ತಾಲಿಬಾನ್ ಉಗ್ರರ ಆತ್ಮಾಹುತಿ ದಾಳಿ ಎದುರಿಸಿದ್ದ ಕಮಾಂಡೋ!
Team Udayavani, Feb 3, 2018, 9:56 AM IST
ಸಣ್ಣ ವಯಸ್ಸಿನಲ್ಲೇ ಕುಟುಂಬದ ನೊಗವನ್ನೂ ಹೊತ್ತುಕೊಂಡಿದ್ದಲ್ಲದೇ ದೇಶಸೇವೆ ಮಾಡಬೇಕೆಂಬ ಆಸೆ ನನಸಾಗಿಸಿದರು. ಐಟಿಬಿಪಿಯಲ್ಲಿ ಕಮಾಂಡೋ ಆಗಿ ಅಪಾರ ಅನುಭವ ಪಡೆದಿದ್ದಲ್ಲದೇ ಊರಿಗೇ ಹೆಮ್ಮೆ ಅನಿಸಿಕೊಂಡವರು ಇವರು.
ಸುರತ್ಕಲ್ : ಸಣ್ಣ ವಯಸ್ಸಿಗೇ ತಂದೆ ತೀರಿ ಹೋಗಿದ್ದರು. ಇಬ್ಬರು ಹುಡುಗರಲ್ಲಿ ಅವರೇ ಹಿರಿಯರಾದ್ದರಿಂದ ಓದು ಮುಗಿಸಿ ಕುಟುಂಬಕ್ಕೆ ಆಸರೆಯಾಗಬೇಕಾದ ಅನಿವಾರ್ಯ. ಆದರೆ, ಬಾಲ್ಯದಿಂದಲೇ ಸೇನೆಗೆ ಸೇರುವ ಕನಸು. ಕುಟುಂಬ ಸಂಕಷ್ಟದ ಪರಿಸ್ಥಿತಿಯಲ್ಲಿದ್ದರೂ ಸೇನೆಗೆ ಸೇರಿ ಕುಟುಂಬಕ್ಕೂ ಆಸರೆಯಾಗಿ, ದೇಶ ಸೇವೆಯ ಉದ್ದೇಶವನ್ನೂ ಪೂರೈಸಿಕೊಂಡವರು ಪ್ರೇಮಾನಂದ ಪೈ.
ನೆರವಿಗೆ ಬಂದ ಬ್ಯಾಂಕ್ ಅಧಿಕಾರಿ
ಪ್ರೇಮಾನಂದ ಅವರು ಸುರತ್ಕಲ್ ಸರಕಾರಿ ಪ್ರಾಥಮಿಕ ಶಾಲೆ, ವಿದ್ಯಾದಾಯಿನಿಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದರು. ಪಿಯು ಬಳಿಕ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಪದವಿ ಓದುತ್ತಲೇ ಕುಟುಂಬಕ್ಕೂ ಆಸರೆಯಾಗುವ ಉದ್ದೇಶದಿಂದ ಮಂಗಳೂರು ಬಂದರಿನಲ್ಲಿ ಸಣ್ಣ ಕೆಲಸವೊಂದಕ್ಕೆ
ಸೇರಿದ್ದರು. ಆದರೆ ಸೇನೆ ಸೇರುವ ಉತ್ಸಾಹ ಒಂಚೂರೂ ಕಡಿಮೆಯಾಗಿರಲಿಲ್ಲ. ಅದೇ ಹೊತ್ತಿಗೆ ಬಂದರು ಪ್ರದೇಶದ ಕೆನರಾ ಬ್ಯಾಂಕ್‌ನಲ್ಲಿ ರಾಜೇಶ್ ಕಿಣಿ ಎಂಬುವವರ ಪರಿಚಯವಾಗಿ ಸೇನೆಗೆ ಸೇರುವ ಬಯಕೆ ವ್ಯಕ್ತಪಡಿಸಿದ್ದರು.
ಅದೊಂದು ದಿನ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿದ್ದೇ ತಡ, ಕಿಣಿ ಅವರು 450 ರೂ. ಶುಲ್ಕ ಕಟ್ಟಿ ಅರ್ಜಿ ಹಾಕಲು ಎಲ್ಲಾ ರೀತಿ ಸಹಾಯ ಮಾಡಿದ್ದರು. ಬಳಿಕ ಪ್ರೇಮಾನಂದ ಅವರು ಎಲ್ಲ ಪರೀಕ್ಷೆಗಳನ್ನು ಪಾಸು ಮಾಡಿದ್ದು, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ಗೆ ಆಯ್ಕೆಯಾಗಿದ್ದರು. ಪರಿಣಾಮ ಓದು ಅರ್ಧಕ್ಕೇ ಮೊಟಕುಗೊಳಿಸಿ, ರಾಷ್ಟ್ರಸೇವೆಗೆ ತೆರಳಿದರು.
ಹಿಮಾಚಲ ಪ್ರದೇಶದಲ್ಲಿ ನಡೆದ ಕ್ಯಾಂಪ್ ಒಂದರ ತರಬೇತಿ ಸಂದರ್ಭ ಸ್ನೇಹಿತರೊಂದಿಗೆ.
