Chandrayaan-3 ಯಶಸ್ಸಿನಲ್ಲಿ ಕರಾವಳಿಯ ವಿಜ್ಞಾನಿಗಳು


Team Udayavani, Aug 25, 2023, 11:33 AM IST

4-chandrayaan-scientists

ಜಗತ್ತಿನಲ್ಲಿಯೇ ಈವರೆಗೆ ಯಾರೂ ಕಾಲಿಡದ ಚಂದ್ರನ ದಕ್ಷಿಣ ಭಾಗಕ್ಕೆ ಭಾರತದ ಚಂದ್ರಯಾನ -3 ರ ಲ್ಯಾಂಡರ್‌ ಇಳಿದಿದೆ. ಇಡೀ ದೇಶವೇ ಸಂಭ್ರಮ ಪಡುವಂತೆ ಮಾಡಿದ ಇಸ್ರೋದ ಈ ಸಾಧನೆಯಲ್ಲಿ ದೇಶದ ನೂರಾರು ವಿಜ್ಞಾನಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ 11 ಮಂದಿ ವಿಜ್ಞಾನಿಗಳು ಭಾಗಿಯಾಗುವ ಮೂಲಕ ಕರಾವಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಕುಂದಾಪುರದ ಇಬ್ಬರ ಸಾಥ್‌

ಕುಂದಾಪುರ: ಚಂದ್ರಯಾನದ ಯಶಸ್ಸಿನಲ್ಲಿ ಕುಂದಾಪುರ ತಾಲೂಕಿನ ಇಬ್ಬರು ವಿಜ್ಞಾನಿಗಳು ಪಾಲುದಾರರು ಅನ್ನುವುದು ಹೆಮ್ಮೆಯ ಸಂಗತಿ. ಗುಜ್ಜಾಡಿ ಮಂಕಿಯ ಕೇಳಾಮನೆ ನಿವಾಸಿ ಆಕಾಶ್‌ ಶೆಟ್ಟಿ ಹಾಗೂ ಕೆರಾಡಿ ಗ್ರಾಮದ ಬೆಳ್ಳಾಲ ಮೋರ್ಟು ನಿವಾಸಿ ರಮೇಶ್‌ ಆಚಾರ್ಯ ತಾಲೂಕಿಗೆ ಹೆಮ್ಮೆ ತಂದವರು.

ಆಕಾಶ್‌ ಶೆಟ್ಟಿ ಅವರು ಮಂಕಿ ಕೇಳಾಮನೆ ಪಾರ್ವತಿ ಶೆಟ್ಟಿ ಹಾಗೂ ಕೆರಾಡಿ ಚಪ್ಪರಮಕ್ಕಿ ದಿ| ಅಶೋಕ ಶೆಟ್ಟಿ ದಂಪತಿ ಪುತ್ರ. ಭಟ್ಕಳದ ನ್ಯೂ ಇಂಗ್ಲಿಷ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಕೋಟ ವಿವೇಕ ಪ.ಪೂ. ಕಾಲೇಜಿನಲ್ಲಿ ಪಿಯುಸಿ, ಹಾಸನದ ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಟೆಕ್‌ ಮುಗಿಸಿ, 2015ರಲ್ಲಿ ಇಸ್ರೋಗೆ ಸೇರಿದರು. ಚಂದ್ರಯಾನ -3ರಲ್ಲಿ ಸ್ಪೇಸ್‌ ಕ್ರಾಫ್ಟ್‌ ಮೆಕ್ಯಾನಿಸಂ ಗ್ರೂಪ್‌ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2019ರಲ್ಲಿ ನಡೆದ ಚಂದ್ರಯಾನ -2ರಲ್ಲೂ ಭಾಗವಹಿಸಿದ್ದರು. ಪ್ರಸ್ತುತ ಇವರ ಕುಟುಂಬ ಮುಡೇìಶ್ವರದಲ್ಲಿ ನೆಲೆಸಿದೆ.

