ಕೋಮು ಗಲಭೆ: ಕರಾವಳಿ ಜಿಲ್ಲೆಗಳಲ್ಲಿ 38 ಪ್ರಕರಣ: ಪರಮೇಶ್ವರ್
Team Udayavani, Mar 17, 2017, 11:01 AM IST
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ 2008ರಿಂದ 2017ರ ವರೆಗೆ ಕೋಮು ಗಲಭೆಗಳಿಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಒಟ್ಟು 38 ಪ್ರಕರಣಗಳು ನಡೆದಿವೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಅಕ್ಕಿ ಗಿರಣಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುವುದರಿಂದ ಈ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸ ಲಾಗುವುದು. ಕಟ್ಟಡವನ್ನು ಸ್ಥಳಾಂತರಿ ಸುವ ಬಗ್ಗೆ ಕಟ್ಟಡ/ಜಮೀನು ಹುಡುಕ ಲಾಗುತ್ತಿದ್ದು, ಸ್ಥಳ ಲಭಿಸಿಲ್ಲ. ಆದ್ದರಿಂದ ಮರೋಳಿಯಲ್ಲಿರುವ 4 ಪೊಲೀಸ್ ವಸತಿಗೃಹಗಳನ್ನು ಮಾರ್ಪಾಡು ಮಾಡಿ ತಾತ್ಕಾಲಿಕವಾಗಿ ಸಾಮಾನ್ಯ ಕಚೇರಿ ರೂಪದಲ್ಲಿ ಕಾರ್ಯಾಚರಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.