ಬಾಲಕಿಯರನ್ನು ಬಳಸಿ ವೇಶ್ಯಾವಾಟಿಕೆ ಪ್ರಕರಣ: ಮಾಲ್, ಪಾರ್ಕ್, ಥಿಯೇಟರ್‌ಗಳಲ್ಲಿ ಆಮಿಷ!
ವಿದ್ಯಾರ್ಥಿನಿಯರೇ ಈ ಜಾಲದ ಬಗ್ಗೆ ಎಚ್ಚರವಿರಲಿ!
Team Udayavani, Mar 27, 2022, 8:35 AM IST
ಮಂಗಳೂರು: “ಖರ್ಚಿಗೆ ಹಣ ಬೇಕಾ, ಶಾಪಿಂಗ್ ಮಾಡಬೇಕಾ, ಸಿನೆಮಾ ನೋಡಬೇಕಾ…?’
ವೇಶ್ಯಾವಾಟಿಕೆ ಜಾಲಕ್ಕೆ ವಿದ್ಯಾರ್ಥಿನಿಯರನ್ನು ಸೆಳೆಯಲು ಪಿಂಪ್ ಗಳು (ಬ್ರೋಕರ್) ನೀಡುವ ಆಫರ್‌ಗಳು ಇವು!
ಜಾಲಕ್ಕೆ ಬಡವರ್ಗದ ಮಕ್ಕಳು!
ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು (ವಿದ್ಯಾರ್ಥಿನಿಯರು) ಬಳಸಿ ನಡೆಯು ತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಕಳೆದ ತಿಂಗಳು ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು ಪೊಲೀಸ್ ತನಿಖೆ ಮುಂದುವರಿದಿದೆ. ದಂಧೆಗೆ ಬಾಲಕಿಯರನ್ನು ಕರೆತರಲು ಪಿಂಪ್‌ಗ್ಳು ಮಾಲ್, ಸಿನೆಮಾ ಥಿಯೇಟರ್, ಹೊಟೇಲ್, ಪಾರ್ಕ್ ಮೊದಲಾದೆಡೆ ಹಲವು ದಿನಗಳ ಕಾಲ ಹೊಂಚು ಹಾಕಿರುವುದು ತನಿಖೆ ವೇಳೆ ಗೊತ್ತಾಗಿದೆ. ಅಲ್ಲದೆ ಹೆಚ್ಚಾಗಿ ಬಡವರ್ಗದ ವಿದ್ಯಾರ್ಥಿನಿಯರನ್ನೇ ಗುರಿ ಮಾಡಿರುವುದು ತಿಳಿದುಬಂದಿದೆ.
ವಿದ್ಯಾರ್ಥಿನಿಯರನ್ನು ನಿರಂತರವಾಗಿ ಗಮನಿಸುತ್ತಾ ಅವರ ಬೇಕು-ಬೇಡಗಳ ಬಗ್ಗೆ ತಿಳಿದು ಮಹಿಳಾ ಪಿಂಪ್‌ಗ್ಳು ಬಲೆ ಬೀಸುತ್ತಾರೆ. ಮೊದಲಿಗೆ ಪರಿಚಯಸ್ಥರಂತೆ ವರ್ತಿಸುತ್ತಾರೆ. ಅದರಲ್ಲಿ ಯಶಸ್ವಿಯಾದರೆ ಮುಂದುವರಿಯುತ್ತಾರೆ. ಇಲ್ಲವಾದರೆ ಸಮಸ್ಯೆ ಇಲ್ಲವೇ ಸಹಾಯದ ಬಗ್ಗೆ ಮಾತು ಆರಂಭಿಸುತ್ತಾರೆ. ಹೆಣ್ಣು ಮಕ್ಕಳಿಗೆ ಹಿತವಾಗುವಂತೆ ಆತ್ಮೀಯವಾಗಿ ಮಾತಿಗಿಳಿದು ಅವರ ಸಂಪರ್ಕ ಸಾಧಿಸುತ್ತಾರೆ. ಮುಂದೆ “ಗೆಳೆತನ’ ಸಾಧಿಸಿ ಕೆಲವೊಂದು ಸಹಾಯವನ್ನೂ ಪಿಂಪ್‌ಗ್ಳು ಮಾಡುತ್ತಾರೆ. ಅಗತ್ಯವಿರುವ ಹಣ, ಬಟ್ಟೆ ಇನ್ನಿತರ ಗಿಫ್ಟ್ ಅನ್ನು ಕೊಡುತ್ತಾರೆ. ಮಾಲ್, ಹೊಟೇಲ್‌ಗಳಿಗೆ ಕರೆದೊಯ್ದು ಎಲ್ಲ ಬಿಲ್‌ಗಳನ್ನು ಪಾವತಿಸುತ್ತಾರೆ. ಐಷಾರಾಮಿ ಬದುಕಿನ ರುಚಿ ಹಿಡಿಸುತ್ತಾರೆ. ಆ ಬಳಿಕ ಹೀನ ಕೃತ್ಯ ಆರಂಭಿಸುತ್ತಾರೆ. ಬಲೆಗೆ ಬಿದ್ದ ಬಾಲಕಿಯ ಮೂಲಕ ಸಾಧ್ಯವಾದಷ್ಟು ಇತರ ಬಾಲಕಿಯರನ್ನು ತಮ್ಮ ತೆಕ್ಕೆಗೆ ಸೆಳೆಯಲು ತಂತ್ರ ಹೆಣೆಯುತ್ತಾರೆ.
