
“7,600 ಕಿ.ಮೀ. ತಟ ರಕ್ಷಣೆಗೆ ಕೋಸ್ಟ್ ಗಾರ್ಡ್ ಸದಾ ಸಿದ್ಧ’
Team Udayavani, Jan 23, 2021, 2:05 AM IST

ಪಣಂಬೂರು: ದೇಶದ 7,600 ಕಿ.ಮೀ. ಸಮುದ್ರದ ಗಡಿಯನ್ನು ರಕ್ಷಿಸಲು ತಟರಕ್ಷಣಾ ಪಡೆಸರ್ವಸನ್ನದ್ಧವಾಗಿದೆ. ದೇಶದಲ್ಲಿ ಪ್ರಸ್ತುತ 152 ನೆಲೆಗಳನ್ನು ಹೊಂದಿದ್ದು, 200ಕ್ಕೆ ವಿಸ್ತರಣೆಯಾಗ ಲಿದೆ ಎಂದು ಡೈರೆಕ್ಟರ್ ಜನರಲ್ ನಟರಾಜನ್ ಅವರು ಹೇಳಿದರು.
ಕೋಸ್ಟ್‌ಗಾರ್ಡ್‌ನಲ್ಲಿ 18 ತಿಂಗಳಿಂದ ಕರ್ತವ್ಯ ನಿರ್ವಹಿಸು ತ್ತಿರುವ ಅವರು ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿ, ಸಮುದ್ರ ಭಾಗ ಹೊಂದಿರುವ ವಿವಿಧ ರಾಜ್ಯಗಳ ಭದ್ರತಾ ಪಡೆಯ ಸಹಕಾರ ದೊಂದಿಗೆ ನಿರಂತರ ಸಂಪರ್ಕ, ವಿವಿಧ ತಾಲೀಮು ಕಾರ್ಯಾಚರಣೆ, ಆಯಾ ಜಿಲ್ಲಾ ಡಳಿತಗಳೊಂದಿಗೆ ಸಮನ್ವಯ ಸಾಧಿ ಸುವ ಕೆಲಸವನ್ನು ಕೋಸ್ಟ್‌ಗಾರ್ಡ್ ನಿರಂತರ ಮಾಡುತ್ತಿದೆ ಎಂದರು.
ಮೀನುಗಾರರಿಗೆ ನೆರವು :
ಸಮುದ್ರದಲ್ಲಿ ಆಗಾಗ ಸಂಭವಿಸುವ ಹವಾಮಾನ ವೈಪರೀತ್ಯ, ಬಿರುಗಾಳಿ, ಚಂಡಮಾರುತದಂತಹ ಸಂದರ್ಭ ಗಳಲ್ಲಿ ಕೋಸ್ಟ್ ಗಾರ್ಡ್ ಸಮುದ್ರ ತೀರದ ಜನರಿಗೆ, ಮೀನು ಗಾರಿಕೆಯಲ್ಲಿರುವ ಮೀನು ಗಾರರಿಗೆ ಮರಳು ವಂತಾಗಲು ರಕ್ಷಣ ಕಾರ್ಯದಲ್ಲಿ ನೆರವು ನೀಡುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಮಳೆಗಾಲದಲ್ಲಿ 50 ಹಡಗುಗಳನ್ನು ಹಾಗೂ 12 ವಿಮಾನಗಳನ್ನು ನಿಯೋಜಿಸಿತ್ತು ಎಂದರು.
ಕೋಸ್ಟ್ ಗಾರ್ಡ್‌ಗೆ 100 ಕಣ್ಗಾವಲು ವಿಮಾನಗಳ ಸೇರ್ಪಡೆ :
ತಟ ರಕ್ಷಣ ಪಡೆಯಲ್ಲಿ 62 ಕಣ್ಗಾವಲು ವಿಮಾನಗಳಿದ್ದು, 16 ಹೊಸ ತಲೆಮಾರಿನ ವಿಮಾನಗಳು ಸೇರಿದಂತೆ ಒಟ್ಟು 100 ಕಣ್ಗಾವಲು ವಿಮಾನಗಳು ಪಡೆಗೆ ಸೇರಲಿವೆ. ಆತ್ಮನಿರ್ಭರ್ ಭಾರತ ಯೋಜನೆಯಡಿ ಬಿಇಎಲ್ ಸಂಸ್ಥೆ ಕೋಸ್ಟ್ ಗಾರ್ಡ್‌ಗೆ ಬೇಕಾದ ಕಣ್ಗಾವಲು ವಿಮಾನ, ಹಗುರ ಹೆಲಿಕಾಪ್ಟರ್‌ಗಳ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಚಾರ ಎಂದು ನಟರಾಜನ್ ಅವರು ಹೇಳಿದರು.
ಟಾಪ್ ನ್ಯೂಸ್

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.