ಸೂತ್ರಧಾರರಿಲ್ಲದೆ ಸೊರಗಿದ “ಕರಾವಳಿ ಅಭಿವೃದ್ಧಿ ಪ್ರಾಧಿಕಾರ’!
ಒಂದೂವರೆ ವರ್ಷದಿಂದ ಆಡಳಿತವಿಲ್ಲ ; ಸರಕಾರಕ್ಕೆ ಮರೆವು
Team Udayavani, Nov 2, 2019, 4:36 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕರಾವಳಿ ಭಾಗದ ಅಭಿವೃದ್ಧಿಗಾಗಿ ರಚಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಒಂದೂವರೆ ವರ್ಷದಿಂದ ಅಧ್ಯಕ್ಷರು-ಸದಸ್ಯರು ಸೇರಿದಂತೆ ಸೂಕ್ತ ಸೂತ್ರಧಾರರಿಲ್ಲದೆ ಸೊರಗಿದೆ.
ರಾಜ್ಯ ಸರಕಾರವು ಇತ್ತೀಚೆಗೆ ವಿವಿಧ ಸಾಹಿತ್ಯ ಅಕಾಡೆಮಿಗಳಿಗೆ ಅಧ್ಯಕ್ಷರು- ಸದಸ್ಯರನ್ನು ನೇಮಿಸಿದ್ದರೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಸಂಪೂರ್ಣ ಮರೆತಿದೆ. ಒಂದೂವರೆ ವರ್ಷದಿಂದ ಆಡಳಿತ ವ್ಯವಸ್ಥೆ ಇಲ್ಲದೆ ಪ್ರಾಧಿಕಾರವು ವರ್ಚಸ್ಸು ಕಳೆದು ಕೊಳ್ಳುತ್ತಿದೆ. ಈಗ ಅದು ಕೇವಲ ಹಳೆಯ ಯೋಜನೆಗಳಿಗೆ ಅನುದಾನ ಹಂಚಿಕೆಗಷ್ಟೇ ಸೀಮಿತವಾಗಿದೆ.
2008ರಲ್ಲಿ ರಚನೆ
ಕರಾವಳಿಯ ಸಮಗ್ರ ಅಭಿವೃದ್ಧಿಯ ಸಂಕಲ್ಪದಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು 2008ರಲ್ಲಿ ರಚಿಸಲಾಗಿತ್ತು. ಬಳಿಕ ಬೆರಳೆಣಿಕೆಯ ಯೋಜನೆಗಳನ್ನು ಬಿಟ್ಟರೆ ಮಹತ್ವದ- ಆಮೂಲಾಗ್ರ ಯೋಜನೆಗಳು ಆಗಿರಲಿಲ್ಲ. ಬದಲಾಗಿ ಶಿಲಾನ್ಯಾಸ ನಡೆಸಿದ್ದ ಮಂಗಳೂರಿನ ಸ್ಕೈವಾಕ್ ಯೋಜನೆ ಕೈಬಿಟ್ಟದ್ದು ಸೇರಿದಂತೆ ಹಲವು ಅಪಸವ್ಯಗಳಿಗೆ ಸಾಕ್ಷಿಯಾಗಿತ್ತು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಾಧಿಕಾರಕ್ಕೆ ಅಧ್ಯಕ್ಷರು-ಸದಸ್ಯರ ನೇಮಕ ಮಾಡಿಲ್ಲ. ಕುಮಟಾದ ಶಾಸಕರಾಗಿದ್ದ ಶಾರದಾ ಮೋಹನ್ ಅವರು ಪ್ರಾಧಿಕಾರದ ಕೊನೆಯ ಅಧ್ಯಕ್ಷರು. ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ಇತ್ತು. ಹೊಸ ಕಾರು ಇದ್ದರೂ ಅಧ್ಯಕ್ಷರಿಲ್ಲದೆ ಸುಮ್ಮನಿದೆ. ಹಾಳಾಗದಿರಲಿ ಎಂದು ಎರಡು ವಾರಕ್ಕೊಮ್ಮೆ ಕಾರನ್ನು ಸಿಬಂದಿ ಚಾಲನೆಗೊಳಿಸಿ ಆಫ್ ಮಾಡಿಡುತ್ತಾರೆ.
