ಯಕ್ಷಗಾನದಲ್ಲಿ ಚುನಾವಣಾ ಆಯೋಗದ ಒಡ್ಡೋಲಗ !


Team Udayavani, Apr 6, 2018, 2:32 PM IST

Yakshagana-21-3.jpg

ಮಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ನೀತಿ ಸಂಹಿತೆಯ ಬಿಸಿ ಎಲ್ಲ ಕಡೆಗೂ ತಟ್ಟತೊಡಗಿದೆ. ಅದರಲ್ಲೂ ಕರಾವಳಿಯ ಗಂಡುಕಲೆ, ಸಾವಿರಾರು ಜನರಿಗೆ ಜೀವನೋಪಾಯವಾಗಿರುವ ಯಕ್ಷಗಾನದ ಮೇಲೆಯೂ ನೀತಿಸಂಹಿತೆಯ ನೆರಳು ಬಿದ್ದಿದೆ. ದ.ಕ. ಜಿಲ್ಲೆಯ ಖಾಸಗಿ ಸ್ಥಳಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿ ಅನುಮತಿ ಪಡೆಯುವ ಅಗತ್ಯವಿಲ್ಲ; ಆದರೆ, ಸಾರ್ವಜನಿಕ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮವಾದರೆ ಅನುಮತಿಗಾಗಿ ಚುನಾವಣಾಧಿಕಾರಿಗಳಿಗೆ ಡಿಕ್ಲರೇಷನ್‌ ನೀಡಬೇಕಾಗುತ್ತದೆ ಎಂದು ದ.ಕ. ಜಿಲ್ಲಾಡಳಿತ ಈಗಾಗಲೇ ತಿಳಿಸಿದೆ. ಇದರಂತೆ ಸಾರ್ವಜನಿಕ ಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ಸಹಿತ ಯಾವುದೇ ರಾಜಕೀಯೇತರ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಸುವುದಿದ್ದರೆ ಸಂಬಂಧಪಟ್ಟ ಪೊಲೀಸ್‌ ಠಾಣೆಯ ಅನುಮತಿ ಪಡೆಯಬೇಕಾಗಿದೆ. ಆದರೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಚುನಾವಣಾಧಿಕಾರಿ ನೀಡುವ ಅನುಮತಿ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. 

