ಕುಂಚದಲ್ಲಿ ಮೂಡಿದವು ಹಳ್ಳಿಯ ನಿಸರ್ಗ ಚಿತ್ರಗಳು


Team Udayavani, Nov 19, 2018, 11:44 AM IST

19-november-6.gif

ಕನಕಮಜಲು : ತುಳುನಾಡಿನಲ್ಲಿ ಯುವಕರು ಯಕ್ಷಗಾನ, ತುಳು ನಾಟಕ, ಕ್ರಿಕೆಟ್‌-ಕಬ್ಬಡಿ ಪಂದ್ಯಾವಳಿ, ಆರೋಗ್ಯ ಕ್ಯಾಂಪ್‌ ಇತ್ಯಾದಿಗಳನ್ನು ಸಂಘಟಿಸುತ್ತಾರೆ. ಆದರೆ, ಸುಳ್ಯ ತಾಲೂಕಿನ ಕನಕಮಜಲು ಯುವಕ ಮಂಡಲ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸುವುದರಲ್ಲಿ ಎತ್ತಿದ ಕೈ. ಗ್ರಾಮೀಣ ಪ್ರದೇಶದಲ್ಲಿ ಚಿತ್ರಕಲೆಗೆ ಪ್ರೋತ್ಸಾಹ ನೀಡುವ ಮೂಲಕ ಜನರನ್ನು ಕಲೆಯತ್ತ ಸೆಳೆಯಲು ನಿಸರ್ಗ ಚಿತ್ರಕಲಾ ಶಿಬಿರ ಹಮ್ಮಿಕೊಂಡಿದೆ.

ಕನಕಮಜಲು ಯುವಕ ಮಂಡಲವು ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯ ಸಹಯೋಗದಲ್ಲಿ, ಕನಕಮಜಲು ಗ್ರಾ.ಪಂ. ಹಾಗೂ ಜಾಲ್ಸೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಭಾಗಿತ್ವದಲ್ಲಿ ನ. 11ರಿಂದ ಒಂದು ವಾರದ ಅವಧಿಯ ಸುಯೋಗ ನಿಸರ್ಗ ಚಿತ್ರಕಲಾ ಶಿಬಿರವನ್ನು ಆಯೋಜಿಸಿದೆ. ವಿದ್ಯಾರ್ಥಿಗಳು ಪ್ರಕೃತಿಯ ಮಡಿಲಿನಲ್ಲಿ ಕುಳಿತು ನಿಸರ್ಗದ ಚಿತ್ರಗಳನ್ನು ಆತ್ಯಾಕರ್ಷಕವಾಗಿ ಬಿಡಿಸಿದರು. ಕನಕಮಜಲು ಗ್ರಾಮದ ಮೂರ್ಜೆ ಶ್ರೀ ಬಾಲ ನಿಲಯದಲ್ಲಿ ನಡೆದ ಶಿಬಿರದಲ್ಲಿ 33 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಬಿರದ ಕ್ರಿಯಾಶೀಲತೆಗೆ ಪ್ರೇರಣೆಯಾಗಿದ್ದು ಸೋಣಂಗೇರಿಯ ಬಯಲು ಚಿತ್ರಾಲಯ. 2009ರಲ್ಲಿ ಮೊದಲ ಬಾರಿಗೆ ಶಿಬಿರ ನಡೆಸಿದಾಗ 10 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 2015ರಲ್ಲಿ ಚಾಮರಾಜೇಂದ್ರ ಚಿತ್ರಕಲಾ ಸಂಸ್ಥೆಯಿಂದ 15 ವಿದ್ಯಾರ್ಥಿಗಳು ಗ್ರಾಮೀಣ ಚಿತ್ರ ಕಲೆಯಲ್ಲಿ ಭಾಗವಹಿಸಿದರು ಎಂದು ಕನಕಮಜಲು ಯುವಕ ಮಂಡಲದ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹಾಗೂ ಅಧ್ಯಕ್ಷ ಹರಿಪ್ರಸಾದ್‌ ವಿವರಿಸಿದರು.

