ಶ್ರೀರಾಮಕೃಷ್ಣಮಿಷನ್:ಪಡೀಲ್,ಬೋಳಾರದಲ್ಲಿ ‘ಸ್ವಚ್ಛ ಮಂಗಳೂರು’ಅಭಿಯಾನ
Team Udayavani, Apr 9, 2018, 12:34 PM IST
ಮಹಾನಗರ: ಶ್ರೀ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರಗುತ್ತಿರುವ ‘ಸ್ವಚ್ಛ ಮಂಗಳೂರು’ ಅಭಿಯಾನದ 23ನೇ ಶ್ರಮದಾನ ರವಿವಾರ ಪಡೀಲ್ ರಾಷ್ಟ್ರೀಯ ಹೆದ್ದಾರಿ ಕೂಡು ರಸ್ತೆಯ ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ಜರಗಿತು.
ನ್ಯಾಯವಾದಿ ವಿವೇಕಾನಂದ ಪನೆಯಾಲ ಹಾಗೂ ಪ್ರೊ| ಸತೀಶ್ ಭಟ್ ಜಂಟಿಯಾಗಿ 23ನೇ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿದರು. ವಿವೇಕಾನಂದ ಪನಿಯಾಲ್ ಮಾತನಾಡಿ ‘ಆಂತರಿಕವಾಗಿ ನಾವು ಶುದ್ಧವಾದರೆ ಬಾಹ್ಯ ಶುಚಿತ್ವ ಸಾಧಿಸುವುದು ಸುಲಭವಾಗುತ್ತದೆ. ಮನ ಶುದ್ಧಿಯಾದಾಗ ದೇಶ ತನ್ನಿಂತಾನೇ ಸ್ವಚ್ಛವಾಗುತ್ತದೆ. ಸ್ವಚ್ಛ ಮನಸ್ಸುಗಳಿಂದ ಮಾತ್ರ ಇಂತಹ ಸ್ವಚ್ಛತಾ ಅಭಿಯಾನಗಳು ಸಾಧ್ಯ. ರಾಮಕೃಷ್ಣ ಮಿಷನ್ ಈ ನಿಟ್ಟಿನಲ್ಲಿ ನಗರದ ಸಮಾನ ಮನಸ್ಕ ಯುವಜನರನ್ನು ಒಗ್ಗೂಡಿಸಿ ಈ ಅಭಿಯಾನವನ್ನು ಆಯೋಜಿಸಿ ಭವಿಷ್ಯ ಮಂಗಳೂರಿಗೆ ಮಹತ್ತರ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿದೆ’ ಎಂದು ಹೇಳಿದರು. ಡಾ| ರಾಜೇಂದ್ರ ಪ್ರಸಾದ್, ಡಾ| ಧನೇಶ್ ಕುಮಾರ್, ಸುಮಮ್ ಸನ್ನಿ, ಮೋಹನ್ ಪಡೀಲ್ ಉಪಸ್ಥಿತರಿದ್ದರು.
ಕರಪತ್ರ ವಿತರಿಸಿ ಸ್ವಚ್ಛತಾ ಜಾಗೃತಿ
ನಿಟ್ಟೆ ಫಿಸಿಯೊಥೆರಪಿ ವಿದ್ಯಾರ್ಥಿಗಳು ಉಳ್ಳಾಲ ಶ್ರೀನಿವಾಸ ಮಲ್ಯ ವೃತ್ತದ ಸುತ್ತಮುತ್ತ ಶುಚಿಗೊಳಿಸಿದರು. ನಿಟ್ಟೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪಡೀಲ್ ಪರಿಸರದ ಮನೆಗಳಿಗೆ ಭೇಟಿ ನೀಡಿ ಕರಪತ್ರ ವಿತರಿಸಿ ಸ್ವಚ್ಛತಾ ಜಾಗೃತಿ ಮೂಡಿಸಿದರು. ಅಭಿಯಾನದ ಬಳಿಕ ಎಲ್ಲ ಕಾರ್ಯಕರ್ತರಿಗೆ ನ್ಯೂ ಫ್ರೆಂಡ್ಸ್ ಪಡೀಲ್ ಇವರ ಆವರಣದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
24ನೇ ಶ್ರಮದಾನ
ಸ್ವಚ್ಛ ಮಂಗಳೂರು ಅಭಿಯಾನದ 24ನೇ ಶ್ರಮದಾನ ಬೋಳಾರ ಶ್ರೀ ಮಾರಿಗುಡಿ ಮಹಿಷಮರ್ದಿನಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಜರಗಿತು. ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಹಾಗೂ ತಾರಾನಾಥ ಶೆಟ್ಟಿ ಬೋಳಾರ ಜಂಟಿಯಾಗಿ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿದರು. ಸೀತಾರಾಮ ಎ ಮುಳಿಹಿತ್ಲು, ಸಾಮಾಜಿಕ ಕಾರ್ಯಕರ್ತ ಸುರೇಶ ಶೆಟ್ಟಿ ಮತ್ತಿತರರು ಹಾಜರಿದ್ದರು.
