ಅಮಾಯಕರ ಕೊಲೆಗೆ ಸಿಎಂ ಸಹಜ ಸಾವು ಪ್ರಮಾಣಪತ್ರ: ಸೂಲಿಬೆಲೆ
Team Udayavani, Jan 29, 2018, 9:23 AM IST
ಮಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಾಯಕ ಯುವಕರ ಕೊಲೆಗಳಿಗೆ ಸಹಜ ಸಾವು ಎಂಬ ಪ್ರಮಾಣ ಪತ್ರ ನೀಡಿ ಅವುಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ರಾಜ್ಯದಲ್ಲಿ ಎಷ್ಟು ಕೆಟ್ಟ ಆಡಳಿತವನ್ನು ನೀಡಬಹುದೋ ಅದನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ತೋರಿಸಿ ಕೊಟ್ಟಿದೆ ಎಂದು ಯುವ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.
ರವಿವಾರ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಸಹ ಮತ ಬಳಗ ಹೊರತಂದಿರುವ “ಹಡೆದವ್ವನ ಶಾಪ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿದೆ. ಹಿಂದೂ ಕಾರ್ಯಕರ್ತರ ಹತ್ಯೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರ ಅಭಿಪ್ರಾಯಗಳನ್ನು ಆಹ್ವಾನಿಸ ಲಾಗಿತ್ತು. ಈ ಬರಹಗಳನ್ನೇ ಇಟ್ಟುಕೊಂಡು ಸಹಮತ ಬಳಗ “ಹಡೆದವ್ವನ ಶಾಪ’ ಎಂಬ ಪುಸ್ತಕವನ್ನು ಹೊರತಂದಿದೆ ಎಂದು ವಿವರಿಸಿದರು.
ವೇದಿಕೆಯಲ್ಲಿ ಬೆಂಗಳೂರು ಉಚ್ಚ ನ್ಯಾಯಾಲಯದ ನ್ಯಾಯವಾದಿ ಅರುಣ್ ಶ್ಯಾಮ್, ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಹಿಂಜಾವೇ ದಕ್ಷಿಣ ಪ್ರಾಂತ ಕರ್ನಾಟಕ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಉಪಸ್ಥಿತರಿದ್ದರು. ಗೌರವ್ ಸ್ವಾಗತಿಸಿ, ಶ್ರೀಪತಿ ಆಚಾರ್ಯ ವಂದಿಸಿದರು. ವಿಕ್ರಮ್ ನಿರ್ವಹಿಸಿದರು.
ರಾಜ್ಯದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ
ರಾಜ್ಯ ಸರಕಾರವು ಜೈಲೊಳಗೆ ಇರುವ ಅಲ್ಪ ಸಂಖ್ಯಾಕರನ್ನು ಮುಗ್ಧರು ಎಂದು ಬಿಂಬಿಸಿ ಬಿಡುಗಡೆ ಗೊಳಿಸಲು ಪ್ರಯತ್ನ ಪಟ್ಟಿರುವುದು ರಾಜ್ಯದ ಸ್ವಾಸ್ಥ್ಯ ವನ್ನು ಕೆಡಿಸುವ ಪ್ರಯತ್ನವಾಗಿದೆ. ಜೈಲೊಳಗೆ ಇರು ವವರೇ ಮುಗ್ಧರಾದರೆ ಹೊರಗಿರುವವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲದಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ರಾಜ್ಯ ದಕ್ಷ ಅಧಿಕಾರಿಗಳ ಆತ್ಮಹತ್ಯೆ, ಪೊಲೀಸರ ಬಂದೂಕನ್ನು ದುಷ್ಕರ್ಮಿಗಳು ಸೆಳೆ ದೊಯ್ದಿ ರುವುದು ಇತ್ಯಾದಿ ಘಟನೆಗಳನ್ನು ನೋಡಿ ದರೆ ಕರ್ನಾಟಕವನ್ನು ಕ್ರಿಮಿನಲ್‌ಗಳು ತಾಂಡವ ವಾಡುತ್ತಿರುವ ರಾಜ್ಯ ಮಾಡಲು ಹೊರಟಿದ್ದಾರೆ ಎಂಬ ಭಾವನೆ ಬರುತ್ತಿದೆ. ಜೈಲೊಳಗೆ ಇರು ವವರನ್ನು ಮುಗ್ಧರು ಎಂದು ಬಿಡುಗಡೆಗೊಳಿಸಲು ರಾಜ್ಯದ ಜನತೆ ಅವಕಾಶ ನೀಡುವುದಿಲ್ಲ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.