ರಮೇಶ್‌ ಅವರು ಕೆರಾಡಿ ಗ್ರಾಮದ ಬೆಳ್ಳಾಲ – ಮೋರ್ಟು ಶಾಲೆಯ ಬಳಿಯ ನಿವಾಸಿ ಮಂಜುನಾಥ ಆಚಾರ್ಯ ಮತ್ತು ಗಿರಿಜಾ ಆಚಾರ್ಯ ದಂಪತಿಯ ಪುತ್ರ. 2012ರಲ್ಲಿ ಇಸ್ರೋಗೆ ಸೇರಿದ್ದು, ಹಂತ-ಹಂತವಾಗಿ ಭಡ್ತಿ ಪಡೆದು ಪ್ರಸ್ತುತ ಇಸ್ರೋದ ಬೆಂಗಳೂರಿನಲ್ಲಿರುವ ಇಸ್ಟ್ರಾಕ್‌ ವಿಭಾಗದಲ್ಲಿ ತಾಂತ್ರಿಕ ಸಹಾಯಕ (ಟೆಕ್ನಿಕಲ್‌ ಅಸಿಸ್ಟೆಂಟ್‌) ಆಗಿದ್ದಾರೆ. ಇಸ್ರೋದಲ್ಲಿ ಇಸ್ಟ್ರಾಕ್‌ ಪ್ರಮುಖ ವಿಭಾಗವಾಗಿದ್ದು, ಚಂದ್ರಯಾನ-3ರಿಂದ ಬರುವ ಮಾಹಿತಿ (ಡೇಟಾ) ಯನ್ನು ಸ್ವೀಕರಿಸಿ ಬಳಿಕ ಹೊರ ಜಗತ್ತಿಗೆ ಮಾಹಿತಿ ನೀಡುವುದು ಈ ವಿಭಾಗದ ಕೆಲಸ. ಚಂದ್ರಯಾನ ಯಶಸ್ಸಿನ ಬಗ್ಗೆ “ಉದಯವಾಣಿ’ ಜತೆ ಸಂತಸ ಹಂಚಿಕೊಂಡ ರಮೇಶ್‌ ಅವರು, ಬುಧವಾರ ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಡುತ್ತಿದ್ದಂತೆ ನಮ್ಮ ಖುಷಿಗೆ ಪಾರವೇ ಇರಲಿಲ್ಲ. ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಕುಣಿದು ಕುಪ್ಪಳಿಸಿ ಸಂಭ್ರಮಿಸಿದೆವು ಎಂದು ತಿಳಿಸಿದ್ದಾರೆ.

