ಮಂಗಳೂರು ಧರ್ಮ ಪ್ರಾಂತದ ವಿಚಾರಣೆ ಮುಕ್ತಾಯ
ರೇಮಂಡ್ ಫ್ರಾನ್ಸಿಸ್ ಕಮಿಲ್ಲಸ್‌ಗೆ ಸಂತ ಪದವಿ
Team Udayavani, Jul 18, 2019, 5:20 AM IST
ವರದಿಯ ಪ್ರತಿಯನ್ನು ಅಧಿಕೃತ ದಾಖಲೆಗಳ ಪೆಟ್ಟಿಗೆಗಳಲ್ಲಿ ಇರಿಸಿ ಧರ್ಮಾಧ್ಯಕ್ಷರು ಮೊಹರು ಮಾಡಿದರು.
ಮಂಗಳೂರು: ದೇವರ ಸೇವಕ ರೇಮಂಡ್ ಫ್ರಾನ್ಸಿಸ್ ಕಮಿಲ್ಲಸ್ ಮಸ್ಕರೇನ್ಹಸ್ ಅವರನ್ನು ಪುನೀತ ಮತ್ತು ಸಂತ ಎಂದು ಪ್ರಕಟಿಸಲು ಧರ್ಮಕ್ಷೇತ್ರದ ಮಟ್ಟದಲ್ಲಿ ರಚಿಸಲ್ಪಟ್ಟ ಅಧಿಕೃತ ವಿಚಾರಣ ಸಮಿತಿಯ ಸಮಾರೋಪ ಅಧಿವೇಶನ ಬೆಂದೂರಿನ ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಬುಧವಾರ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಬಿಷಪ್ ವಂ| ಪೀಟರ್ ಪೌಲ್ ಸಲ್ಡಾನ್ಹಾ ಮಾತನಾಡಿ, ದೇವರ ಸೇವಕ ರೇಮಂಡ್ ಒಬ್ಬ ದೈವಭಕ್ತ. ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಸಮರ್ಪಿಸಿದ ಮಹಾಪುರುಷರು. ಮಂಗಳೂರು ಧರ್ಮಪ್ರಾಂತದ ಚರಿತ್ರೆಯಲ್ಲಿ ಈ ದಿನ ವಿಶಿಷ್ಟ ಮೈಲುಗಲ್ಲು ಎಂದರು.
ವಂ| ಜೋನ್ ಬಾಪ್ಟಿಸ್ಟ್ ಸಲ್ಡಾನ್ಹಾ ಪ್ರಾರ್ಥನಾ ವಿಧಿ ನೆರವೇರಿಸಿದರು. ಬೆಥನಿ ಸಂಸ್ಥೆಯ ಮಹಾಮಾತೆ ಭ| ರೋಜ್ ಸೆಲಿನ್, ಬೆಂದೂರ್ ಧರ್ಮಕೇಂದ್ರದ ಪ್ರಧಾನ ಗುರು ವಂ| ವಿನ್ಸೆಂಟ್ ಮೊಂತೆರೊ ಮತ್ತಿತರರು ದೇವರ ಸೇವಕ ರೇಮಂಡರ ಸಮಾಧಿಯ ಮೇಲೆ ಹೂಗುಚ್ಛ ಇಟ್ಟು ಗೌರವ ಅರ್ಪಿಸಿದರು.
ನೋಟರಿ ವಂ| ನವೀನ್ ಪಿಂಟೊ ಅವರು,ಧರ್ಮಾಧ್ಯಕ್ಷರ ಪ್ರತಿನಿಧಿ ವಂ| ಹೆನ್ರಿ ಸಿಕ್ವೇರಾ ಅವರಿಗೆ ಅಧಿಕೃತ ದಾಖಲೆಗಳನ್ನು ಹಸ್ತಾಂತರಿಸಿದರು. ಪ್ರೊಮೋಟರ್ ಆಫ್ ಜಸ್ಟಿಸ್ ವಂ| ಜೋನ್ ಮೆಂಡೊನ್ಸಾದಾಖಲೆ ಪತ್ರಗಳನ್ನು ವ್ಯಾಟಿಕನ್‌ಗೆ ಕಳುಹಿಸಲು ಅಭ್ಯಂತರವಿಲ್ಲ ಎಂದು ಘೋಷಿಸಿದರು.