ಕುಟುಂಬದ ಹೆಮ್ಮೆ
ಆರಂಭದಲ್ಲಿ ಪ್ರೇಮಾನಂದ ಅವರು ಸೇನೆಗೆ ಸೇರುವುದಕ್ಕೆ ಮನೆಯವರ ವಿರೋಧವಿದ್ದರೂ ಈಗ ದೇಶ ಸೇವೆ ಮಾಡುತ್ತಿರುವುದರ ಬಗ್ಗೆ ಕುಟುಂಬಕ್ಕೆ ತೀವ್ರ ಹೆಮ್ಮೆ ಇದೆ. ಅವರ ಸೋದರ ವಿದೇಶದಲ್ಲಿ ಉದ್ಯೋಗಿಯಾಗಿದ್ದು, ಪ್ರೇಮಾನಂದ ಅವರು ಇಬ್ಬರು ಮುದ್ದು ಮಕ್ಕಳ ತಂದೆಯಾಗಿದ್ದಾರೆ. ಊರಿನಲ್ಲಿ ಪ್ರೇಮಾನಂದ ಅವರ ಬಗ್ಗೆ ಅತೀವ ಗೌರವಾದರಗಳಿವೆ.
ತಾಲಿಬಾನ್ ಉಗ್ರರಿಗೆ ಉತ್ತರ
2002ರಲ್ಲಿ ಐಟಿಬಿಪಿಗೆ ಸೇರ್ಪಡೆಯಾದ ಬಳಿಕ ಹರಿಯಾಣ, ಚಂಡೀಗಢದ ಬಾನುವಿನಲ್ಲಿ ತರಬೇತಿ ಪಡೆದರು. ಬಳಿಕ ಕಮಾಂಡೋ ತರಬೇತಿಯನ್ನು ಮಸ್ಸೂರಿಯಲ್ಲಿ ಪಡೆದಿದ್ದರು. ಪ್ರಥಮ ಮೂರು ವರ್ಷ ಛತ್ತೀಸ್‌ಗಢದ ಪಿತ್ತೋರ್‌ಗಢದಲ್ಲಿ ಪೋಸ್ಟಿಂಗ್ ಆಗಿದ್ದು, ಬಳಿಕ ಅಫ್ಘಾನಿಸ್ಥಾನದಲ್ಲಿ ಭಾರತೀಯ ರಾಯಭಾರ ಕಚೇರಿ ರಕ್ಷಣೆಗೆ ನಿಯುಕ್ತಿಯಾಗಿದ್ದರು. ಈ ಸಂದರ್ಭ ತಾಲಿಬಾನ್ ಉಗ್ರರು ನಡೆಸಿದ್ದ ಎರಡು ಆತ್ಮಾಹುತಿ ದಾಳಿಗಳನ್ನು ಎದುರಿಸಿದ ದಿಟ್ಟ ಅನುಭವ ಹೊಂದಿದ್ದಾರೆ.
ಉಮರ್ ಅಬ್ದುಲ್ಲಾ , ಗುಲಾಂನಬಿಗೆ ರಕ್ಷಣೆ
ವಿಶೇಷ ಕಮಾಂಡೋ ತರಬೇತಿ ಪಡೆದಿದ್ದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಮತ್ತು ಕೇಂದ್ರ ಸರಕಾರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಅವರ ರಕ್ಷಣೆಗೂ ಪ್ರೇಮಾನಂದ ಅವರು ನಿಯುಕ್ತಿಗೊಂಡಿದ್ದರು. ಇದರೊಂದಿಗೆ ಛತ್ತೀಗಢ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ವೇಳೆ ನೆಲ ಬಾಂಬ್ ಪತ್ತೆಯ ಕಾರ್ಯದಲ್ಲೂ ಭಾಗಿಯಾಗಿದ್ದು, ಹಲವಾರು ಸೈನಿಕರ ಪ್ರಾಣ ರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ನಮಗೇ ಸಿಕ್ಕ ಗೌರವ
ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾಗ ಪ್ರೇಮಾನಂದ ಆಟೋಟದಲ್ಲಿ ಸದಾ ಮುಂದಿರುತ್ತಿದ್ದ. ಬಳಿಕ ಕುಟುಂಬದ ಆಧಾರವಾಗಿದ್ದರೂ ಸೇನೆ ಸೇರಿ ಕಮಾಂಡೋ ಆಗಿದ್ದಾನೆ. ಮನೆಯವರಿಗೆ ಸದಾ ಧೈರ್ಯ ತುಂಬುತ್ತಿದ್ದ. ಆತ ಕಮಾಂಡೋ ಆಗಿರುವುದು ನಮಗೆ, ಊರಿಗೆ ಅತಿ ದೊಡ್ಡ ಗೌರವ.
– ಮಹೇಶ್ ಮೂರ್ತಿ
ಸುರತ್ಕಲ್, ಸ್ನೇಹಿತ
ಲಕ್ಷ್ಮೀನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Train; ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೆ?
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.