ಆಷಾಢ ಮಾಸದ ಖಾದ್ಯ ಮರ ಕೆಸು


Team Udayavani, Jul 9, 2017, 3:15 AM IST

08ksde12a.jpg

ಮರಕೆಸು ನೆಲದಲ್ಲಿ ಬೆಳೆಯದೆ ಮರದಲ್ಲಿ ಬೆಳೆ ಯುವ ಸಸ್ಯ. ತುಳುವಿನಲ್ಲಿ ಇದನ್ನು ಮರತೇವು ಎಂದರೆ, ಗೌಡ ಸಾರಸ್ವತರಿಗೆ ಇದು ಮರಾಳ್ವಾಪಾನ್‌. ಕೆಸುವಿನಲ್ಲಿ ಅನೇಕ ಪ್ರಭೇದಗಳಿದ್ದು ಸಾಮಾನ್ಯವಾಗಿ ನಾಲ್ಕು ವಿಭಾಗಗಳನ್ನು ಗುರುತಿಸಬಹುದು.

ಕರಿ ಕೆಸು- ಇದರ ದಂಟು ಕಪ್ಪಗಿದ್ದು, ಎಲೆಯೂ ಹಸುರು ಮಿಶ್ರಿತ ಕಪ್ಪಾಗಿದೆ. ಇನ್ನೊಂದು ಬಿಳಿ ಕೆಸು- ತಿಳಿ ಹಸುರು ಬಣ್ಣದ ಕಾಂಡ ಮತ್ತು ಹಸುರು ಎಲೆ. ಚುಕ್ಕೆ ಕೆಸು- ಇದರ ಎಲೆಗಳಲ್ಲಿ ಕೆಂಪು ಬಣ್ಣದ ಚುಕ್ಕಿಗಳಿವೆ. ಇವು ನೆಲದಲ್ಲೇ ಬೆಳೆಯುವ ಸಸ್ಯವಾಗಿವೆ. ಮರಕೆಸು ಮರದ ಪೊಟರೆಯಲ್ಲಿ ಚಿಗುರಿ ಬೆಳೆಯುವ ಆರ್ಕಿಡ್‌ ಸಸ್ಯದಂತೆ ಬಳ್ಳಿಯಂತೆ ಹಬ್ಬಿ ಉದ್ದುದ್ದ ಹೃದಾಯಾಕಾರದ ಎಲೆ ಹೊಂದಿರುವ ಬಳ್ಳಿ ಸಸ್ಯ. ಇದರ ಎಲೆಯ ಮೇಲ್ಭಾಗ ಕಡು ಹಸುರು. ಅಡಿಭಾಗ ತಿಳಿ ಕಂದು ಬಣ್ಣವಾಗಿದ್ದು ಎಲೆ ದಪ್ಪಗಿರುತ್ತದೆ.

