ಕರಾವಳಿ ಮೂಲದ ಘಾತಕ ಉಗ್ರರಿವರು


Team Udayavani, Oct 22, 2018, 11:24 AM IST

untitled-1.jpg

ಸನಾತನ ಸಂಸ್ಥೆಯಲ್ಲಿ  ಗುರುತಿಸಿಕೊಂಡಿದ್ದ ನೂಜಿಬಾಳ್ತಿಲದ ಜಯಪ್ರಕಾಶ್‌
ಕಡಬ: ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ನಿವಾಸಿ ಕೃಷಿಕ ಸೋಮರಾಜನ್‌ ಅವರ ಪುತ್ರ ಜಯಪ್ರಕಾಶ್‌ ಯಾನೆ ಅಣ್ಣಾ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ಗ‌ಳ ಪಟ್ಟಿಯಲ್ಲಿ ಆತನ ಹೆಸರನ್ನು ಸೇರ್ಪಡೆಗೊಳಿಸಿ ಆತನ ಬಂಧನಕ್ಕಾಗಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

ಹದಿನಾಲ್ಕು ವರ್ಷಗಳಿಂದ ಮನೆಯವರ ಸಂಪರ್ಕ ಕಡಿದುಕೊಂಡಿರುವ ಜಯಪ್ರಕಾಶ್‌ ಸನಾತನ ಸಂಸ್ಥೆಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ. ಮಾಲೆಂಗಾವ್‌ ಸ್ಫೋಟದ ತನಿಖೆಯ ವೇಳೆ ಕೆಲವು ವರ್ಷಗಳ ಹಿಂದೆ ಎನ್‌ಐಎ ಅಧಿಕಾರಿಗಳು ಕಡಬಕ್ಕೆ ಆಗಮಿಸಿ ಆತನ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಆತನ ಫೋಟೋ ಇರುವ ಪೋಸ್ಟರ್‌ಗಳನ್ನು ಗ್ರಾಮ ಪಂಚಾಯತ್‌ ಹಾಗೂ ಕಂದಾಯ ಕಚೇರಿಗಳ ಬಳಿ ಹಚ್ಚಿ ಆತನ ಬಗ್ಗೆ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಎನ್‌ಐಎ ಪ್ರಕಟಿಸಿತ್ತು. ಜಯಪ್ರಕಾಶ್‌ ವಿರುದ್ಧ ಅಜೆ¾àರ್‌ ದರ್ಗಾ ಸ್ಫೋಟ, ಸಂಝೋತಾ ಎಕ್ಸ್‌ಪ್ರೆಸ್‌ ಬಾಂಬ್‌ ಸ್ಫೋಟ, ಗೋವಾ ಮತ್ತು ಹೈದರಾಬಾದ್‌ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿವೆ. ಲೇಖಕಿ ಗೌರಿ ಲಂಕೇಶ್‌ ಹತ್ಯೆಯ ತನಿಖೆಯ ವೇಳೆಯಲ್ಲಿಯೂ ತನಿಖಾಧಿಕಾರಿಗಳು ಜಯಪ್ರಕಾಶ್‌ನ  ಕೈವಾಡದ ಸಾಧ್ಯತೆಯ ಕುರಿತು ಮಾಹಿತಿ ಕಲೆಹಾಕಿದ್ದರು. 

ಖೋಟಾ ನೋಟು ಚಲಾವಣೆ ಕುಖ್ಯಾತಿಯ ಮೊದಿನ್‌ ಉಮ್ಮರ್‌
ಉಡುಪಿ/ಪಡುಬಿದ್ರಿ:
 ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಿಡುಗಡೆಗೊಳಿಸಿರುವ ಘಾತಕ ಉಗ್ರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಉಡುಪಿ ಜಿಲ್ಲೆ ಮೂಳೂರಿನ ಮೊದಿನ್‌ ಉಮ್ಮರ್‌ ಬ್ಯಾರಿಯು ಖೋಟಾ ನೋಟು ಚಲಾ ವಣೆಯಲ್ಲಿ ಕುಖ್ಯಾತಿ ಪಡೆದವನಾಗಿದ್ದಾನೆ. ಕೇರಳ ಪೊಲೀಸರು ಈತನನ್ನು ಅರಸಿ ಬಂದಾಗಲೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಈತ ಖೋಟಾ ನೋಟಿನಿಂದಲೇ ತನ್ನ ಸಾಮ್ರಾಜ್ಯ ಕಟ್ಟಿಕೊಂಡಿದ್ದ.
ಮೂಳೂರಿನಲ್ಲಿ ಹೆದ್ದಾರಿ ಸಮೀಪವೇ ಬೃಹತ್‌ ಬಂಗಲೆಯೊಂದನ್ನು ನಿರ್ಮಿಸಿಕೊಂಡಿದ್ದ ಈತ ಕೇರಳ ಪೊಲೀಸರ ಹುಡುಕಾಟದ ಬಳಿಕ ಈ ಮನೆಯನ್ನು ಮಾರಿದ್ದ. ಮೂಳೂರು ಸುನ್ನಿ ಸೆಂಟರ್‌ ಬಳಿಯಲ್ಲಿನ ಜಾಗ ವೊಂದನ್ನೂ ಮಾರಾಟ ಮಾಡಿ ಬಳಿಕ ದುಬಾೖಗೆ ತೆರಳಿದ್ದ. ಸುನ್ನಿ ಸೆಂಟರ್‌ ಬಳಿಯಲ್ಲಿನ ಜಾಗದಲ್ಲಿ ಫ್ಲಾಟ್‌ಗಳನ್ನು ನಿರ್ಮಿಸುವುದಾಗಿ ಜನರನ್ನು ನಂಬಿಸಿ ಅನೇಕರಿಂದ ಹಣವನ್ನೂ ಪಡೆದುಕೊಂಡಿದ್ದ ಈತನ ವಿರುದ್ಧ ಹಲವಾರು ಚೆಕ್‌ ಬೌನ್ಸ್‌ ಕೇಸುಗಳೂ ಇದ್ದವು. ದುಬಾೖನಲ್ಲಿ ಜೈಲುವಾಸಿಯಾಗಿದ್ದ ಈತ ಮುಂದೆ ಬಿಡುಗಡೆಗೊಂಡಿದ್ದು, ಈತನ ಪಾಸ್‌ಪೋರ್ಟನ್ನು ಅಲ್ಲಿನ ಸರಕಾರವು ಹಿಡಿದಿಟ್ಟುಕೊಂಡಿದೆ ಎಂದು ಉಡುಪಿಯ ಪೊಲೀಸ್‌ ಮೂಲಗಳು ತಿಳಿಸಿವೆ. ಖೋಟಾ ನೋಟು ವ್ಯವಹಾರದಿಂದಲೇ ಈತ ಉಡುಪಿ ಜಿಲ್ಲೆ, ಬೆಂಗಳೂರು, ಹೈದರಾಬಾದ್‌ಗಳಲ್ಲಿ ಅಕ್ರಮ ಆಸ್ತಿಗಳನ್ನು ಖರೀದಿಸಿದ್ದನೆಂಬ ಮಾಹಿತಿ ಲಭ್ಯವಾಗಿದೆ.

ಟಾಪ್ ನ್ಯೂಸ್

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

18ನೇ ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೆ ಚಾಲನೆ

Odisha: ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ

2

Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು

4-aryabhata

ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

6

Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

5(1

Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ

4

Network Problem: ಇಲ್ಲಿ ಟವರ್‌ ಇದೆ, ಆದರೆ ನೆಟ್ವರ್ಕ್‌ ಸಿಗಲ್ಲ!

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.