ನೆರೆ ಬಾಧಿತ ಕೆಮ್ರಾಲ್ ಪಂಜ :ಸಿಎಂ ಭೇಟಿ ಕೊನೆ ಕ್ಷಣದಲ್ಲಿ ರದ್ದು, ಗ್ರಾಮಸ್ಥರಲ್ಲಿ ನಿರಾಶೆ
Team Udayavani, Jul 13, 2022, 1:09 AM IST
ಕಿನ್ನಿಗೋಳಿ: ಮೂಲ್ಕಿ ತಾಲೂಕಿನ ಕೆಮ್ರಾಲ್ ಗ್ರಾ.ಪಂ. ಪಂಜದ ಉಲ್ಯ ಭಾಗದ ನೆರೆ ಹಾನಿ ವೀಕ್ಷಣೆಗೆ ಸಿಎಂ ಮಂಗಳವಾರ ಬರಬೇಕಾಗಿದ್ದು ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಮುಖ್ಯ ಮಂತ್ರಿಗಳು ಬಂದರೆ ನಮ್ಮ ಗ್ರಾಮಕ್ಕೆ ಹೆಚ್ಚಿನ ಪ್ಯಾಕೇಜ್ ಹಾಗೂ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂಬ ಆಶಾಭಾವನೆಯಲ್ಲಿ ಗ್ರಾಮಸ್ಥರಿದ್ದರು. ಆದರೀಗ ನಿರಾಶೆಯಾಗಿದೆ. ಮುಖ್ಯ ಮಂತ್ರಿಗಳ ಆಗಮನಕ್ಕೆ ನೆರೆ ಆವೃತವಾಗಿದ್ದ ಪಂಜದ ಉಲ್ಯ ಭಾಗದಲ್ಲಿ ವಿದ್ಯುತ್ ದೀಪ ಅಳವಡಿಸಲಾಗಿತ್ತು.
ಮಳೆ ಹಾಗೂ ನೆರೆ ಆವೃತವಾದ ಕಾರಣ ಕೆಸರುಮಯವಾದ ಕಡೆಗಳಲ್ಲಿ ಜಲ್ಲಿ ಹುಡಿ ಹಾಕಲಾಗಿತ್ತು. ಹಳೆಯಂಗಡಿಯಿಂದ ಉಲ್ಯದ ತನಕ ಅಲ್ಲಲ್ಲಿ ಭದ್ರತಾ ಸಿಬಂದಿ ನಿಯೋ ಜಿಸಲಾಗಿದ್ದು, ಅಧಿಕಾರಿಗಳ ತಂಡ ಸ್ಥಳದಲ್ಲಿ ಬೀಡುಬಿಟ್ಟಿತ್ತು. ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಥಳಕ್ಕೆ ಭೇಟಿ ನೀಡಿ ಎಲ್ಲ ವ್ಯವಸ್ಥೆಗಳಿಗೆ ಮಾರ್ಗದರ್ಶನ ನೀಡಿದ್ದರು.
ಸಮಯದ ಅಭಾವದಿಂದ ಸಿಎಂಗೆ ಪಂಜ ಪ್ರದೇಶಕ್ಕೆ ಆಗಮಿಸಲು ಸಾಧ್ಯವಾಗಿಲ್ಲ, ಬುಧವಾರ ಬೆಂಗಳೂರಿಗೆ ನಿರ್ಗಮಿಸುವ ಸಂದರ್ಭ ಅಧಿಕಾರಿಗಳ ಜತೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಪಂಜ, ಉಲ್ಯ, ಕಿಲೆಂಜೂರು ಮತ್ತಿತರ ನೆರೆ ಆವೃತವಾದ ಪ್ರದೇಶಗಳ ಸ್ಪಷ್ಟ ಮಾಹಿತಿ ನೀಡುವುದಾಗಿ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.