ಬಜಪೆ: ಸ್ವಚ್ಛತೆಗೆ ತೊಡಕಾದ ಪಾನೀಯ ಬಾಟಲಿಗಳು
Team Udayavani, Dec 12, 2019, 4:29 AM IST
ಬಜಪೆ: ಬಜಪೆ ಪೇಟೆಯ ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿ ಪಾನೀಯ ಬಾಟಲಿಗಳು ರಾಶಿ ಬಿದ್ದಿದ್ದು ಬಹುತೇಕ ಇಡೀ ಶೌಚಾಲಯದ ಪರಿಸರವನ್ನು ಅಕ್ರಮಿಸಿಕೊಂಡು ಅಲ್ಲಿನ ನೈರ್ಮಲ್ಯ ಹದಗಡೆಲು ಕಾರಣವಾಗಿದೆ. ಬೆಂಗಳೂರಿನ ಶುಚಿ ಇಂಟರ್‌ನ್ಯಾಶನಲ್ ಈ ಸಂಸ್ಥೆಯೂ ಸಾರ್ವಜನಿಕ ಶೌಚಾಲಯದ ನಿರ್ವಹಿಸುತ್ತಿದ್ದು ಇದಕ್ಕೆ ಬೇಕಾದ ನೀರಿನ ವ್ಯವಸ್ಥೆಯನ್ನು ಬಜಪೆ ಗಾ.ಪಂ. ಮಾಡುತ್ತಿದೆ. ಅದರೆ ಸಾರ್ವಜನಿಕ ಶೌಚಾಲಯ ಸ್ವಚ್ಛವಾಗಿದೆ. ಆದರೆ ಪಕ್ಕದಲ್ಲಿ ಬಾಟಲಿಗಳು ಬಿದ್ದಿದ್ದು ಇದರಿಂದ ಸುತ್ತ ಹುಲ್ಲು ಬೆಳೆದು ನಿಂತು ನೈರ್ಮಲ್ಯಕ್ಕೆ ತೊಡಕಾಗಿ ಪರಿಣಮಿಸಿದೆ.
ಬಾಟಲಿ ರಾಶಿಗೆ ಒಂದು ತಿಂಗಳು
ನ. 9ರಂದು ಅಯೋಧ್ಯೆ ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಯಾವುದೇ ಆಹಿತಕರ ಘಟನೆಗೆ ಆಸ್ಪದ ನೀಡದಂತೆ ಪಾನೀಯ ಬಾಟಲಿಗಳನ್ನು ಅಂಗಡಿಯ ಹೊರಗೆ ಇಡದಂತೆ ಸೂಚಿಸಿದ್ದರು. ಅಂದು ಅಂಗಡಿಯವರು ಈ ಬಾಟಲಿಗಳನ್ನು ಈ ಸಾರ್ವಜನಿಕ ಶೌಚಾಲಯದ ಎದುರು ತಂದು ಇಟ್ಟಿದ್ದರು. ಅನಂತರ ಅತ್ತ ಗಮನವೇ ಹರಿಸಿಲ್ಲ. ಬಾಟಲಿಗಳನ್ನು ಕೂಡ ತೆಗೆಯಲಿಲ್ಲ. ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ದಾರಿಯಲ್ಲಿ ಹುಲ್ಲು ಬೆಳೆದು ನಿಂತಿದೆ. ಬಾಟಲಿ ತೆಗೆಯದೇ ಸ್ವಚ್ಛ ಮಾಡಲು ಸಾಧ್ಯವಿಲ್ಲವಾಗಿದ್ದು ಈ ಬಗ್ಗೆ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಬಾಟಲಿಗಳೊಳಗೆ ಇದ್ದ ನೀರಿನಲ್ಲಿ ಸೊಳ್ಳೆ ಉತ್ವತ್ತಿಯಾಗುವ ಸಂಭವವೂ ಇದೆ. ಇದರಿಂದ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು. ಈ ಬಗ್ಗೆ ಜಾಗ್ರತರಾಗಿ ನೈರ್ಮಲ್ಯ ಕಾಪಾಡಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.