ಮುಂಗುಸಿ ಬಾಯಿಂದ ನಾಗರಹಾವು ರಕ್ಷಣೆ!
Team Udayavani, Jul 2, 2018, 2:05 AM IST
ಸುಬ್ರಹ್ಮಣ್ಯ: ಮುಂಗುಸಿ ದಾಳಿಯಿಂದ ನಾಗರ ಹಾವೊಂದನ್ನು ಸ್ಥಳೀಯರು ರವಿವಾರ ಜಾಲ್ಸೂರಿನ ಬೊಳುಬೈಲು ಎಂಬಲ್ಲಿ ರಕ್ಷಿಸಿದ್ದಾರೆ. ಮಧ್ಯಾಹ್ನದ ವೇಳೆ ನಾಗರ ಹಾವನ್ನು ಮುಂಗುಸಿಯೊಂದು ಅಟ್ಟಿಸಿಕೊಂಡು ಬಂತು. ಇದನ್ನು ಗಮನಿಸಿದ ದಿನೇಶ್ ಮಠ ಹಾಗೂ ಕೇಶವ ಜಬಳೆ ಎಂಬುವರು ಮುಂಗುಸಿಯವನ್ನು ಓಡಿಸಿ, ಹಾವನ್ನು ಕಾಪಾಡಿದ್ದಾರೆ. ಹೆದ್ದಾರಿ ಮಧ್ಯೆ ಹಾವು ದಿಕ್ಕೆಟ್ಟಿರುವುದನ್ನು ಅರಿತ ಸ್ಥಳೀಯರು ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿದು ಹಾವು ಕಾಡಿಗೆ ಮರಳಲು ಅನುವು ಮಾಡಿಕೊಟ್ಟರು. ಕೆಲವರು ಹಾವಿಗೆ ಭಕ್ತಿಯಿಂದ ನಮಿಸಿದರು. ಅರ್ಧ ತಾಸು ಹೆಡೆ ಅರಳಿಸಿ ಸಿಂಬೆ ಸುತ್ತಿ ಕುಳಿತಿದ್ದ ಹಾವು, ಬಳಿಕ ಮೆಲ್ಲನೆ ಕಾಡಿನಲ್ಲಿ ಮರೆಯಾಯಿತು.
ಈ ಪರಿಸರದ ನಾಗನಕಟ್ಟೆ ಸಮೀಪ ಆಗಾಗ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಮೂರು ವರ್ಷಗಳ ಹಿಂದೆ ಬೊಳುಬೈಲು ನಾಗನಕಟ್ಟೆ ಪ್ರತಿಷ್ಠೆ ಸಂದರ್ಭದಲ್ಲೇ ದರ್ಶನ ನೀಡಿತ್ತು. ಇಲ್ಲಿಂದ ಒಂದು ಕಿ.ಮೀ. ದೂರದ ಎಡ್ಕಾರು ಎಂಬಲ್ಲಿ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವೂ ಇದೆ. ನಾಗಾರಾಧನೆ ಹಾಗೂ ನಾಗದೋಷ ನಿವಾರಣೆಗೂ ಈ ದೇಗುಲ ಪ್ರಸಿದ್ಧಿ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ 28ಕ್ಕೆ ಮುಂದೂಡಿದ ಹೈಕೋರ್ಟ್
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.