ಸ್ಮಾರ್ಟ್‌ಸಿಟಿ ಯೋಜನೆಯಡಿ ತ್ಯಾಜ್ಯ ನಿರ್ವಹಣೆಗೆ ಆದ್ಯತೆ: ಮಹೇಶ್
ಸ್ಟೇಟ್‌ಬ್ಯಾಂಕ್-ಬಂದರು ಪ್ರದೇಶದಲ್ಲಿ "ಸ್ವಚ್ಛ ಮಂಗಳೂರು' ಅಭಿಯಾನ
Team Udayavani, Jul 29, 2019, 5:34 AM IST
ಮಹಾನಗರ: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 34ನೇ ಶ್ರಮದಾನ ಕಾರ್ಯಕ್ರಮವನ್ನು ಸ್ಟೇಟ್‌ಬ್ಯಾಂಕ್ ಹಾಗೂ ಬಂದರು ಪ್ರದೇಶದಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು.
ಸ್ಮಾರ್ಟ್ ಸಿಟಿ ಮಂಗಳೂರು ಇದರ ಪ್ರಧಾನ ವ್ಯವಸ್ಥಾಪಕ ಡಿ.ಮಹೇಶ್ ಕುಮಾರ್, ಶಿಕ್ಷಕಿ ರಾಜೀವಿ ಚಂದ್ರಶೇಖರ್ ಶ್ರಮದಾನಕ್ಕೆ ಹ್ಯಾಮಿಲ್ಟನ್ ವೃತ್ತದ ಬಳಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಡಿ. ಮಹೇಶ್ ಕುಮಾರ್ ಮಾತನಾಡಿ, “ಕಸದಿಂದ ದೂರವಿರುವುದು ಸ್ವತ್ಛತೆಯಲ್ಲ. ಬದಲಿಗೆ ಕಸವನ್ನು ನಿರ್ವಹಿಸುವುದು ಸ್ವಚ್ಛತೆ. ನಾವು ಮುಂಬರುವ ಜನಾಂಗವನ್ನು ಗಮನದಲ್ಲಿರಿಸಿಕೊಂಡು ಇವತ್ತು ಕಾಯೊìàನ್ಮುಖವಾಗಬೇಕಿದೆ. ಸ್ವಚ್ಛತೆಯನ್ನು ಸಾಧಿಸದೇ ನಗರದ ಅಭಿವೃದ್ಧಿ ಅಸಾಧ್ಯ. ಇಂತಹ ಸ್ವತ್ಛತೆಯ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್ ಮತ್ತು ಸ್ವಯಂಸೇವಕರ ಪರಿಶ್ರಮ ಅಪಾರ. ಈ ಅಭಿಯಾನ ದೇಶಕ್ಕೆ ಮಾದರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ಈ ಅಭಿಯಾನ ಸ್ಫೂರ್ತಿಯನ್ನು ತುಂಬಿದೆ. ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಹೊಸ ಮಾರ್ಗಗಳನ್ನು ಆವಿಷ್ಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿರುವ ನಗರದ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ’ ಎಂದು ತಿಳಿಸಿದರು.
ಅಭಿಯಾನದ ಮಾರ್ಗದರ್ಶಿ ಕ್ಯಾ| ಗಣೇಶ್ ಕಾರ್ಣಿಕ್ ಪ್ರಾಸ್ತಾವಿಸಿದರು. ಸ್ವಚ್ಛ ಮನಸ್ಸು ಅಭಿಯಾನದ ಸಂಯೋಜಕ ರಂಜನ್ ಬೆಳ್ಳರ್ಪಾಡಿ, ಸತ್ಯಾನಂದ ಭಟ್, ಸುರೇಂದ್ರ ನಾಯಕ್, ಕಿರಣ ಫೆರ್ನಾಂಡಿಸ್, ಸಂದೀಪ್ ಕೋಡಿಕಲ್, ಮಹೇಶ್ ಕೆ. ಕೆ. ಮುಂತಾದವರು ಉಪಸ್ಥಿತರಿದ್ದರು.ಸ್ವಚ್ಛತೆ ಸ್ವಯಂಸೇವಕರು ಐದು ಗುಂಪುಗಳಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ತ್ಯಾಜ್ಯ ರಾಶಿಗಳು ತುಂಬಿದ್ದ 5 ಸ್ಥಳಗಳನ್ನು ತೆರವು ಮಾಡಿ ಶುಚಿ ಮಾಡಲಾಯಿತು.
