Army Training School: ಕರಾವಳಿಯ ಸೇನಾ ತರಬೇತಿ ಶಾಲೆಗೆ ಬೀಗ?
ಅನುದಾನವಿಲ್ಲದೆ ಸೊರಗಿದ ಹಿಂದುಳಿದ ವರ್ಗಗಳ ತರಬೇತಿ ಕೇಂದ್ರಗಳು
Team Udayavani, Aug 18, 2023, 7:42 AM IST
ಮಂಗಳೂರು: ಕರಾವಳಿಯ ಜಿಲ್ಲೆಗಳ ಹಿಂದುಳಿದ ವರ್ಗಗಳ ಯುವಕರು ಮಿಲಿಟರಿಗೆ ಸೇರ್ಪಡೆಯಾಗಲು ಅಗತ್ಯ ತರಬೇತಿ ಒದಗಿಸುತ್ತಿದ್ದ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗಳು ಬಹುತೇಕ ಮುಚ್ಚುವ ಸ್ಥಿತಿಯಲ್ಲಿವೆ.
ಇಲ್ಲಿರುವ ತರಬೇತು ದಾರರಿಗೆ ನಾಲ್ಕು ತಿಂಗಳು ಗಳಿಂದ ವೇತನ ಆಗಿಲ್ಲ. ಈ ಬಾರಿ ಹೊಸ ಬ್ಯಾಚ್‌ಗೆ ತರಬೇತಿ ಆರಂಭಿಸು ವುದಕ್ಕೂ ಅನುದಾನವಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ಈ ಕುರಿತು ಯತ್ನಿಸುತ್ತಿದ್ದರೂ ಹಣಕಾಸು ಇಲಾಖೆ ಯಿಂದ ಅನುಮೋದನೆ ಸಿಕ್ಕಿಲ್ಲ.
ಕರಾವಳಿಯಲ್ಲಿ ಹಿಂದಿನಿಂದಲೂ ಮಿಲಿಟರಿಗೆ ಸೇರುವವರ ಸಂಖ್ಯೆ ಕಡಿಮೆ. ಕೇಂದ್ರ ಸರಕಾರ ಆರಂಭಿಸಿರುವ ಅಗ್ನಿವೀರ್ ಸಹಿತ ಮಿಲಿಟರಿ, ಪೊಲೀಸ್ ಸೇವೆಗೆ ಸೇರುವುದಕ್ಕೆ ಹಿಂದುಳಿದ ವರ್ಗದ ಯುವಕರಿಗೆ ಈ ತರಬೇತಿ ಶಾಲೆಗಳು ಉತ್ತಮ ವೇದಿಕೆಯಾಗಿದ್ದವು. ಈಗ ಆ ಸಾಧ್ಯತೆಯ ಬಾಗಿಲು ಮುಚ್ಚಿದಂತಾಗಿದೆ.
ಮೂರೂ ಜಿಲ್ಲೆಗಳಲ್ಲಿ ತಲಾ 100 ಮಂದಿ ಯುವಕರಿಗೆ ವರ್ಷಕ್ಕೆ ಮೂರು ಬ್ಯಾಚ್‌ಗಳಂತೆ ಸೇನಾ ಆಯ್ಕೆ ಪೂರ್ವ ತರಬೇತಿ ನೀಡುವ ಅಪ ರೂಪದ ಯೋಜನೆ ಇದಾಗಿತ್ತು. ಹಿಂದಿನ ಸರಕಾರ ಇದಕ್ಕಾಗಿ ಹಿಂದುಳಿದ ವರ್ಗಗಳ ಇಲಾಖೆಯ ವಿವಿಧ ತರಬೇತಿಗಳ ಅಡಿಯಲ್ಲಿ ಪ್ರತ್ಯೇಕ ಉಪ ವಿಭಾಗ ಸೃಷ್ಟಿಸಿತ್ತು. ಅದರಡಿಯಲ್ಲಿ ದ.ಕ. ಜಿಲ್ಲೆಗೆ 28 ಲಕ್ಷ ರೂ. ಹಾಗೂ ಉಡುಪಿ ಜಿಲ್ಲೆಗೆ 53 ಲಕ್ಷ ರೂ. ವೆಚ್ಚದಲ್ಲಿ ತರಬೇತಿ ಶಾಲೆ ಸ್ಥಾಪಿಸಲಾಗಿದೆ. ದ.ಕ. ಜಿಲ್ಲೆಯ ಶಾಲೆಗೆ ರಾಣಿ ಅಬ್ಬಕ್ಕನ ಹೆಸರಿದ್ದರೆ ಉಡುಪಿ ಜಿಲ್ಲೆಯ ತರಬೇತಿ ಶಾಲೆಗೆ ಕೋಟಿ ಚೆನ್ನಯ ಹಾಗೂ ಉ.ಕ. ಜಿಲ್ಲೆಯ ತರಬೇತಿ ಶಾಲೆಗೆ ಹೆಂಜಾ ನಾೖಕ್ ಹೆಸರಿಡಲಾಗಿದೆ.