ಧರ್ಮಸ್ಥಳದ ಪಿ. ವಾಸುದೇವ ರಾವ್‌

ಬೆಳ್ತಂಗಡಿ: ಧರ್ಮಸ್ಥಳ ಕನ್ಯಾಡಿ ಗ್ರಾಮದ ದಿ| ಪಿ. ಗಣಪತಿ ರಾವ್‌ ಹಾಗೂ ಲಕ್ಷ್ಮೀ ದಂಪತಿಯ ಪುತ್ರ ಪಣಿಯಾಡಿ ವಾಸುದೇವ ರಾವ್‌ ಇಸ್ರೋದಲ್ಲಿ ಹಿರಿಯ ವಿಜ್ಞಾನಿ. ಚಂದ್ರಯಾನದ ಉಪಗ್ರಹ ಹೊತ್ತೂಯ್ಯಲು ಎಲ್‌ವಿಎಂ-3 ಮತ್ತು ಎಲ್‌110-10 ಎಂಬ ರಾಕೆಟ್‌ಗಳಿದ್ದು, ಈ ಪೈಕಿ ಇಂಧನ ಹಾಗೂ ಆಕ್ಸಿಜನ್‌ ಹೊತ್ತೂಯ್ಯುವ ಪ್ರಥಮ ಸ್ಟೇಜ್‌ ಎಲ್‌110-10ನ್ನು ತಯಾರಿ ಹಾಗೂ ಪರೀಕ್ಷೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಿಡಿ ಭಾಗವನ್ನು ಬೆಂಗಳೂರು ಎಚ್‌ ಎಎಲ್‌ನಲ್ಲಿ ಸಿದ್ಧಪಡಿಸಿ ಇಸ್ರೋದ ತಿರುವನಂತಪುರದಲ್ಲಿ ಇರುವ ಮಹೇಂದ್ರಗಿರಿಗೆ ಕಳುಹಿಸಿಕೊಡುವ ವರೆಗಿನ ಕಾರ್ಯವನ್ನು ತನ್ನ ತಂಡದೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಅವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಧರ್ಮಸ್ಥಳದಲ್ಲಿ, ಉಜಿರೆ ಎಸ್‌ಡಿಎಂನಲ್ಲಿ ಪಿಯುಸಿ ಬಳಿಕ ಮಂಗಳೂರು ಕೆಪಿಟಿ ಯಲ್ಲಿ ಡಿಪ್ಲೊಮಾ ರಾಜ್ಯಕ್ಕೆ 4ನೇ ರ್‍ಯಾಂಕ್‌), ಮಂಡ್ಯ ಡಿಇಎಸ್‌ ಎಂಜಿನಿ ಯರಿಂಗ್‌ ಕಾಲೇಜಿನಲ್ಲಿ (ರಾಜ್ಯಕ್ಕೆ 6ನೇ) ರ್‍ಯಾಂಕ್‌ ಪಡೆದು ಇಸ್ರೋದ ತ್ರಿವೆಂಡ್ರಮ್‌ನಲ್ಲಿರುವ ಮಹೇಂದ್ರ ಗಿರಿಗೆ ನೇಮಕಗೊಂಡಿದ್ದರು. ಇಸ್ರೋದಲ್ಲಿ 32 ವರ್ಷ ಸೇವೆ ಸಲ್ಲಿಸಿದ್ದು 2024 ಆಗಸ್ಟ್‌ಗೆ ನಿವೃತ್ತರಾಗಲಿದ್ದಾರೆ. ಪತ್ನಿ ಕಾವೇರಿ ಹಾಗೂ ಎಂಜಿನಿಯರ್‌ ಪದವಿ ಪೂರ್ಣಗೊಳಿಸಿದ ಮೂವರು ಪುತ್ರರೊಂದಿಗೆ ಬೆಂಗಳೂರಿನಲ್ಲಿದ್ದಾರೆ.

ಸಾಲಿಗ್ರಾಮದ ಸೌಭಾಗ್ಯಾ ಐತಾಳ

ಉಡುಪಿ: ಸಾಲಿಗ್ರಾಮ ಪಾರಂ ಪಳ್ಳಿಯ ಸೌಭಾಗ್ಯಾ ಐತಾಳ ಅವರು ಚಂದ್ರಯಾನ-3 ಯೋಜನೆಯಲ್ಲಿ ಮಹ ತ್ವದ ಪಾತ್ರ ವಹಿಸಿದ್ದಾರೆ. ಇಸ್ರೋ ಸಂಸ್ಥೆಯ ಯು.ಆರ್‌. ರಾವ್‌ ಉಪಗ್ರಹ ಕೇಂದ್ರದಲ್ಲಿ ಯುವ ವಿಜ್ಞಾನಿಯಾಗಿ ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಾರಂಪಳ್ಳಿ ನಿವಾಸಿ ಕೃಷಿಕ ರಾಘವೇಂದ್ರ ಐತಾಳ ಮಹಾಲಕ್ಷ್ಮೀ ಐತಾಳ ದಂಪತಿಯ ಪುತ್ರಿಯಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಚಿತ್ರಪಾಡಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ, ಪ್ರೌಢ ಮತ್ತು ಪ.ಪೂ. ಶಿಕ್ಷಣವನ್ನು ಕೋಟ ಬಾಲಕಿಯರ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ, ಪಮಣಿಪಾಲ ಎಂಐಟಿಯಲ್ಲಿ ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿ ರಾಜಸ್ಥಾನ ಪಿಲಾನಿಯಲ್ಲಿರುವ ಬಿರ್ಲಾ ಇನ್‌ ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಎಂಟೆಕ್‌ ಪದವಿ ಪಡೆದಿದ್ದಾರೆ. ಅವರು ಮಕ್ಕಳಿಗಾಗಿ ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ. “ಧೂಮಕೇತುಗಳು ಬಾಹ್ಯಕಾಶದ ಅನಿರೀಕ್ಷಿತ ಅತಿಥಿಗಳು’ ಕನ್ನಡದಲ್ಲಿ ಕೃತಿಯನ್ನು ರಚಿಸಿದ್ದಾರೆ.

