ನಾಳೆ ಕದ್ರಿ ಪಾರ್ಕ್ ಪುಟಾಣಿ ರೈಲಿಗೆ ಸಿಎಂ ಚಾಲನೆ
Team Udayavani, Jan 6, 2018, 9:45 AM IST
ಕದ್ರಿ : ಕದ್ರಿ ಪಾರ್ಕ್‌ನಲ್ಲಿ ಕಳೆದ ಐದು ವರ್ಷಗಳಿಂದ ಓಡಾಟ ನಿಲ್ಲಿಸಿದ್ದ ‘ಬಾಲಮಂಗಳ ಎಕ್ಸ್‌ಪ್ರೆಸ್’ ಪುಟಾಣಿ ರೈಲು ಓಡಾಟಕ್ಕೆ ಜ. 7ರಂದು ಚಾಲನೆ ದೊರೆಯಲಿದೆ. ಆದರೆ ಹೊಸ ರೈಲಿಗೆ ಕೆಲವು ಭಾಗಗಳ ಜೋಡಣೆ, ರೈಲ್ವೇ ಇಲಾಖೆಯಿಂದ ಹಳಿ ಪರಿಶೀಲನೆ ಕಾರ್ಯ ಬಾಕಿ ಇದ್ದು, ರೈಲು ಸವಾರಿಯನ್ನು ಆನಂದಿಸುವ ಭಾಗ್ಯಕ್ಕೆ ಮಾತ್ರ ಮಕ್ಕಳು ಇನ್ನಷ್ಟು ಕಾಲ ಕಾಯಬೇಕು.
ನೂತನ ಪುಟಾಣಿ ರೈಲು ಡಿ. 23 ರಂದೇ ಕದ್ರಿ ಪಾರ್ಕ್‌ಗೆ ಆಗಮಿಸಿದೆ. ಮುಖ್ಯಮಂತ್ರಿಗಳೇ ರೈಲಿಗೆ ಚಾಲನೆ ನೀಡಬೇಕು ಎಂಬ ಉದ್ದೇಶದಿಂದಾಗಿ ಇಲ್ಲಿಯವರೆಗೆ ಹೊಸ ರೈಲಿಗೆ ಚಾಲನೆ ನೀಡಲಾಗಿಲ್ಲ. ಜ. 7ರಂದು ಮುಖ್ಯ ಮಂತ್ರಿ ಜಿಲ್ಲೆಗೆ ಆಗಮಿಸಲಿದ್ದು, ರೈಲು ಉದ್ಘಾಟಿಸಲಿದ್ದಾರೆ. ಆದರೆ ರೈಲು ಓಡಾಟಕ್ಕೆ ಬೇಕಾದ ಎಲ್ಲ ಕೆಲಸಗಳು ಮುಗಿಯದ ಹಿನ್ನೆಲೆಯಲ್ಲಿ ಓಡಾಟ ನಡೆಸಲು ಮಾತ್ರ ಸಾಧ್ಯವಾಗುತ್ತಿಲ್ಲ.
ಹಳಿ ಕೆಲಸ ಸಂಪೂರ್ಣಗೊಂಡಿದ್ದರೂ ಅದು ರೈಲು ಓಡಾಟಕ್ಕೆ ಸೂಕ್ತವಾಗಿದೆಯೇ ಎಂಬುದನ್ನು ರೈಲ್ವೇ ಇಲಾಖೆ ಇನ್ನೂ ಪರಿಶೀಲಿಸಿಲ್ಲ. ರೈಲಿನ ಶೆಡ್‌ಗೆ ಪೈಂಟಿಂಗ್ ನಡೆಯುತ್ತಿದ್ದು, ಪೂರ್ಣಗೊಳ್ಳಬೇಕಿದೆ. ಕೆಲವು ಬಿಡಿಭಾಗಗಳ ಜೋಡಣೆಯೂ ಬಾಕಿಯಿದೆ. ಇವೆಲ್ಲ ಸಂಪೂರ್ಣಗೊಂಡ ಬಳಿಕವಷ್ಟೇ ನೂತನ ಪುಟಾಣಿ ರೈಲು ಓಡಾಟ ನಡೆಸಲಿದ್ದು, ಮಕ್ಕಳಿಗೆ ರೈಲಿನಲ್ಲಿ ಸಂಚರಿಸುವ ಭಾಗ್ಯ ಒದಗಲಿದೆ.
5 ವರ್ಷಗಳಿಂದ ಸ್ಥಗಿತ
ಕದ್ರಿ ಪಾರ್ಕ್‌ನಲ್ಲಿ 1983ರಲ್ಲಿ ಓಡಾಟ ಆರಂಭಿಸಿದ್ದ ‘ಬಾಲಮಂಗಳ ಎಕ್ಸ್ ಪ್ರಸ್’ ಪುಟಾಣಿ ರೈಲು 2012ರ ವರೆಗೆ ನಿರಂತರವಾಗಿ ಮಕ್ಕಳ ಮನೋರಂಜನೆಯ ಭಾಗವಾಗಿತ್ತು. ಆದರೆ ಇಲ್ಲಿ ಓಡಾಡುತ್ತಿದ್ದುದು ಹಿಂದೆ ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿದ್ದ ರೈಲು, ಹೀಗಾಗಿ ಅದು ತೀರಾ ಹಳೆಯದಾಗಿತ್ತು. ಈ ಹಿನ್ನೆಲೆಯಲ್ಲಿ 2013ರಲ್ಲಿ ಪುಟಾಣಿ ರೈಲು ಓಡಾಟವನ್ನು ಸ್ಥಗಿತಗೊಳಿಸಲಾಗಿತ್ತು. 5 ವರ್ಷಗಳ ಕಾಲ
ಮಕ್ಕಳಿಗೆ ಕದ್ರಿ ಪಾರ್ಕ್‌ನಲ್ಲಿ ಪುಟಾಣಿ ರೈಲಿನ ಸವಾರಿ ಇಲ್ಲವಾಗಿತ್ತು.
