ಕೇರಳ, ಕರ್ನಾಟಕ ತೆಂಗು ಜೀನ್ ಬ್ಯಾಂಕ್‌ಗೆ ಬೀಗ?
Team Udayavani, Nov 29, 2018, 9:59 AM IST
ಸುಬ್ರಹ್ಮಣ್ಯ: ಪುತ್ತೂರು ತಾಲೂಕಿನ ಕಿದು ತೆಂಗು ಜೀನ್ ಬ್ಯಾಂಕ್‌ಗೆ ಬೀಗ ಹಾಕಿ ಆಂಧ್ರಪ್ರದೇಶದಲ್ಲಿ ಹೊಸ ಕೇಂದ್ರ ತೆರೆಯುವ ಪ್ರಸ್ತಾವ ಇನ್ನೂ ಜೀವಂತವಾಗಿದೆ. ಜತೆಗೆ ಕೇರಳದ ಕಾಯಂಕುಳ ಸಂಶೋಧನ ಕೇಂದ್ರವನ್ನೂ ಮುಚ್ಚುವ ಪ್ರಯತ್ನ ಉನ್ನತ ಮಟ್ಟದಲ್ಲಿ ನಡೆದಿದೆ.
ಭಾರತೀಯ ಕೃಷಿ ಸಂಶೋಧನ ಕೌನ್ಸಿಲ್‌ನ ಪುನರ್ ಪರಿಶೋಧನ ಸಮಿತಿ 2018ರ ಅ. 28ರಂದು ದಿಲ್ಲಿಯಲ್ಲಿ ಸಭೆ ನಡೆಸಿ, ಕಿದು ಮತ್ತು ಕೇರಳದ ಸಂಶೋಧನ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಕಾಸರಗೋಡು ಸಿಪಿಸಿಆರ್‌ಐ, ಆಸ್ಸಾಂನ ಕಾಯಕುಚ್ಚಿ, ಪ. ಬಂಗಾಲದ ಮೋಹಿತ್ ನಗರ ಸಂಶೋಧನ ಕೇಂದ್ರಗಳಲ್ಲಿ ಕೃಷಿ ತಂತ್ರಜ್ಞರ ಸಂಖ್ಯೆ ಕಡಿತಗೊಳಿಸಲು ತೀರ್ಮಾನಿಸಿದೆ.
ಕಾಸರಗೋಡು ಸಿಪಿಸಿಆರ್‌ಐ ಕೇಂದ್ರದ ವ್ಯಾಪ್ತಿಯ 83 ಕೃಷಿ ತಂತ್ರಜ್ಞರ ಸಂಖ್ಯೆಯನ್ನು 63ಕ್ಕೆ ಇಳಿಸಲು ವರದಿ ಸಿದ್ಧಪಡಿಸಲಾಗಿದೆ. ಇತರ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಸಿಬಂದಿ ಕಡಿತವಾಗಿದೆ. ಕಾಯಂಕುಳ ಮತ್ತು ಕಿದು ಕೇಂದ್ರಗಳನ್ನು ಮುಚ್ಚಲು ಸೂಚಿಸಲಾಗಿದೆ. ಹೊಸ ಕೇಂದ್ರಗಳ ಪ್ರಸ್ತಾವನೆಯನ್ನು ಬಲಪಡಿಸಿ ಎಂದೂ ಸ್ಪಷ್ಟಪಡಿಸಲಾಗಿದೆ. ಕಿದು ಕೇಂದ್ರವನ್ನು ಮುಚ್ಚಿ ಆಂಧ್ರದಲ್ಲಿ ಆರಂಭಿಸಲು ಪ್ರಯತ್ನ ಮುಂದುವರಿದಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಪುನರ್ ಪರಿಶೋಧನ ಸಮಿತಿ ಕಳೆದ ತಿಂಗಳಲ್ಲೇ ಕರಡು ಸಿದ್ಧಪಡಿಸಿದ್ದರೂ ಬೆಳಕಿಗೆ ಬಂದಿರುವುದು ಈಗ. ಕಿದು ಕೇಂದ್ರದಲ್ಲಿ ಕೃಷಿ ಸಮ್ಮೇಳನ ಯಶಸ್ವಿಯಾಗಿ ಮುಗಿಯುವ ತನಕ ಮಾಹಿತಿಯನ್ನು ಮುಚ್ಚಿಡಲಾಗಿತ್ತು.
ಕೃಷಿ ತಂತ್ರಜ್ಞರ ಸಂಖ್ಯೆ ಕಡಿತ, ಕಿದು ಕೇಂದ್ರ ಮುಚ್ಚುವುದು, ಆಂಧ್ರದಲ್ಲಿ ನೂತನ ಕೇಂದ್ರ ಆರಂಭಿಸಲು ಪರವಾನಿಗೆ ಪಡೆಯುವಂತೆ ಸಿದ್ಧವಾದ ಸಭೆಯ ವರದಿಯ ಪ್ರತಿ ಕೇಂದ್ರ ಕೃಷಿ ಸಚಿವಾಲಯ ತಲುಪಿದ್ದು, ಕೃಷಿ ಸಚಿವರ ಒಪ್ಪಿಗೆ ಸಿಗಲಷ್ಟೆ ಬಾಕಿ ಇದೆ. ನ. 29ರಂದು ಸಮಿತಿಯ ಮತ್ತೂಂದು ಸಭೆ ನಡೆಯಲಿದೆ. ಕೇಂದ್ರ ಕೃಷಿ ಮತ್ತು ರೈತ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆ (ಐಸಿಎಆರ್)ಯ ಅಧೀನದಲ್ಲಿ ಸುಮಾರು 120 ಅಂಗಸಂಸ್ಥೆಗಳಿವೆ. ಇವುಗಳಲ್ಲೊಂದು ಸಿಪಿಸಿಆರ್‌ಐ ಕಾಸರಗೋಡು ಕೇಂದ್ರ ಕಚೇರಿ. ಕಿದು, ಕಾಯಂಕುಳ ಕೇಂದ್ರಗಳು ಇದರಡಿ ಬರುತ್ತವೆ.