ಕಾಂಚನದ ಮಣಿಪುಳ ಶಿವಪ್ರಸಾದ ಕಾರಂತ

ಉಪ್ಪಿನಂಗಡಿ: ಶಿವಪ್ರಸಾದ ಕಾರಂತ ಅವರು ಗೋಳಿತ್ತೂಟ್ಟು ಗ್ರಾಮದ ಗ್ರಾಮೀಣ ಪ್ರದೇಶ ವಾಗಿರುವ ಕಾಂಚನದ ಮಣಿಪುಳದವರು. ಕೇಂದ್ರ ಸರಕಾರದಿಂದ ಕೇಂದ್ರ ಸಂಪುಟ ಕಾರ್ಯದರ್ಶಿ ಕೇಡರ್‌ ಗೆ ಸಮಾನವಾದ ಉನ್ನತ ವಿಜ್ಞಾನಿ ಹುದ್ದೆಗೆ ಭಡ್ತಿ ಪಡೆದಿರುವ 49ರ ಹರೆಯದ ಅವರು ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಕಾಂಚನದ ಕಾರಂತರ ಮನೆತನದ ಪರಮೇಶ್ವರ ಕಾರಂತ ಡಿ. ಮತ್ತು ರಮಾದೇವಿ ಅವರ ಪುತ್ರನಾಗಿದ್ದು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಕಾಂಚನದ ಶ್ರೀ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ, ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಸಿದ್ಧವನ ಗುರುಕುಲದಲ್ಲಿದ್ದು ಕೊಂಡು ಉಜಿರೆಯ ಎಸ್‌ ಡಿಎಂ ಕಾಲೇಜಿನಲ್ಲಿ, ಎಂ.ಟೆಕ್‌. ಪದವಿಯನ್ನು ಸುರತ್ಕಲ್‌ನ ಎನ್‌ ಐಟಿಕೆಯಲ್ಲಿ ಪೂರೈಸಿ 24 ವರ್ಷಗಳ ಹಿಂದೆ ಇಸ್ರೋ ಸೇರಿದ್ದರು. ಪ್ರಸ್ತುತ ಅವರು ಪತ್ನಿ ರಶ್ಮಿ ಹಾಗೂ ಎಂ.ಟೆಕ್‌. ಓದುತ್ತಿರುವ ಪುತ್ರ ಪೃಥ್ವಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಹಿರಿಯ ವಿಜ್ಞಾನಿ ರಾಧಾಕೃಷ್ಣ ವಾಟೆಡ್ಕ