ರಸ್ತೆ, ಪ್ರವಾಸೋದ್ಯಮ, ಬಂದರು ಸೇರಿದಂತೆ ಸಾರ್ವಜನಿಕ – ಖಾಸಗಿ ಪಾಲುದಾರಿಕೆಯೊಂದಿಗೆ ಯೋಜನೆಗಳನ್ನು ಗುರುತಿಸಿ ಡಿಪಿಆರ್ (ವಿಸ್ತೃತ ಯೋಜನ ವರದಿ)ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುವುದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಜವಾಬ್ದಾರಿ. ಈ ಸಂಬಂಧ ತಲಪಾಡಿಯಿಂದ ಉತ್ತರ ಕನ್ನಡದವರೆಗೆ ಮೀನುಗಾರಿಕೆ ರಸ್ತೆ, ಅತ್ರಾಡಿಯಿಂದ ಬಜಪೆ ವಿಮಾನ ನಿಲ್ದಾಣದವರೆಗೆ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ಡಿಪಿಆರ್ ಸರಕಾರಕ್ಕೆ ಸಲ್ಲಿಸಿದ್ದರೂ ಸರಕಾರ ಮಾತ್ರ ಈ ವರದಿಗಳಿಗೆ ನ್ಯಾಯ ಒದಗಿಸಿಲ್ಲ. ಈ ಮೂಲಕ ಪ್ರಾಧಿಕಾರದ ಬಗ್ಗೆ ಸರಕಾರದ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.
26 ಸದಸ್ಯರು
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಆರಂಭದ ಸಮಯದಲ್ಲಿ ಅಧ್ಯಕ್ಷರು ಮತ್ತು ಐವರು ಸದಸ್ಯರನ್ನು ನೇಮಿಸಲಾಗಿತ್ತು. ಬಳಿಕದ ಸರಕಾರಗಳು ತಮ್ಮಿಷ್ಟದಂತೆ ಮತ್ತು ಕೆಲವರ ಒತ್ತಾಸೆಯಂತೆ ಸದಸ್ಯರ ಸಂಖ್ಯೆಯನ್ನು ಏರಿಸುತ್ತ ಹೋಗಿವೆ. ಹೀಗಾಗಿ ಕಳೆದ ವರ್ಷ ಆರಂಭದಲ್ಲಿ ಬರೋಬ್ಬರಿ 26 ಸದಸ್ಯರಿದ್ದರು!
ಪ್ರಾಧಿಕಾರಕ್ಕೆ ವಾರ್ಷಿಕವಾಗಿ 8.85 ಕೋ.ರೂ. ಅನುದಾನ ಬರುತ್ತದೆ. ಆದರೆ ಆಡಳಿತ ವ್ಯವಸ್ಥೆ ಇಲ್ಲದ್ದರಿಂದ ಯೋಜನೆಗಳು ಇಲ್ಲಿ ಜಾರಿಯಾಗುತ್ತಿಲ್ಲ. ಹಳೆಯ ಯೋಜನೆಗಳಿಗೆ ನಿಯಮ ಪ್ರಕಾರ ಅಧಿಕಾರಿಗಳು ಹಣ ಮಂಜೂರು ಮಾಡುತ್ತಿದ್ದಾರೆ. ಸಿಬಂದಿ ಸಂಖ್ಯೆ ಕೂಡ ನಿರೀಕ್ಷೆಯಷ್ಟಿಲ್ಲ.
ಉಪಚುನಾವಣೆ ಬಳಿಕ ನೇಮಕ
ಬಿಜೆಪಿ ಸರಕಾರ ಇತ್ತೀಚೆಗಷ್ಟೇ ಆಡಳಿತಕ್ಕೆ ಬಂದಿದೆ. ವಿವಿಧ ಅಕಾಡೆಮಿ, ಪ್ರಾಧಿಕಾರಕ್ಕೆ ಅಧ್ಯಕ್ಷರು-ಸದಸ್ಯರ ನೇಮಕವನ್ನು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ಉಪಚುನಾವಣೆ ಇದ್ದು, ಅದು ಮುಗಿದ ಬಳಿಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಸದಸ್ಯರನ್ನು ನೇಮಿಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವರು-ದ.ಕ.
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.