ಏಕಾಏಕಿ ಎಳನೀರಿನ ಕೊರತೆ; ಗ್ರಾಹಕರ ಪರದಾಟ
ವಾರದಲ್ಲಿ ಎರಡು ದಿನ ಪೂರೈಕೆ; ವ್ಯಾಪಾರಿಗಳಿಗೆ ನಷ್ಟದ ಭೀತಿ
Team Udayavani, May 6, 2019, 6:00 AM IST
ಬಜಪೆ: ಗೂಡಂಗಡಿ,ಅಂಗಡಿಗಳ ಎದುರು ರಾಶಿ ರಾಶಿ ಕಾಣುತ್ತಿದ್ದ ಎಳನೀರು ಏಕಾಏಕಿ ಮಾಯವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಪರಿಸ್ಥಿತಿ ಇದೆ.ಗ್ರಾಹಕರು ಎಳನೀ ರಿಗಾಗಿ ಅಂಗಡಿ ಅಂಗಡಿ ಅಲೆದಾಡುವಂತಾಗಿದೆ. ಒಂದೆಡೆ ಕುಡಿಯುವ ನೀರಿನ ಅಭಾವ ಮತ್ತೂಂದೆಡೆ ಎಳ ನೀರಿನ ಅಭಾ ವವೂ ಹೆಚ್ಚಾಗ ತೊಡಗಿದೆ.
ಘಟ್ಟದಿಂದ ಬರುತ್ತಿದ್ದ ಎಳೆ ನೀರು ಏಕಾಏಕಿ ಕಡಿಮೆಯಾಗಿರು ವುದು ಇದಕ್ಕೆ ಕಾರಣವಾಗಿದೆ.ಅಲ್ಲದೇ ಜವಗಲ್‌ನಿಂದ ಬಿಡಿಬಿಡಿಯಾಗಿ ಬರುತ್ತಿದ್ದ ಎಳೆನೀರು ಈಗ ಎಲ್ಲಿಯೂ ಸಿಗು ತ್ತಿಲ್ಲ.ಆರ್.ಕೆ.ಪೇಟೆಯಿಂದ ಬರುವ ಗೊಂಚಲು ಎಳೆನೀರು ಮಾತ್ರ ಕೆಲವು ಅಂಗಡಿಗಳಲ್ಲಿ ಕಾಣುತ್ತಿದೆ. ಊರಿನ ಎಳೆನೀರು ಸಿಗುತ್ತಿಲ್ಲ. ಇಲ್ಲಿನ ತೆಂಗಿನ ಮರಗಳಲ್ಲಿ ತೆಂಗಿನಕಾಯಿಯಷ್ಟೇ ಕಾಣುತ್ತಿದೆ.
ಜವಗಲ್‌ನಲ್ಲಿ ಜಾತ್ರಾಮಹೋತ್ಸವವಾದ ಕಾರಣ ಅಲ್ಲಿಂದ ಎಳೆನೀರು ಬರುತ್ತಿಲ್ಲ ಎನ್ನುತ್ತಾರೆ ಎಳೆ ನೀರು ವ್ಯಾಪಾರಿಗಳು.ನಿತ್ಯವೂ ಟೆಂಪೋಗಳಲ್ಲಿ ಎಳೆ ನೀರು ಬೇಕಾ ಎಂದು ಕೇಳಿಕೊಂಡು ಬರುತ್ತಿದ್ದ ಎಳೆನೀರು ವ್ಯಾಪಾರಿಗಳು, ಅಂಗಡಿಯವರು ಬೇಡ ವೆಂದರೂ ಹಾಕಿ ಹೋಗುತ್ತಿದ್ದರು. ಈಗ ವಾರ ಕಳೆದರೂ ಅವರ ಸುಳಿವಿಲ್ಲ.
ಈಗ ಎಳೆನೀರು ಸಿಗುವುದೇ ಕಡಿಮೆ ಅದರಲ್ಲೂ ಹೆಚ್ಚಿ ನವು ಕಾಯಿಯಂತಿರುತ್ತದೆ. ಎಳೆನೀರು ಶೇ. 25ರಷ್ಟು ಮಾತ್ರ. ಇದರಿಂದ ಎಳೆನೀರು ಅಂಗಡಿ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಎಳೆ ನೀರು ಕಾಯಿಯಾಗಿರುವುದರಿಂದ ಅದು ಮಾರಾಟವಾಗದೇ ಉಳಿಯುತ್ತಿದೆ. ಕೆಲವೆಡೆ ಅದನ್ನು ಜ್ಯೂಸ್ ಮಾಡಿ ನೀಡಲಾಗುತ್ತದೆ. ಇದರಿಂದ ಕೊಂಚ ನಷ್ಟ ಕಡಿಮೆಯಾಗಲಿದೆ.
