ಅಡಿಕೆ ಬೆಳೆಗಾರನ ತೋಟಕ್ಕೆ ಹೆಜ್ಜೆ ಇರಿಸಿದ ಸಹಕಾರ ಕ್ಷೇತ್ರ
ಹೊಸ ಸಂಶೋಧನೆಗೆ ಮೂಲವಾಯ್ತು ಅಡಿಕೆ ಕೌಶಲ ತರಬೇತಿ
Team Udayavani, May 12, 2019, 6:00 AM IST
ಅಡಿಕೆ ಮರ ಏರುವ ತರಬೇತಿ
ಸುಬ್ರಹ್ಮಣ್ಯ: ಮಲೆನಾಡು ಎಂದಾಕ್ಷಣ ನೆನಪಾಗುವುದು ಬೆಟ್ಟ, ಗುಡ್ಡ, ಕಾಡು, ನದಿ, ಹಳ್ಳಕೊಳ್ಳ ಝರಿಗಳು. ಜತೆಗೆ ಇನ್ನು ಮುಖ್ಯವಾಗಿ ಒಂದು ನೆನಪಾಗುತ್ತದೆ ಅದೇ ಅಡಿಕೆ ತೋಟ. ಅಡಿಕೆ ಮಲೆನಾಡಿನ ಮುಖ್ಯ ವಾಣಿಜ್ಯ ಬೆಳೆಯಾಗಿದೆ. ದ.ಕ., ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ, ಉತ್ತರಕನ್ನಡ, ಶಿರಸಿ, ಯಲ್ಲಾಪುರ ಈ ಸಾಲಿನಲ್ಲಿ ಅಡಿಕೆ ಬೆಳೆ ಅಧಿಕವಾಗಿದೆ.
ದ.ಕ. ಜನತೆ ಬಹುತೇಕ ಕೃಷಿ ಅವಲಂಬಿತರು. ಅದರಲ್ಲೂ ಅಡಿಕೆ ಕೃಷಿಯೇ ಪ್ರಧಾನ. ಸ್ವಾವಲಂಬನೆಯ ಅನಿವಾರ್ಯತೆಯಲ್ಲಿ ಅಡಿಕೆ ಒಂದು ಕಾಲದಲ್ಲಿ ಒಳ್ಳೆಯ ಬೆಳೆಯೇನೋ ಹೌದು. ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಯಾಕಪ್ಪ ಕೃಷಿ ಬೇಕು ಅಂತ ಅನಿಸದಿರದು. ಇದಕ್ಕೆ ಕಾರಣ ಅಡಿಕೆಗೆ ತಗಲುವ ರೋಗ, ಧಾರಣೆ, ಕಾರ್ಮಿಕರ ಕೊರತೆ ಜತೆ ಮುಖ್ಯವಾಗಿ ಯಾಂತ್ರಿಕವಾಗುತ್ತಿರುವ ಬದುಕು. ಕೃಷಿಯಿಂದ ಸ್ವೂದ್ಯೋಗದಿಂದ ವಿಮುಖರಾಗುತ್ತಿದ್ದಾರೆ ಜಿಲ್ಲೆಯ ಜನತೆ.
ಸ್ವೂದ್ಯೋಗ, ಕೃಷಿ ರಕ್ಷಣೆಗೆ ಒತ್ತು
ಗ್ರಾಮೀಣ ಭಾಗದಲ್ಲಿ ನುರಿತ ಕಾರ್ಮಿಕರ ತಯಾರಿ ಮಾಡುವುದು, ಸ್ವೂದ್ಯೋಗಕ್ಕೆ ಅವಕಾಶ ನೀಡುವುದು, ಹೊಸ ಯಂತ್ರಗಳ ಪರಿಚಯ ಮತ್ತು ಬಳಸುವ ವಿಧಾನ, ಇವೆಲ್ಲವನ್ನು ನೀಡುವುದು ತರಬೇತಿಯ ಉದ್ದೇಶ. ಇದರ ಬೆನ್ನಲ್ಲೆ ಸಹಕಾರಿ ಸಂಘಗಳ ಮೂಲಕ ಜಿಲ್ಲೆಯಲ್ಲಿ ಇಂತಹ ಶಿಬಿರಗಳು ಇನ್ನಷ್ಟು ನಡೆಯವ ಯೋಚನೆಗೆ ಮೂಲ ಆರಂಭಗೊಂಡಿದೆ. ಅಡಿಕೆ ಕೃಷಿಯಲ್ಲಿ ಅಡಿಕೆ ಮರ ಏರುವುದು. ಔಷಧಿ ಸಿಂಪಡಣೆ. ಇದು ಒಂದು ಸಾಹಸದ ಕೆಲಸ. ಇದಕ್ಕೆ ಬೇಕಾಗಿರುವುದು ಕೌಶಲ. ಇಂತಹ ಕೌಶಲವನ್ನು ಯುವಜನತೆ ಸಹಿತ ಅಡಕೆ ಬೆಳೆಗಾರರಲ್ಲಿ ತುಂಬುವ ಮೂಲಕ ಸ್ವೂದ್ಯೋಗ, ಕೃಷಿ ರಕ್ಷಣೆಗೆ ಒತ್ತು ನೀಡುವುದು ಸಹಕಾರಿ ಸಂಘಗಳ ಬಯಕೆ.
