ಕಾಲೇಜು ಆವರಣ ಗೋಡೆ ಕುಸಿತ
Team Udayavani, May 11, 2018, 11:20 AM IST
ಹಳೆಯಂಗಡಿ: ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಳೆಯಂಗಡಿ ಪ್ರಥಮ ದರ್ಜೆ ಸರಕಾರಿ ಕಾಲೇಜಿನ ಆವರಣ ಗೋಡೆ ಕುಸಿದು ಅಂದಾಜು 1.5 ಲಕ್ಷದಷ್ಟು ನಷ್ಟ ಸಂಭವಿಸಿದೆ.
ಕಾಲೇಜಿನ ಆವರಣದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಈ ಕಟ್ಟಡದ ಪಶ್ಚಿಮ ದಿಕ್ಕಿನಲ್ಲಿ ಮಳೆ ನೀರು ಸೂಕ್ತವಾಗಿ ಹರಿಯದೇ ನೇರವಾಗಿ ಪಕ್ಕದ ಆವರಣ ಗೋಡೆಯನ್ನೇ ಕೆಡವಿದೆ. ಕೆಸರು ಮಿಶ್ರಿತ ನೀರೆಲ್ಲ ಇಂದಿರಾನಗರದ ವಸತಿ ಪ್ರದೇಶಕ್ಕೆ ಸಂಚರಿಸುವ ರಸ್ತೆಗೆ ಹರಿದು ರಸ್ತೆಯೆಲ್ಲ ಕೆಸರು ಮಿಶ್ರಿತಗೊಂಡಿದೆ.
ಸ್ಥಳೀಯ ಇಂದಿರಾನಗರದ ಫ್ರೆಂಡ್ಸ್ ಕ್ಲಬ್ ನ ಸದಸ್ಯರು ಬೆಳಗ್ಗೆಯಿಂದಲೇ ಶ್ರಮದಾನ ನಡೆಸಿ ರಸ್ತೆಯಲ್ಲಿನ ಕೆಸರು ಮಿಶ್ರಿತ ನೀರನ್ನು ಚರಂಡಿಯ ಮೂಲಕ ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟ ಸಾಮಾಜಿಕ ಕಳಕಳಿಯ ಕಾರ್ಯ ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ.
ಸ್ಥಳಕ್ಕೆ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಚ್. ವಸಂತ ಬೆರ್ನಾರ್ಡ್, ಕಾಲೇಜಿನ ಆಡಳಿತ ಮಂಡಳಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಪರಿಹಾರದ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.