Gram panchayat ಇ-ಸ್ವತ್ತುವಿಗೆ ತೊಡಕು; ಸಾಫ್ಟ್ ವೇರ್ ಹೊಸತಾದರೂ ಬಗೆಹರಿಯದ ಹಳೆಯ ಗೋಳು
Team Udayavani, Aug 23, 2024, 7:05 AM IST
ಮಂಗಳೂರು: ಗ್ರಾಮ ಪಂಚಾಯತ್ ಮಟ್ಟದಲ್ಲಿ “ಇ-ಸ್ವತ್ತು’ ತಂತ್ರಾಂಶದ ಹೊಸ ಅವತರಣಿಕೆ ಪರಿಚಯ ಗೊಂಡ ಒಂದು ತಿಂಗಳ ಅಂತರ ದಲ್ಲಿಯೇ ತಾಂತ್ರಿಕ ಎಡವಟ್ಟುಗಳು ಮತ್ತೆ ಎದು ರಾಗು ತ್ತಿದ್ದು, ರಾಜ್ಯಾದ್ಯಂತ 9/11 ಅರ್ಜಿ ಸಲ್ಲಿಕೆಗೆ ಬಹುತೇಕ ಪಂಚಾಯತ್‌ಗಳಲ್ಲಿ ತೊಡಕು ಉಂಟಾಗಿದೆ.
ಗ್ರಾ.ಪಂ.ಗಳಲ್ಲಿ ಒಂದು ತಿಂಗಳಿನಿಂದ ಕಾಡುತ್ತಿರುವ “ಇ ಸ್ವತ್ತು’ವಿನ ತಾಂತ್ರಿಕ ತಾಪತ್ರಯಗಳ ಬಗ್ಗೆ ಆಡಳಿತ ವ್ಯವಸ್ಥೆ ಗಂಭೀರವಾಗಿ ಪರಿಗಣಿಸಿದಂತಿಲ್ಲ.ಇ -ಸ್ವತ್ತು 4.8 ತಂತ್ರಾಂಶ ನಿಧಾನ ವಾಗಿ ಕಾರ್ಯನಿರ್ವಹಿಸುತ್ತಿದೆ.
ಪದೇ ಪದೆ ತಂತ್ರಾಂಶ ಲಾಗ್ ಔಟ್ ಆಗು ತ್ತಿದೆ. ಇದರಿಂದ ಸಾರ್ವಜನಿಕ ಅರ್ಜಿ ವಿಲೇವಾರಿ ಕಷ್ಟಸಾಧ್ಯ. ಸರ್ವರ್ “ಎರರ್’ ಸಮಸ್ಯೆ ಹಾಗೂ ನಮೂನೆ 9/11 ಹಾಗೂ 11ಬಿ ದಾಖ ಲಾತಿ ಇ-ಸ್ವತ್ತು ತಂತ್ರಾಂಶದಲ್ಲಿ “ಸೇವ್’ ಮಾಡುವಾಗ, ಅರ್ಜಿಯ ಫೈನಲ್ ಪ್ರಿಂಟ್ ತೆಗೆಯುವ “ಎರರ್’ ಬರು ತ್ತಿರುವುದು ಈಗಿನ ಸಮಸ್ಯೆ.
ಏನು ಸಮಸ್ಯೆ?
ಪಂಚಾಯತ್‌ಗಳಲ್ಲಿ ಹೊಸದಾಗಿ 9/11 ಅರ್ಜಿ ಸ್ವೀಕಾರ ಮಾಡಿ ಅಪ್‌ಲೋಡ್ ಮಾಡಿದರೆ ಕೆಲವು ಪಂಚಾ ಯತ್‌ಗಳ ಸಿಸ್ಟಮ್‌ನಲ್ಲಿ ಅಪ್‌ಲೋಡ್ ಆಗುತ್ತಿಲ್ಲ. ಅಪ್ರೂವ್ ಮಾಡಬೇಕಾದರೆ ಪಿಡಿಒ “ಥಂಬ್’ ಕೊಡಬೇಕು. ಆಗ ಕೆಲವರಿಗೆ “ಎರರ್’ ಬರುತ್ತಿದೆ. ಇ ಸ್ವತ್ತು ಸಾಫ್ಟ್ವೇರ್ ಇತ್ತೀಚೆಗೆ ಅಪ್‌ಡೇಟ್ ಮಾಡಲಾಗಿದೆ. ಬಳಿಕ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಕೆಲವು ಕಡೆ ಲಾಗಿನ್ ಆಗುತ್ತದೆ, ಫೀಡ್ ಮಾಡಲು ಆಗುತ್ತದೆ, ಅನುಮೋದನೆ ಮಾಡುವಾಗ ಆಗುತ್ತಿಲ್ಲ. ಹೀಗೆ ಎದುರಾದ ತಾಂತ್ರಿಕ ಸಮಸ್ಯೆಯಿಂದ ಗ್ರಾಮಾಂತರ ಭಾಗದಲ್ಲಿ ವಿವಿಧ ಅರ್ಜಿ ವ್ಯವಸ್ಥೆಗೆ ತೊಡಕಾಗಿದೆ. “ಇಂದು-ನಾಳೆ ಸರಿಯಾಗುತ್ತದೆ’ ಎಂದು ಹೇಳಿ ಈಗ ಹಲವು ದಿನಗಳೇ ಕಳೆದಿವೆ. ಒಂದೊಂದು ಪಂಚಾಯತ್‌ನ ಫೀಡ್ ಮಾಡುವ ಬ್ಯಾಕ್‌ಅಪ್ ಜಿಲ್ಲಾವಾರು ನಡೆಸಲಾಗುತ್ತಿದೆ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ ವಿನಾ ಪೂರ್ಣ ಪರಿಹಾರ ಸಿಕ್ಕಿಲ್ಲ ಎಂಬುದು ದೂರು.