ರಾಜ್ಯಕ್ಕೆ ಅನ್ಯಾಯ
ಪುನರ್ ಪರಿಶೋಧನ ಸಮಿತಿಯ ಸದಸ್ಯರೆಲ್ಲ ಉತ್ತರ ಭಾರತದವರು. ಹೀಗಾಗಿ ರಾಜ್ಯಕ್ಕೆ ಹಿನ್ನಡೆಯಾಗಿದೆ. ಜಿಲ್ಲೆಯ ಸಂಸದರು, ರಾಜ್ಯ ಸರಕಾರ ಎಚ್ಚೆತ್ತು ಕೇಂದ್ರ ಕೈತಪ್ಪದಂತೆ ಎಚ್ಚರ ವಹಿಸಬೇಕಿದೆ.
ಪರ್ಯಾಯ ದಾರಿಯಲ್ಲಿ ಪ್ರಯತ್ನ
ಸಿಪಿಸಿಆರ್‌ಐ ಕಿದು ಸಂಸ್ಥೆಯು ಅರಣ್ಯ ಇಲಾಖೆಯೊಂದಿಗೆ ಹೊಂದಿರುವ ಗುತ್ತಿಗೆ ನವೀಕರಣದ ವಿಚಾರ ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಬಾಕಿ ಇರುವಾಗಲೇ ಉನ್ನತ ಮಟ್ಟದ ಅಧಿಕಾರಿಗಳ ನಿಷ್ಕಾಳಜಿಯಿಂದ ಆಂಧ್ರದ ಸಾಮಲ್ನೋಟ ಎಂಬಲ್ಲಿ ಹೊಸದಾಗಿ ಕೇಂದ್ರ ಸ್ಥಾಪಿಸಲು ನಡೆದಿರುವ ಷಡ್ಯಂತ್ರದ ಭಾಗ ಇದಾಗಿದೆ.
ಡಾ| ಹೆಗ್ಗಡೆ ಸಂಕಲ್ಪ
ಕಾನೂನಿನ ಅಡಚಣೆ ನಿವಾರಿಸಿ ಕೇಂದ್ರವನ್ನು ಇಲ್ಲೇ ಉಳಿಸುವಂತೆ ಇತ್ತೀಚೆಗೆ ಕಿದುವಿನಲ್ಲಿ ನಡೆದ ಕೃಷಿಮೇಳದಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರು ರೈತರಿಂದ ಸಂಕಲ್ಪ ಮಾಡಿಸಿದ್ದರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಬಳಿಯೂ ಮನವಿ ಮಾಡಿದ್ದರು. ಡಿವಿಎಸ್ ಪೂರಕ ಭರವಸೆ ನೀಡಿದ್ದರು.
ಉದಯವಾಣಿ ವರದಿ ಬಹಿರಂಗ
ಕಿದುವಿನ 300 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ ಪಡೆದು ತೆಂಗು ಜೀನ್ ಬ್ಯಾಂಕ್ ಸ್ಥಾಪಿಸಲಾಗಿತ್ತು. ಲೀಸ್ ನವೀಕರಿಸದೆ ಕೇಂದ್ರವನ್ನು ಆಂಧ್ರಕ್ಕೆ ಸ್ಥಳಾಂತರಿಸಲು ಹುನ್ನಾರ ರೂಪಿಸಿದ ಕುರಿತು ಈ ಹಿಂದೆ “ಉದಯವಾಣಿ’ ವರದಿ ಮಾಡಿತ್ತು.
ಗಮನಕ್ಕೆ ಬಂದಿಲ್ಲ
ಉನ್ನತ ಮಟ್ಟದ ಸಮಿತಿ ಸಭೆಗಳಲ್ಲಿ ಹಲವು ವಿಚಾರಗಳು ಚರ್ಚೆಗೆ ಬರುತ್ತವೆ. ಇದೂ ಚರ್ಚೆಗೆ ಬಂದಿರಬಹುದು. ಅಲ್ಲಿ ಚರ್ಚೆ ನಡೆದಿದ್ದೆಲ್ಲವೂ ಅಂತಿಮವಲ್ಲ. ಇಂತಹ ಸುದ್ದಿಗಳು ಅಗಾಗ್ಗೆ ಬರುತ್ತಿರುತ್ತವೆ. ಇದು ನಂಬಲರ್ಹವಲ್ಲ. ಗಾಳಿ ಸುದ್ದಿ ಎಂದು ಭಾವಿಸಿದ್ದೇನೆ.
ಡಾ| ಪಿ. ಚೌಡಪ್ಪ, ನಿರ್ದೇಶಕರು, ಸಿಪಿಸಿಆರ್‌ಐ, ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.