ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಗೂಡುದೀಪಗಳು
Team Udayavani, Nov 5, 2018, 11:10 AM IST
ಬೆಳ್ತಂಗಡಿ: ವಿಶೇಷ ಹಬ್ಬವೆಂದೇ ಖ್ಯಾತಿ ಪಡೆದಿರುವ ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭಗೊಂಡಿದ್ದು, ಎಲ್ಲೆಡೆಯೂ ಹಬ್ಬದ ವಾತಾವರಣ ಮನೆ ಮಾಡಿದೆ. ಸಿದ್ಧತೆಯೂ ಆರಂಭಗೊಂಡಿದೆ. ದೀಪಾವಳಿ ಎಂದಾಕ್ಷಣ ನೆನಪಿಗೆ ಬರುವುದು ಪಟಾಕಿಗಳ ಸದ್ದು, ಹಣತೆಗಳ ಸಾಲು ಹಾಗೂ ಗೂಡುದೀಪಗಳ ಆಕರ್ಷಣೆ.
ಪ್ರಸ್ತುತ ಮಾರುಕಟ್ಟೆಯಲ್ಲೂ ಹಬ್ಬದ ಭರಾಟೆ ಆರಂಭಗೊಂಡಿದ್ದು, ಅಂಗಡಿಗಳ ಮುಂದೆ ಬಣ್ಣ ಬಣ್ಣದ ಗೂಡುದೀಪಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಗ್ರಾಹಕರನ್ನು ಸೆಳೆಯುವ ರೀತಿಯಲ್ಲೇ ವರ್ತಕರು ಕೂಡ ಅವುಗಳನ್ನು ಅಂಗಡಿಯ ಮುಂದೆ ಜೋಡಿಸಿರುತ್ತಾರೆ. ದೀಪಾವಳಿಯ ಸಂದರ್ಭ ಮನೆ-ಮನೆಯ ಮುಂದೆಯೂ ಗೂಡುದೀಪಗಳು ನೇತಾಡುವುದರಿಂದ ಮಾರುಕಟ್ಟೆಯಲ್ಲಿ ಅವುಗಳಿಗೆ ಉತ್ತಮ ಬೇಡಿಕೆ ಇದೆ. ಬೆಳ್ತಂಗಡಿಯ ಮಾರುಕಟ್ಟೆಯಲ್ಲಿಯೂ ಪ್ರಸ್ತುತ ಗೂಡುದೀಪಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಬಹುತೇಕ ಫ್ಯಾನ್ಸಿ ಸ್ಟೋರ್‌ಗಳು ಗೂಡುದೀಪಗಳಿಂದಲೇ ಮುಳುಗಿ ಹೋಗಿವೆ.
90, 100ರಿಂದ ಆರಂಭ
ಗ್ರಾಹಕರು ಒಂದು ಆಕರ್ಷಕ ಗೂಡುದೀಪವನ್ನು ಇಷ್ಟಪಟ್ಟರೆ ಅದರ ಬೆಲೆ ಎಷ್ಟೇ ಆದರೂ ಖರೀದಿಗೆ ಮುಂದಾಗುತ್ತಾರೆ. ಪ್ರಸ್ತುತ ಬೆಳ್ತಂಗಡಿಯಲ್ಲಿ ಸುಮಾರು 90-100 ರೂ.ಗಳಿಂದ ಗೂಡುದೀಪಗಳ ಧಾರಣೆ ಆರಂಭಗೊಂಡರೆ 650 ರೂ.ಗಳವರೆಗಿನ ಗೂಡುದೀಪಗಳಿಗೆ ಉತ್ತಮ ಬೇಡಿಕೆ ಇದೆ. ಸುಮಾರು 30ಕ್ಕೂ ಅಧಿಕ ವಿನ್ಯಾಸಗಳ ಗೂಡುದೀಪಗಳು ಲಭ್ಯವಿವೆ.
ಪ್ರತಿ ಅಂಗಡಿಯವರು ಕೂಡ ಹಿಂದಿನ ಸಾಲಿನ ಬೇಡಿಕೆಯನ್ನು ಪರಿಗಣಿಸಿ, ಗೂಡುದೀಪಗಳನ್ನು ತರಿಸಿಕೊಳ್ಳುತ್ತಿದ್ದು, ತಂದಿರುವ ಬಹುತೇಕ ಗೂಡುದೀಪಗಳು ಮಾರಾಟವಾಗುತ್ತದೆ. ಜತೆಗೆ ನಮ್ಮದೇ ವರ್ತಕರು ಬೇರೆ ಎಲ್ಲಿಯೂ ಖರೀದಿಸದೆ, ನಮ್ಮ ಅಂಗಡಿಯಿಂದಲೇ ಖರೀದಿಸುತ್ತಾರೆ ಎಂದು ವರ್ತಕರು ಅಭಿಪ್ರಾಯಿಸುತ್ತಾರೆ. ಒಂದೊಂದು ಅಂಗಡಿಗಳಿಂದ ವಾರ್ಷಿಕ 300ಕ್ಕೂ ಅಧಿಕ ಗೂಡುದೀಪಗಳು ಮಾರಾಟವಾಗುತ್ತವೆ.
