ಕರಾವಳಿ ಜಿಲ್ಲೆಗಳಲ್ಲಿ ಜೂ. 13-16ರ ವರೆಗೆ ಭಾರೀ ಮಳೆ ಸಂಭವ
Team Udayavani, Jun 13, 2017, 1:37 PM IST
ಮಂಗಳೂರು/ಉಡುಪಿ: ಕರಾವಳಿಯಲ್ಲಿ ಮಳೆ ತೀವ್ರಗೊಂಡಿದ್ದು, ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಸೋಮವಾರವೂ ನಿರಂತರ ಧಾರಾಕಾರ ಮಳೆ ಬಂದಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂ. 13ರಿಂದ 16ರ ವರೆಗೆ ಭಾರೀ ಮಳೆ ಬೀಳುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಪ್ರದೇಶದ ಮೀನುಗಾರರು ಮೀನು ಗಾರಿಕೆ ಗಾಗಿ ಸಮುದ್ರಕ್ಕೆ ಅಥವಾ ನದಿ ಪಾತ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ತಗ್ಗು ಪ್ರದೇಶ ದಲ್ಲಿ ಹಾಗೂ ನದಿ ತೀರದಲ್ಲಿ ವಾಸಿಸುವ ಸಾರ್ವ ಜನಿಕರು ಸಹ ತಗ್ಗು ಪ್ರದೇಶ/ ನದಿ ತೀರಕ್ಕೆ ತೆರಳದಂತೆ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಮಂಗಳೂರು, ಉಡುಪಿ ನಗರದಲ್ಲಿ ವಿಪರೀತ ಮಳೆ ಯಿಂದಾಗಿ ಆಗಾಗ ವಿದ್ಯುತ್ ಕಣ್ಣಾ ಮುಚ್ಚಾಲೆ ಯಾಡುತ್ತಿದೆ. ಮಂಗಳೂರಿನ ಫಳ್ನೀರಿನಲ್ಲಿ ಒಳಚರಂಡಿಯ ನೀರು ಮ್ಯಾನ್‌ಹೋಲ್ ಮೂಲಕ ಸಮೀಪದ 12 ಅಂಗಡಿಗಳಿಗೆ ನುಗ್ಗಿದ ಪರಿಣಾಮ ಅಂಗಡಿ ಬಂದಾಗಿತ್ತು.
ಹಳಿಗೆ ಮಣ್ಣು ಕುಸಿತ: ರೈಲು ಸಂಚಾರ ವಿಳಂಬ
ಭಾರೀ ಮಳೆಯಿಂದಾಗಿ ಜೋಕಟ್ಟೆಯಲ್ಲಿ ರೈಲು ಹಳಿಗೆ ಬೆಳಗ್ಗೆ ಮಣ್ಣು ಕುಸಿದು ಬಿದ್ದು ಒಂದು ಗಂಟೆ ಕಾಲ ಕೊಂಕಣ ರೈಲ್ವೇ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ದಕ್ಷಿಣ ರೈಲ್ವೇ ಮತ್ತು ಕೊಂಕಣ ರೈಲ್ವೇ ಅಧಿಕಾರಿಗಳು ಗ್ಯಾಂಗ್‌ಮೆನ್‌ಗಳ ಜತೆಗೆ ಸ್ಥಳಕ್ಕೆ ಧಾವಿಸಿ ತ್ವರಿತವಾಗಿ ಮಣ್ಣು ತೆರವುಗೊಳಿಸಿದರು.
ಫರಂಗಿಪೇಟೆ: ಆವರಣ ಗೋಡೆ ಕುಸಿತ
ಕಿನ್ನಿಗೋಳಿ, ಕಟೀಲು, ಪಕ್ಷಿಕೆರೆ, ದಾಮಸ್‌ಕಟ್ಟೆ, ಬಳುRಂಜೆ, ಕಾರ್ಕಳ, ಹೆಬ್ರಿ, ಶಿರ್ವ, ಉಡುಪಿ, ಮಣಿಪಾಲ, ಕೋಟ, ಬ್ರಹ್ಮಾವರ, ಸಾಲಿಗ್ರಾಮ, ಸಾಸ್ತಾನ ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಕಡಬ, ಪುತ್ತೂರಿನಲ್ಲಿ ಧಾರಾಕಾರ ಮಳೆ ಬಂದಿದೆ. ಸುಳ್ಯದಲ್ಲಿಯೂ ದಿನವಿಡೀ ಸುರಿದಿದೆ. ಮೂಲ್ಕಿ, ಉಳ್ಳಾಲ, ವೇಣೂರಿನಲ್ಲಿ ಮಳೆ ಬಂದಿದೆ. ಬೆಳ್ತಂಗಡಿಯಲ್ಲಿ ಮಳೆಯ ಬಿರುಸು ಎಂದಿಗಿಂತ ಸ್ವಲ್ಪ ಕಡಿಮೆಯಾಗಿದೆ. ಬಂಟ್ವಾಳದಲ್ಲಿ ಸಾಧಾರಣ ಮಳೆಯಾಗಿದೆ. ಭಾರೀ ಮಳೆಗೆ ಫರಂಗಿಪೇಟೆ ಜುಮ್ಮಾ ಮಸೀದಿಯ ಆವರಣ ಗೋಡೆ ಕುಸಿದು ಬಿದ್ದಿದೆ.
