ಕರಾವಳಿಯಲ್ಲಿ ಚಳಿಯ ತೀವ್ರತೆ; ಸಾಂಕ್ರಾಮಿಕ ರೋಗದ ಭೀತಿ… ನಿಮ್ಮ ಜೀವನ ಶೈಲಿ ಹೀಗಿರಲಿ
Team Udayavani, Jan 9, 2023, 7:45 AM IST
ಮಂಗಳೂರು : ಕರಾವಳಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗು ತ್ತಿದ್ದು, ಕನಿಷ್ಠ ಉಷ್ಣಾಂಶ ಇಳಿಮುಖ ಗೊಳ್ಳುತ್ತಿದೆ. ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಬೆಳಗ್ಗೆ, ಸಂಜೆ ಶೀತ ಗಾಳಿ ಜತೆಗೆ ಇಬ್ಬನಿ ಬೀಳುತ್ತಿದ್ದು, ಜ್ವರ, ಶೀತ- ಕೆಮ್ಮು, ಗಂಟಲು ನೋವು ಇತ್ಯಾದಿ ಕಾಣಿಸಿಕೊಳ್ಳುತ್ತಿದೆ. ಅಲರ್ಜಿ, ಅಸ್ತಮಾ ರೋಗಿಗಳು ಮತ್ತಷ್ಟು ಎಚ್ಚರ ವಹಿಸಬೇಕಾದ ಆವಶ್ಯಕತೆ ಇದೆ. ಚಳಿಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳ ಬೆಳವಣಿಗೆ ಹೆಚ್ಚಾಗಿ ರೋಗನಿರೋಧಕ ಶಕ್ತಿ ಕುಂದುವ ಅಪಾಯವಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ನಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕಿದೆ. ಐಸ್‌ಕ್ರೀಂ ಸಹಿತ ತಂಪು ಆಹಾರ ದಿಂದ ದೂರ ಇರುವುದು, ಕರಿದ ಪದಾರ್ಥಗಳನ್ನು ಹೆಚ್ಚು ಬಳಸದೇ ಇರುವುದು ಸೂಕ್ತ.
ಜಿಲ್ಲೆಯಲ್ಲಿ ಎಚ್1 ಎನ್1, ಮಲೇರಿಯಾಕ್ಕೆ ತುತ್ತಾಗುವವರ ಸಂಖ್ಯೆ ಕಡಿಮೆಯಾಗಿದೆ. ಒಂದು ವೇಳೆ ಮಕ್ಕಳಲ್ಲಿ ವೈರಾಣು ಜ್ವರ ಕಾಣಿಸಿಕೊಂಡರೆ ಶಾಲೆಗೆ ಕಳುಹಿಸ ಬಾರದು. ಜ್ವರ ಇದ್ದವರು ಕರವಸ್ತ್ರ, ಟವೆಲ್ ಬಳಸಿ ರೋಗಾಣು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂಬುದು ವೈದ್ಯರ ಸಲಹೆ.
ಜೀವನ ಶೈಲಿ ಹೀಗಿರಲಿ
– ಹೊರಗಿನ ಆಹಾರ ಸೇವನೆ ಮಿತವಾಗಿರಲಿ
– ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ಬೆಚ್ಚಗಿನ ಉಡುಪು ಧರಿಸಿ
– ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ
– ಸಮಯಕ್ಕೆ ಸರಿಯಾಗಿ ಮಿತ ಆಹಾರ ಸೇವಿಸಿ
– ಕುದಿಸಿ ಆರಿಸಿದ ನೀರು, ಬಿಸಿ ಆಹಾರವನ್ನು ಸೇವಿಸಿ
– ಚಳಿಗಾಲದಲ್ಲಿ ಸಂಧಿವಾತವನ್ನು ತಪ್ಪಿಸಲು ದೇಹ ಬೆಚ್ಚಗಿರುವಂತೆ ನೋಡಿಕೊಳ್ಳಿ, ವ್ಯಾಯಾಮ ಮಾಡಿ
– ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ
ಚಳಿಗಾಲದಲ್ಲಿ ವೈರಲ್ ಜ್ವರದ ಸಾಧ್ಯತೆ ಇದೆ. ಡೆಂಗ್ಯೂ ತೀವ್ರತೆ ಕಡಿಮೆ ಇದೆ. ಆದರೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು.
– ನವೀನ್ ಚಂದ್ರ ಕುಲಾಲ್, ಜಿಲ್ಲಾ ರೋಹವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.