ಏಲಂನಲ್ಲಿ ಹೆಚ್ಚಿನ ದರ ಪಡೆದು ಉತ್ತಮ ಗುಣಮಟ್ಟದ ಎಳೆ ನೀರನ್ನು ಮುಂಬಾಯಿಗೆ ಕೊಂಡೊಯ್ಯಲಾಗುತ್ತಿದೆ. ಇದ ರಿಂದಾಗಿ ಇಲ್ಲಿ ಎಳೆನೀರಿನ ಅಭಾವ ಕಂಡು ಬಂದಿದೆ ಎನ್ನು ತ್ತಾರೆ ಸ್ಥಳೀಯ ವ್ಯಾಪಾರಿಗಳು.
ಕಬ್ಬಿನ ಜ್ಯೂಸ್‌ಗೆ ಬೇಡಿಕೆ
ಗ್ರಾಮ ಗ್ರಾಮಗಳಲ್ಲಿ ರಸ್ತೆ ಬದಿಗಳಲ್ಲಿ ಕಬ್ಬಿನ ಜ್ಯೂಸ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಎಳೆನೀರಿನ ಅಭಾವದಿಂದ ಈಗ ಕಬ್ಬಿನ ಜ್ಯೂಸ್‌ಗೆ ಹೆಚ್ಚಿನ ಬೇಡಿಕೆ ಬಂದಿದೆ.
ರಿಕ್ಷಾದ ಮೋಟಾರ್ ಅನ್ನು ಕಬ್ಬಿನ ಜ್ಯೂಸ್ ಯಂತ್ರಕ್ಕೆ ಫಿಟ್ ಮಾಡಿ, ಹಳೆಯ ಫ್ರಿಜ್‌ನಲ್ಲಿ ಮಂಜುಗಡ್ಡೆ ಇಡಲಾಗುತ್ತದೆ. ಇದರಿಂದ ಮಂಜುಗಡ್ಡೆ ಬೇಗ ನೀರಾಗುವುದಿಲ್ಲ.ಹೆಚ್ಚಾಗಿ ಸಕ್ಕರೆ ಕಬ್ಬುಗಳಿಂದಲೇ ಜ್ಯೂಸ್ ಮಾಡಿ ಕೊಡಲಾಗುತ್ತದೆ. ಉತ್ತರ ಪ್ರದೇಶದಿಂದ ಬಂದವರು ಒಬ್ಬ ಗುತ್ತಿಗೆದಾರನ ಕೆಳಗೆ ಕೆಲಸ ಮಾಡುತ್ತಾರೆ.ಗುತ್ತಿಗೆದಾರನೇ ಇವರಿಗೆ ಕಬ್ಬು ನೀಡುತ್ತಾನೆ. ಇದು ಬೇಸಿಗೆಯಲ್ಲಿ ದಣಿದವರಿಗೆ ಬಾಯಾರಿಕೆ ನೀಗಲು ಸಹಾಯ ಮಾಡುತ್ತದೆ.
ಈಗ ಬೇಡಿಕೆ ಹೆಚ್ಚು
ಮೇ ತಿಂಗಳಲ್ಲಿ ತುಳುನಾಡಿನಲ್ಲಿ ಭೂತ ಪರ್ವ (ಭೂತೂಗು) ಆರಂಭವಾಗುತ್ತದೆ. ಹೀಗಾಗಿ ಈಗ ಎಳನೀರಿಗೆ ಹೆಚ್ಚಿನ ಬೇಡಿಕೆ ಇದೆ. ಭೂತ ಪರ್ವಕ್ಕೆ ಅಗತ್ಯವಾಗಿ ಬೇಕಾಗಿರುವುದು ಎಳನೀರು.ಹೀಗಾಗಿ ಈ ಕಾರ್ಯಕ್ರಮಕ್ಕಾಗಿ ಎಳೆ ನೀರನ್ನು ಹುಡುಕಾಡುವಂತಾಗಿದೆ.
ಅಪಾರ ನಷ್ಟ
ನಿತ್ಯವೂ ಎಂಬಂತೆ ಎಳೆನೀರು ಟೆಂಪೋಗಳು ಬರುತ್ತಿದ್ದವು. ಈಗ ವಾರದಲ್ಲಿ 2 ದಿನ ಮಾತ್ರ ಬರುತ್ತಿದ್ದಾರೆ. ಮಳೆ ಬಾರದೇ ಎಳೆನೀರು ಬೇಗ ಕಾಯಿಯಾಗುತ್ತಿದೆ. ಇದು ಬೇಡಿ ಕೆಯಾಗದೆ ಹಾಗೇ ಉಳಿಯುತ್ತದೆ. ಇದರಿಂದ ಅಪಾರ ನಷ್ಟವಾಗುತ್ತಿದೆ. ಈಗ ಒಂದು ಎಳೆ ನೀರಿಗೆ 35ಗೆ. ಇದೆ.
– ಪದ್ಮ ನಾಭ ಕೆ.,
ಎಳನೀರು ವ್ಯಾಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.