ಕಹಿ ಮರೆತು ಸಿಹಿ ನಿರೀಕ್ಷೆಯಲ್ಲಿ ಮೀನುಗಾರಿಕೆಗೆ ಅಲ್ಪವಿರಾಮ
Team Udayavani, Jun 1, 2017, 2:36 PM IST
ಮಹಾನಗರ: ಜೂನ್ 1ರಿಂದ ಜುಲೈ 31ರವರೆಗೆ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧಿಸಿ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದೆ. ಇದರೊಂದಿಗೆ, ಈ ಋತುವಿನ ಮೀನುಗಾರಿಕೆ ಕಾರ್ಯಚಟುವಟಿಕೆಗಳಿಗೆ ಮಂಗಳೂರಿನ ದಕ್ಕೆ ಕಡಲ ತೀರದಲ್ಲಿ ಅಂಕುಶ ಬಿದ್ದಿದೆ. ಈ ಬಾರಿ ಬೆಸ್ತರಿಗೆ ಮೀನುಗಳ ಕೊರತೆ ಕಂಡುಬಂದಿದ್ದು, ಮುಂದಿನ ಬಾರಿಯಾದರೂ ವಿಪುಲ ಮತ್ಸéಸಂಪತ್ತು ಸಿಗಲಿ ಎಂಬ ಆಶಯದೊಂದಿಗೆ ಹಾಲಿ ಮೀನುಗಾರಿಕೆಗೆ ವಿರಾಮ ಘೋಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಬಂದರು-ದಕ್ಕೆಯಲ್ಲಿ ಪಸೀìನ್, ಟ್ರಾಲಿಂಗ್ ಸಹಿತ ಸುಮಾರು ಸಾವಿರಕ್ಕೂ ಅಧಿಕ ಬೋಟುಗಳು ದಡದಲ್ಲಿ ಲಂಗರು ಹಾಕಿವೆ. ಹಾಗಾದರೆ, 2017ರ ಸಾಲಿನ ಮೇ ವರೆಗೆ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಎಷ್ಟು ಪ್ರಮಾಣದ ಮೀನು ಸಿಕ್ಕಿವೆ; ಅವುಗಳಲ್ಲಿ ಯಾವ ಜಾತಿಯ ಮೀನುಗಳು ಎಷ್ಟು ಎಂಬ ಕುತೂಹಲ ಸಹಜ.
ಈ ಬಾರಿ ಮೀನುಗಾರರ ಬಲೆಗೆ ಬಿದ್ದಿರುವ ಮೀನುಗಳ ಪೈಕಿ ಅತಿ ಹೆಚ್ಚಿನದ್ದು ಅರಬಾಯಿ, ಪುಚ್ಚೆಮೀನು ಹಾಗೂ ಡಿಸ್ಕೊ ಮೀನುಗಳು. ಈ ಮೀನುಗಳಿಗೆ ಕೆಜಿಗೆ 25ರಿಂದ 30 ರೂ. ಇದ್ದರೆ, ಫಿಶ್‌ಮೀಲ್‌ಗೆ 10ರಿಂದ 15ರೂ. ದೊರೆಯುವ ಕಾರಣ ಮೀನುಗಾರರಿಗೆ ಯಾವುದೇ ಲಾಭವೂ ಇಲ್ಲ. ಆದರೆ, ಲಾಭದಾಯಕವಾದ ಬ್ಯಾಟ್ ಮೀನು, ಅಂಜಲ್, ಗಾಳದ ಅಂಜಲ್, ಬಂಗುಡೆ, ಮಾಂಜಿ, ಸೀಗಡಿ, ಕಪ್ಪು ಮಾಂಜಿ, ಬೂತಾಯಿ ಮುಂತಾದ ಜಾತಿ ಮೀನುಗಳು ನಿರೀಕ್ಷೆಯಷ್ಟು ದೊರಕಿಲ್ಲ.
ಈ ಬಾರಿ ಬೂತಾಯಿ, ಕಪ್ಪು ಮಾಂಜಿ ಮುಂತಾದವುಗಳ ಪೂರೈಕೆಯೂ ಕಡಿಮೆ ಯಾಗಿತ್ತು. ಇನ್ನು ಬೊಳೆಂಜಿರ್ ಮೀನುಗಳು ಮೊದ-ಮೊದಲು ಕಡಿಮೆ ಯಾಗಿತ್ತು. ಕೇರಳ, ತಮಿಳುನಾಡು ಮಾತ್ರವಲ್ಲದೇ, ಉತ್ತಮ ಮೀನುಗಳನ್ನು ಚೀನ, ಜಪಾನ್‌ಗಳಿಗೂ ಪೂರೈಕೆಯಾಗುತ್ತಿವೆ.
