ಕರಾವಳಿ ಭಾಗದ ಅಪರಾಧ ಸುದ್ದಿಗಳು
Team Udayavani, Mar 29, 2019, 6:05 AM IST
ಮೂಡುಬಿದಿರೆ: ಗೋ ಕಳವು ಪ್ರಕರಣದ ಮತ್ತೋರ್ವ ವಶಕ್ಕೆ ?
ಮೂಡುಬಿದಿರೆ: ಗುಡ್ಡೆಯಂಗಡಿಯಲ್ಲಿ ಗೋ ಕಳ್ಳತನ ವನ್ನು ತಡೆಯಲೆತ್ನಿಸಿದ್ದ ಸಾರ್ವಜನಿಕರ ಮೇಲೆ ಕಾರು ಚಲಾಯಿಸಲೆತ್ನಿಸಿ ಭೀತಿ ಹುಟ್ಟಿಸಿದ್ದ ಪ್ರಕರಣದ ಮೂರನೇ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಗುಡ್ಡೆಯಂಗಡಿ ಪರಿಸರದಲ್ಲಿ ಹಗಲು ಮೇಯಲು ಬಿಟ್ಟ ದನಗಳು ದನಕಳ್ಳರ ಪಾಲಾಗುತ್ತಿರುವುದು ಸ್ಥಳೀ ಯರ ಕಳವಳಕ್ಕೆ ಕಾರಣವಾಗಿತ್ತು. ಕೆಲವು ದಿನಗಳ ಹಿಂದೆ, ಪೊದೆಯೊಂದರಲ್ಲಿ ಕಾರಿನ ಹಿಂಬದಿ ಸೀಟು ಪತ್ತೆ ಯಾಗಿದ್ದು, ದನಗಳನ್ನು ಸಾಗಿಸಲು ಅನುಕೂಲವಾಗುವಂತೆ ಕಾರಿನ ಸೀಟನ್ನು ತೆಗೆಯಲಾಗಿತ್ತೆನ್ನಲಾಗಿದೆ. ಈ ಸೀಟನ್ನು ಕೊಂಡೊಯ್ಯಲು ಆರೋಪಿಗಳು ಕಾರಿನಲ್ಲಿ ಬಂದಾಗ ಸುದ್ದಿ ತಿಳಿದು ಸ್ಥಳೀಯರು ಜಮಾಯಿಸಿ ಅವರನ್ನು ಹಿಡಿಯಲು ಪ್ರಯತ್ನಿಸುವ ವೇಳೆ ಆರೋಪಿಗಳು ತಮ್ಮ ಕಾರನ್ನು ಜನರ ಮೇಲೆ ಚಲಾಯಿಸಲೆತ್ನಿಸಿ ಭಯಗ್ರಸ್ತ ವಾತಾ ವ ರಣ ಉಂಟು ಮಾಡಿ ದ್ದರೆನ್ನಲಾಗಿದೆ.
ಪ್ರಕರಣದಲ್ಲಿ ಕೈಕಂಬ ಸೂರಲ್ಪಾಡಿ ನಿವಾಸಿ ಖಾದರ್ ಷಫಾ (22) ನನ್ನು ಸ್ಥಳೀಯರು ಘಟನೆ ದಿನ ಪೊಲೀಸರಿ ಗೊಪ್ಪಿಸಿದ್ದ ರು. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಉಳಿದವರ ಪೈಕಿ ಮತ್ತೋರ್ವನನ್ನು ಬುಧವಾರ ಬಂಧಿಸಿರುವುದಾಗಿ ತಿಳಿದು ಬಂದಿದ್ದು,ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಬಸ್ ಢಿಕ್ಕಿ: ಬೈಕ್ ಸವಾರ ಸಾವು
ಉಡುಪಿ: ಬಸ್ ಢಿಕ್ಕಿ ಹೊಡೆದು ಬೈಕ್ ಸವಾರ, ಮೂಲತಃ ಬೆಳಗಾವಿಯ ಕೆಂಪಣ್ಣ ಎಸ್. ಪಾಟೀಲ್ (26) ಅವರು ಮೃತಪಟ್ಟ ಘಟನೆ ಮಣಿಪಾಲ-ಉಡುಪಿ ರಸ್ತೆಯ ಕುಂಜಿಬೆಟ್ಟಿನಲ್ಲಿ ಮಾ.27ರಂದು ಸಂಭವಿಸಿದೆ.
