ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಗ್ರಹ
Team Udayavani, Nov 1, 2018, 10:03 AM IST
ಮಂಗಳೂರು: ರಾಜ್ಯದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದು, ಈ ನಿಟ್ಟಿನಲ್ಲಿ ಪ್ರತ್ಯೇಕ “ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ’ವನ್ನು ಸ್ಥಾಪಿಸಬೇಕು ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ)ಯು ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಕ್ರೂಯಿಸ್ (ಸಮುದ್ರ/ಹಿನ್ನೀರು ವಿಹಾರ ಯಾನ ಟೂರಿಸಂ, ರಿಲೀಜಿಯಸ್ (ಧಾರ್ಮಿಕ)ಟೂರಿಸಂ, ಇಕೋ (ಪರಿಸರ) ಟೂರಿಸಂ, ಹೆಲ್ತ್ (ಆರೋಗ್ಯ) ಟೂರಿಸಂ ಇತ್ಯಾದಿ ವಿವಿಧ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿಯಲ್ಲಿ ಅವಕಾಶಗಳಿವೆ. ಪ್ರವಾಸೋ ದ್ಯಮಕ್ಕೆ ಪೂರಕವಾದ ಹೊಟೇಲ್, ರೆಸ್ಟೋರೆಂಟ್, ವ್ಯಾಪಾರ ಮಳಿಗೆಗಳು ಸ್ಥಾಪನೆಯಾದರೆ ಸಮಗ್ರ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಾವ ಕಾಶಗಳ ಸೃಷ್ಟಿಯೂ ಆಗಲಿದೆ. ಪ್ರತೇಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೆ ಇದನ್ನೆಲ್ಲ ಕಾರ್ಯಗತಗೊಳಿಸಲು ಸಾಧ್ಯವಿದೆ ಎಂದು ಕೆಸಿಸಿಐ ನೂತನ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉದ್ದೇಶಿತ ಪ್ರಾಧಿಕಾರವು ಈ ಪ್ರದೇಶದ ಬೀಚ್‌ಗಳನ್ನು, ಜಲ ಸಾಹಸ ಕ್ರೀಡೆಗಳಾದ ಸರ್ಫಿಂಗ್, ಕಯಾಕಿಂಗ್ ಇತ್ಯಾದಿಗಳನ್ನು ನಡೆಸಬಹುದಾದ ಪ್ರದೇಶಗಳನ್ನು; ಹೌಸ್ ಬೋಟ್, ಬೀಚ್ ರೆಸಾರ್ಟ್ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಪ್ರವಾಸಿ ಮಾಹಿತಿ ಕೇಂದ್ರವನ್ನು ಸ್ಥಾಪಿಸುವ ಆವಶ್ಯಕತೆ ಇದೆ. ಆದ್ದರಿಂದ ಇಂತಹ ಪ್ರಾಧಿಕಾರ ಸಾœಪನೆಗೆ ಕೆಸಿಸಿಐ ಸರಕಾರದ ಮೇಲೆ ಒತ್ತಡ ತರಲಿದೆ ಎಂದು ವಿವರಿಸಿದರು.
