ನಗರ ಮಟ್ಟದಲ್ಲಿ ಸ್ವಚ್ಛ ಸಂಕಲ್ಪ ಶ್ಲಾಘನೀಯ: ಮಂಗಳಾಮೃತ ಚೈತನ್ಯ
Team Udayavani, Jun 17, 2019, 6:41 AM IST
ಮಹಾನಗರ: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 28ನೇ ಶ್ರಮದಾನ ಬೋಳೂರು ಪ್ರದೇಶದಲ್ಲಿ ರವಿವಾರ ನಡೆಯಿತು.
ಮಾತಾ ಅಮೃತಾನಂದಮಯಿ ಮಠದ ಎದುರುಗಡೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಮತ್ತು ಲೆಕ್ಕಪರಿಶೋಧಕ ರಾಮನಾಥ್ ನಾಯಕ್ ಶ್ರಮದಾನಕ್ಕೆ ಹಸುರು ನಿಶಾನೆ ತೋರಿ ಚಾಲನೆ ನೀಡಿದರು.
ಮನಪಾ ಆರೋಗ್ಯ ನಿರೀಕ್ಷಕಿ ಆಶ್ವಿನಿ, ದಾಮೋದರ್ ಭಟ್, ಪ್ರಶಾಂತ ಪಿ., ಸೂರಜ್ ಸೋಲಂಕಿ, ಸುರೇಶ್ ಅಮೀನ್, ಎ.ವಿ. ಸುಗುಣನ್, ರಾಜನ್, ಪ್ರಸಾದರಾಜ್ ಕಾಂಚನ್, ಶ್ರುತಿ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಚಾಲನೆ ನೀಡಿದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಮಾತನಾಡಿ, ಅಂತರಂಗ ಶುದ್ಧವಾಗದೇ ಬಹಿರಂಗದ ಪರಿಸರ ಸ್ವಚ್ಛವಾಗದು ಆದ್ದರಿಂದ ಜನರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಬೇಕಿದೆ. ಸ್ವಚ್ಛತಾ ಅಭಿಯಾನಗಳು ಮಾಡುತ್ತಿರುವ ಈ ಕಾರ್ಯವು ಕರ್ಮಯೋಗಕ್ಕೆ ಸಮಾನವಾದುದು. ನಿಸ್ವಾರ್ಥದಿಂದ ಮಾಡಿದ ಯಾವುದೇ ಕಾರ್ಯಕ್ಕೆ ಉನ್ನತವಾದ ಪ್ರತಿಫಲ ದೊರೆಯುತ್ತದೆ. ಪ್ರಸ್ತುತ ಗಡಿಬಿಡಿಯ ಒತ್ತಡ ಜೀವನ ಕ್ರಮದ ನಡುವೆಯೂ ಇಷ್ಟೊಂದು ಜನ ಸೇವೆಗಾಗಿ ಸಮಯವನ್ನು ಮೀಸಲಿಡುತ್ತಿರುವುದು ಹೆಮ್ಮೆಯ ಸಂಗತಿ. ಅಲ್ಲದೇ ಸಮಾನ ಮನಸ್ಕ ವ್ಯಕ್ತಿಗಳು ಹಾಗೂ ಸಂಘಟನೆಗಳು ಒಂದೆಡೆ ಸೇರಿ ಶ್ರಮದಾನ ಮಾಡುತ್ತಿರುವುದು ಇದಕ್ಕೆ ಮತ್ತಷ್ಟು ಮೆರಗು ನೀಡಿದೆ ಎಂದರು.
ಸ್ವಚ್ಛತೆ
ಬೋಳೂರಿನಲ್ಲಿರುವ ಮಾತಾ ಅಮೃತಾನಂದ ಮಯಿ ಮಠದ ಎದುರು ರಸ್ತೆಯಿಂದ ಬೊಕ್ಕಪಟ್ಣ ಸಾಗುವ ರಸ್ತೆಯಲ್ಲಿರುವ ಸುಮಾರು 10ಕ್ಕೂ ಅಧಿಕ ತ್ಯಾಜ್ಯ ಸುರಿಯುತ್ತಿದ್ದ ಜಾಗಗಳನ್ನು ಗುರುತಿಸಿ, ಸ್ವಚ್ಛಗೊಳಿಸಲಾಯಿತು. ಒಟ್ಟು ಎಂಟು ತಂಡಗಳನ್ನು ರಚಿಸಿಕೊಂಡು ಶ್ರಮದಾನ ಮಾಡಲಾಯಿತು. ದಿಲ್ರಾಜ್ ಆಳ್ವ, ಸುಧೀರ್ ವಾಮಂಜೂರು, ಬಾಲಕೃಷ್ಣ ಭಟ್, ಜಯಕೃಷ್ಣ ಬೇಕಲ್, ಸಂದೀಪ್ ಕೋಡಿಕಲ್, ಪ್ರವೀಣ ಶೆಟ್ಟಿ, ಭರತ್ ಸದಾನಂದ, ಅವಿನಾಶ್ ಅಂಚನ್ ಅವರ ನೇತೃತ್ವದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.
ಮನೆ ತ್ಯಾಜ್ಯದ ಜತೆಗೆ ಕಲ್ಲುಮಣ್ಣುಗಳ ರಾಶಿ, ಪ್ಲಾಸ್ಟಿಕ್ ಚೀಲಗಳ ರಾಶಿಗಳು ಇಡೀ ಪರಿಸರವನ್ನು ಗಲೀಜುಗೊಳಿಸಿದ್ದವು. ಕೆಲವು ಸ್ಥಳೀಯರು ತ್ಯಾಜ್ಯ ಬಿಸಾಡುವುದನ್ನು ತಡೆಯಲು ಪ್ರಯತ್ನಿಸಿದರೂ ಸಫಲತೆ ಕಂಡಿರಲಿಲ್ಲ. ಇದೀಗ ಅಲ್ಲಿದ್ದ ಸುಮಾರು ಮೂರು ಟಿಪ್ಪರ್ ಕಸವನ್ನು ತೆಗೆದು ಆಲಂಕಾರಿಕ ಗಿಡಗಳನ್ನಿಟ್ಟು ಮತ್ತೆ ಅಲ್ಲಿ ಯಾರೂ ತ್ಯಾಜ್ಯ ಬಿಸಾಡದಂತೆ ಮಾಡಲಾಗಿದೆ. ಎಂದಿನಂತೆ ಅಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛತಾ ಯೋಧರ ಪಡೆ ಕಸ ಹಾಕುವವರನ್ನು ತಡೆದು, ರಸ್ತೆಗೆ ತ್ಯಾಜ್ಯ ಸುರಿಯದಂತೆ ಮನವೊಲಿಸುವ ಕಾರ್ಯವನ್ನು ಮಾಡಲಿದೆ. ಸರಿತಾ ಶೆಟ್ಟಿ, ಕೋಡಂಗೆ ಬಾಲಕೃಷ್ಣ ನಾೖಕ್ ಮಾರ್ಗದರ್ಶನದಲ್ಲಿ ರಸ್ತೆಯ ಬದಿಗಳಲ್ಲಿ ಗಿಡಗಳನ್ನು ನೆಡಲಾಯಿತು.
ಮಾತಾ ಅಮೃತಾನಂದಮಯಿ ಮಠದ ‘ಆಯುಧ’ ಸಂಘಟನೆಯ ಸದಸ್ಯರು ಕಾರ್ಯ ಕ್ರಮದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.