ಮೊದಲಿಗೆ ಹ್ಯಾಮಿಲ್ಟನ್ ವೃತ್ತದಿಂದ ರೊಸಾರಿಯೋ ಚರ್ಚ್‌ಗೆ ಸಾಗುವ ಮಾರ್ಗದ ಆರಂಭದಲ್ಲಿದ್ದ ಕಸದ ರಾಶಿಯನ್ನು ತೆಗೆದು ಹಸನು ಮಾಡಲಾಯಿತು. ಅನಂತರ ಹುಲ್ಲು-ಕಳೆಯನ್ನು ತೆಗೆಯಲಾಯಿತು. ಸ್ಟೇಟ್‌ಬ್ಯಾಂಕ್ ಬಳಿಯಲ್ಲಿದ್ದ ಕಸದ ರಾಶಿಯನ್ನು ಕಮಲಾಕ್ಷ ಪೈ, ಅಭಿಷೇಕ್ ವಿ.ಎಸ್ ಹಾಗೂ ಇನ್ನಿತರರು ತೆರವುಗೊಳಿಸಿ ಸ್ವಚ್ಛಗೊಳಿಸಿದರು.
ಮತ್ತೂಂದೆಡೆ ಹಳೆಯ ಬಂದರು ರಸ್ತೆಯಲ್ಲಿ ಮೆಹಬೂಬ್ ಖಾನ್, ಅವಿನಾಶ್ ಅಂಚನ್ ಹಾಗೂ ಕಾರ್ಯಕರ್ತರು ಶ್ರಮದಾನ ಕೈಗೊಂಡರು. ಉಮಾಕಾಂತ್ ಸುವರ್ಣ ನೇತೃತ್ವದಲ್ಲಿ ಕಾರ್ಯಕರ್ತರು ಆಲ್‌ಬದ್ರಿಯಾ ಕಾಲೇಜು ಎದುರಿನ ತ್ಯಾಜ್ಯ ರಾಶಿಯನ್ನು ಶುಚಿಗೊಳಿಸಿ ಅಲ್ಲಿ ಹೂಕುಂಡಗಳನ್ನಿಟ್ಟರು. ಬಂದರು ಪ್ರದೇಶದಲ್ಲಿದ್ದ ತ್ಯಾಜ್ಯರಾಶಿಗಳನ್ನು ಜೆಸಿಬಿ ಸಹಾಯದಿಂದ ತೆರವು ಮಾಡಲಾಯಿತು. ಆ ಜಾಗದಲ್ಲಿ ಆಲಂಕಾರಿಕ ಹೂಕುಂಡ ಗಳನ್ನಿಡಲಾಗಿದೆ.
ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಮತ್ತೆ ಸಾರ್ವಜನಿಕರು ಕಸ ತಂದು ಸುರಿಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಚ್ಛತಾ ಯೋಧರು ಗಸ್ತು ತಿರುಗಲಿದ್ದಾರೆ. ಜತೆಗೆ ಹತ್ತಿರದ ಅಂಗಡಿಮುಂಗಟ್ಟುಗಳಿಗೆ ತೆರಳಿ ಮಾರ್ಗಗಳ ಬದಿಯಲ್ಲಿ ಕಸ ಎಸೆಯದಂತೆ ಮನವಿ ಮಾಡಿದ್ದಾರೆ.
ಬಸ್ ತಂಗುದಾಣ ನಿರ್ವಹಣೆ
ರಾಮಕೃಷ್ಣ ಮಿಷನ್‌ನಿಂದ ನಿರ್ಮಿಸಿದ್ದ ಪಡೀಲ್ ಪ್ರಯಾಣಿಕರ ತಂಗುದಾಣವನ್ನು ಸ್ವಯಂಸೇವಕರು ಪುನೀತ್ ಪೂಜಾರಿ ನೇತೃತ್ವದಲ್ಲಿ ಶುಚಿಗೊಳಿಸಿದರು. ಆಸನಗಳಿಗೆ ಬಣ್ಣಬಳಿದು, ನೆಲವನ್ನು ತೊಳೆದು, ಸ್ವಚ್ಛತೆ ಸಂದೇಶದ ಫ್ಲೆಕ್ಸ್ ಅಳವಡಿಸಲಾಯಿತು.
“ಕಸದ ಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನ ಸಂಪನ್ನ
ರಾಮಕೃಷ್ಣ ಮಿಷನ್ ವತಿಯಿಂದ ಹಮ್ಮಿಕೊಂಡ ಕಸದಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನದಡಿ ಒಟ್ಟು 500 ಕಸದ ಬುಟ್ಟಿಗಳನ್ನು ನಗರದ ವಿವಿಧೆಡೆಯಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿ ಮಳಿಗೆಗಳಿಗೆ ನೀಡಲಾಯಿತು.
ಕಸದ ಬುಟ್ಟಿ ವಿತರಣೆಯ ಜತೆಗೆ ಜಾಗೃತಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು. ಸತತ ಒಂದು ತಿಂಗಳುಗಳ ಕಾಲ ಈ ಕಾರ್ಯಕ್ರಮ ಜರುಗಿ ಈ ವಾರ ಸಂಪನ್ನವಾಯಿತು. ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.