ಉಪ ನೋಟರಿ ವಂ| ವಿನ್ಸೆಂಟ್ ಸಲ್ಡಾನ್ಹಾ, ಪ್ರಕ್ರಿಯೆಯ ಪೋಸ್ಟುಲೇಟರ್ ಭ| ಲಿಲ್ಲಿಸ್ ಕಟಕಾಯಾಮ್, ದಸ್ತಾವೇಜುಗಳ ನಕಲುಕಾರಿಣಿ ಭ| ಮೊಲಿ ಶಾರೊನ್, ದಸ್ತಾವೇಜುಗಳನ್ನು ಅನುವಾದ ಮಾಡಿದ ಭ| ಹಿಲೆರಿಟಾ ಪ್ರಮಾಣವಚನ ಮಾಡಿದರು. ವರದಿಯ ಪ್ರತಿಯನ್ನು ಅಧಿಕೃತ ದಾಖಲೆಗಳ ಪೆಟ್ಟಿಗೆಗಳಲ್ಲಿ ಇರಿಸಿ ಧರ್ಮಾಧ್ಯಕ್ಷರು ಮೊಹರು ಮಾಡಿದರು. ಬಳಿಕ ಅವನ್ನು ಧರ್ಮಪ್ರಾಂತದ ದಸ್ತಾವೇಜು ಕೊಠಡಿಯಲ್ಲಿರಿಸಲು ಚಾನ್ಸಲರ್ ವಂ| ವಿಕ್ಟರ್ ಜಾರ್ಜ್ ಅವರಿಗೆ ಹಸ್ತಾಂತರಿಸಲಾಯಿತು.
ದಾಖಲೆಗಳ 15 ಕಟ್ಟುಗಳ 2 ಪ್ರತಿಗಳನ್ನು ಹೊಸದಿಲ್ಲಿಯ ವ್ಯಾಟಿಕನ್ ರಾಯಭಾರ ಕಚೇರಿಯ ನುನ್ಸಿಯೊ ಅವರ ಮೂಲಕ ಅಧ್ಯಯನಕ್ಕಾಗಿ ವ್ಯಾಟಿಕನ್‌ನಲ್ಲಿರುವ ‘ಕಾಂಗ್ರಿಗೇಶನ್ ಫಾರ್ ದ ಕಾಸಸ್ ಆಫ್ ದ ಸೈಂಟ್ಸ್’ ಸಮಿತಿಗೆ ಕಳುಹಿಸಲು ನೇಮಿಸಲ್ಪಟ್ಟ ಭ| ಲಿಲ್ಲಿಸ್ ಕಟಕಾಯಮ್ ಅವರಿಗೆ ನೀಡಲಾಯಿತು.
ನಿವೃತ್ತ ಧರ್ಮಾಧ್ಯಕ್ಷ ವಂ| ಅಲೋಶಿಯಸ್ ಡಿ’ಸೋಜಾ ಶುಭ ಹಾರೈಸಿದರು. ವಿಚಾರಣೆ, ಚಾರಿತ್ರಿಕ ಮತ್ತು ದೇವಶಾಸ್ತ್ರ ಸಮಿತಿಯ ಸದಸ್ಯರು, ಹಿಂದಿನ ಬೆಥನಿ ಮಹಾಮಾತೆಯರಾದ ಭ| ಜ್ಯೋತಿ, ಭ| ವಿಲ್ಬರ್ಟಾ, ಬೆಂದೂರು ಧರ್ಮಕೇಂದ್ರದ ಹಿಂದಿನ ಗುರುಗಳಾದ ವಂ| ಪೀಟರ್ ನೊರೊನ್ಹಾ, ವಂ| ಆಂತೊನಿ ಶೆರಾ, ಪ್ರಸ್ತುತ ಗುರು ವಂ| ವಿನ್ಸೆಂಟ್ ಮೊಂತೆರೊ ಅವರನ್ನು ಗೌರವಿಸಲಾಯಿತು. ಭ| ಲಿಲ್ಲಿಸ್ ಅವರನ್ನು ಸಮ್ಮಾನಿಸಲಾಯಿತು. ರೋಮನ್ ಪೋಸ್ಟುಲೇಟರ್ ಆಗಿ ನೇಮಕಗೊಂಡ ಭ| ಡೋನಾ ಸಾಂಕ್ತಿಸ್ ಅವರಿಗೆ ಶುಭ ಕೋರಲಾಯಿತು.
ರವಿವಾರದಂದು ಬೆಂದೂರಿನ ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಕೃತಜ್ಞತಾ ಬಲಿಪೂಜೆ ಅರ್ಪಿಸುವ ಮೂಲಕ ಸಮಾರೋಪ ಅಧಿವೇಶನ ಆರಂಭವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.