ಯಕ್ಷಗಾನ ಪ್ರದರ್ಶನಗಳು ನಡೆಯುವ ಸಮಯವೇ ರಾತ್ರಿ 10ರ ಬಳಿಕ, ಹೀಗಾಗಿ ಯಕ್ಷಗಾನ ಆಯೋಜನೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಯಕ್ಷಗಾನ ಸಂಘಟಕರನ್ನು ಕಾಡುವಂತಾಗಿದೆ.  ದ.ಕ. ಜಿಲ್ಲೆಯಲ್ಲಿ ಎಲ್ಲೂ ಇದುವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಯಾಗಿಲ್ಲ. ಎಲ್ಲ ಮೇಳಗಳ ಪ್ರದರ್ಶನ ನಡೆಯುತ್ತಿವೆ. ಆದರೆ ನೀತಿ ಸಂಹಿತೆಯ ನಿಬಂಧನೆಗಳು ಯಕ್ಷಗಾನ ಸಂಘಟಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಚುನಾವಣಾ ಅಧಿಕಾರಿಗಳು ಇದನ್ನು ಬಗೆಹರಿಸಬೇಕಾದ ಅನಿವಾರ್ಯತೆ ಇದೆ. ಅನುಮತಿ ಪತ್ರ ಪಡೆಯುವಾಗ ಧ್ವನಿವರ್ಧಕ ಬಳಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಬೇಕಾಗಿದ್ದು, ಇದರಿಂದ ಯಕ್ಷಗಾನ ಆಯೋಜಕರಲ್ಲಿ ಗೊಂದಲ ಉಂಟಾಗಿದೆ. ಒಂದು ವೇಳೆ ಅನುಮತಿ ಪಡೆದ ಬಳಿಕ ಧ್ವನಿವರ್ಧಕ ಬಳಸಿದರೆ, ಯಾವುದೇ ರೀತಿಯ ಘಟನೆಗಳು ನಡೆದರೆ ಅದಕ್ಕೆ ಯಕ್ಷಗಾನ ಸಂಘಟಕರನ್ನೇ ಹೊಣೆಯಾಗಿಸಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಕಲೆಯ ನೆಲೆಯನ್ನು ಪರಿಗಣಿಸಿ ಯಕ್ಷಗಾನಕ್ಕೆ ಚುನಾವಣೆ ನೀತಿ ಸಂಹಿತೆಯ ನಿಯಮದಿಂದ ವಿನಾಯಿತಿ – ಸಡಿಲಿಕೆ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಆಟದ ಊಟಕ್ಕೂ ಇದೆ ಲೆಕ್ಕ !
ಕರಾವಳಿಯಲ್ಲಿ ಯಕ್ಷಗಾನ ಪ್ರದರ್ಶವೆಂದರೆ ವಿಶೇಷ ಸಿದ್ಧತೆ ಮಾಡಲಾಗುತ್ತದೆ. ಹಲವೆಡೆ ರಾತ್ರಿ ಆಟ ನೋಡಲು ಬರುವವರಿಗೆ ಊಟ ಮತ್ತು ಉಪಾಹಾರದ ವ್ಯವಸ್ಥೆಯನ್ನು ಆಟ ಆಡಿಸುವವರು ಏರ್ಪಡಿಸುತ್ತಾರೆ. ಈ ಬಾರಿ ಚುನಾವಣೆಯ ಹಿನ್ನೆಲೆಯಲ್ಲಿ ಆಟದ ಊಟದ ಮೇಲೂ ಆಯೋಗದ ಕಣ್ಣು ಬಿದ್ದಿದೆ. ಊಟ ಕೊಡುವುದಾದರೆ ಆಯೋಗದ ಗಮನಕ್ಕೆ ತನ್ನಿ ಎಂದು ದ.ಕ. ಜಿಲ್ಲಾಧಿಕಾರಿಗಳೇ ಸೂಚಿಸಿರುವುದರಿಂದ ಆಟದ ವಿವರ ಆಯೋಗದ ಗಮನಕ್ಕೆ ಬರಬೇಕಾಗುವುದು ಸ್ಪಷ್ಟವಾಗಿದೆ. ಊಟವನ್ನು ಯಾವುದೇ ರಾಜಕೀಯ ವ್ಯಕ್ತಿ ನೀಡುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಲು ಈ ಕ್ರಮಕ್ಕೆ ಮುಂದಾಗಲಾಗಿದೆ. ಊಟ ನೀಡುವುದಾದರೆ ಎಷ್ಟು ಜನರಿಗೆ, ಊಟ ಎಷ್ಟು ಗಂಟೆಗೆ ಆರಂಭ, ಏನೆಲ್ಲ ಇರುತ್ತದೆ ಎಂಬೆಲ್ಲ ವಿವರಗಳನ್ನು ಭರ್ತಿ ಮಾಡಿ ಕೊಡಬೇಕಾಗಿದೆ. ಭಕ್ತಿ ಶ್ರದ್ಧೆಯಿಂದ ಯಕ್ಷಗಾನ ಆಯೋಜಿಸುವವರಿಗೆ ಹಾಗೂ ಹರಕೆಯ ರೂಪದಲ್ಲಿ ಆಟ ಆಡಿಸುವವರಿಗೆ ಇವೆಲ್ಲವೂ ಕಿರಿಕಿರಿ ಉಂಟುಮಾಡಿವೆ. 

ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಯಕ್ಷಗಾನವನ್ನೇ ರದ್ದುಪಡಿಸಲಾಗಿತ್ತು. ಹೆಬ್ರಿಯಲ್ಲಿ ಯಕ್ಷಗಾನ ನಡೆಯುತ್ತಿದ್ದ ಸ್ಥಳಕ್ಕೆ ಚುನಾವಣಾಧಿಕಾರಿಗಳು ಆಗಮಿಸಿ, ರಾತ್ರಿ 10ರ ಬಳಿಕ ಮೈಕ್‌ ಬಳಸಬೇಡಿ ಎಂದ ಘಟನೆಯೂ ನಡೆದಿದೆ. ಕೋಟ ಪಡುಕೆರೆಯಿಂದಲೂ ಇಂತಹ ಘಟನೆ ವರದಿಯಾಗಿದೆ. ಮಂಗಳೂರಿನ ಕೇಂದ್ರ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ ಯಕ್ಷಗಾನ ಪ್ರದರ್ಶನ ಸಂದರ್ಭ ಅನುಮತಿ ಪಡೆಯದೆ ದ್ವಾರ ನಿರ್ಮಿಸಿದ್ದಾರೆ ಎಂಬ ಕಾರಣ ನೀಡಿ ಆಯೋಜಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೆಲವು ಕಡೆ ಯಕ್ಷಗಾನ ನಡೆಯುವ ಪ್ರದೇಶಕ್ಕೆ ಚುನಾವಣಾಧಿಕಾರಿಗಳು ಆಗಮಿಸಿ ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದಾರೆ. ಈಗಲೇ ಇಷ್ಟಿದ್ದರೆ ಮುಂದೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಅನಂತರದ ದಿನದಲ್ಲಿ ಎಂಥ ಪರಿಸ್ಥಿತಿ ಇರಬಹುದು ಎಂಬ ಸಹಜ ಆತಂಕವೂ ಎದುರಾಗಿದೆ.

ಕರಾವಳಿ ಭಾಗದಲ್ಲಿ 40ಕ್ಕೂ ಹೆಚ್ಚು ಮೇಳಗಳು ನಿರಂತರ ಪ್ರದರ್ಶನಗಳನ್ನು ನೀಡುತ್ತಿವೆ. ದೀಪಾವಳಿಗೆ ಹೊರಡುವ ಮೇಳಗಳು ವೃಷಭ ಮಾಸದ ಹತ್ತನೇ ದಿನವಾದ ಪತ್ತನಾಜೆಯವರೆಗೆ (ಈ ಬಾರಿ ಮೇ 24) ಸುಮಾರು 160 ದಿನಗಳಲ್ಲಿ ಸಾವಿರಾರು ಪ್ರದರ್ಶನಗಳನ್ನು ನೀಡುತ್ತವೆ. ಇದರ ಜತೆಗೆ ಹವ್ಯಾಸಿ ಸಂಘಟನೆಗಳೂ ಯಕ್ಷಗಾನ ಪ್ರದರ್ಶಿಸುತ್ತವೆ. ಪ್ರತಿದಿನ ನೂರಕ್ಕೂ ಹೆಚ್ಚು ಕಡೆ ಯಕ್ಷಗಾನ ಪ್ರದರ್ಶನ ಖಾಯಂ ಆಗಿ ಇರುತ್ತದೆ. ಬಯಲಾಟ, ಟೆಂಟ್‌ ಮೇಳ, ಹವ್ಯಾಸಿ ತಂಡಗಳಿಂದ ವಿವಿಧ ಕಾರ್ಯಕ್ರಮಗಳ ಅಂಗವಾಗಿ ಯಕ್ಷಗಾನ ಪ್ರದರ್ಶನವಿರುತ್ತದೆ. ಯಕ್ಷಗಾನವನ್ನು ಸಾರ್ವಜನಿಕ ಸಮಾರಂಭ ಎಂದು ಪರಿಗಣಿಸಿ, ಮುಂಚಿತವಾಗಿ ಅನುಮತಿ ಪಡೆಯಬೇಕು ಎಂಬ ನೆಲೆಯಿಂದ ಚುನಾವಣಾ ಆಯೋಗದ ನಿಯಮ ಯಕ್ಷಗಾನ ಆಯೋಜಕರಿಗೆ ತಲೆನೋವಾಗಿ ಪರಿಣಮಿಸಿದೆ. 

