ಕರಾವಳಿ ಯೋಜನೆ: ವೇಗ ನಿರೀಕ್ಷೆ
Team Udayavani, Jul 7, 2019, 11:45 AM IST
ಮಂಗಳೂರು: ಕೇಂದ್ರ ಬಜೆಟ್‌ನಲ್ಲಿ ಭಾರತ್‌ಮಾಲಾ, ಸಾಗರಮಾಲಾ ಯೋಜನೆಗಳ ಎರಡನೇ ಹಂತಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟಿರುವುದರಿಂದ ಕರಾವಳಿಯಲ್ಲಿ ಮಂಜೂರಾಗಿರುವ, ಪ್ರಸ್ತಾವನೆ ಯಲ್ಲಿರುವ ವಿವಿಧ ಯೋಜನೆ ಗಳಿಗೆ ವೇಗ ದೊರಕುವ ನಿರೀಕ್ಷೆ ಮೂಡಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರತ ಮಾಲಾದಡಿ ಒಟ್ಟು 4 ಯೋಜನೆಗಳು ಮಂಜೂರುಗೊಂಡಿದ್ದು, 6 ಪ್ರಸ್ತಾವನೆಯಲ್ಲಿವೆ. ಸಾಗರ ಮಾಲಾದಡಿ 7 ಯೋಜನೆಗಳಿದ್ದು, ಕೆಲವು ಮಂಜೂರಾಗಿದ್ದರೆ ಇನ್ನು ಕೆಲವು ಡಿಪಿಆರ್, ಪ್ರಸ್ತಾವನೆ ಹಂತದಲ್ಲಿವೆ.
ದೇಶಾದ್ಯಂತ ರಸ್ತೆ ಸಂಪರ್ಕವನ್ನು ಉತ್ತಮಗೊಳಿಸಲು ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಭಾರತ್ ಮಾಲಾ, ಸಾಗರ್‌ಮಾಲಾಗಳಿಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ 80,250 ಕೋ.ರೂ. ಮೀಸಲಿಟ್ಟಿದ್ದಾರೆ.
ಭಾರತ್‌ಮಾಲಾ ಯೋಜನೆಗಳು
ಮಂಗಳೂರು ಬೈಪಾಸ್ ರಸ್ತೆ (ಬಿ.ಸಿ. ರೋಡ್- ಕೈಕಂಬ- ಕಟೀಲು- ಮೂಲ್ಕಿ ರಸ್ತೆ ಮತ್ತು ತೊಕ್ಕೊಟ್ಟು- ಮುಡಿಪು- ಮೆಲ್ಕಾರ್ ರಸ್ತೆ ಚತುಷ್ಪ ) ಭಾರತಮಾಲಾ ಯೋಜನೆಯಲ್ಲಿ ಮಂಜೂರುಗೊಂಡಿದ್ದು ಡಿಪಿಆರ್ ಹಂತದಲ್ಲಿದೆ.
ಕಾರ್ಕಳ-ಕುಲಶೇಖರ ರಾ. ಹೆದ್ದಾರಿ ಚತುಷ್ಪಥವಾಗಿ ಉನ್ನತೀಕರಣ, ಮಾಣಿ-ಮೈಸೂರು ರಾ. ಹೆದ್ದಾರಿ ಉನ್ನತೀಕರಣ ಯೋಜನೆ ಮಂಜೂರುಗೊಂಡಿವೆ. ಉಡುಪಿ ಯಲ್ಲಿ ಮಲ್ಪೆ-ಆತ್ರಾಡಿ ಚತುಷ್ಪಥ ರಸ್ತೆ ಪ್ರಗತಿಯಲ್ಲಿದೆ.
ಕಾರ್ಕಳ- ಮೂಡುಬಿದಿರೆ- ಬಿ.ಸಿ. ರೋಡ್ ರಸ್ತೆ, ಮಂಗಳೂರು -ಬೆಂಗಳೂರು ರಾ. ಹೆದ್ದಾರಿ 75ರಲ್ಲಿ ಶಿರಾಡಿಘಾಟಿಯಲ್ಲಿ 10,000 ಕೋ.ರೂ. ವೆಚ್ಚದ 23.6 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ, ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ, ಮಂಗಳೂರು -ಚಿತ್ರದುರ್ಗ ರಾ. ಹೆದ್ದಾರಿ, ಬಿ.ಸಿ. ರೋಡ್-ಸುರತ್ಕಲ್ ರಾ. ಹೆದ್ದಾರಿ ಅಷ್ಟಪಥವಾಗಿ ಉನ್ನತೀಕರಣ, ಚಾರ್ಮಾಡಿ ರಸ್ತೆ ಅಭಿವೃದ್ಧಿ ಪ್ರಸ್ತಾವನೆಯಲ್ಲಿವೆ.
ಸಾಗರಮಾಲಾ ಯೋಜನೆಗಳು
ಇನ್ನೊಂದು ಮಹತ್ವಾಕಾಂಕ್ಷೆಯ ಸಾಗರಮಾಲಾದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಯೋಜನೆ ಗಳು ಒಳಗೊಂಡಿವೆ. ಇದರಲ್ಲಿ 3,000 ಕೋ.ರೂ. ವೆಚ್ಚದಲ್ಲಿ ಮಂಗಳೂರಿನಲ್ಲಿ ಕರಾವಳಿ ಆರ್ಥಿಕ ವಲಯ (ಕೋಸ್ಟಲ್ ಎಕಾನಮಿಕ್ ಝೋನ್), 100 ಕೋ.ರೂ.ಗಳಲ್ಲಿ ಬೆಂಗರೆ-ನೇತ್ರಾವತಿ ಕಿಂಡಿ ಅಣೆಕಟ್ಟುವರೆಗಿನ ನದಿ ತೀರ ಅಭಿವೃದ್ಧಿ, ಹಳೆ ಬಂದರು-ಕೂಳೂರು ಎನ್‌ಎಂಪಿಟಿವರೆಗೆ ನದಿತೀರದಲ್ಲಿ ರಸ್ತೆ ನಿರ್ಮಾಣ, ಕುಳಾ ಮೀನುಗಾರಿಕೆ ಜೆಟ್ಟಿ ನಿರ್ಮಾಣ, ಹೆಜಮಾಡಿಕೋಡಿ ಜೆಟ್ಟಿ ಅಭಿವೃದ್ಧಿ, ಮಲ್ಪೆ ಮೀನುಗಾರಿಕೆ ಬಂದರು ಅಭಿವೃದ್ಧಿ, ಎನ್‌ಎಂಪಿಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಮುಖ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.