ತ್ಯಾಜ್ಯಕ್ಕೆ ಮುಕ್ತಿ
ಮಾರಿಗುಡಿ ರಸ್ತೆಯ ಮೂಲೆಯೊಂದರಲ್ಲಿ ಸಾರ್ವಜನಿಕರು ಪ್ರತಿನಿತ್ಯ ಅಪಾರ ಪ್ರಮಾಣದ ಕಸವನ್ನು ತಂದು ಸುರಿಯುತ್ತಿದ್ದರು. ನಿವೇದಿತಾ ಬಳಗದ ಸದಸ್ಯರು ರತ್ನಾ ಆಳ್ವ ಜತೆಯಾಗಿ ಅದನ್ನೆಲ್ಲ ತೆಗೆದು ಅಲ್ಲಿ ಸುಂದರವಾಗಿ ತೋರುವಂತೆ ಹೂಕುಂಡಗಳನ್ನು ಇಡಲಾಗಿದೆ. ಅದರೊಂದಿಗೆ ಅಲ್ಲಿಯ ಪರಿಸರದ ಜನರನ್ನು ಸಂದರ್ಶಿಸಿ ತ್ಯಾಜ್ಯ ಹಾಕದಂತೆಯೂ ಕಸವನ್ನು ಕಸ ಸಂಗ್ರಹಕರಿಗೆ ನೀಡುವಂತೆ ವಿನಂತಿಸಲಾಗಿದೆ. ಮತ್ತೂಂದು ತಂಡದ ವರು ವಿಜಯಲಕ್ಷ್ಮೀ ಮಾರ್ಗದರ್ಶನದಲ್ಲಿ ಬೋಳಾರದಿಂದ ಎಮ್ಮೆಕೆರೆಗೆ ಸಾಗುವ ಮಾರ್ಗಗಳನ್ನು ಸಹ ಗುಡಿಸಿ ಸ್ವಚ್ಛಗೊಳಿಸಿದರು.
ಉಪನ್ಯಾಸಕ ಈಶ್ವರ ಭಟ್, ವಸಂತಿ ನಾಯಕ್, ರಿಯಾಜ್ ಅಹ್ಮದ್ ವಾಮಂಜೂರು, ಜಗನ್ ಕೋಡಿಕಲ್, ಶಿವು ಪುತ್ತೂರು, ರಾಜೇಶ್ವರೀ ವಿಜಯರಾಜ್, ಸುಜಿತ ಪ್ರತಾಪ್ ಸೇರಿದಂತೆ ಸುಮಾರು ಮುನ್ನೂರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡರು. ಈ ಸ್ವತ್ಛತಾ ಅಭಿಯಾನಕ್ಕೆ ಎಂಆರ್‌ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡುತ್ತಿದೆ ಎಂದು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದ ತಿಳಿಸಿದ್ದಾರೆ.