ಕಳೆದ ನವೆಂಬರ್‌ನಿಂದ ಫೆಬ್ರವರಿ ವರೆಗೆ ಮೊದಲ ಬ್ಯಾಚ್, ಮಾರ್ಚ್‌ನಿಂದ ಜೂನ್ ವರೆಗೆ ಎರಡನೇ ಬ್ಯಾಚ್‌ನಲ್ಲಿ ತರಬೇತಿ ನೀಡಲಾಗಿದೆ.
ಇಲ್ಲಿ ನಿವೃತ್ತ ಸೇನಾಧಿಕಾರಿಗಳಿಂದ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಶಾಲೆ ಬಗ್ಗೆ ಸಾಕಷ್ಟು ಪ್ರಚಾರ ಸಿಕ್ಕಿರುವುದರಿಂದ ಸ್ಥಳೀಯ ಯುವಕ ರಿಂದಲೇ ಬೇಡಿಕೆ ಬರುತ್ತಿದೆ. ಆದರೆ ಅನುದಾನ ಬಿಡುಗಡೆಯಾಗದೆ ಯೋಜನೆಯೇ ಅತಂತ್ರ ವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
217 ಮಂದಿಗೆ ತರಬೇತಿ; 73 ಮಂದಿಗೆ ಉದ್ಯೋಗ
ಉಡುಪಿ ಜಿಲ್ಲೆಯಲ್ಲಿ ತರಬೇತಿ ಪಡೆದ 128 ಮಂದಿಯಲ್ಲಿ 53 ಮಂದಿ ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಇದರಲ್ಲಿ 16 ಮಂದಿ ಅಗ್ನಿವೀರ, 7 ಮಂದಿ ಬಿಎಎಸ್‌ಎಫ್, ಇಬ್ಬರು ಸಿಎಎಸ್‌ಎಫ್ ಹಾಗೂ 28 ಮಂದಿ ಸಿಆರ್‌ಪಿಎಫ್‌ಗೆ ಸೇರ್ಪಡೆಯಾಗಿದ್ದಾರೆ. ಇನ್ನಷ್ಟು ಮಂದಿ ಬೆಳಗಾವಿಯಲ್ಲಿ ನಡೆಯುವ ಸೇನಾ ಸೇರ್ಪಡೆ ರ್ಯಾಲಿಗೆ ಹೋಗುವ ನಿರೀಕ್ಷೆ ಇದೆ. ದ.ಕ. ಜಿಲ್ಲೆಯಲ್ಲಿ ತರಬೇತಿ ಪಡೆದ 89 ಮಂದಿಯಲ್ಲಿ 18 ಮಂದಿ ಅಗ್ನಿವೀರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಆದೇಶಕ್ಕೆ ಕಾಯುತ್ತಿದ್ದಾರೆ, ಓರ್ವ ಬಿಎಎಸ್‌ಎಫ್ ಹಾಗೂ ಇನ್ನೋರ್ವ ಸಿಎಎಸ್‌ಎಫ್‌ಗೆ ಸೇರ್ಪಡೆಯಾಗಿದ್ದಾರೆ.
ಈ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಬಗ್ಗೆ ನನಗೆ ಮಾಹಿತಿ ಇಲ್ಲ, ನಾನು ಈ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆದು ಕೊಳ್ಳುತ್ತೇನೆ.
-ಶಿವರಾಜ ತಂಗಡಗಿ, ಸಚಿವರು, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ
ವೇತನವಿಲ್ಲ, ಸಿಬಂದಿಯೂ ಅತಂತ್ರ
ಎಪ್ರಿಲ್ ಅನಂತರ ಈ ತರಬೇತಿ ಶಾಲೆಗಳ ಸಿಬಂದಿಗೆ ವೇತನ ಕೊಟ್ಟಿಲ್ಲ. ಇದರಲ್ಲಿ ನಿವೃತ್ತ ಹಿರಿಯ ಸೇನಾಧಿಕಾರಿಗಳೂ ಸೇರಿದ್ದಾರೆ. ಇದಕ್ಕೆ ಬೇಕಾದ ಕೆಲವು ಗುತ್ತಿಗೆ ಆಧಾರಿತ ಸಿಬಂದಿಯನ್ನು ಹಿಂದುಳಿದ ವರ್ಗಗಳ ಕೆಲವು ಹಾಸ್ಟೆಲ್‌ಗಳಿಂದಲೂ ನಿಯೋಜನೆಯಲ್ಲಿ ಕರೆತಂದಿದ್ದು, ಅವರನ್ನು ಮನೆಗೆ ಕಳುಹಿಸಲಾಗಿದೆ. ಇನ್ನು ಈ ಸೇನಾ ತರಬೇತಿ ಶಾಲೆಗಳಿಗೆ ಲಕ್ಷಾಂತರ ರೂ. ವೆಚ್ಚ ಮಾಡಿ ಟೇಬಲ್, ಬೆಡ್, ತರಬೇತಿ ಪರಿಕರಗಳನ್ನು ಖರೀದಿಸಲಾಗಿದೆ. ಈ ಶಾಲೆಯೇ ನಿಂತುಹೋದರೆ ಲಕ್ಷಾಂತರ ರೂ. ವ್ಯರ್ಥವಾಗುವ ಭೀತಿ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.