ಸ್ವಚ್ಛತೆಗೆ ಮಾದರಿಯಾದ ಬಜಪೆ ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ
Team Udayavani, Jan 24, 2018, 11:56 AM IST
ಬಜಪೆ: ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯಗಳು ಕಂಡು ಬಂದು ಪರಿಸರ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ತೊಡಕಾಗುವ ಈ ಸಮಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಕಲಾಕುಂಚ ರಚಿಸಿದ ಅನ್ಸಾರ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಿದ್ದಾರೆ. ಕಳೆದ ನವೆಂಬರ್‌ನಿಂದ ಈ ಶಾಲೆಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಕಲಾತ್ಮಕವಾಗಿ ಬೆಂಚು ತಯಾರಿಸಿದ್ದಾರೆ.
ಜರ್ಮನ್ ವಿದ್ಯಾರ್ಥಿನಿಯ ಮಾರ್ಗದರ್ಶನ
ಬಜಪೆ ಗ್ರಾ.ಪಂ.ತ್ಯಾಜ್ಯ ವಿಲೇವಾರಿಗೆಂದೇ ವರ್ಷಕ್ಕೆ 25ರಿಂದ 35 ಲಕ್ಷ ರೂ. ತನಕ ಖರ್ಚು ಮಾಡುತ್ತಿದೆ. ಗ್ರಾ.ಪಂ.ಗೆ ಇದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ಮನಗಂಡ ವಿದ್ಯಾರ್ಥಿಗಳು ಬಜಪೆಯ ಅನ್ಸಾರ್ ಆಂಗ್ಲ ಮಾಧ್ಯಮ, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಜಯಶ್ರೀ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಜರ್ಮನ್‌ನ ವಿದ್ಯಾರ್ಥಿನಿ ಇಡಾ ಅವರ ಮಾರ್ಗದರ್ಶನದೊಂದಿಗೆ ಪ್ಲಾಸ್ಟಿಕ್ ಬಾಟಲಿ, ಚೀಲಗಳಿಂದ ವಿವಿಧ ಬಣ್ಣದ ಕಲಾ ಕೃತಿಯ ಕುಳಿತುಕೊಳ್ಳುವ ಬೆಂಚು ತಯಾರಿ ಮಾಡುವಲ್ಲಿ ತೊಡಗಿದ್ದಾರೆ. ಈಗಾಗಲೇ ಒಂದು ಬೆಂಚು ತಯಾರಾಗಿದೆ. ಇನ್ನೊಂದು ಬೆಂಚು ತಯಾರಿ ಯಲ್ಲಿ ವಿದ್ಯಾರ್ಥಿಗಳು ತೊಡಗಿದ್ದಾರೆ.
ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ತಮ್ಮ ಮನೆ ಹಾಗೂ ಪರಿಸರದ ಪ್ಲಾಸ್ಟಿಕ್ ಬಾಟಲಿ ಹಾಗೂ ಚೀಲವನ್ನು ದಿನಾ ಹೆಕ್ಕಿ
ಸ್ವಚ್ಛಗೊಳಿಸಿ ತರುವ ಪರಿಪಾಠ ಬೆಳಿಸಿದ್ದಾರೆ. ಇದರಿಂದ ಪರಿಸರವೂ ಸ್ವಚ್ಛವಾಗಿದೆ. ಮಕ್ಕಳ ಕಾರ್ಯಕ್ಕೆ ಹೆತ್ತವರೂ ಬೆಂಬಲ ನೀಡಿದ್ದಾರೆ.
900ಕ್ಕಿಂತಲೂ ಹೆಚ್ಚು ಬಾಟಲಿ, ಪ್ಲಾಸ್ಟಿಕ್ ಚೀಲ ಸಂಗ್ರಹ
ಈಗಾಗಲೇ 900ಕ್ಕಿಂತಲೂ ಅಧಿಕ ಪಾನೀಯದ ವಿವಿಧ ಗ್ರಾತದ ಪ್ಲಾಸ್ಟಿಕ್ ಬಾಟಲಿ ಹಾಗೂ ಪ್ಲಾಸ್ಟಿಕ್ ಚೀಲ ಶೇಖರಣೆ ಮಾಡಲಾಗಿದೆ. ಇದಕ್ಕಾಗಿಯೇ ಶಾಲೆಯ ಒಂದು ಕೊಠಡಿಯನ್ನು ಮೀಸಲಿರಿಸಲಾಗಿದೆ. ಪಾಸ್ಟಿಕ್ ಬಾಟಲಿಯೊಳಗೆ ಚಾಕಲೇಟ್, ಇತರ ಚಿಟ್ಸ್ ಖಾಲಿತೊಟ್ಟೆಗಳು, ಸ್ಟ್ರಾ, ಉಪಯೋಗಿಕ್ಕಿಲ್ಲದ ಪೆನ್, ಬ್ಯಾಟರಿಗಳನ್ನು ಹಾಕಬಹುದಾಗಿದೆ. ವಿವಿಧ ಬಣ್ಣದ ಪ್ಲಾಸ್ಟಿಕ್ ಬಾಟಲಿ ಹಾಗೂ ಚೀಲಗಳು ಇದ್ದರೆ ಅದು ಅಲಂಕಾರಿಕವಾಗಿ ಕಾಣಿಸುತ್ತದೆ. ಜ.30ರಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ನಜೀರ್ ಅವರು ಇದನ್ನು ಉದ್ಘಾಟಿಸಲಿದ್ದಾರೆ.
ಸ್ವಚ್ಛತೆ ಆಸಕ್ತಿ ಅಗತ್ಯ
ಇನ್ನೂ ಅಲ್ಲಲ್ಲಿ ವಿವಿಧ ಬಣ್ಣದ ಬೆಂಚುಗಳನ್ನು ಮಾಡಲಿದ್ದೇವೆ. ಇದರಿಂದ ಮಕ್ಕಳಲ್ಲಿ ಸ್ವಚ್ಛತೆಯ ಆಸಕ್ತಿ ಮೂಡುತ್ತದೆ. ಮಕ್ಕಳು, ಶಿಕ್ಷಕರು ಕೂಡ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ತಂದಿದ್ದೇವೆ. ಮನೆಯಿಂದ ಸ್ವಚ್ಛತೆಯ ಪರಿಪಾಠ ಆರಂಭವಾದಾಗ ಮಾತ್ರ ಸ್ವಚ್ಛ ಗ್ರಾಮ ನಿರ್ಮಾಣ ಸಾಧ್ಯ.
– ಜಯಶ್ರೀ, ಪ್ರಾಂಶುಪಾಲೆ,ಆನ್ಸಾರ್ ಪದವಿಪೂರ್ವ ಕಾಲೇಜು
ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.