ಪುತ್ತೂರು: ರಾಧಾಕೃಷ್ಣ ವಾಟೆಡ್ಕ ಅವರು ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನ ಇಸ್ರೋದಲ್ಲಿ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಆರ್ಲಪದವಿನ ವಡ್ಯದ ಕಾಟುಕುಕ್ಕೆ ಸಮೀಪದ ವಾಟೆಡ್ಕ ನಿವಾಸಿ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಆರ್ಲಪದವಿನಲ್ಲಿ, ಪದವಿಪೂರ್ವ ಶಿಕ್ಷಣವನ್ನು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಮಂಗಳೂರಿನ ಅಲೋಶಿಯಸ್‌ ಕಾಲೇಜಿನಲ್ಲಿ, ಎಂಎಸ್ಸಿಯಲ್ಲಿ ಮಂಗಳೂರು ವಿ.ವಿ.ಯಲ್ಲಿ ಪೂರ್ಣಗೊಳಿಸಿದ್ದರು. ಬೆಂಗಳೂರಿನ ಇಂಡಿಯನ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಪಿಎಚ್‌ಡಿ ಪದವಿ, ಜಪಾನಿನ ಟೊಯೋ ಹೊಶಿ ವಿ.ವಿ.ಯಲ್ಲಿ ಪೋಸ್ಟ್‌ ಪಿಎಚ್‌ಡಿ ಅಧ್ಯಯನ ಪೂರ್ಣಗೊಳಿಸಿ ಇಸ್ರೋಗೆ ಸೇರಿದ್ದರು. ಯುವಿ ಫೋಟೋನ್‌ ಡಿಟೆಕ್ಟರ್‌ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ರಾಧಾಕೃಷ್ಣ 2019ರ ಚಂದ್ರಯಾನ-2ರ ತಂಡದಲ್ಲೂ ಕೆಲಸ ನಿರ್ವಹಿಸಿದ್ದಾರೆ. ಚಂದ್ರನ ಮೇಲ್ಮೈಯಲ್ಲಿ ಇರಬಹುದಾದ ನೀರು, ತೇವಾಂಶ, ಕಲ್ಲು ಇತ್ಯಾದಿಗಳ ಪರಿಶೋಧನೆಯ ಸ್ಟೆಕ್ಟಾಮೀಟರ್‌ ಉಪಕರಣವನ್ನು ಸಜ್ಜುಗೊಳಿಸುವ ಕೆಲಸವನ್ನು ಅವರು ನಿರ್ವಹಿಸಿದ್ದರು.

ಕಾಸರಗೋಡಿನ ಕೃಷ್ಣಮೋಹನ ಶ್ಯಾನುಭೋಗ್‌

ಕಾಸರಗೋಡು: ಕೃಷ್ಣಮೋಹನ ಶ್ಯಾನುಭೋಗ್‌ ಅವರು ಕಾಸರಗೋಡಿನ ಚೆಂಗಳ ಬಳಿಯ ಎರಿಯ ಪಾಡಿಯ ದಿ| ವಿಷ್ಣು ಶ್ಯಾನುಭೋಗ್‌ ಮತ್ತು ಪ್ರೇಮಾವತಿ ದಂಪತಿಯ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಪಾಡಿ ಎಲ್‌.ಪಿ. ಶಾಲೆಯಲ್ಲಿ, ಎಸೆಸೆಲ್ಸಿಯನ್ನು 1981ರಲ್ಲಿ ಕಾಸರಗೋಡಿನ ಬಿಇಎಂ ಹೈಸ್ಕೂಲ್‌ನಲ್ಲಿ, ಪಿಯುಸಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದರು. ಅನಂತರ ಬಿ.ಟೆಕ್‌. ಶಿಕ್ಷಣವನ್ನು ಭೋಪಾಲದಲ್ಲೂ, ಎಂ.ಟೆಕ್‌. ಶಿಕ್ಷಣವನ್ನು ಸುರತ್ಕಲ್‌ನ ಎನ್‌ ಐಟಿಕೆಯಲ್ಲೂ ಪೂರ್ತಿಗೊಳಿಸಿದ್ದರು. ಬಳಿಕ ದೇಶದ ವಿಜ್ಞಾನ ರಂಗದಲ್ಲಿ ಸೇವೆ ಸಲ್ಲಿಸುವ ಭಾಗ್ಯ ಲಭಿಸಿತು. ಆರಂಭದಲ್ಲಿ ಇಸ್ರೋದ ತಿರುವನಂತಪುರದ ಘಟಕದಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡ ಅವರು ಚಂದ್ರಯಾನ – 2ರ ಸಿದ್ಧತೆ ನಡೆಸುವ ಅಂಗವಾಗಿ ಇಸ್ರೋದ ಬೆಂಗಳೂರು ಘಟಕಕ್ಕೆ ವರ್ಗಾವಣೆಗೊಂಡರು. ಬಳಿಕ ಚಂದ್ರಯಾನ – 3ರ ಯಶಸ್ವಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಉಪಗ್ರಹ ಸಂಚರಿಸಲು ಅಗತ್ಯವುಳ್ಳ ಇಂಧನ ಸೆಕ್ಷನ್‌ನ ಜನರಲ್‌ ಮ್ಯಾನೇಜರ್‌ ಹಾಗೂ ಡೈರೆಕ್ಟರ್‌ ಆಗಿ ಕೃಷ್ಣಮೋಹನ ಕರ್ತವ್ಯ ನಿರ್ವಹಿಸಿದ್ದಾರೆ. ಅವರು ಪತ್ನಿ ಕವಿತಾ, ಮಕ್ಕಳಾದ ಶ್ರಾವ್ಯಾ, ಶ್ರೇಯ ಅವರೊಂದಿಗೆ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.