ಜಿಎಸ್‌ಟಿ ಕಾರ್ಯಾಗಾರ
ಮಂಗಳೂರಿನಲ್ಲಿ ಈಗಾಗಲೇ 90ರಷ್ಟು ಐಟಿ ಕಂಪೆನಿಗಳಿದ್ದು, ಇನ್ನಷ್ಟು ಹೆಚ್ಚು ಐಟಿ ಕಂಪೆನಿಗಳು ಇಲ್ಲಿಗೆ ಬರಲು ಪ್ರಯತ್ನಿಸಲಾಗುವುದು. ಜಿಎಸ್‌ಟಿ ಕುರಿತಂತೆ ಇನ್ನೂ ಗೊಂದಲಗಳಿದ್ದರೆ ಇನ್ನಷ್ಟು ಮಾಹಿತಿ ಕಾರ್ಯಾ ಗಾರಗಳನ್ನು ನಡೆಸಲಾಗುವುದು ಎಂದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯನ್ನು ಈಗಿರುವ 2,450 ಮೀಟರ್‌ನಿಂದ 3,050 ಮೀಟರ್‌ಗೆ ವಿಸ್ತರಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಒತ್ತಡ ತರಲಾಗುವುದು. ವಿಮಾನ ನಿಲ್ದಾಣದಲ್ಲಿ ಬೆಳಕಿನ ವ್ಯವಸ್ಥೆ ಕಡಿಮೆ ಮಟ್ಟದಲ್ಲಿದ್ದು, ಅದನ್ನು ಹೆಚ್ಚಿಸಲು ಪ್ರಿಸಿಶನ್ ಅಪ್ರೋಚ್ ಲೈಟಿಂಗ್ ಸಿಸ್ಟಂ (ಪಿಎಎಲ್‌ಎಸ್) ಅಳವಡಿಸಲು ಕೋರಿಕೆ ಸಲ್ಲಿಸಲಾಗುವುದು. ವಿಮಾನ ನಿಲ್ದಾಣಕ್ಕೆ ಮಂಗಳೂರು ಸುತ್ತಮುತ್ತಲಿನಿಂದ ಮತ್ತು ದೂರದ ಭಟ್ಕಳ ಮತ್ತು ಕಾಸರಗೋಡಿನಿಂದ ಕೆಎಸ್‌ಆರ್‌ಟಿಸಿ/ ವೋಲ್ವೊ ಬಸ್ ಯಾನ ಆರಂಭಿಸಲು, ವಿಮಾನ ನಿಲ್ದಾಣದಲ್ಲಿ ಕಾರ್ ಪಾರ್ಕಿಂಗ್ ಶುಲ್ಕ ಕಡಿತಕ್ಕೆ ಕೆಸಿಸಿಐ ಪ್ರಯತ್ನಿಸಲಿದೆ ಎಂದು ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ತಿಳಿಸಿದರು.
ಮಂಗಳೂರಿನಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ಬೈಕಂಪಾಡಿಯಲ್ಲಿ ಮಲ್ಟಿ ಲೆವೆಲ್ ಇಂಡಸ್ಟ್ರೀಯಲ್ ಶೆಡ್‌ಗಳ ನಿರ್ಮಾಣ ಮತ್ತು 2ನೇ ಹಂತದ ಯೋಜನೆ, ಸಿಆರ್‌ಝಡ್ ಕೇಂದ್ರ ಕಚೇರಿ ಮಂಗಳೂರಿನಲ್ಲಿ ಸ್ಥಾಪನೆ ಬಗ್ಗೆ ಒತ್ತಡ ತರಲಾಗುವುದು ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಸಿಸಿಐ ಉಪಾಧ್ಯಕ್ಷ ಐಸಾಕ್ ವಾಸ್, ಗೌರವ ಕಾರ್ಯದರ್ಶಿಗಳಾದ ಶಶಿಧರ ಪೈ ಮಾರೂರು ಮತ್ತು ಪ್ರಶಾಂತ್ ಸಿ.ಜಿ., ಕೋಶಾಧಿಕಾರಿ ಎಂ. ಗಣೇಶ್ ಕಾಮತ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು- ಬೆಂಗಳೂರು ರೋ ರೋ ಸೇವೆಗೆ ಆಗ್ರಹ
ಮಂಗಳೂರು- ಬೆಂಗಳೂರು ರಸ್ತೆ ಮೂಲಕ ನವಮಂಗಳೂರು ಬಂದರಿಗೆ ಸರಕು ಸಾಗಾಟ ಮಾಡಲು ಈಗಿರುವ ರಸ್ತೆ ವ್ಯವಸ್ಥೆಯಲ್ಲಿ ಅಧಿಕ ಸಮಯ ಹಿಡಿಯುತ್ತಿದ್ದು, ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ರಸ್ತೆ ಯೋಜನೆಯನ್ನು ಆದ್ಯತೆಯ ನೆಲೆಯಲ್ಲಿ ಕೈಗೆತ್ತಿಕೊಳ್ಳಲು ಹಾಗೂ ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ರೋ ರೋ ಸೇವೆ ಆರಂಭಿಸುವ ಬಗ್ಗೆಯೂ ಸರಕಾರವನ್ನು ಆಗ್ರಹಿಸಲಾಗುವುದು ಎಂದು ಅಬ್ದುಲ್ ಹಮೀದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.