ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ: ಕರಾವಳಿಯಲ್ಲಿ ಗರಿಗೆದರಿದೆ ಕುತೂಹಲ!
Team Udayavani, Jul 29, 2021, 8:00 AM IST
ಮಂಗಳೂರು/ಉಡುಪಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕರಾವಳಿಯ ಬಿಜೆಪಿ ಪಾಳಯದಲ್ಲಿಯೂ ಸಚಿವ ಸ್ಥಾನ ಯಾರ ಪಾಲಿಗೆ ಒಲಿಯಬಹುದು ಎನ್ನುವ ಬಗ್ಗೆ ಲೆಕ್ಕಾಚಾರಗಳು ಆರಂಭವಾಗಿದ್ದು, ಆಕಾಂಕ್ಷಿ ಗಳಲ್ಲೂ ನಿರೀಕ್ಷೆ ಗರಿಗೆದರಿದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಅವಧಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ತಲಾ ಒಂದು ಸ್ಥಾನ ದೊರಕಿತ್ತು. ಈ ಪೈಕಿ ಕೋಟ ಶ್ರೀನಿವಾಸ ಪೂಜಾರಿ ಅವರು ಆರಂಭದಲ್ಲೇ ಸಚಿವರಾಗಿದ್ದರೆ, ಸುಳ್ಯ ಶಾಸಕ ಎಸ್. ಅಂಗಾರ ಸಂಪುಟಕ್ಕೆ ಸೇರಿ 7 ತಿಂಗಳಾಗಿವೆ. ಆದರೆ ಈಗ ಹೊಸ ಸಂಪುಟದಲ್ಲಿ ಇವರು ಮುಂದು ವರಿಯುವರೇ? ಅಥವಾ ಹೊಸಬರಿಗೆ ಅವಕಾಶವಿದೆಯೇ? ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.
ಬಿಜೆಪಿ ಮೂಲಗಳ ಪ್ರಕಾರ ಕೆಲವೇ ತಿಂಗಳ ಹಿಂದೆ ಸಚಿವ ಸ್ಥಾನ ಪಡೆದ ಹಾಗೂ ದ.ಕ. ಜಿಲ್ಲೆಯ ಹಿರಿಯ ಶಾಸಕ ಎಸ್. ಅಂಗಾರ ಅವರು ಸಂಪುಟದಲ್ಲಿ ಮುಂದುವರಿ ಯುವುದು ಬಹುತೇಕ ಖಚಿತ. ಆದರೆ ಕೋಟ ಶ್ರೀನಿವಾಸ ಪೂಜಾರಿ ಅವರ ಬದಲಾವಣೆ ಬಗ್ಗೆ ಸುದ್ದಿ ಇದ್ದರೂ ನ್ನೂ ಖಚಿತವಾಗಿಲ್ಲ.
ಯಾರು ಆದಾರು ಮಂತ್ರಿ?:
ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಒಬ್ಬರು ವಿಧಾನ ಪರಿಷತ್ ಸದಸ್ಯರು ಅರ್ಹರಿದ್ದಾರೆ. ಯಡಿ ಯೂರಪ್ಪ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಚಿವರಾದರು. ಹಿಂದಿನ ಮಂತ್ರಿಗಳಿಗೆ ಮತ್ತೆ ಅವಕಾಶ ದೊರಕಿದರೆ ಪೂಜಾರಿ ಅವರು ಮುಂದುವರಿಯಲೂ ಬಹುದು. ವಿಧಾನಸಭೆ ಸದಸ್ಯರಿಗೇ ಅವಕಾಶ ನೀಡುವುದಾದರೆ ಐವರೊಳಗೆ ಒಬ್ಬರಿಗೆ ಸಿಗಬಹುದು. ಬಿಲ್ಲವ ಕೋಟಾದಡಿ ಚುನಾಯಿತರಿಗೆ ಅವಕಾಶ ಕಲ್ಪಿಸುವುದಾದರೆ ಸುನಿಲ್ ಕುಮಾರ್‌ಗೆ ಅವಕಾಶ ಸಿಗಬಹುದು. ಆದರೆ ಶಿವಮೊಗ್ಗ ಮತ್ತಿತರ ಪ್ರದೇಶದ ಈಡಿಗ ಸಮುದಾಯದ ಶಾಸಕರಿಗೆ ಸಚಿವ ಹುದ್ದೆ ಸಿಗುವುದಾದರೆ ಸುನಿಲ್ ಆವರಿಗೆ ಅವಕಾಶ ತಪ್ಪಬಹುದು. ಆಗ ಅತಿ ಹೆಚ್ಚು ಬಾರಿ ಕುಂದಾಪುರದಿಂದ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಚಿವರಾಗಬಹುದು. ಉಡುಪಿ ವಿಧಾನಸಭಾ ಕ್ಷೇತ್ರದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್ ಸಹ ಅರ್ಹರ ಪಟ್ಟಿಯಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಕೋಟ ಶ್ರೀನಿವಾಸ ಪೂಜಾರಿ ಅವರನ್ನೇ ಉಳಿಸಿಕೊಂಡರೆ, ಉಡುಪಿ ಜಿಲ್ಲೆಯಲ್ಲಿ ಬಿಲ್ಲವ ಅಥವಾ ಬಂಟ ಸಮುದಾಯಕ್ಕೆ ಅವಕಾಶ ಸಿಗಲೂ ಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಉತ್ತಮ ಆಡಳಿತ ನೀಡಬೇಕೆಂಬ ಹೊಣೆಗಾರಿಕೆ ಇದೆ. ಇದರೊಂದಿಗೆ ಬೊಮ್ಮಾಯಿ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಶಾಸಕರಲ್ಲಿ ಯಾರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಹೆಚ್ಚು ಜನಪರ ಕೆಲಸಗಳನ್ನು ಮಾಡಲು ಸಾಧ್ಯ ಎಂಬುದು ತಿಳಿದಿದ್ದು, ಯೋಚಿಸಿ ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ.
ಬೊಮ್ಮಾಯಿ ಅವರು ಮತ್ತು ಹೈಕಮಾಂಡ್ ಇಬ್ಬರೂ ಸೇರಿ ಸಚಿವ ಸಂಪುಟವನ್ನು ನಿರ್ಧರಿಸುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಕರಾವಳಿಯಿಂದ ಯಾರಿಗೆ ಅವಕಾಶ ಸಿಗುತ್ತದೆ ಎಂಬ ಸಂಗತಿ ಕುತೂಹಲ ಮೂಡಿಸಿದೆ. ಈ ಮಧ್ಯೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನೇಮಕವಾದ ವಿವಿಧ ನಿಗಮ -ಮಂಡಳಿಗಳ ಲ್ಲಿರುವ ಕರಾವಳಿ ನಾಯಕರ ಹುದ್ದೆ ಬದಲಾವಣೆ ಆಗಲಿ ದೆಯೇ ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.