ದೀಪಾವಳಿ ಹಬ್ಬದ ಸಂದರ್ಭ ಸುಮಾರು 10 ದಿನಗಳಿಗೆ ಮೊದಲೇ ಅಂಗಡಿಗಳ ಮುಂದೆ ಆಕರ್ಷಕ ದೀಪಗಳು ನೇತಾಡುತ್ತಿರುತ್ತವೆ. ವರ್ತಕರು ಹೇಳುವ ಪ್ರಕಾರ, ಹಬ್ಬಕ್ಕೆ 10 ದಿನಗಳ ಮೊದಲೇ ಖರೀದಿ ಆರಂಭಗೊಳ್ಳುತ್ತದೆ. ಹಬ್ಬ ಆರಂಭದ ಮುನ್ನಾದಿನ ಹೆಚ್ಚಿನ ವ್ಯಾಪಾರ ಇರುತ್ತದೆ. ಬಳಿಕ ಕೊನೆಯ ದಿನದವರೆಗೂ ವ್ಯಾಪಾರ ಇರುತ್ತದೆ.
ಹಣತೆಗೂ ಬೇಡಿಕೆ
ಗೂಡುದೀಪಗಳ ಜತೆಗೆ ಹಣತೆಗಳಿಗೂ ಉತ್ತಮ ವ್ಯಾಪಾರ ಇರುತ್ತದೆ. ಹೀಗಾಗಿ ಅತ್ಯಾಕರ್ಷಕ ಹಣತೆಗಳು ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಳ್ತಂಗಡಿಯ ಮಾರುಕಟ್ಟೆಯಲ್ಲಿ 10ಕ್ಕೂ ಅಧಿಕ ವೆರೈಟಿಯ ಹಣತೆಗಳಿವೆ. 3 ರೂ.ಗಳಿಗೆ ಸಿಂಗಲ್ ಹಣತೆಯ ಧಾರಣೆ ಆರಂಭಗೊಂಡರೆ ಸೆಟ್‌ಗೆ 30ರಿಂದ 40 ರೂ.ಗಳವರೆಗೆ ಇರುತ್ತದೆ. ಮಣ್ಣಿನ ಹಣತೆ, ಗಾಜಿನ ರೀತಿಯ ಹಣತೆ, ಆಕರ್ಷಕ ಬಣ್ಣದ ಹಣತೆಯ ಸೆಟ್‌ಗಳು, ಮೇಣದ ಹಣತೆಗಳು ಹೀಗೆ ಬೇರೆ ಬೇರೆ ರೀತಿಯ ಹಣತೆಗಳು ಇವೆ.
ಉತ್ತಮ ವ್ಯಾಪಾರ
40 ವರ್ಷಗಳಿಂದ ಗೂಡುದೀಪ, ಹಣತೆಯ ವ್ಯಾಪಾರ ಮಾಡುತ್ತಿದ್ದೇವೆ. ಪ್ರತಿವರ್ಷವೂ ಉತ್ತಮ ವ್ಯಾಪಾರವಿದೆ. ನಿರ್ದಿಷ್ಟ ಗ್ರಾಹಕರು ಪ್ರತಿವರ್ಷ ನಮ್ಮಲ್ಲೇ ಖರೀದಿಸುವುದರಿಂದ 250ರಿಂದ 300 ಗೂಡುದೀಪಗಳು ಮಾರಾಟವಾಗುತ್ತವೆ. ಗೂಡುದೀಪಗಳು ಪ್ಯಾಕ್‌ನಲ್ಲಿ ಬರುತ್ತಿದ್ದು, ಅವುಗಳನ್ನು ಬಿಡಿಸಿ ಸೂಕ್ತ ರೀತಿಯಲ್ಲಿ ಜೋಡಿಸಿ ಮಾರಾಟ ಮಾಡುತ್ತೇವೆ.
- ಕೆ.ಎನ್. ಗೋಪಾಲಕೃಷ್ಣ ಭಟ್
ವರ್ತಕರು, ಬೆಳ್ತಂಗಡಿ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.