ಬ್ಲ್ಯಾಕ್ ಮೇಲ್ ತಂತ್ರ
ಆರಂಭದಲ್ಲಿ ಕೇಳಿದ್ದನ್ನೆಲ್ಲ ಕೊಡುವ ದಂಧೆ ಕೋರರು ಅನಂತರ ಬಾಲಕಿಯರ ಫೋಟೋ, ವೀಡಿಯೋವನ್ನು ತೆಗೆದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಆರಂಭಿಸುತ್ತಾರೆ. ಆಗ ಸಂತ್ರಸ್ತೆಯರು ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ. ಇದಕ್ಕೆ ಅಂಜದೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಬೇಕು. ಅವರು ಗೌಪ್ಯತೆಯಿಂದ ಕಾರ್ಯಾಚರಣೆ ನಡೆಸುತ್ತಾರೆ.
ಜಾಲದಲ್ಲಿ ಪ್ರಭಾವಿಗಳು
ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಈಗಾ ಗಲೇ 16 ಮಂದಿಯನ್ನು ಬಂಧಿಸಿದ್ದಾರೆ. ಪೋಕೊÕà ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಧಿತರಲ್ಲಿ ಮೂಡುಬಿದಿರೆ, ಉಳ್ಳಾಲ, ಕಾಸರ ಗೋಡಿನವರಿದ್ದಾರೆ. ವಿವಿಧ ರಾಜಕೀಯ ಮುಖಂಡರ ಸಹವರ್ತಿಗಳು, ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿರುವವರು ಕೂಡ ಸೇರಿದ್ದಾರೆ. ಇನ್ನೂ ಹಲವು ಪ್ರಭಾವಿಗಳು ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆನ್ನಲಾಗಿದೆ.
ಭಯ ಬಿಟ್ಟು ಹೆತ್ತವರಿಗೆ ತಿಳಿಸಿ
ಆಮಿಷ ಮತ್ತು ಬ್ಲ್ಯಾಕ್‌ಮೇಲ್ ಗೆ
ಒಳಗಾಗಿ ಬಾಲಕಿಯರು ಇಂತಹ ಜಾಲಕ್ಕೆ ಸಿಲುಕುತ್ತಿದ್ದಾರೆ. ಸಾಮಾನ್ಯವಾಗಿ ಹೆತ್ತವರು ಮತ್ತು ಮಕ್ಕಳ ನಡುವೆ ಸಂವಹನ ಸರಿಯಾಗಿ ಇಲ್ಲದೆ ಇಂತಹ ತೊಂದರೆಗಳು ಉಂಟಾಗುತ್ತವೆ. ಈ ರೀತಿಯ ಜಾಲಕ್ಕೆ ಬಿದ್ದಿದ್ದರೆ ಮಾನಕ್ಕೆ ಅಂಜಿ ಸುಮ್ಮನಿರದೆ ಹೆತ್ತವರಿಗೆ ಅಥವಾ ಶಿಕ್ಷಕರಿಗೆ ತಿಳಿಸಬೇಕು. ಗೌಪ್ಯವಾಗಿಯೇ ಕಾರ್ಯಾಚರಣೆ ನಡೆಸಲಾಗುತ್ತದೆ. ತೊಂದರೆ ಗೊಳಗಾದವರ ಮಾಹಿತಿಯನ್ನು ಕೂಡ ಯಾವುದೇ ಕಾರಣಕ್ಕೂ ಪೊಲೀಸರು ಬಹಿರಂಗಪಡಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿ ಇತರರು ಜಾಲಕ್ಕೆ ಬೀಳದಂತೆ ತಡೆಯಲು ಸಾಧ್ಯವಾಗುತ್ತದೆ.
– ಹರಿರಾಂ ಶಂಕರ್, ಡಿಸಿಪಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.