ರಾತ್ರಿ 10 ಗಂಟೆಯ ವೇಳೆಗೆ ಕೆಲಸ ಮುಗಿಸಿ ಬೈಕಿನಲ್ಲಿ ಹೋಗುತ್ತಿದ್ದಾಗ ಮಣಿಪಾಲದಿಂದ ಕಲ್ಸಂಕ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡಿದ್ದ ಕೆಂಪಣ್ಣ ಆಸ್ಪತ್ರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಇಂದ್ರಾಳಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಉಡುಪಿ: ಮಣಿಪಾಲ ಠಾಣಾ ವ್ಯಾಪ್ತಿಯ ಇಂದ್ರಾಳಿಯ ರಸ್ತೆ ಬದಿ ಸಣ್ಣ ಹಾಡಿ ಪ್ರದೇಶದಲ್ಲಿ ಗುರುವಾರ ಸುಮಾರು 30 ವರ್ಷದ ಯುವಕನ ಶವವು ನೇಣು ಬಿಗಿದ ಸ್ಥಿತಿ ಯಲ್ಲಿ ಪತ್ತೆ ಯಾಗಿದೆ.
ಘಟನೆ ಅಪರಾಹ್ನ 3ರ ವೇಳೆಗೆ ಸಾರ್ವಜನಿಕರಿಗೆ ತಿಳಿಯಿತು. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆ ಯಲ್ಲಿಡಲಾಗಿದೆ. ಕೈಯಲ್ಲಿ ಎರಡು ಹೃದಯಗಳ ಚಿಹ್ನೆಯ ಹಚ್ಚೆ ಇದೆ. ನೀಲಿ ಜೀನ್ಸ್ ಪ್ಯಾಂಟ್ ಹಾಗೂ ನೀಲಿ ಚುಕ್ಕೆಗಳಿರುವ ಬಿಳಿ ಅಂಗಿ ಧರಿಸಿದ್ದು, ಕೈಯಲ್ಲಿ ಸ್ಟೀಲ್ ಕಡಗವಿದೆ. ಸುಮಾರು 5.8 ಅಡಿ ಎತ್ತರವಿದ್ದು, ವಾರಸುದಾರರು ಮಣಿಪಾಲ ಠಾಣೆಯನ್ನು ಸಂಪರ್ಕಿಸಬಹುದು.
ಸುಬ್ರಹ್ಮಣ್ಯ: ಶವ ಪತ್ತೆ
ಸುಬ್ರಹ್ಮಣ್ಯ: ಇಲ್ಲಿಗೆ ಸಮೀಪದ ಹಳೆ ಅರಣ್ಯ ಕಚೇರಿ ಹಿಂಭಾಗದ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಮಾರು 55 ವರ್ಷದ ಗಂಡಸಿನ ಶವ ಗುರುವಾರ ಪತ್ತೆಯಾಗಿದೆ. ಸ್ಥಳೀಯರು ನೀಡಿದ್ದ ಮಾಹಿತಿ ಯಂತೆ ಪೊಲೀಸರು ಆಗ ಮಿಸಿ ಪರಿಶೀಲಿಸಿದ್ದಾರೆ. ಶವದ ಬಳಿಯಿಂದ ದೊರೆತ ಕೆಲವು ಮಾಹಿತಿ ಪ್ರಕಾರ ಮೃತ ರನ್ನು ಹಾಸನ ಮೂಲದ ಆಲೂರಿನ ಮರಿ ಸ್ವಾಮಿ ಎಂದು ಪೊಲೀಸರು ಗುರುತಿಸಿ ದ್ದಾರೆ. ವಾರದ ಹಿಂದೆ ಮೃತಪಟ್ಟಿರ ಬೇಕೆಂದು ಶಂಕಿಸ ಲಾಗಿದೆ.
ಬೈಕ್ – ಬಸ್ ಢಿಕ್ಕಿ
ಬೆಳ್ತಂಗಡಿ: ಕೊಕ್ಕಡ ಸಮೀಪದ ಹೂವಿನಕೊಪ್ಪಳದಲ್ಲಿ ಬೈಕಿಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳು ಅಬೂಬಕ್ಕರ್ (38)ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಪಲ್ಟಿ: ಗಾಯ
ಬೈಂದೂರು: ಹೇರಂಜಾಲು ಶೇಡಿಗುಡ್ಡೆಯ ರಸ್ತೆ ಯಲ್ಲಿ ಮಾ. 26ರಂದು ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ಸವಾರ ರೋಹನ್ ಶೆಟ್ಟಿ ಹಾಗೂ ಸಹ ಸವಾರ ಆನಂದ ಗಾಯಗೊಂಡಿದ್ದಾರೆ.
