲಾಲ್ಬಾಗ್‌ಗೆ ತೆರಳುತ್ತಿತ್ತು. ಕನಿಷ್ಠ 10 ಮಂದಿ ಬಸ್‌ನಲ್ಲಿರಬೇಕು ಎಂಬ ಷರತ್ತು ಇತ್ತು. ವಯಸ್ಕರಿಗೆ 190 ರೂ. ಮತ್ತು ವಿದ್ಯಾರ್ಥಿಗಳಿಗೆ ಶೇ. 10 ರಿಯಾಯಿತಿ ನೀಡಲಾಗಿತ್ತು.
•ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.