ಕುಂದಾಪುರ ತಾ|ನಲ್ಲಿ ಹೊಸಾಡು ನೀಲು ದೇವಾಡಿಗ ಅವರ ಮನೆಗೆ ಹಾಗೂ 76-ಹಾಲಾಡಿಯ ರತ್ನಾ ಶೆಡ್ತಿ ಅವರ ಮನೆಗೆ ಹಾನಿಯಾಗಿದೆ. ಉಡುಪಿ ತಾಲೂಕು ಪುತ್ತೂರಿ ನಲ್ಲಿ ಒಂದು ಮನೆ, ಕಾರ್ಕಳ ತಾಲೂಕಿನ ಮನೆ ಯೊಂದರ ಆವರಣಗೋಡೆಗೆ ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ತಹಶೀಲ್ದಾರರಿಗೆ ರಜೆ ನೀಡುವ ಅಧಿಕಾರ
ದ.ಕ. ಜಿಲ್ಲೆಯಲ್ಲಿ ಮಳೆ ತೀವ್ರಗೊಂಡಿರುವ ಹಿನ್ನೆಲೆ ಯಲ್ಲಿ ಪ್ರಕೃತಿ ವಿಕೋಪಗಳ ನಿರ್ವಹಣೆ ಸಂಬಂಧ ಅಪರ ಜಿಲ್ಲಾಧಿಕಾರಿಯವರು ಮಂಗಳೂರಿ ನಲ್ಲಿ ಸೋಮವಾರ ಕರೆದಿದ್ದು ಮುನ್ನೆಚ್ಚ ರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿ ಸಿದರು. ಮಳೆ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸಮಸ್ಯೆ ಯಾಗುವುದರಿಂದ ವಿಪರೀತ ಮಳೆ ಯಾದಲ್ಲಿ ಶಾಲೆಗಳಿಗೆ ರಜೆ ನೀಡುವ ಅಧಿಕಾರ ವನ್ನು ತಹಶೀಲ್ದಾರರುಗಳಿಗೆ ನೀಡಿದರು.
ನದಿ ಪಾತ್ರದ ಪ್ರದೇಶಗಳು, ಈ ಹಿಂದೆ ನೆರೆ ಕಂಡಿರುವ ಪ್ರದೇಶಗಳ ಮೇಲೆ ತೀವ್ರ ನಿಗಾ ಇಡುವಂತೆ ಸೂಚಿಸಿದ್ದಾರೆ. ರಸ್ತೆ ಬದಿ ಅಪಾಯ ಕಾರಿ ಮರಗಳನ್ನು ಗುರುತಿಸಿ ಅರಣ್ಯ ಇಲಾಖೆಗೆ ಪಟ್ಟಿ ನೀಡಲು ಮತ್ತು ರಸ್ತೆ ಸಂಚಾರಕ್ಕೆ ಅಡಚಣೆ ಯಾಗಿರುವಲ್ಲಿ ಅಡೆತಡೆ ನಿವಾರಣೆಗೆ ಆದ್ಯತೆ ನೀಡಲು ಅವರು ನಿರ್ದೇಶ ನೀಡಿದ್ದಾರೆ. ಮಳೆ ತೀವ್ರತೆ ಇದ್ದರೆ ಮುಖ್ಯ ಶಿಕ್ಷಕರಿಗೆ ಅಧಿಕಾರಿ ಗಳ ಅನುಮತಿ ಪಡೆದು ರಜೆ ಕೊಡುವ ಅಧಿಕಾರವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.