ಜಾನುವಾರು ಸಾಗಾಟ: ಇಬ್ಬರ ಬಂಧನ
ಉಪ್ಪಿನಂಗಡಿ: ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿಯ ಪ್ರೊಬೆಷನರಿ ಎಎಸ್ಪಿ ಪ್ರದೀಪ್ ಗುಂಟಿ ನೇತೃತ್ವದ ಪೊಲೀಸ್ ತಂಡ ಗುರು ವಾರ ಪತ್ತೆಹಚ್ಚಿ, 20 ಜಾನುವಾರು ಸಹಿತ ಲಾರಿಯನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
34ನೇ ನೆಕ್ಕಿಲಾಡಿಯ ಜಂಕ್ಷನ್ ಬಳಿ ತಪಾಸಣೆ ನಡೆಸುತ್ತಿದ್ದಾ ಗ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದುದು ಪತ್ತೆಯಾಯಿತು.
ಬಂಧಿತರಾದ ಮಂಗಳೂರು ಕೂಳೂರಿನ ನಿವಾಸಿ ಮಹಮ್ಮದ್ ಸಮೀರ್ (33) ಹಾಗೂ ಕಾವೂರಿನ ಇಸ್ಮಾಯಿಲ್ (45) ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಚಾಲಕ ನಿಸಾರ್, ಮುಸ್ತಫಾ ಕೊಕ್ಕಡ ಹಾಗೂ ಬಶೀರ್ ಎಂಬವರು ಪರಾರಿಯಾಗಿದ್ದಾರೆ. ವಶಪಡಿಸಿಕೊಂಡ ಜಾನುವಾರು ಹಾಗೂ ಲಾರಿಯ ಮೌಲ್ಯ 4.55 ಲ. ರೂ. ಎಂದು ಅಂದಾಜಿಸಲಾಗಿದೆ.
ಪೆರಂಪಳ್ಳಿಯಲ್ಲಿ ಸರಣಿ ಬೆಂಕಿ ದುರಂತ: ದೈವದ ಮೊರೆ ಹೋಗಲು ನಿರ್ಧಾರ
ಉಡುಪಿ: ಉಡುಪಿ ಪೆರಂಪಳ್ಳಿಯ ಒಣ ಗ¨ªೆಗಳು ಹಾಗೂ ಸಣ್ಣ ಕಾಡು ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಅಲ್ಲಲ್ಲಿ ದಿಢೀರ್ ಆಗಿ ಕಾಣಿಸಿಕೊಳ್ಳುತ್ತಿದ್ದು,ಇದಕ್ಕೆ ಕಾರಣ ಗೊತ್ತಾಗುತ್ತಿಲ್ಲ ಎಂದು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕಿಡಿಗೇಡಿಗಳ ಕೃತ್ಯವೇ ಅಥವಾ ಬೇರೇನಾದರೂ ಕಾರಣವಿರಬಹುದೇ ಎಂಬ ಕುತೂಹಲ ಸ್ಥಳೀಯರದ್ದು. ಗುರುವಾರ ಕೂಡ ಒಂದೆರಡು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಬೊಬ್ಬರ್ಯ ದೈವದ ವರ್ಷಾವಧಿ ನೇಮದಲ್ಲಿ ಕೇಳಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಲಕ್ಷಾಂತರ ರೂ.ವಂಚನೆ: ಇಬ್ಬರಿಗೆ ಶಿಕ್ಷೆ
ಮಂಗಳೂರು: ಅಂತರ್ಜಾಲ ಮೂಲಕ ಸಂಪರ್ಕಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣದ ಇಬ್ಬರಿಗೆ 1ವರ್ಷ 9 ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿ ಸಿ ಜೆಎಂಎಫ್‌ಸಿ 3ನೇ ನ್ಯಾಯಾಲಯ ತೀರ್ಪು ನೀಡಿದೆ.
ಹೊಸದಿಲ್ಲಿಯ ಐಝಾವಾಲ್ ಜಿಲ್ಲೆ ನಿವಾಸಿ ಲಾಲ್‌ತಾನ್ ಮಾವಿಯಾ (36) ಮತ್ತು ಮಣಿಪುರ ಚುರಚಾಂದ್ ನಿವಾಸಿ ಕೂಫ್ ಬೊಯಿ(33) ಶಿಕ್ಷೆಗೊಳಗಾದವರು.