ಮಳೆಗಾಲ ಆರಂಭವಾದಂತೆ…
ಮರ ಕೆಸು ಮಳೆಗಾಲದಲ್ಲಿ ಅದರಲ್ಲೂ ಆಷಾಢ ಮಾಸದಲ್ಲಿ ವಿಪರೀತ ಬೆಳೆಯುತ್ತದೆ. ಮರದ ಪೊಟರೆ ಗಳಲ್ಲಿ ಬೇಸಗೆ ಕಾಲದಲ್ಲಿ ಹುದುಗಿದ್ದ ಪುಟ್ಟ ಪುಟ್ಟ ಗೆಡ್ಡೆಗಳು ಮಳೆ ಬೀಳಲಾರಂಭಿಸಿದಂತೆ ಚಿಗುರಲು ಪ್ರಾರಂಭಿಸಿ ನೋಡು ನೋಡುತ್ತಿದ್ದಂತೆ ಮರದ ಮೇಲಕ್ಕೆ ಹಬ್ಬಿ ಎಲೆ ಬಿಡಲು ಪ್ರಾರಂಭಿಸುತ್ತವೆ. ಅಗಲವಾದ ಎಲೆ ಬೆಳೆದಂತೆ ಇದನ್ನು ಕತ್ತರಿಸಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಒಂದು ಕಟ್ಟದಲ್ಲಿ 5 ರಿಂದ 6 ಎಲೆ ಇರಿಸಿ 30 ರೂಪಾಯಿ ದರ ಪಡೆಯುತ್ತಾರೆ.
ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ, ಸಂಪಾಜೆ, ಚಿಕ್ಕಮಗಳೂರು ಜಿಲ್ಲೆಯ ಬಣಕಲ್‌, ಕೊಟ್ಟಿಗೆ ಹಾರ, ಹಾಸನ ಜಿಲ್ಲೆಯ ಸಕಲೇಶಪುರ, ಮಲೆನಾಡಿನ ಆಗುಂಬೆ ಪರಿಸರದ ಕಾಡುಗಳ ಮರದಲ್ಲಿ ಮರ ಕೆಸು ವಿಪರೀತ ಬೆಳೆಯುತ್ತಿದ್ದು ಇಲ್ಲಿಂದ ಮಂಗಳೂರು, ಉಡುಪಿ, ಕಾಸರಗೋಡು ಭಾಗಕ್ಕೆ ಬರುತ್ತವೆ. ಒಂದು ಬಾರಿಗೆ  ಈ ಭಾಗದಿಂದ ಲಕ್ಷದಷ್ಟು ಎಲೆಗಳು ಮಾರಕಟ್ಟೆಗೆ ಬರುತ್ತಿದ್ದು, ದರ ದುಬಾರಿಯಾದರೂ ಸೀಸನ್‌ ಬೆಳೆಯಾದ ಕಾರಣ ಗಿರಾಕಿಗಳು ನಾ ಮುಂದು ತಾ ಮುಂದು ಎಂದು ಖರೀದಿಸುತ್ತಾರೆ. ಆಷಾಢ‌ ಮಾಸ ಕಳೆದರೆ ಇದರ ಲಭ್ಯತೆ ಕಮ್ಮಿಯಾಗುತ್ತಿದ್ದು ಮತ್ತೆ ಯಥೇತ್ಛ ದೊರೆಯಲು ಮುಂದಿನ ವರ್ಷದ ವರೆಗೆ ಕಾಯಬೇಕಾಗುತ್ತದೆ.

ಮರ ಕೆಸು ಪತ್ರೊಡೆ ಮಾಡಲು ಉಪಯೋಗಿಸುತ್ತಿ ದ್ದರೂ ಗೌಡ ಸಾರಸ್ವತರು ಇದರಿಂದ ಪತ್ರೊಡೆ ಪೋಡಿ ಮಾಡಲು ಹೆಚ್ಚು ಇಷ್ಟ ಪಡುತ್ತಾರೆ. ಪತ್ರೊಡೆಯಂತೆ ಇದನ್ನು ಸುರುಳಿ ಸುತ್ತಿ, ಬಳಿಕ ಅಡ್ಡಲಾಗಿ ಚಕ್ರದಂತೆ ತುಂಡು ಮಾಡಿ ಎಣ್ಣೆಯಲ್ಲಿ ಕರಿದರೆ ಪತ್ರೊಡೆ ಪೋಡಿ ಯಾಯಿತು. ತವಾದಲ್ಲಿ ಹುರಿದು ಇದನ್ನು ಮಾಡು ವುದಿದೆ. ಇತರ ಕೆಸುವಿಗಿಂತ ಪೋಡಿ ಮಾಡಲು ಹೆಚ್ಚು ಸ್ವಾದಿಷ್ಟ ಎಲೆ ಮರ ಕೆಸು. ಇದನ್ನು ಕರಿಯಲು ಧೂಪದ ಎಣ್ಣೆ ಸೂಕ್ತ ಅನ್ನುತ್ತಾರೆ. ಕೆಸು ಉಷ್ಣವಾಗಿದ್ದು ಧೂಪದೆಣ್ಣೆ ತಂಪು ನೀಡುತ್ತದೆ ಅನ್ನುವ ಕಾರಣಕ್ಕೆ ಇದರ ಪ್ರಯೋಗ.

ಮರಗಳ ನಾಶದಿಂದ ಕಣ್ಮರೆ
ಹಿಂದೆ ಕಾಸರಗೋಡಿನ ರಸ್ತೆ ಬದಿಗಳಲ್ಲಿ ಗೋಳಿ ಮರಗಳ ಉದ್ದುದ್ದ ಸಾಲುಗಳಿದ್ದುವು. ಆ ದಿನಗಳಲ್ಲಿ ಈ ಮರದಲ್ಲಿ ಯಥೇತ್ಛ ಮರ ಕೆಸು ಪುಟಿಯುತ್ತಿತ್ತು. ಇಲ್ಲಿಂದಲೇ ಅನೇಕರು ಪುಕ್ಕಟೆಯಾಗಿ ಎಲೆ ಕಿತ್ತು ಮಳೆಗಾಲದ ರುಚಿ ರುಚಿ ಪಲ್ಯ ಮಾಡುತ್ತಿದ್ದರು. ಇದೀಗ ಗೋಳಿ ಮರಗಳು ರಸ್ತೆ ವಿಸ್ತರಣೆಯಿಂದ ನೆಲಕ್ಕುರುಳಿದ್ದು ಮರ ಕೆಸು ಸಂತತಿ ಕಾಲ್ಕಿತ್ತಿದೆ.