ಎಲ್ಲ ಕಡೆ ಇದೆ!
ಅಧಿಕಾರಿಗಳ ಪ್ರಕಾರ, “ಸಾಫ್ಟ್ವೇರ್ ಸಮಸ್ಯೆ ಎಲ್ಲ ಇಲಾಖೆಗಳಲ್ಲಿಯೂ ಇದೆ. ಈಗಿನ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದ ಇ-ಸ್ವತ್ತು ಅತ್ಯಂತ ಜನೋಪಯೋಗಿ ನೆಲೆಯಲ್ಲಿ ಅನುಷ್ಠಾನ ಹಂತಕ್ಕೆ ಬರುತ್ತಿದೆ. ಅದನ್ನು ಆರಂಭದಲ್ಲಿಯೇ ವಿರೋಧಿಸುವುದು ಬೇಡ. ಕೆಲವು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ’.
ಜನರಿಗೆ ಸಂಕಷ್ಟ!
ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್ ಅವರ ಪ್ರಕಾರ, “ಹೊಸ ಹೊಸ ವ್ಯವಸ್ಥೆಗಳನ್ನು ಜನರ ಅನುಕೂಲಕ್ಕಾಗಿ ಸರಕಾರ ಪರಿಚಯಿಸುತ್ತದೆ. ಆದರೆ ಅದೇ ವ್ಯವಸ್ಥೆಯಿಂದಾಗಿಯೇ ಜನರಿಗೆ ಪದೇ ಪದೆ ಸಮಸ್ಯೆ ಆಗುವುದು ಸರಿಯಲ್ಲ. ಸುದೀರ್ಘ ಕಾಲದಿಂದ ಸಾಫ್ಟ್ವೇರ್ ಸಮಸ್ಯೆಗಳು ಕಾಡುವುದು ಒಪ್ಪುವ ವಿಷಯವೂ ಅಲ್ಲ’
ತಾಪತ್ರಯ ಹಲವು!
ಇ ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯ ಕಾರಣ ಜು. 27ರಿಂದ 29ರ ವರೆಗೆ ಇ-ಸ್ವತ್ತು ತಂತ್ರಾಂಶ ಕಾರ್ಯನಿರ್ವಹಿಸಿಲ್ಲ. ಬಳಿಕ ಎದುರಾದ ತಾಂತ್ರಿಕ ಸಮಸ್ಯೆಯಿಂದ ಈಗ ಹಲವಾರು ಪಂಚಾಯತ್‌ನಲ್ಲಿ ಸಾರ್ವಜನಿಕ ಸೇವೆಗೆ ತಾಪತ್ರಯ ಎದುರಾಗಿದೆ. ಅದರಲ್ಲಿಯೂ ಆಸ್ತಿ ಮಾರಾಟ, ಖರೀದಿ, ಬ್ಯಾಂಕ್ ಲೋನ್, ಡೋರ್ ಸಂಖ್ಯೆ ಪಡೆಯುವುದು, ವಾಸದ ಕಟ್ಟಡ ಸಹಿತ ವಿವಿಧ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯುವುದು ಇತ್ಯಾದಿ ಕೆಲಸ ಒಂದು ತಿಂಗಳಿನಿಂದ ಕುಂಠಿತಗೊಂಡಿದೆ. ಕೆಲವು ಪಂಚಾಯತ್‌ಗಳಲ್ಲಿ ಹಲವಾರು ಅರ್ಜಿಗಳು ಹೀಗೆ ಬಾಕಿಯಾಗಿವೆ ಎಂಬುದು ದೂರು.
“9/11 ಖಾತೆ ಬದಲಾವಣೆಗಳು ಆಗುತ್ತಿಲ್ಲ. ಇದರಿಂದಾಗಿ ಏಕ ನಿವೇ ಶನ ಅರ್ಜಿಗಳು ಬಾಕಿಯಾಗಿ ಮನೆ ಕಟ್ಟಲು ಪರವಾನಿಗೆ ನೀಡಲು ಕಷ್ಟ ವಾಗು ತ್ತಿದೆ. ಭೂ ಪರಿವರ್ತನೆಯಾದ ಜಾಗ ಮಾರಾಟ ಮಾಡಲು ಕೆಲವ ರಿಗೆ ಕಷ್ಟವಾಗಿದೆ. ಕೆಲವರಿಗೆ 9/11 ಹಳೆಯ ಪ್ರತಿ ಪಡೆಯಲೂ ಆಗು ತ್ತಿಲ್ಲ. ಆಗಾಗ ಲಾಗ್ ಔಟ್ ಆಗುತ್ತಿದೆ’ ಎಂಬುದು ಪಿಡಿಒ ಒಬ್ಬರ ಅಭಿಪ್ರಾಯ.
ಇ-ಸ್ವತ್ತು ಹೊಸ ವರ್ಶನ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಇದೆ ಎಂಬ ದೂರುಗಳಿವೆ. ಜತೆಗೆ ಕೆಲವು ದಿನದಿಂದ ಲಾಗಿನ್ ಸಮಸ್ಯೆಯೂ ಇದೆ. ಅದನ್ನು ಒಂದೆರಡು ದಿನಗಳಲ್ಲಿ ಸರಿಪಡಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳಲಿದೆ.
– ಡಾ| ಆನಂದ್ ಕೆ.
ಮುಖ್ಯಕಾರ್ಯನಿರ್ವಹಣಾಧಿಕಾರಿ, ದ.ಕ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.