1.35 ಕೋ.ರೂ. ವೆಚ್ಚ
ರೈಲ್ವೇ ಇಲಾಖೆಯಿಂದ ಈ ರೈಲು ನಿರ್ಮಾಣಗೊಂಡಿದ್ದು, ಒಟ್ಟು 1.35 ಕೋ. ರೂ. ವೆಚ್ಚದಲ್ಲಿ ತಯಾರಾಗಿದೆ. ಇದರಲ್ಲಿ 3 ಬೋಗಿಗಳಿದ್ದು ಆಕರ್ಷಕವಾಗಿದೆ. ನೂತನ ರೈಲು ನಿರ್ಮಾಣ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನದ ಮುಖಾಂತರ ಅನುದಾನ ಒದಗಿಸಲಾಗಿತ್ತು.
ಸೋಮವಾರದಿಂದ ಸಂಗೀತ ಕಾರಂಜಿಯ ನಿನಾದ
ಕರಾವಳಿ ಜನತೆ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಕದ್ರಿಯ ಜಿಂಕೆ ಪಾರ್ಕ್ ಎಂದೇ ಹೆಸರಾಗಿರುವ ಹಳೆ ಮೃಗಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ‘ರಾಜೀವ್ ಗಾಂಧಿ ಸಂಗೀತ ಕಾರಂಜಿ’ಯನ್ನು ಮುಖ್ಯ ಮಂತ್ರಿ ಉದ್ಘಾಟಿಸಲಿದ್ದಾರೆ.
ಕಳೆದ ಎಪ್ರಿಲ್‌ನಲ್ಲಿಯೇ ಸಂಗೀತ ಕಾರಂಜಿ ಕಾಮಗಾರಿ ಪೂರ್ಣಗೊಂಡಿದ್ದರೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ)ದ ವಿಳಂಬ ನೀತಿಯಿಂದ ಉದ್ಘಾಟನೆಗೊಂಡಿರಲಿಲ್ಲ. ಹಲವು ಬಾರಿ ಇದರ ಪ್ರಾಯೋಗಿಕ ವೀಕ್ಷಣೆಯನ್ನೂ ನಡೆಸಲಾಗಿತ್ತು. ಪುಟಾಣಿ ರೈಲು ಮತ್ತು ಸಂಗೀತ ಕಾರಂಜಿ ಎರಡನ್ನೂ ಒಂದೇ ಬಾರಿಗೆ ಸಾರ್ವಜನಿಕರಿಗೆ ತೆರೆದಿಡುವ ಉದ್ದೇಶದಿಂದ ಇದನ್ನು ವಿಳಂಬ ಮಾಡಲಾಗಿದೆ. ಇದೀಗ ಕಾರಂಜಿ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಳ್ಳುತ್ತಿದ್ದು, ಸೋಮವಾರದಿಂದಲೇ ಪ್ರತಿದಿನ ಸಂಜೆ 6ರಿಂದ 8 ಗಂಟೆಯ ವರೆಗೆ ಸಾರ್ವಜನಿಕರಿಗೆ ಅವಕಾಶ ಒದಗಲಿದೆ.
ಕರಾವಳಿ ಸಂಸ್ಕೃತಿ ಅನಾವರಣ
ಸಂಗೀತ ಕಾರಂಜಿ ಹಾಗೂ ಪುಟಾಣಿ ರೈಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜ. 7ರಂದು ಸಂಜೆ 7.30ಕ್ಕೆ ಚಾಲನೆ ನೀಡಲಿದ್ದಾರೆ. ರಾಜೀವ್ ಗಾಂಧಿ ಸಂಗೀತ ಕಾರಂಜಿಯ ಮೂಲಕ ಕರಾವಳಿ ಸಂಸ್ಕೃತಿ ಅನಾವರಣವಾಗಲಿದೆ. ಸಂಗೀತ ಕಾರಂಜಿಯಲ್ಲಿ ನೀರಿನ ನರ್ತನದ ಜತೆಗೆ ಜಿಲ್ಲೆಯ ಯಕ್ಷಗಾನ, ಭೂತಾರಾಧನೆ, ನಾಗಮಂಡಲ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯೋಜನೆಯಿದೆ.
ಜ. 7: ಪುಟಾಣಿ ರೈಲಿಗೆ ಚಾಲನೆ
ಜ. 7ರಂದು ಪುಟಾಣಿ ರೈಲಿಗೆ ಚಾಲನೆ ದೊರೆಯಲಿದೆ. ಆದರೆ ಶೆಡ್ ಪೈಂಟಿಂಗ್, ರೈಲ್ವೇ ಇಲಾಖೆಯ ಹಳಿ ಪರಿಶೀಲನೆ ಬಾಕಿ ಇರುವುದರಿಂದ ರೈಲು ಓಡಾಟ ಈಗ ಸಾಧ್ಯವಾಗುತ್ತಿಲ್ಲ. ಶೀಘ್ರ ಇವೆಲ್ಲ ಕೆಲಸಗಳನ್ನು ಮುಗಿಸಿ ಮಕ್ಕಳಿಗೆ ಪುಟಾಣಿ ರೈಲು ಸಂಚಾರವನ್ನು ಕಲ್ಪಿಸಲಾಗುವುದು.
– ಸುಂದರ ಪೂಜಾರಿ,
ಉಪ ನಿರ್ದೇಶಕರು, ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.