ಗರಿಗರಿ ಪತ್ರೊಡೆ ಪೋಡಿ
ಬದರಿನಾಥ ಯಾತ್ರೆಗೆ ಹೊಸ ದಿಲ್ಲಿಯಿಂದ ಬಸ್‌ನಲ್ಲಿ ಹೋಗುತ್ತಿದ್ದ ವೇಳೆ ರುದ್ರ ಪ್ರಯಾಗ – ಗಡ್ವಾಲ್‌ ದಾಟುವ ಸಮಯ ನಮ್ಮ ಜತೆ ಬಸ್ಸಿನಲ್ಲಿದ್ದ ಬಾಣಸಿಗರ ಕಣ್ಣಿಗೆ ಮರಗಳಲ್ಲಿ ಬೆಳೆದ ಮರ ಕೆಸು ಕಂಡು ಬಂತು. ಬಸ್ಸು ನಿಲ್ಲಿಸಿ ಮರ ಹತ್ತಿ ಮರ ಕೆಸು ಎಲೆಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ತಂದು ರಾತ್ರಿ ಊಟಕ್ಕೆ ಗರಿಗರಿ ಪತ್ರೊಡೆ ಪೋಡಿ ಮಾಡಿ ಬಡಿಸಿದ್ದರು. ಹಿಮಾಲಯದಲ್ಲಿ ಕಾಡುಗಳಲ್ಲೂ ಈ ಬೆಳೆ ಬೆಳೆಯುತ್ತಿದೆ ಎಂದು ಆಗಲೇ ತಿಳಿದದ್ದು. 

ಮರ ಕೆಸುವಿನ ಔಷಧೀಯ ಗುಣ 
ಮರ ಕೆಸು ಆಷಾಢ ಮಾಸದಲ್ಲೆ ಬೆಳೆಯುತ್ತಿದ್ದು ಈ ಕಾರಣಕ್ಕೆ ಔಷಧೀಯ ಗುಣ ಹೊಂದಿವೆ ಎಂದು ನಾಟೀ ವೈದ್ಯ ಪದ್ಧತಿ ತಿಳಿಸುತ್ತಿದೆ. ಹೊಟ್ಟೆಯಲ್ಲಿ ಸೇರಿರುವ ನಂಜು, ವಿಷಕಾರಕ ಅಂಶ ಇದರ ಸೇವನೆಯಿಂದ ಗುಣವಾಗುವುದಂತೆ. ಕಾಲಿಗೆ ಮುಳ್ಳು ಚುಚ್ಚಿದರೆ ಮರ ಕೆಸುವಿನ ಪುಟ್ಟ ಗೆಡ್ಡೆಯನ್ನು ಸೀಳಿ ತುಂಡನ್ನು ಆ ಭಾಗದಲ್ಲಿ ಕಟ್ಟಿ ಬಿಟ್ಟರೆ ಮರುದಿನ ಮುಳ್ಳು ಗಡ್ಡೆಯೊಂದಿಗೆ ಹೊರ ಬರುತ್ತದೆ. ಹಿಂದೆ ನಾಟಿ ವೈದ್ಯರು ಇದನ್ನೇ ಪ್ರಯೋಗಿ ಸುತ್ತಿದ್ದರೆಂದು ಹಿರಿಯರು ತಿಳಿಸುತ್ತಾರೆ. ದುಬಾರಿ ಬೆಲೆಯ ಮರ ಕೆಸು ಮಾರುಕಟ್ಟೆಗೆ ಬಂದರೆ ಚಪಲದ ನಾಲಗೆಗೆ ಸುಗ್ಗಿಯೋ ಸುಗ್ಗಿ !

– ರಾಮದಾಸ್‌ ಕಾಸರಗೋಡು

ಟಾಪ್ ನ್ಯೂಸ್

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.