ದಿಟ್ಟ ಹೆಜ್ಜೆಯಾಗಿದೆ
ಯುವ ಪೀಳಿಗೆಯಲ್ಲಿ ಕೃಷಿ ಕುರಿತು ಅರಿವು ಮೂಡಿಸುವ, ಕೃಷಿ ಪದ್ಧತಿ ಉಳಿಸಿ ಬೆಳೆಸುವ ಜತೆಗೆ ಆಧುನಿಕ ಯಂತ್ರಗಳ ಬಳಕೆ ಕುರಿತು ತರಬೇತಿ, ಕೃಷಿ ಚಟುವಟಿಕೆ ಸಾಹಸ ವೃತ್ತಿಗಳಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರ. ರಕ್ಷಣೆ ಹಾಗೂ ಕೃಷಿಕನ ಬದುಕಿಗೆ, ಕುಟುಂಬಕ್ಕೆ ಭದ್ರತೆ ಒದಗಿಸುವ ಮೂಲಕ ಅಡಿಕೆ ಕೃಷಿಕನ ತೋಟಕ್ಕೆ ಸಹಕಾರಿ ಸಂಘ ಗಳು ಹೆಜ್ಜೆ ಇಡುತ್ತಿರುವುದು ನಿಜಕ್ಕೂ ಕೃಷಿ ಕ್ಷೇತ್ರದಲ್ಲಿ ಒಂದು ದಿಟ್ಟ ಹೆಜ್ಜೆಯೇ ಆಗಿದೆ.
ಹೊಸದೊಂದು ಸಂಚಲನ
ಪಂಜ ಪ್ರಾ.ಕೃ.ಪ.ಸ. ಸಂಘ, ಗುತ್ತಿಗಾರು ಮತ್ತು ಕಡಬ ಪ್ರಾ. ಸಹಕಾರ ಸಂಘಗಳ ಆಶ್ರಯದಲ್ಲಿ ಜೇಸಿಐ ಪಂಜ ಪಂಚಶ್ರೀ ಮತ್ತು ಲಯನ್ಸ್ ಪಂಜ ಸಹಕಾರದಿಂದ ನಡೆದ ಅಡಿಕೆ ಕೌಶಲ ಸ್ವೂದ್ಯೋಗ ತರಬೇತಿ ಶಿಬಿರ ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿತು. ಅಡಿಕೆಗೆ ಭವಿಷ್ಯವನ್ನು ಸಹಕಾರಿ ಸಂಘಗಳೇ ರೂಪಿಸುತ್ತಿವೆ ಎನ್ನುವ ಮುನ್ಸೂಚನೆಯನ್ನು ದೊರಕಿಸಿಕೊಟ್ಟಿತು.