ನಿಸರ್ಗ ದೃಶ್ಯಗಳು
ಕಲಾತ್ಮಕ ಚಿಂತನೆಯುಳ್ಳ ವಿದ್ಯಾರ್ಥಿಗಳು ಹಳ್ಳಿಯ ಬದುಕು, ಸಂಪ್ರದಾಯಗಳು ಹಾಗೂ ನಿಸರ್ಗದ ಸೊಬಗನ್ನು ಕುಂಚದಲ್ಲಿ ಮೂಡಿಸಿದರು. ಕಾಡಿನಿಂದ ಕೂಡಿದ ರಸ್ತೆಗಳು, ಜನ ನಡೆದಾಡುವ ಹಾದಿಗಳು, ಹಳೆಯ ಹಂಚಿನ ಮನೆಗಳು, ಹಟ್ಟಿ – ಹೀಗೆ ಗ್ರಾಮ್ಯ ಸ್ವರೂಪವನ್ನೇ ನೋಡಿಕೊಂಡು ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸಿ, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದರು. 

ಶಿಬಿರಾರ್ಥಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಆಯೋಜಕರೇ ಮಾಡಿದ್ದರು. ರಾಧಾಕೃಷ್ಣ ಅವರ ಮನೆಯನ್ನು ವಾಸ್ತವ್ಯಕ್ಕೆ ನೀಡಲಾಗಿತ್ತು. ಸ್ಥಳೀಯರೂ ತರಕಾರಿ, ದವಸ-ಧಾನ್ಯಗಳನ್ನು ತಂದು ಶಿಬಿರಕ್ಕೆ ಸಹಕರಿಸಿದರು. ಮುಂಜಾನೆ 6.30ರಿಂದ ಸಂಜೆಯ ವರೆಗೂ ಶಿಬಿರ
ನಡೆಯಿತು. ಬಳಿಕ ಮನೋರಂಜನ ಕಾರ್ಯಕ್ರಮಗಳಿದ್ದವು. 

ಸುಂದರ ಅನುಭವ
ಇದೊಂದು ವಿಭಿನ್ನ ಅವಕಾಶ, ನಗರ ಪ್ರದೇಶದಿಂದ ಬಂದು ಹಳ್ಳಿ ಜೀವನ ಶೈಲಿ, ಗ್ರಾಮ್ಯ ಸಂಸ್ಕೃತಿ ಅರಿತು ಇಲ್ಲಿನ ಜನರೊಂದಿಗೆ ಬೆರೆಯುವುದು ಒಂದು ಸುಂದರ ಅನುಭವ. ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿ ಕೊಟ್ಟಿದೆ. 
– ಅವನಿ ಶರ್ಮಾ
ವಿದ್ಯಾರ್ಥಿನಿ, ಮಹಾಲಸಾ ಚಿತ್ರಕಲಾ
ಶಾಲೆ, ಮಂಗಳೂರು

ಸ್ವಂತಿಕೆಯ ಉದ್ದೇಶ
ಚಿತ್ರಕಲಾ ವಿದ್ಯಾರ್ಥಿಗಳಲ್ಲಿ ಸ್ವಂತಿಕೆ ಬೆಳೆಸುವುದು ಶಿಬಿರ ಉದ್ದೇಶವಾಗಿದೆ. ವಿಭಿನ್ನ ಆಲೋಚನೆ, ಕ್ರಿಯಾಶೀಲತೆ ಇವೆಲ್ಲವೂ ನಿಸರ್ಗದೊಂದಿಗೆ ಬೆರೆತಾಗ ಮಾತ್ರ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇದೊಂದು ಯಶಸ್ವಿ ಕಾರ್ಯಕ್ರಮ.
ಸಯ್ಯದ್‌ ಆಸೀಫ್ ಅಲಿ
 ಉಪನ್ಯಾಸಕರು, ಮಹಾಲಸಾ
 ಚಿತ್ರಕಲಾ ಶಾಲೆ

ವಿಶೇಷ ವರದಿ

ಟಾಪ್ ನ್ಯೂಸ್

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.