ಇವರು 2017ರ ಮೇ 9ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ನಿವಾಸಿ ವಾಯ್ಲೆಟ್ ಡಿ’ ಸೋಜಾ ಅವರನ್ನು ಅವರ ಸ್ನೇಹಿತೆ ಲಂಡನ್‌ನಲ್ಲಿರುವ ಗುಡ್‌ಸನ್ ವಿಲ್ಫೆ†ಡ್ ಅವರ ಹೆಸರಿನ ಮೂಲಕ ಸಂಪರ್ಕಿಸಿ ಪಾರ್ಸೆಲ್ ಮೂಲಕ 28,000 ಪೌಂಡ್ ವಿದೇಶಿ ಕರೆನ್ಸಿ ಮತ್ತು ಗಿಫ್ಟ್ ಕಳುಹಿಸಿ ಕೊಡು ವುದಾಗಿ ಹಾಗೂ ಈ ಪಾರ್ಸೆಲ್ ಪಡೆದುಕೊಳ್ಳಲು ಕ್ಲಿಯರೆನ್ಸ್ ಗಾಗಿ 21,58,200 ರೂ. ಅನ್ನು ಬ್ಯಾಂಕ್ ಖಾತೆಗಳ ಮೂಲಕ ಪಡೆದು ವಂಚಿಸಿದ್ದರು ಎಂದು ಆರೋಪಿಸಲಾಗಿತ್ತು.
2017ರ ಮೇ 31ರಂದು ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು 2017ರ ಜೂ.11ರಂದು ಹೊಸದಿಲ್ಲಿಯಲ್ಲಿ ಬಂ ಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದರು. ಪ್ರಕರಣದ ತನಿಖಾಧಿ ಕಾರಿ ಗೋಪಿಕೃಷ್ಣ ಕೆ.ಆರ್. ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು.ವಿಚಾರಣೆ ನಡೆಸಿದ ಜೆಎಂಎಫ್‌ಸಿ 3ನೇ ನ್ಯಾಯಾಲಯವು ಅಪರಾಧ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಗುರುವಾರ 1 ವರ್ಷ 9 ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಸರಕಾರದ ಪರವಾಗಿ ಮೋಹನ್ ಕುಮಾರ್ ಬಿ. ವಾದಿಸಿದ್ದರು.
ದೇವರಬಾಳು: ಮನೆಯಿಂದ ಕಳವು
ಸಿದ್ದಾಪುರ: ಹಳ್ಳಿಹೊಳೆ ಗ್ರಾಮದ ದೇವರಬಾಳು ಪರಿಸರದ ಮನೆಯಿಂದ ಕಳವಾಗಿದೆ.ಮಾ.9ರಂದು ಮನೆಯಿಂದ ಚಿನ್ನಾಭರಣ ಕಳವಾಗಿರುವುದಾಗಿ ಬಸವ ಪೂಜಾರಿ ಅವರ ಪುತ್ರಿ ಶೈಲಾ ಅವರು ತಡವಾಗಿ ದೂರು ನೀಡಿದ್ದಾರೆ.
ಮನೆಯ ಕೋಣೆಯ ಒಳಗಿನ ಹೆಂಚನ್ನು ತೆಗೆದು ಒಳ ಪ್ರವೇಶಿಸಿ ಮನೆಯ ಒಳಗಡೆಯ ಗೋದ್ರೆಜ್‌ನಲ್ಲಿದ್ದ 20 ಸಾ. ರೂ. ಮೌಲ್ಯದ 3 ಸಣ್ಣ ಚಿನ್ನದ ಉಂಗುರ, 1 ಜತೆ ಕಿವಿಯ ಓಲೆ ಹಾಗೂ ರೇಷನ್ ಕಾರ್ಡ್ ಮತ್ತು ಗೋದ್ರೆಜ್ ಬೀಗ ಹಾಗೂ 2 ಸಾ.ರೂ.ಕಳವಾಗಿದೆ ಎಂದು ಎಂದು ಶಂಕರನಾರಾಯಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಬಸ್ ಢಿಕ್ಕಿ: ಪಾದಚಾರಿ ಸಾವು
ಮಂಗಳೂರು: ನೀರುಮಾರ್ಗ ಬಳಿ ಬಸ್ ಢಿಕ್ಕಿ ಹೊಡೆದು ಗಾಯಗೊಂಡಿದ್ದ ಪೆದಮಲೆ ನಿವಾಸಿ ಮಾಧವ ಮೊಲಿ (50) ಅವರು ಗುರುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮಾ. 27ರಂದು ಸಂಜೆ ನೀರುಮಾರ್ಗ ಪಂಚಾಯತ್ ಕಚೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೆ ದಾಖಲೆ ಸಲ್ಲಿಸಿ ನಡೆದು ಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಅವ ರಿಗೆ ಖಾಸಗಿ ಸಿಟಿ ಬಸ್ ಢಿಕ್ಕಿ ಹೊಡೆದಿತ್ತು.