ತಂಡದಲ್ಲಿ ಸುಳ್ಯದ ಮೂವರು

ಸುಳ್ಯ: ಚಂದ್ರಯಾನ -3ರ ಯಶಸ್ಸಿನಲ್ಲಿ ಸುಳ್ಯ ತಾಲೂಕಿನ ಮೂವರು ವಿಜ್ಞಾನಿಗಳಾದ ಶಂಭಯ್ಯ ಕೊಡಪಾಲ, ವೇಣುಗೋಪಾಲ ಉಬರಡ್ಕ ಹಾಗೂ ದುಗ್ಗಲಡ್ಕದ ಮಾನಸ ಜಯಕುಮಾರ್‌ ಅವರು ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡ ಪಾಲದವ ರಾದ ಶಂಭಯ್ಯ ಕೆ. ಇಸ್ರೊದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಅವರು ಚಂದ್ರಯಾನ್‌ ಮಿಷನ್‌ನಲ್ಲಿ ಎಲ್‌ಪಿಎಸ್‌ (ಲಿಕ್ವಿಡ್‌ ಪ್ರೊಪುಲ್ಲೆಷನ್‌ ಸಿಸ್ಟಮ್‌) ವಿಭಾಗದ ಯೂನಿಟ್‌ ಹೆಡ್‌ ಆಗಿ ಕಾರ್ಯನಿರ್ವಹಿಸಿದ್ದರು. ಬೊಳ್ಳಾಜೆ ಪ್ರಾಥಮಿಕ ಶಾಲೆ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಮುಗಿಸಿ ಮೈಸೂರಿನಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಪಡೆದು 1989ರಿಂದ ಇಸ್ರೊದಲ್ಲಿ ವಿಜ್ಞಾನಿಯಾಗಿದ್ದಾರೆ.