ನೂತನ ಬಸ್ ತಂಗುದಾಣ
ಪಡೀಲ್ ಹೆದ್ದಾರಿಯ ವೃತ್ತದ ಬಳಿಯಿರುವ ಅವ್ಯವಸ್ಥಿತ ತಾತ್ಕಾಲಿಕ ಬಸ್ ತಂಗುದಾಣ ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿತ್ತು. ಅಲ್ಲದೇ ಪ್ರಯಾಣಿಕರಿಗೂ ಸರಿಯಾದ ಸೂರು ಹಾಗೂ ಕುಳಿತುಕೊಳ್ಳಲು ವ್ಯವಸ್ಥಿತ ಆಸನಗಳಿರಲಿಲ್ಲ. ಅದೇ ಜಾಗದಲ್ಲಿ ಬಸ್ ಪ್ರಯಾಣಿಕರಿಗಾಗಿ ಉತ್ತಮ ಗುಣಮಟ್ಟದ ತಂಗುದಾಣವನ್ನು ನಿರ್ಮಿಸಲು ಉದ್ದೇಶಿಸಲಾಯಿತು. ಸ್ಥಳೀಯ ಆಟೋ ಚಾಲಕರು ಹಾಗೂ ಸ್ವಚ್ಛ ಪಡೀಲ್ ತಂಡದ ಸದಸ್ಯರ ಸಹಕಾರದಿಂದ ಸುಸಜ್ಜಿತ ತಂಗುದಾಣವನ್ನು ನಿರ್ಮಿಸಲಾಗಿದೆ. ಕುಳಿತುಕೊಳ್ಳಲು ಆಸನಗಳು, ಮಳೆ ಬಿಸಿಲಿನಿಂದ ರಕ್ಷಿಸುವ ಸೂರು, ಮಳೆನೀರು ಹಾಗೂ ಕೆಸರು ಒಳಬಾರದಂತೆ ತಡೆಯುವ ಟೈಲ್ಸ್‌ನಿಂದ ಮುಚ್ಚಲ್ಪಟ್ಟ ಕಾಂಕ್ರೀಟ್ ನೆಲ ಹಾಗೂ ಸ್ವಚ್ಛತೆಯ ಸಂದೇಶವುಳ್ಳ ಫಲಕಗಳನ್ನು ಈ ತಂಗುದಾಣ ಒಳಗೊಂಡಿದೆ. ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಯೋಜಕ ದಿಲ್‌ರಾಜ್ ಆಳ್ವ ಮಾರ್ಗದರ್ಶನದಲ್ಲಿ ಉದಯ ಕೆ.ಪಿ. ಹಾಗೂ ಕೊಡಂಗೆ ಬಾಲಕೃಷ್ಣ ನಾೖಕ್ ಉಸ್ತುವಾರಿ ವಹಿಸಿದ್ದರು.
ಸ್ವಚ್ಛತೆ, ಗೂಡಂಗಡಿಗಳ ತೆರವು
ಯೂತ್ ಸೆಂಟರ್ ಪಡೀಲ್ ಸದಸ್ಯರು ನೂತನವಾಗಿ ನಿರ್ಮಿಸಲಾದ ಬಸ್ ತಂಗುದಾಣದ ಹಿಂಭಾಗದಲ್ಲಿದ್ದ ತ್ಯಾಜ್ಯವನ್ನು ತೆಗೆದರು. ಸ್ವಚ್ಛ ಮಂಗಳೂರು ಹಿರಿಯ ಕಾರ್ಯಕರ್ತ ಅಶೋಕ ಸುಬ್ಬಯ್ಯ ನೇತೃತ್ವದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಬಸ್ ತಂಗುದಾಣವನ್ನು ತೆರವುಗೊಳಿಸಿ ಆ ಜಾಗವನ್ನು ಶುಚಿಗೊಳಿಸಿದರು. ತಾರಾನಾಥ್ ಆಳ್ವ ಹಾಗೂ ಇತರರು ಅಲ್ಲಿದ್ದ ರಸ್ತೆ ಬದಿಯ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ವ್ಯಾಪಾರಿಗಳ ಮನವೊಲಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟರು. ಪಡೀಲ್ ಆಟೋ ನಿಲ್ದಾಣದ ಸುತ್ತಮುತ್ತ ಸ್ವಚ್ಛ ಎಕ್ಕೂರು ಸದಸ್ಯರು ಸ್ವತ್ಛತೆಯನ್ನು ಮಾಡಿ ಫುಟ್‌ಪಾತ್ ಸರಿ ಮಾಡಿದರು. ಒಂದಿಷ್ಟು ಕಾರ್ಯಕರ್ತರು ಪೋಸ್ಟರ್ ತೆರವುಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.