ಲಿಫ್ಟ್‌ನಲ್ಲಿ ಸಾವು: ತನಿಖೆ ಮುಂದುವರಿಕೆ
ಮಂಗಳೂರು: ಚಿಲಿಂಬಿಯಲ್ಲಿ ಲಿಫ್ಟ್ ನೊಳಗೆ ಸಿಲುಕಿ 8 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಹೂವಿನಹಡಗಲಿಯ ನೀಲಪ್ಪ- ಪಾರ್ವತಿ ದಂಪತಿಯ ಪುತ್ರ ಮಂಜುನಾಥ ಬುಧವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿದ್ದ. ಗುರುವಾರ ಲಿಫ್ಟ್‌ನಲ್ಲಿರುವ ಸಿಸಿಕೆಮ ರಾದ ಫೂಟೇಜ್ ಪರಿಶೀಲಿಸಿದ್ದು, ಬಾಲಕ ಲಿಫ್ಟ್‌ನಲ್ಲಿ ಆಟ ಆಡುತ್ತಾ ಮೇಲೆ ಕೆಳಗೆ ಹೋಗುತ್ತಿದ್ದಾಗ ಬಾಗಿಲು ತೆರೆದಿದ್ದು, ಇದರಿಂದ ಆತ ಸಿಲುಕಿಕೊಂಡಿದ್ದಾನೆ ಎಂಬುದು ಕಂಡು ಬರುತ್ತಿದೆ. ವಿದ್ಯುತ್ ಪರಿವೀಕ್ಷಕರನ್ನೂ ಕರೆಸಿ ಗುರುವಾರ ಪರಿಶೀಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಪ್ಪರ್ ಢಿಕ್ಕಿ: ಬೈಕ್ ಸವಾರರಿಗೆ ಗಾಯ
ಮಂಗಳೂರು: ಕೋಟೆಕಾರ್ ಬೀರಿಯ ಟಿಕ್ಕಾ ಪಾಯಿಂಟ್ ಎದುರು ಮಾ. 27ರಂದು ಬೈಕಿಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರರಾದ ತ್ ಮತ್ತು ಸುಧಾಕರ ಗಾಯಗೊಂಡಿದ್ದಾರೆ.
ಅವರು ಸಾವ್ಯದಿಂದ ತಲಪಾಡಿ ಕಡೆಗೆ ಹೋಗುತ್ತಿದ್ದಾಗ ಮಧ್ಯಾಹ್ನ 12ಗಂಟೆಗೆ ಘಟನೆ ಸಂಭವಿಸಿದೆ. ಬೈಕ್ ಟಿಕ್ಕಾ ಪಾಯಿಂಟ್ ಎದುರು ತಲುಪುತ್ತಿದ್ದಂತೆ ಹೆದ್ದಾರಿಯ ಮುಂದಿನಿಂದ ಹೋಗುತ್ತಿದ್ದ ಟಿಪ್ಪರ್ ಚಾಲಕನು ಸರ್ವಿಸ್ ರೋಡ್‌ನಲ್ಲಿ ಯು ಟರ್ನ್ ಮಾಡಲು ಮುಂದಾ ಗಿದ್ದ. ಟರ್ನ್ ಆಗದಾಗ ಚಾಲಕನು ಏಕಾ ಏಕಿ ಹಿಂದಕ್ಕೆ ಚಲಾಯಿಸಿದಾಗ ಬೈಕಿಗೆ ಢಿಕ್ಕಿ ಹೊಡೆದಿದೆ.
ಗಂಭೀಕ ಗಾಯ ಗೊಂಡಿ ರುವ ಇಬ್ಬರನ್ನೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಟ್ರಾಫಿಕ್ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು: ನೇಣು ಬಿಗಿದು ಆತ್ಮಹತ್ಯೆ
ಸಿದ್ದಾಪುರ: ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ಕೆಳಾಸುಂಕ ಗಿರಿಜಾ (65) ಅವರು ಮಾ.27ರ ರಾತ್ರಿ ಮನೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪುತ್ರ ರಾಘವೇಂದ್ರ ನಾಯ್ಕ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಆತ್ಮಹತ್ಯೆ
ಸಿದ್ದಾಪುರ: ಅಮಾಸೆ ಬೈಲು ಗ್ರಾಮದ ಕೆಳಸುಂಕದ ಗಿರಿಜಾ (65) ಅವರು ಮಾ. 27ರಂದು ಆತ್ಮ ಹತ್ಯೆ ಮಾಡಿ ಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.