ಕೌಶಲ ಪಡೆ
ಭವಿಷ್ಯದ ಆತಂಕದ ದಿನಗಳ ಮುನ್ಸೂಚನೆ ಅರಿತ ಕೆಲ ಸಹಕಾರಿ ಸಂಸ್ಥೆಗಳು ಅಡಿಕೆ ಬೆಳೆಗಾರರ ಹಿತ ಕಾಪಾಡಲು ಮುಂದಾಗಿವೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ವಿಟ್ಲ ಸಿಪಿಸಿಆರ್‌ಐ ವಠಾರದಲ್ಲಿ ಅಡಿಕೆ ಮರ ಏರುವ ತರಬೇತಿ ಶಿಬಿರ ನಡೆದಿತ್ತು. 53 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅಡಿಕೆ ಕೌಶಲ ಪಡೆ ರಚನೆಯಾಗಿತ್ತು. ಬಳಿಕ ಪೆರ್ಲದಲ್ಲಿ ಅಡಿಕೆ ಮರ ಏರುವ ತರಬೇತಿ ಶಿಬಿರ ಸಹಕಾರಿ ಸಂಘದ ಮೂಲಕ ನಡೆದಿತ್ತು. ಇದೀಗ ಪ್ರೇರಣೆ ಪಡೆದ ಅದೇ ಹುಮ್ಮಸ್ಸಿನಲ್ಲಿ ಮತ್ತೂಂದು ಶಿಬಿರ ಪಂಜದಲ್ಲಿ ಮೇ 5ರಿಂದ 10ರ ತನಕ ನಡೆಯಿತು. ನಲವತ್ತಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.
ಕೃಷಿ ಬೆಳೆಸಲು ಸಾಧ್ಯವಿದೆ
ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿ ಕ್ಷೇತ್ರದಿಂದಲೂ ಸಾಧ್ಯವಿದೆ. ಈಗ ಅಡಿಕೆ ಮರ ಏರುವ ಕಾರ್ಮಿಕರ ಕೊರತೆ ನೀಗಿಸಲು ಸ್ವೂದ್ಯೋಗ ಮೂಲಕವೂ ಕೃಷಿ ಬೆಳೆಸಲು ಸಾಧ್ಯವಿದೆ.
-ಚಂದ್ರಶೇಖರ ಶಾಸ್ತ್ರಿ ಅಧ್ಯಕ್ಷರು, ಪಂಜ.ಪ್ರಾ.ಕೃ.ಪ.ಸ. ಸಂಘ
ಕೌಶಲ ತರಬೇತಿ ಹೊಂದಬೇಕಿದೆ
ಕೃಷಿ ಕ್ಷೇತ್ರಕ್ಕೆ ಸಹಕಾರಿ ಸಂಘಗಳ ಕೊಡುಗೆ ಅಧಿಕವಿದೆ. ಆಧುನಿಕ ಕೃಷಿ ಯಂತ್ರಗಳು ಅಡಿಕೆ ಕೃಷಿಕನ ಬಾಗಿಲು ತಟ್ಟಿವೆ. ಪರಿಣಾಮ ಇನ್ನು ಮುಂದೆ ಕೃಷಿ ಉಳಿಯಬೇಕಾದರೆ ಯಂತ್ರದ ಬಳಕೆ ಅನಿವಾರ್ಯ. ಇಷ್ಟಿದ್ದರೆ ಸಾಲದು ಇವುಗಳ ಬಳಕೆಗೆ ಕೌಶಲ ಅತ್ಯಗತ್ಯ. ಇದಕ್ಕೆ ಬೇಕಾಗಿರುವುದು ಕೇವಲ ತರಬೇತಿಯಲ್ಲ ಕೌಶಲಯುತ ತರಬೇತಿ ಹೊಂದಬೇಕಿದೆ.
– ಜಾಕೆ ಮಾಧವ ಗೌಡ , ಸಹಕಾರಿ ಧುರೀಣ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ
ಜನಾಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ಪ್ರಜಾಪ್ರಭುತ್ವ ಉಳಿಯದು: ಜಗದೀಪ್ ಧನ್‌ಕರ್
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Leader; ಇಂಡಿಯಾ ಗೇಟ್‌ಗೆ “ಭಾರತ್ ಮಾತಾ ದ್ವಾರ’ ಹೆಸರಿಡಿ: ಮೋದಿಗೆ ಪತ್ರ
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
Team India; ಆಯ್ಕೆಗಾರರ ಕೈಯಲ್ಲಿ ರೋಹಿತ್, ವಿರಾಟ್ ಕೊಹ್ಲಿ ಭವಿಷ್ಯ: ಗಾವಸ್ಕರ್
Thalassery: ಸಿಪಿಎಂ ನಾಯಕನ ಹತ್ಯೆ ಪ್ರಕರಣ: ಆರೆಸ್ಸೆಸ್‌ನ 9 ಸದಸ್ಯರಿಗೆ ಜೀವಾವಧಿ ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.