coastal 18 ಸರಕಾರಿ ಪೂರ್ವ ಪ್ರಾಥಮಿಕ ಶಾಲೆ : ಎಲ್‌ಕೆಜಿ ವಿಭಾಗ ತೆರೆಯಲು ಅನುಮತಿ
Team Udayavani, Aug 21, 2023, 6:30 AM IST
ಮಂಗಳೂರು: ರಾಜ್ಯದ 262 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರಕಾರ ಆದೇಶ ನೀಡಿದ್ದು, ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಹಾಗೂ ಉಡುಪಿ ಜಿಲ್ಲೆಯಲ್ಲಿ 8 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ವಿಭಾಗ ತೆರೆಯಲು ಅನುಮತಿ ನೀಡಿದೆ.
2023-24ನೇ ಶೈಕ್ಷಣಿಕ ವರ್ಷದ ಸಾಲಿನಲ್ಲೇ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಸಿದ್ಧತೆ ಕೈಗೊಂಡು ಆಗಸ್ಟ್‌ನಿಂದಲೇ ಆರಂಭಿಸುವಂತೆ ಸರಕಾರ ಸೂಚನೆ ನೀಡಿದೆ.
ದ.ಕ. ಜಿಲ್ಲೆಯಲ್ಲಿನ ಶಾಲೆಗಳು
ಬಂಟ್ವಾಳ ಬ್ಲಾಕ್‌ನ ಸ. ಹಿ. ಪ್ರಾ. ಶಾಲೆ ಸುರಿಬೈಲು (ಆರ್‌ಎಂಎಸ್‌ಎ ಉನ್ನತೀಕರಿಸಿದ), ಸ. ಹಿ. ಪ್ರಾ. ಶಾಲೆ ನರಿಕೊಂಬು, ಬೆಳ್ತಂಗಡಿ ಬ್ಲಾಕ್‌ನ ದ.ಕ. ಜಿಲ್ಲಾ ಪಂ. ಸ. ಹಿ. ಪ್ರಾ. ಶಾಲೆ ಅಂಡಿಂಜೆ, ದ.ಕ. ಜಿಲ್ಲಾ ಪಂ. ಸ. ಹಿ. ಪ್ರಾ. ಶಾಲೆ ಗುರುವಾಯನಕೆರೆ, ಮಂಗಳೂರು ಉತ್ತರ ಬ್ಲಾಕ್‌ನ ದ.ಕ. ಜಿಲ್ಲಾ ಪಂ. ಸ. ಹಿ. ಪ್ರಾ. ಶಾಲೆ ಕೆಂಜಾರು, ಮಂಗಳೂರು ದಕ್ಷಿಣ ಬ್ಲಾಕ್‌ನ ದ.ಕ. ಜಿಲ್ಲಾ ಪಂ. ಸ. ಹಿ. ಪ್ರಾ. ಶಾಲೆ ನ್ಯೂ ಪಡು³, ಮೂಡುಬಿದಿರೆ ಬ್ಲಾಕ್‌ನ ದ.ಕ. ಜಿಲ್ಲಾ ಪಂ. ಸ. ಹಿ. ಪ್ರಾ. ಶಾಲೆ ನೀರ್‌ಕೆರೆ, ಪುತ್ತೂರು ಬ್ಲಾಕ್‌ನ ದ.ಕ. ಜಿಲ್ಲಾ ಪಂ. ಸ. ಹಿ. ಪ್ರಾ. ಶಾಲೆ ಇರ್ದೆ, ದ.ಕ. ಜಿಲ್ಲಾ ಪಂ. ಸ. ಹಿ. ಪ್ರಾ. ಶಾಲೆ ನೆಟ್ಟನಿಗೆ ಮುಟ್ನೂರು, ಸುಳ್ಯ ಬ್ಲಾಕ್‌ನ ದ.ಕ. ಜಿಲ್ಲಾ ಪಂ. ಸ. ಹಿ. ಪ್ರಾ. ಶಾಲೆ ದೇವಚಳ್ಳ.
ಉಡುಪಿ ಜಿಲ್ಲೆಯಲ್ಲಿನ ಶಾಲೆಗಳು
ಕಾರ್ಕಳ ಬ್ಲಾಕ್‌ನ ಸ. ಹಿ. ಪ್ರಾ. ಶಾಲೆ ಮರ್ಣೆ ಅಜೆಕಾರು, ಸ. ಹಿ. ಪ್ರಾ. ಶಾಲೆ ಮುದ್ರಾಡಿ, ಬೈಂದೂರು ಬ್ಲಾಕ್‌ನ ಸ. ಹಿ. ಪ್ರಾ. ಶಾಲೆ ಚಿತ್ತೂರು (ಆರ್‌ಎಂಎಸ್‌ಎ), ಉಡುಪಿ ಬ್ಲಾಕ್‌ನ ಸ. ಹಿ. ಪ್ರಾ. ಶಾಲೆ ಮಣಿಪುರ, ಸ. ಹಿ. ಪ್ರಾ. ಶಾಲೆ ಗುಡ್ಡೆಯಂಗಡಿ-ಬೊಮ್ಮರಬೆಟ್ಟು, ಕುಂದಾಪುರ ಬ್ಲಾಕ್‌ನ ಸ. ಹಿ. ಪ್ರಾ. ಶಾಲೆ ಶಂಕರನಾರಾಯಣ, ಸ. ಹಿ. ಪ್ರಾ. ಶಾಲೆ ವಕ್ವಾಡಿ, ಸ. ಹಿ. ಪ್ರಾ. ಶಾಲೆ ಮಾಣೂರು.
ಪೂರ್ವ ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕ ನಡೆಯಲಿದೆ. ಜತೆಗೆ ಮಕ್ಕಳ ನಿರ್ವಹಣೆಗಾಗಿ ಪ್ರತೀ ಶಾಲೆಗೆ ಒರ್ವರಂತೆ ಆಯಾ ಅವರನ್ನು ನೇಮಕ ಮಾಡಿಕೊಳ್ಳ ಬೇಕಾಗಿದೆ. ಗರಿಷ್ಠ 30 ಮಕ್ಕಳು ದಾಖಲಾತಿಗೆ ಅವಕಾಶ ನೀಡಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರ ವರೆಗೆ ಶಾಲೆ ಕಾರ್ಯನಿರ್ವಹಿಸಲಿದೆ. ಪಠ್ಯಪುಸ್ತಕ ಹಾಗೂ ಬೋಧನಾ ಸಾಮಾಗ್ರಿ ಶೀಘ್ರ ಲಭಿಸಲಿದೆ ಎಂದು ಇಲಾಖೆ ಪ್ರಮುಖರು ತಿಳಿಸಿದ್ದಾರೆ.
ಅನುಮತಿ
ದ.ಕ. ಜಿಲ್ಲೆಯ 10 ಹಾಗೂ ಉಡುಪಿ ಜಿಲ್ಲೆಯ 8 ಸರಕಾರಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ವಿಭಾಗ ತೆರೆಯಲು ಅನುಮತಿ ದೊರಕಿದೆ. ಇದರಂತೆ ಆಯಾ ಶಾಲೆಯವರಿಗೆ ಸೂಚನೆ ನೀಡಲಾಗಿದೆ.
-ದಯಾನಂದ ನಾಯಕ್,
ಗಣಪತಿ ಕೆ.
ಡಿಡಿಪಿಐ ದ.ಕ. ಹಾಗೂ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.