ಸ್ವಚ್ಛ ಮಂಗಳೂರು: ಸ್ವಚ್ಛತಾ ಆ್ಯಪ್ ಡೌನ್‌ಲೋಡ್ ಮಾಡಲು ಮನಪಾ ಮನವಿ
Team Udayavani, Dec 27, 2017, 9:39 AM IST
ಮಹಾನಗರ: ಸ್ವಚ್ಛ ಸರ್ವೇಕ್ಷಣ- 2018ರಲ್ಲಿ ಮಂಗಳೂರು ನಗರ ಗರಿಷ್ಠ ಅಂಕ ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಅತಿ ಹೆಚ್ಚು ಸಂಖ್ಯೆಯಲ್ಲಿ ತಮ್ಮ ಮೊಬೈಲ್‌ಗಳಲ್ಲಿ ‘ಸ್ವಚ್ಛತಾ ಆ್ಯಪ್’ ಡೌನ್ ಲೋಡ್ ಮಾಡಿಕೊಳ್ಳುವಂತೆ ಮಂಗಳೂರು ಪಾಲಿಕೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಮಂಗಳವಾರ ಮನಪಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಕವಿತಾ ಸನಿಲ್, ಶಾಸಕ ಜೆ.ಆರ್. ಲೋಬೊ ಅವರು, ಸ್ವಚ್ಛ ಭಾರತ ಮಿಷನ್ ಅಡಿ ದೇಶದ ಎಲ್ಲ ನಗರಗಳಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಸ್ವಚ್ಛ ಸರ್ವೇಕ್ಷಣೆ ನಡೆಸುತ್ತಿದೆ. ಸಮೀಕ್ಷೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅವಶ್ಯ ವಾಗಿದ್ದು, ಅಂಕ ಗಳಿಕೆಗೆ ಸ್ವಚ್ಛತಾ ಆ್ಯಪ್ ಡೌನ್ ಲೋಡ್ ಮಾಡುವುದು ಹಾಗೂ ಅದರಲ್ಲಿರುವ ಕೆಲವು ಅಂಶಗಳಿಗೆ ಪ್ರತಿಕ್ರಿಯಿಸುವುದು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು.
ಜ. 31 ಕೊನೆಯ ದಿನ
ನಗರ ಸ್ಥಳೀಯ ಸಂಸ್ಥೆಗಳಿಂದ ಸಲ್ಲಿಸಲಾಗುವ ದಾಖಲೆಗಳಿಗೆ 1,400 ಅಂಕ, ಸಾರ್ವಜನಿಕ ಅಭಿಪ್ರಾಯಕ್ಕೆ 1,400 ಹಾಗೂ ಕೇಂದ್ರ ತಂಡದಿಂದ ನೇರ ಸಮೀಕ್ಷೆಗೆ 1,200 ಅಂಕ ನಿಗದಿಯಾಗಿದೆ. ಗರಿಷ್ಠ ಸಂಖ್ಯೆಯಲ್ಲಿ ಸ್ವಚ್ಛತಾ ಆ್ಯಪ್ ಡೌನ್ ಲೋಡ್ ಮಾಡಿದರೆ ಹೆಚ್ಚು ಅಂಕ ಪಡೆಯಲು ಅವಕಾಶವಿದೆ. ಈಗ ಕೇವಲ 300 ಮಂದಿ ಮಾತ್ರ ಆ್ಯಪ್ ಡೌನ್ ಲೋಡ್ ಮಾಡಿದ್ದಾರೆ. ಜ. 31 ಡೌನ್ ಮಾಡಲು ಕೊನೆಯ ದಿನ. ಸಾರ್ವಜನಿಕರ ದೂರುಗಳ ನಿರ್ವಹಣೆಗೆ ಪಾಲಿಕೆ ವತಿಯಿಂದ 2016ರಲ್ಲೇಸ್ವಚ್ಛತಾ ಆ್ಯಪ್ ಬಿಡುಗಡೆಗೊಳಿಸಲಾಗಿತ್ತು. ಆದರೆ ಸಾರ್ವಜನಿಕರು ಆ್ಯಪ್ ಡೌನ್ ಲೋಡ್ ಮತ್ತು ಬಳಕೆಗೆ ಹೆಚ್ಚಿನ ಆಸಕ್ತಿ ವಹಿಸದ ಕಾರಣ 2017ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮನಪಾ ಹೆಚ್ಚಿನ ಅಂಕ ಗಳಿಸಲು ವಿಫಲವಾಯಿತು ಎಂದು ಅವರು ವಿವರ ನೀಡಿದರು.
ಜನ ಜಾಗೃತಿಗೆ ಸಹಕಾರ
ರಾಮಕೃಷ್ಣ ಮಠದ ಪರವಾಗಿ ಎಂ.ಆರ್. ವಾಸುದೇವ ರಾವ್ ಮಾತನಾಡಿ, ಸ್ವಚ್ಛತಾ ಅಭಿಯಾನದ ಸ್ವಯಂಸೇವಕರು ಸಹಿತ ಸುಮಾರು 5 ಸಾವಿರ ಮಂದಿ ಆ್ಯಪ್ ಡೌನ್ ಲೋಡ್ ಮಾಡಲು ಸಿದ್ಧರಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮನಪಾ ಆಯುಕ್ತ ಮಹಮ್ಮದ್ ನಜೀರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ, ಕಾರ್ಪೊರೇಟರ್ ಪ್ರಕಾಶ್ ಸಾಲ್ಯಾನ್, ಪರಿಸರ ಅಭಿಯಂತರ ಮಧು ಮನೋಹರ್ , ರಾಮಕೃಷ್ಣ ಮಠದ ಪ್ರತಿನಿಧಿಗಳಾದ ದಿಲ್‌ರಾಜ್ ಆಳ್ವ, ಉಮಾನಾಥ ಕೋಟೆಕಾರ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.