ವೇಣು ಗೋಪಾಲ ಅವರು ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರಿನ ಅನಂತೇಶ್ವರ ಭಟ್‌ ಹಾಗೂ ಸಾವಿತ್ರಿ ದಂಪತಿಯ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಉಬರಡ್ಕ ಮಿತ್ತೂರು ಸರಕಾರಿ ಶಾಲೆಯಲ್ಲಿ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಪಾಲಿಟೆಕ್ನಿಕ್‌ ಶಿಕ್ಷಣವನ್ನು ಸುಳ್ಯದ ಕೆವಿಜಿ ಪಾಲಿಟೆಕ್ನಿಕ್‌ ನಲ್ಲಿ ಪಡೆದು ಬಳಿಕ ಬೆಂಗಳೂರಿನಲ್ಲಿ ಬಿಇ ಹಾಗೂ ಎಂಇ ಶಿಕ್ಷಣ ಪಡೆ ದರು. ಅವರು ಮೊದಲಿಗೆ ಇಸ್ರೋದಲ್ಲಿ ತಾಂತ್ರಿಕ ಸಹಾಯಕರಾಗಿ ಸೇರ್ಪಡೆ ಯಾದರು. ಬಳಿಕ ಪದೋನ್ನತಿ ಪಡೆದು ಪ್ರಸ್ತುತ ಸೈಂಟಿಸ್ಟ್‌ ಇ ಆಗಿದ್ದಾರೆ. ಇಸ್ರೋದಲ್ಲಿ ಪಿಸಿಬಿ ಡಿಸೈನಿಂಗ್‌ ವಿಭಾಗದಲ್ಲಿ ಕರ್ತವ್ಯದಲ್ಲಿದ್ದು, ಚಂದ್ರಯಾನ 3ರಲ್ಲಿ ಡಿಜಿಟಲ್‌ ಸ್ಟ್ರಕ್ಚರ್‌ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಪತ್ನಿ, ಮಗ, ಮಗಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಇಸ್ರೊದಲ್ಲಿ ಕಾರ್ಯ ನಿರ್ವ ಹಿಸುವ ಸುಳ್ಯ ದುಗಲಡ್ಕದ ಮಾನಸ ಜಯಕುಮಾರ್‌ ಅವರು ಮಂಗಳೂರು ವಿ.ವಿ.ಯಲ್ಲಿ ಮಂಗಳಗ್ರಹದ ವಿಚಾರವಾಗಿ ಸಂಶೋಧನ ವಿದ್ಯಾರ್ಥಿನಿಯಾಗಿದ್ದಾರೆ. ಮಾರ್ಚ್‌ನಲ್ಲಿ ಗುಜರಾತ್‌ ನ ಅಹ್ಮದಾಬಾದ್‌ನಲ್ಲಿ ನಡೆದ ಚಂದ್ರ ಯಾನ 3 ಪ್ರಾಜೆಕ್ಟ್ ವರ್ಕ್‌ ಶಾಪ್‌ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಭಾಗವಹಿಸಿ ಚಂದ್ರಯಾನ -3 ಉಪಗ್ರಹದ ಆ್ಯಂಟೆನ ತಯಾರಿಕೆಯ ಐವರ ತಂಡದಲ್ಲಿ ಮಾನಸ ಕೂಡ ಒಬ್ಬರಾಗಿದ್ದರು. ಮಂಡೆಕೋಲು ಜಾಲ ಬಾಗಿಲು ಬಾಲಕೃಷ್ಣ ಮತ್ತು ಕುಸುಮಾವತಿ ದಂಪತಿಯ ಪುತ್ರಿಯಾಗಿರುವ ಮಾನಸ, ಸುಳ್ಯ ದುಗಲಡ್ಕ ಜಯ ಕುಮಾರ್‌ ಬಿ.ಎಸ್‌. ಅವರ ಪತ್ನಿ. ಮಂಡೆಕೋಲು ಶಾಲೆಯಲ್ಲಿ ಪ್ರಾಥಮಿಕ, ಅಜ್ಜಾವರದಲ್ಲಿ ಪ್ರೌಢ, ಸುಳ್ಯ ಕಾಲೇಜಿನಲ್ಲಿ ಪಿಯುಸಿ, ಪದವಿ, ಮಂಗಳೂರು ವಿ.ವಿ.ಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.

ಬಾರಕೂರಿನ ಸುಬ್ರಹ್ಮಣ್ಯ ಉಡುಪ

ಬ್ರಹ್ಮಾವರ: ವಿಕ್ರಮ್‌ ಲ್ಯಾಂಡರ್‌ನ ಕಾಲಿನ ಪಾದದ ಡೈನಾಮಿಕ್ಸ್‌ ಮಾಡಿದ ವಿಜ್ಞಾನಿಗಳಲ್ಲಿ ಬಾರಕೂರು ನೇಶನಲ್‌ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸುಬ್ರಹ್ಮಣ್ಯ ಉಡುಪ ಇ.ಜಿ. ಓರ್ವರು. ಇಸ್ರೋ ಸಂಸ್ಥೆಯಲ್ಲಿ ದೀರ್ಘ‌ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದರು. ಚಂದ್ರಯಾನ-2 ಮತ್ತು 3ರಲ್ಲಿ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತರಾಗಿದ್ದರೂ ಸಂಸ್ಥೆ ಅವರ ಸೇವೆಯನ್ನು ಪಡೆದುಕೊಂಡಿದೆ. ಉಡುಪರು ತೀರ್ಥಹಳ್ಳಿ ಅರಳ ಸುರಳಿಯ ನಿವೃತ್ತ ಶಿಕ್ಷಕ ಗೋವಿಂದ ರಾಮ ಹಾಗೂ ಶಾರದಾ ಉಡುಪ ದಂಪತಿಯ ಪುತ್ರ.

ಟಾಪ್ ನ್ಯೂಸ್

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.