ಅಂಗನವಾಡಿ ದಾರಿಗೆ ಕಾಂಕ್ರೀಟ್: ಸಮಸ್ಯೆಗೆ ಸ್ಪಂದಿಸಿದ ಗುತ್ತಿಗೆದಾರ
Team Udayavani, Aug 1, 2018, 11:20 AM IST
ಉಪ್ಪಿನಂಗಡಿ: ಅಂಗನವಾಡಿ ಆವರಣದಲ್ಲಿ ಜಲ್ಲಿ ಹಾಗೂ ಮರಳು ಸಂಗ್ರಹಿಸಿಟ್ಟು, ನಡೆದಾಡುವ ರಸ್ತೆ ಹೊಂಡಗಳು ನಿರ್ಮಾಣವಾಗಿದ್ದು, ಮಳೆ ನೀರು ನಿಲ್ಲುತ್ತಿತ್ತು. ಇದೀಗ ಕಾಂಕ್ರೀಟ್ ಕಾಮಗಾರಿ ಮೂಲಕ ಶಾಶ್ವತ ವ್ಯವಸ್ಥೆ ಮಾಡಿದ್ದು, ಸ್ಥಳೀಯರಿಂದ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ತಿಂಗಳ ಹಿಂದೆ ಕರಾಯ ಗ್ರಾಮದ ಶಿವಗಿರಿ ಅಂಗನವಾಡಿ ಆವರಣದಲ್ಲಿ ಕೆ.ಆರ್.ಐ.ಡಿ.ಎಲ್. ನಿಗಮ ವತಿಯಿಂದ ಮಜ್ಜಿಕುಡೇಲು ರಸ್ತೆಯ ಕಾಂಕ್ರೀಟ್ ಕಾಮಗಾರಿಯ ಗುತ್ತಿಗೆದಾರರು ಅಂಗನವಾಡಿ ಆವರಣದಲ್ಲಿ ಏಕಾಏಕಿ ಜಲ್ಲಿ, ಕಲ್ಲು ಹಾಗೂ ಮರಳು ಶೇಖರಿಸಿದ್ದರು. ಅಂಗನವಾಡಿಯ ಮುಂಭಾಗ ಲಾರಿ, ಟಿಪ್ಪರ್ ಸಂಚರಿಸಿ, ದಾರಿಯಲ್ಲಿ ಹೊಂಡಗಳಾಗಿದ್ದವು. ಪುಟ್ಟ ಮಕ್ಕಳು ಹಿಂಬಾಗಿಲಿನಿಂದ ಪ್ರವೇಶಿಸುವ ಅನಿವಾರ್ಯತೆ ಮೂಡಿತ್ತು.
ಈ ಕುರಿತು ಉದಯವಾಣಿ ಸುದಿನ ಎರಡು ಸಚಿತ್ರ ವರದಿಗಳನ್ನು ಪ್ರಕಟಿಸಿತ್ತು. ಕರಾಯ ಗ್ರಾ.ಪಂ. ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು ಅವರು, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಗುತ್ತಿಗೆದಾರರಿಗೆ ಸಮಸ್ಯೆಯ ಮನವರಿಕೆ ಮಾಡಿಕೊಟ್ಟಿದ್ದರು. ಆ ಬಳಿಕ ಗುತ್ತಿಗೆದಾರರು ಉಪ್ಪಿನಂಗಡಿ – ಬೆಳ್ತಂಗಡಿ ರಾಜ್ಯ ಹೆದ್ದಾರಿ ಸನಿಹದ ಅಂಗನವಾಡಿ ಕಟ್ಟಡದ ಮೆಟ್ಟಿಲ ತನಕ 20 ಮೀ. ದಾರಿಯ ಹೊಂಡಗಳನ್ನು ಮುಚ್ಚಿ, ಕಾಂಕ್ರೀಟ್ ಹಾಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.