“ವಿವಿಧ ಕಾರಣಗಳಿಂದ ಮೀನುಗಳ ಪೂರೈಕೆ ಪ್ರಮಾಣ ಸ್ವಲ್ಪ# ಕಡಿಮೆಯಿತ್ತು. ಇದಕ್ಕೆ ಸಮುದ್ರದಲ್ಲಿ ಗಾಳಿಯೂ ಕಾರಣ. ಮೀನುಗಳಿಗೆ ದರ ಸ್ವಲ್ಪ ಹೆಚ್ಚಾದರೂ, ಜನರು ಮಾತ್ರ ಕೊಂಡೊಯ್ಯದೆ ಬಿಟ್ಟಿಲ್ಲ. ತಾಜಾ ಮೀನುಗಳಿಗೆ ಹೆಚ್ಚು ಬೇಡಿಕೆಯಿ¨ ಎನ್ನುತ್ತಾರೆ ಮೀನು ವ್ಯಾಪಾರಿ ಮೋಹನ್ ಕುಲಾಲ್ ಕುದ್ರೋಳಿ.
ಸದ್ಯದ ಮೀನುಗಳ ದರ
ಮೀನುಗಾರರಿಗೆ ಎರಡು ತಿಂಗಳು ನಿಷೇಧ ಹೇರುತ್ತಿದ್ದಂತೆ ಮಾರುಕಟ್ಟೆಯಲ್ಲಿ ಮೀನುಗಳ ಲಭ್ಯತೆ ಸಹಜವಾಗಿಯೇ ಕಡಿಮೆ ಯಾಗಲಿದ್ದು, ಬೇಡಿಕೆಯೂ ಹೆಚ್ಚಾಗುತ್ತದೆ. ಇದರಿಂದ ಮೀನಿನ ದರವೂ ಜಾಸ್ತಿಯಾಗುತ್ತಿದೆ. ಸದ್ಯ ಕೆ.ಜಿ.ಗೆ ಅಂಜಲ್‌ಗೆ – 550ರೂ. (ಸಣ್ಣದು- 350- ಮಧ್ಯಮ 450- 500ರೂ.), ಮಾಂಜಿ-1000ರೂ., ಸ್ವಾಡಿ- ಸಣ್ಣದು 100ರೂ. ದೊಡ್ಡದು 150 ರೂ., ಬೊಳಂಜಿರ್-250ರೂ., ಸೀಗಡಿ-500ರೂ.(ಮಧ್ಯಮ- 400ರೂ.), ಬಂಗುಡೆ ಸಣ್ಣದು 130-ದೊಡ್ಡದು 160ರೂ., ನಂಗ್- ಸಣ್ಣದು 200- ದೊಡ್ಡದು 300ರೂ., ಬೊಂಡಾಸ್-ಸಣ್ಣದು 150-ದೊಡ್ಡದು 200ರೂ., ಕೊಡೈ- 170ರೂ.( ಫೂÅàಝೆನ್)- ಫ್ರೆಶ್ 300ರೂ., ಅಡೆಮೀನ್-ಸಣ್ಣದು 150ರೂ.-200ರೂ.-ದೊಡ್ಡದು 300ರೂ., ಬೂತಾಯಿ-120ರೂ. ಇದೆ.
ತಮಿಳುನಾಡಿನಿಂದ ಪೂರೈಕೆ
“ಜೂ. 1ರಿಂದ ಮೀನುಗಾರಿಕೆ ಬ್ಯಾನ್ ಆಗಿದ್ದರೂ 10 ಎಚ್‌ಪಿಗಿಂತ ಕಡಿಮೆಯಿರುವ ದೋಣಿಗಳು ಮೀನುಗಾರಿಕೆ ನಡೆಸುತ್ತವೆ. ಹಾರ್ಬರ್ ಪ್ರದೇಶದಲ್ಲೂ ಈ ರೀತಿಯ ಮೀನುಗಾರಿಕೆ ನಡೆಯುತ್ತದೆ. ಅಲ್ಲದೆ, ತಮಿಳುನಾಡಿನಿಂದಲೂ ಇಲ್ಲಿಗೆ ಪೂರೈಕೆಯಾಗುತ್ತದೆ’.
-ಮಂಜುಳಾ
ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ.
ಭರತ್‌ರಾಜ್ ಕಲ್ಲಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.