ಹಿಂದೂ ಜನಜಾಗೃತಿ ಸಮಿತಿಯಿಂದ ಸರಕಾರಕ್ಕೆ ಮನವಿ
Team Udayavani, Mar 28, 2017, 11:16 AM IST
ನಗರ: ರಾಷ್ಟ್ರ -ಧರ್ಮ -ಸಮಾಜ ವಿರೋಧಿ ಕೃತ್ಯಗಳನ್ನು ಖಂಡಿಸುವ ರಾಷ್ಟ್ರೀಯ ಹಿಂದೂ ಆಂದೋಲನದ ಅಂಗವಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ತಹಶೀಲ್ದಾರರ ಮೂಲಕ ಸರಕಾರಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನ ಹಾರೋಹಳ್ಳಿಯಲ್ಲಿ ಕಸಾಯಿ ಖಾನೆಯನ್ನು ಕೂಡಲೇ ಸ್ಥಗಿತಗೊಳಿಸಿ ಗೋವುಗಳ ಕಳ್ಳಸಾಗಾಣಿಕೆ, ದೇಶಿಯ ತಳಿಯ ವಿನಾಶ, ಪರಿಸರದ ಮೇಲಿನ ದುಷ್ಪರಿಣಾಮವನ್ನು ತಡೆಯಬೇಕು. ಪಿಎಚ್‌ಡಿ ಮತ್ತು ಎಂಫಿಲ್ ಅಧ್ಯಯನ ಮಾಡುವ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಮಾಸಿಕ 25 ಸಾವಿರ ಶಿಷ್ಯ ವೇತನವನ್ನು ರದ್ದುಗೊಳಿಸಬೇಕು. ಇದು ರಾಜ್ಯ ಸರಕಾರವು ಅಲ್ಪಸಂಖ್ಯಾಕರನ್ನು ಓಲೈಸಲು, ಬಹುಸಂಖ್ಯಾಕ ಅನ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಮಾಡಿದ ಘೋರ ಅನ್ಯಾಯವಾಗಿದೆ ಮತ್ತು ಸಂವಿಧಾನಬಾಹಿರವಾಗಿದೆ.
ಗೋ ಸಂತತಿ ರಕ್ಷಿಸಿ
ಚಾಮರಾಜನಗರದ ಕೊಳ್ಳೆಗಾಲದ ಮಲೆ ಮಹಾದೇಶ್ವರ ಬೆಟ್ಟದಲ್ಲಿ ಹಸುಗಳು ಮೇಯುವ ಸುಮಾರು 150 ಎಕ್ರೆ ಜಮೀನಿನಲ್ಲಿ ಪರಿಸರ ಹಾನಿಯ ನೆಪದಲ್ಲಿ ಬೇಲಿ ಹಾಕಿದೆ. ಇದರಿಂದ 4,000 ಹಸು ಗಳಿಗೆ ಮೇವು ಇಲ್ಲದೇ, ಸಾಯುವ ಸ್ಥಿತಿಯಲ್ಲಿ ಇವೆ. ಆದ್ದರಿಂದ ಸರಕಾರವು ಕೂಡಲೇ ಬೇಲಿಯನ್ನು ತೆಗೆದು ಹಾಕಬೇಕು ಮತ್ತು ಗೋವುಗಳ ರಕ್ಷಣೆ, ಪಾಲನೆ ಮತ್ತು ಪೋಷಣೆಗೆ ಸಾಕಷ್ಟು ಆರ್ಥಿಕ ಸಹಾಯ ಮತ್ತು ಮೇವು ಒದಗಿಸುವ ಮೂಲಕ ರೈತರಿಗೆ ಮತ್ತು ಗೋಶಾಲೆಗಳಿಗೆ ಸಹಾಯವನ್ನು ನೀಡಬೇಕು ಮತ್ತು ಅಲ್ಲಲ್ಲಿ ಗೋಮಾಳಗಳನ್ನು ನಿರ್ಮಿಸಿ ಗೋಸಂತತಿಯ ಪಾಲನೆಗೆ ಗಮನ ನೀಡಬೇಕು ಎಂದು ಮನವಿಯ ಮೂಲಕ ಸಮಿತಿಯು ಆಗ್ರಹಿಸಿದೆ.
ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಕೃಷ್ಣಕುಮಾರ್ ಶರ್ಮ, ಚಂದ್ರಶೇಖರ, ರಮೇಶ, ಕೇಶವ ಗೌಡ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.