ಆಯೋಗದ ಪ್ರಚಾರಕ್ಕೆ ಯಕ್ಷಗಾನವೇ ಬೇಕು!
ಯಕ್ಷಗಾನದ ಮೇಲೆ ಚುನಾವಣೆ ಆಯೋಗ ಹದ್ದಿನ ಕಣ್ಣಿಟ್ಟಿರುವುದು ಒಂದೆಡೆ, ಇನ್ನೊಂದೆಡೆ ಯಕ್ಷಗಾನದ ಮೂಲಕವೇ ಕರಾವಳಿಯಲ್ಲಿ ಮತದಾನ ಜಾಗೃತಿಯ ಕಾರ್ಯಕ್ರಮವನ್ನು ಆಯೋಗ ಕೈಗೊಂಡಿದೆ. ‘ಮತದಾನ ಮಾಡಿ’ ಎಂದು ಚುನಾವಣಾ ಆಯೋಗ ಮಂಗಳೂರಿನ ಹಲವೆಡೆ ಅಳವಡಿಸಿರುವ ಹೋರ್ಡಿಂಗ್‌ಗಳಲ್ಲಿ ಯಕ್ಷಗಾನ ವೇಷದ ಚಿತ್ರವನ್ನೇ ಬಳಸಲಾಗಿದೆ. ಇದರ ಜತೆಗೆ ದ.ಕ. ಜಿಲ್ಲೆಯಲ್ಲಿ ಮತದಾನ ಜಾಗೃತಿಗೆ ‘ಸ್ವೀಪ್‌’ ಮೂಲಕ ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರ ಯಕ್ಷಗಾನದ ಹಾಡನ್ನು ಬಳಸಿಕೊಳ್ಳಲಾಗಿದೆ.

ಡಿಕ್ಲರೇಷನ್‌ ಅಗತ್ಯ
ರಾಜಕೀಯ ಪಕ್ಷ ಹಾಗೂ ಜನ ಪ್ರತಿನಿಧಿಗಳ ಎಲ್ಲ ಚಲನವಲನ, ನಡವಳಿಕೆಗಳ ಬಗ್ಗೆ ಪೂರ್ಣವಾಗಿ ಮಾಹಿತಿ ಕಲೆಹಾಕಲಾಗುವುದು. ಇದು ಚುನಾವಣಾ ಆಯೋಗದ ಕರ್ತವ್ಯ. ಆದ್ದರಿಂದ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಆಯೋಗ ಸೂಕ್ಷ್ಮವಾಗಿ ಗಮನಿಸುತ್ತದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಏರ್ಪಡಿಸುವವರು ಡಿಕ್ಲರೇಷನ್‌ ನೀಡಬೇಕಾಗುತ್ತದೆ. ಯಕ್ಷಗಾನ ಸಂದರ್ಭ ನೀಡುವ ಊಟದ ಕುರಿತಾಗಿಯೂ ಪೂರ್ಣ ಮಾಹಿತಿಯನ್ನು ಸಂಘಟಕರು ನೀಡಬೇಕಾಗುತ್ತದೆ.
– ಶಶಿಕಾಂತ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

— ದಿನೇಶ್‌ ಇರಾ

ಟಾಪ್ ನ್ಯೂಸ್

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್‌; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

5

Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು

4

Kulur: ಗೈಲ್‌ ಪೈಪ್‌ಲೈನ್‌ ಕಾಮಗಾರಿ; ಹೆದ್ದಾರಿ ಕುಸಿತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.