Bajpe ಪೇಟೆಯಲ್ಲಿ ಬಸ್ ತಂಗುದಾಣ ತೆರವು; ಬಾಕಿ ಉಳಿದ ಕಾಮಗಾರಿಯ ಆರಂಭ ಯಾವಾಗ
Team Udayavani, Nov 7, 2024, 2:28 PM IST
ಬಜಪೆ: ಬಜಪೆ ಪೇಟೆಯಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟ್ ಕಾಮಗಾರಿಗಾಗಿ ಅದ್ಯಪಾಡಿ ಹಾಗೂ ಮಂಗಳೂರು ಕಡೆಗೆ ಹೋಗುವ ಬಸ್ ತಂಗುದಾಣವನ್ನು ತೆರವು ಗೊಳಿಸಲಾಗಿದೆ.
ಬಜಪೆ ಪೇಟೆಯಲ್ಲಿರುವ ಅದ್ಯಪಾಡಿ, ಮುಚ್ಚಾರಿಗೆ ಹೋಗುವ ಬಸ್ ತಂಗುದಾಣ ಹಾಗೂ ಮಂಗಳೂರು, ಸುರತ್ಕಲ್‌ಗೆ ಹೋಗುವ ಬಸ್ ತಂಗುದಾಣವನ್ನು ತೆರವುಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಬಜಪೆ ಪಟ್ಟಣ ಪಂಚಾಯತ್‌ಗೆ ಮನವಿ ಮಾಡಿತ್ತು. ಅ ಮನವಿಯ ಮೇರೆಗೆ ಬಜಪೆ ಪಟ್ಟಣ ಪಂಚಾಯತ್ ಆ ಎರಡು ಬಸ್ ತಂಗುದಾಣವನ್ನು ತೆರವುಗೊಳಿಸಿದೆ.
ಲೋಕೋಪಯೋಗಿ ಇಲಾಖೆ ಈ ಎರಡು ತಂಗುದಾಣದ ತೆರವಿನ ಬಳಿಕ ಬಾಕಿ ಉಳಿದ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟ್ ಕಾಮಗಾರಿಯನ್ನು ಆರಂಭಿಸಬೇಕಾಗಿದೆ. ಆದರೆ ಅದು ಕಾಮಗಾರಿ ಆರಂಭಿಸಿಲ್ಲ. ಬಜಪೆ ಪಟ್ಟಣ ಪಂಚಾಯತ್ ಈ ಎರಡು ಬಸ್ ತಂಗುದಾಣದ ತೆರವು ಗೊಳಿಸಿದ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಈಗಾಗಲೇ ಪತ್ರ ಬರೆದಿದೆ.
ತಾತ್ಕಾಲಿಕ ಛಾವಣಿಯ ಅಗತ್ಯ
ಮಂಗಳೂರು, ಸುರತ್ಕಲ್, ಅದ್ಯಪಾಡಿ, ಮುಚ್ಚಾರು ಹೋಗುವ ಪ್ರಯಾಣಿಕರು ಬಸ್ ತಂಗುದಾಣ ಇಲ್ಲದೇ ಬಿಸಿಲಿಗೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೆರಳು ನೀಡುವ ತಾತ್ಕಾಲಿಕ ಛಾವಣಿಯ ಅಗತ್ಯವಿದೆ.
ಅಪೂರ್ಣ ಕಾಮಗಾರಿಯಿಂದ ಚರಂಡಿಯಲ್ಲೇ ನಿಂತ ನೀರು
ಬಜಪೆ ಕಿನ್ನಿಪದವಿನಿಂದ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಮೀಪದ ವರೆಗೆ ರಸ್ತೆ ಕಾಂಕ್ರೀಟ್ ಹಾಗೂ ವಿಸ್ತರಣೆ ಕಾಮಗಾರಿಯು ನಡೆದಿದ್ದು, ಕೆಲವೆಡೆ ರಸ್ತೆ ವಿಸ್ತರಣೆ ಕಾಮಗಾರಿಗೆ ಸ್ಥಳದ ಸಮಸ್ಯೆ ಎದುರಾಗಿದೆ. ಈ ಕಾಮಗಾರಿಗೆ ಹಿನ್ನೆಡೆಯಿಂದ ಇಲ್ಲಿನ ಅಪಾಯಕಾರಿ ತೆರೆದ ಚರಂಡಿಯಲ್ಲಿ ಮಳೆಯ ನೀರು ಹರಿಯಲು ಸಾಧ್ಯವಾಗದೇ ಅದರಲ್ಲಿ ಸೊಳ್ಳೆ ಉತ್ಪತ್ತಿಯಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಚರಂಡಿಯಲ್ಲಿನ ಹೂಳು ಅರ್ಧದಷ್ಟು ಮಾತ್ರ ತೆಗೆಯಲಾಗಿದೆ. ಮಳೆಯ ನೀರು ನಿಲ್ಲಲು ಕಾರಣವಾಗಿದೆ. ಸಮೀಪದಲ್ಲಿಯೇ ವಿದ್ಯಾರ್ಥಿ ನಿಲಯವೂ ಇದೆ. ಸೊಳ್ಳೆ ಉತ್ಪತ್ತಿಯಾಗುವುದು ಅಪಾಯಕಾರಿ. ಲೋಕೋಪಯೋಗಿ ಇಲಾಖೆ ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರ ಆರಂಭಗೊಳಿಸಬೇಕಾಗಿದ್ದು ಈ ಚರಂಡಿಯಲ್ಲಿ ನಿಂತಿರುವ ಕೊಳಚೆ ನೀರನ್ನು ಅದಷ್ಟು ಬೇಗ ತೆಗೆಯಬೇಕಾಗಿದೆ. ಈಗಾಗಲೇ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
ʼಅಮರನ್’ ಫೋನ್ ನಂಬರ್ ಸೀನ್; ಸಾಯಿಪಲ್ಲವಿ ನಂಬರ್ ಎಂದು ವಿದ್ಯಾರ್ಥಿಗೆ ನೂರಾರು ಕಾಲ್ಸ್
Darshan; ಭರ್ಜರಿ ಓಪನಿಂಗ್ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್ ಚಿತ್ರದಲ್ಲಿ ದರ್ಶನ್ ಹವಾ
ಹಾವೇರಿ: ಸಿದ್ದು ಅದೃಷ್ಟದ ಸಿಎಂ, ಬಿಎಸ್‌ವೈ ಹೋರಾಟ ಮಾಡಿ ಅಧಿಕಾರಕ್ಕೆ ಬಂದವರು-ವಿಜಯೇಂದ್ರ
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.