ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸಿಎಂ ಭೇಟಿ: ಬೇಡಿಕೆಗೆ ಸ್ಪಂದನೆ ನಿರೀಕ್ಷೆ
Team Udayavani, Aug 12, 2021, 8:00 AM IST
ಮಂಗಳೂರು/ಉಡುಪಿ: ಉಡುಪಿ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದು, ಕರಾವಳಿಯ ಪರಿಚಯ ಹೊಂದಿರುವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ರುವ ಹಿನ್ನೆಲೆಯಲ್ಲಿ ಕರಾವಳಿಯ ಹಲವು ಬೇಡಿಕೆಗಳು ಈಡೇರಬಹುದೆಂಬ ನಿರೀಕ್ಷೆ ಗರಿಗೆದರಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಅದರಂತೆಯೇ ಎರಡೂ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟ ಬೇಡಿಕೆಗಳಿಗೂ ಸ್ಪಂದಿಸಬೇಕೆಂಬ ಜನಾಗ್ರಹ ಕೇಳಿಬಂದಿದೆ.
ಸಿಎಂ ಆದ ಮೇಲೆ ಪ್ರಥಮ ಬಾರಿಗೆ ಉಭಯ ಜಿಲ್ಲೆಗಳಿಗೆ ಬೊಮ್ಮಾಯಿ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭ ದಲ್ಲಿ ಕರಾವಳಿಯ ಬೇಡಿಕೆಗಳಿಗೆ ಸ್ಪಂದಿಸಬಹುದೆಂಬ ಆಶಾಭಾವ ಜನರದ್ದು.
ಉಡುಪಿ ಜಿಲ್ಲೆಯ ಬೇಡಿಕೆ :
ಅವರಿಗೆ ಹೊಸದಲ್ಲ. ಅವರು ಸಿಎಂ ಆಗುವ ಮೊದಲು ಜಿಲ್ಲೆಯ ಉಸ್ತುವಾರಿ ಸಚಿವ ರಾಗಿದ್ದರು. ಹಾಗಾಗಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ವೇಗ ಮತ್ತು ಸಮಸ್ಯೆಗಳಿಗೆ ಪರಿಹಾರದ ನಿರೀಕ್ಷೆಯಿದೆ. ಅದರಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳು, ಅಭಿವೃದ್ಧಿ ಅಗತ್ಯಗಳದೂ ಪರಿಚಯವಿದೆ. ಹಾಗಾಗಿ ಉಭಯ ಜಿಲ್ಲೆಗಳ ಅಗತ್ಯಗಳನ್ನು ಈಡೇರಿಸಬೇಕೆಂದು ಉದಯವಾಣಿಯೂ ಆಗ್ರಹಿಸುತ್ತದೆ.
ಪ್ರಮುಖ ಬೇಡಿಕೆಗಳೇನು? :
ದಕ್ಷಿಣ ಕನ್ನಡ ಜಿಲ್ಲೆ :
- ಪಶ್ಚಿಮ ವಾಹಿನಿ ಯೋಜನೆಗೆ ಹೆಚ್ಚು ಅನುದಾನ ಬಿಡುಗಡೆ.
- ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಹೆಚ್ಚುವರಿ ಅನುದಾನ.
- ಗ್ರಾಮಾಂತರ ರಸ್ತೆ, ಸೇತುವೆ ಸಹಿತ ಅಗತ್ಯ ಮೂಲ ಸೌಲಭ್ಯಗಳಿಗೆ ನೆರವು.
- ಮಂಗಳೂರಿಗೆ ಸುಸಜ್ಜಿತ ಕೇಂದ್ರ ಬಸ್ ನಿಲ್ದಾಣ. ಸ್ಮಾರ್ಟ್ ಯೋಜನೆಯಡಿ ಪಿಪಿ ಮಾಡೆಲ್‌ನಲ್ಲಿ ಬಸ್ ನಿಲ್ದಾಣಕ್ಕೆ ಹಲವು ಬಾರಿ ಟೆಂಡರ್ ಕರೆದರೂ ಆಗಿಲ್ಲ. ಸರಕಾರವೇ ಮುಂದೆ ಬಂದು ಬಸ್ ನಿಲ್ದಾಣ ಕಟ್ಟಿಸಬೇಕಿದೆ.
- ಭೂ ಸಾರಿಗೆ, ವಿಮಾನ, ರೈಲ್ವೇ, ಬಂದರು ಸಹಿತ ಎಲ್ಲ ಸಾರಿಗೆ ಮೂಲಗಳಿರುವ ಮಂಗಳೂರಿನಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕು.
- ಪರಿಸರ ಸ್ನೇಹಿ ಉದ್ಯಮಗಳ ಸ್ಥಾಪನೆಗೆ ಅನುಕೂಲಕರ ಐ.ಟಿ. ಪಾರ್ಕ್.
- ತುಳು ಭಾಷೆಯನ್ನು 8ನೇ ಪರಿಚ್ಛೇದ ದಲ್ಲಿ ಸೇರ್ಪಡೆಗೊಳಿಸಲು ಅನುಕೂಲವಾಗು ವಂತೆ ತುಳುವಿಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕು.
08.ವೆನ್ಲಾಕ್ ಸರಕಾರಿ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಗುರುತಿಸಲಾಗಿದ್ದು, ಹೆಚ್ಚು ವರಿ ಅನುದಾನ ಬಿಡುಗಡೆ ಮಾಡಬೇಕು.
- ಮಂಗಳೂರು ರೈಲ್ವೇ ಭಾಗವನ್ನು ನೈಋತ್ಯ ರೈಲ್ವೇ ವಲಯದ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ರೈಲ್ವೇ ಸಚಿವಾಲಯದ ಮೇಲೆ ಒತ್ತಡ ಹೇರಬೇಕು.
- ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು.
ಉಡುಪಿ ಜಿಲ್ಲೆ :
- ಕರಾವಳಿಯಲ್ಲಿ ಪ್ರತೀ ವರ್ಷ ಭತ್ತದ ಕೊಯ್ಲು ಮುಗಿದು ತಿಂಗಳ ಬಳಿಕ ಬೆಂಬಲ ಬೆಲೆ ಘೋಷಣೆಯಾಗುತ್ತದೆ. ಇದರಿಂದ ಕೃಷಿಕರಿಗೆ ನಷ್ಟವಾಗುತ್ತಿದೆ. ಹಾಗಾಗಿ ಭತ್ತದ ಕೊಯ್ಲಿಗೆ ಮೊದಲೇ (ಅಕ್ಟೋಬರ್‌ನೊಳಗೆ) ಬೆಂಬಲ ಬೆಲೆ ಘೋಷಿಸಬೇಕು.
- ಉಡುಪಿ ಜಿಲ್ಲೆಯಲ್ಲಿ ಸರಕಾರಿ ಮೆಡಿ ಕಲ್ ಕಾಲೇಜು ನಿರ್ಮಾಣದ ಒತ್ತಾಯಕ್ಕೆ ಸ್ಪಂದಿಸಬೇಕು. ಇದರಿಂದ 7 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲ.
- ತೌಖ್ತೆ ಚಂಡಮಾರುತದಿಂದ ಸುಮಾರು 90 ಕೋ.ರೂ. ನಷ್ಟ ಉಂಟಾಗಿದೆ. ಇದರಲ್ಲಿ ಬಹುಪಾಲು ಸಮುದ್ರ ತಡೆಗೋಡೆ ಕಾಮಗಾರಿಗೆ ಸಂಬಂಧಿಸಿದ್ದು. ಇದಕ್ಕೆ ಕೇಂದ್ರ ಸರಕಾರ ಪ್ರತ್ಯೇಕ ಪ್ಯಾಕೇಜ್ ನೀಡಬೇಕಿದೆ. ಕೊರೊನಾ ಲಸಿಕೆಗಳ ಪೂರೈಕೆ, ಆಸ್ಪತ್ರೆಗಳ ಅಭಿವೃದ್ಧಿ ಕೂಡಲೇ ಆಗಬೇಕು.
- ಹದಿನೈದು ವರ್ಷಗಳಿಂದ ಮುಚ್ಚಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು. ರಾಜ್ಯದಲ್ಲಿ 152 ಸಂಸ್ಥೆಗಳು ಎಥನಾಲ್ ಘಟಕ ಸ್ಥಾಪನೆಗೆ ಹೆಸರು ನೋಂದಾಯಿಸಿದ್ದು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯೂ ಒಂದು. ಸುಮಾರು 150 ಕೋಟಿ ರೂ. ನಷ್ಟು ಅನುದಾನ ನೀಡಿ ಪುನರಾರಂಭಿಸಬೇಕು.
- ಉಡುಪಿ ಜಿಲ್ಲೆಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಉನ್ನತೀಕರಣಕ್ಕೆ ಕ್ರಮ ಕೈಗೊಂಡಿರುವುದು ಸೂಕ್ತ. ಆದರೆ ನಿಗದಿತ ಕಾಲ ಮಿತಿಯೊಳಗೆ ಶೀಘ್ರವೇ ಯೋಜನೆ ಜಾರಿಗೊಳಿಸಿ ಸಾರ್ವಜನಿಕರ ಸೇವೆಗೆ ಒದಗಿಸಬೇಕು.
- ಉಡುಪಿಯಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಡಿ (ಪಿಪಿಪಿ) ಸ್ಮಾರ್ಟ್ ಸಿಟಿ ಯೋಜನೆ (ಮಣಿಪಾಲ-ಉಡುಪಿ-ಮಲ್ಪೆ)ಯನ್ನು ಜಾರಿಗೊಳಿಸಲು ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅದಕ್ಕೆ ಅನುಮೋದನೆ ಕೊಟ್ಟು ಯೋಜನೆ ಜಾರಿಗೆ ಕ್ರಮ ವಹಿಸಬೇಕು.
- ಕೋಟಿ ಚೆನ್ನಯ್ಯ ಥೀಮ್ ಪಾರ್ಕ್: ಕಾರ್ಕಳದ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್‌ನ್ನು ಅಭಿವೃದ್ಧಿಪಡಿಸಿ ಲೋಕಾರ್ಪಣೆ ಮಾಡುವ ಕೆಲಸ ಬಾಕಿ ಇದೆ. ಡಾ| ವಿ.ಎಸ್. ಆಚಾರ್ಯರ ಕನಸನ್ನು ಈಗಲಾದರೂ ನನಸಾಗಿಸಬೇಕು.
- ಕಾರ್ಕಳ ಕ್ಷೇತ್ರದ ಬೆಳವಣಿಗೆಗೆ ಪೂರಕ ವಾಗಿ ಜವಳಿ ಪಾರ್ಕ್ ನಿರ್ಮಾಣ ಆಗಬೇಕಿದೆ. ಈ ನಿಟ್ಟಿನಲ್ಲಿ ಹೆಬ್ರಿಯ ಚಾರ ಗ್ರಾಮ ದಲ್ಲಿ ಸ್ಥಳ ಗುರುತಿಸಿದ್ದು, 2020ರ ಬಜೆಟ್‌ನಲ್ಲಿ ಪ್ರಕಟಿಸಿದಂತೆ ಜವಳಿ ಪಾರ್ಕ್ ಯೋಜನೆ ಜಾರಿಗೊಳಿಸಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.