ಸಮ್ಮೇಳನಾಧ್ಯಕ್ಷತೆ ಅನಿರೀಕ್ಷಿತ; ಖುಷಿ ನೀಡಿದೆ: ಪ್ರೊ| ಕೆದಿಲಾಯ


Team Udayavani, Jan 22, 2018, 9:14 AM IST

22-Jan-1.jpg

ಕನ್ನಡ ಸಾಹಿತ್ಯ ಲೋಕದಲ್ಲಿ ಹಿರಿಯ ಲೇಖಕ, ಸಾಹಿತಿ ಪ್ರೊ| ಎಚ್‌. ರಮೇಶ್‌ ಕೆದಿಲಾಯ ಅವರ ಹೆಸರು ಪರಿಚಿತ. ಅರ್ಥಶಾಸ್ತ್ರ ಪ್ರಾಧ್ಯಾಪಕರಾದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ಮಾಡಿರುವ ಸೇವೆ ಹಲವು. ‘ಅಶ್ವ’ ಕವನ ಸಂಕಲನ, ‘ಶೋಧ’ ಕಾದಂಬರಿ ಸೇರಿದಂತೆ ಅನೇಕ ಪ್ರಬಂಧ, ಕಥೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇದೀಗ ಸುರತ್ಕಲ್‌ ಗೋವಿಂದದಾಸ ಕಾಲೇಜಿನಲ್ಲಿ ಜ. 23ರಂದು ನಡೆಯುವ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ| ಕೆದಿಲಾಯ ಅವರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ‘ಉದಯವಾಣಿ-ಸುದಿನ’ ನಡೆಸಿದ ಸಂದರ್ಶನ.

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಈ ಗೌರವದ ಬಗ್ಗೆ ಏನನ್ನಿಸುತ್ತಿದೆ?
ತಾ| ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಅನಿರೀಕ್ಷಿತವಾಗಿ ಬಂದಿರುವಂತಹದ್ದು. ಈ ಬಗ್ಗೆ ತುಂಬ ಖುಶಿಯಾಯಿತು. ಈ ಗೌರವ ಕನ್ನಡ ಸಾಹಿತ್ಯ ಲೋಕದಲ್ಲಿ ನನ್ನ ಜವಾಬ್ದಾರಿಯನ್ನು ಕೂಡ ಹೆಚ್ಚಿಸಿದೆ. ನನ್ನ ಅಧ್ಯಕ್ಷತೆಯಲ್ಲಿ ನಡೆಯುವ ಈ ಬಾರಿಯ ಸಮ್ಮೇಳನ ಖಂಡಿತ ಯಶಸ್ವಿಯಾಗುವಂತೆ ಶ್ರಮಿಸುವೆ.

ಕನ್ನಡ ನಾಡು-ನುಡಿಯ ಬೆಳವಣಿಗೆಗೆ ಏನೆಲ್ಲ ಆವಶ್ಯಕತೆಯಿದೆ?
ಯಾವುದೇ ಕ್ಷೇತ್ರವಾದರೂ ಅದರ ಬೆಳವಣಿಗೆಗೆ ಸರ್ವರೂ ಶ್ರಮಿಸಿದಾಗ ಮಾತ್ರ ಯಶಸ್ಸು ಸಾಧ್ಯ. ಉದಾಹರಣೆಗೆ ಶಿಕ್ಷಣ ಕ್ಷೇತ್ರದಲ್ಲಿ ನೋಡುವುದಾದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸಲು ಕನ್ನಡದ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಕನ್ನಡ ನಾಡು-ನುಡಿಯ ಬೆಳವಣಿಗೆಗೆ ಮುಖ್ಯವಾಗಿ ಬೇಕಾದುದು ಭಾಷಾಭಿಮಾನ ಮತ್ತು ಈ ನಾಡಿನ ಮೇಲೆ ಪ್ರೀತಿ. ನಮ್ಮ ಭಾಷೆ, ನಮ್ಮ ಕನ್ನಡ ನಾಡು ಎಂಬ ಜಾಗೃತ ಮನಸ್ಸು ನಮ್ಮಲ್ಲಿದ್ದರೆ ನಾಡು-ನುಡಿಯ ಬೆಳವಣಿಗೆ ಸಾಧ್ಯ.

ಲೇಖಕ-ಸಾಹಿತಿಯಾಗಿ ಕನ್ನಡದ  ಬೆಳವಣಿಗೆಯನ್ನು ಯಾವ ರೀತಿಯಲ್ಲಿ  ಗಮನಿಸಿದ್ದೀರಿ?
ನಾನಾ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳೂ ಕೂಡ ಕನ್ನಡವನ್ನು ನೆಚ್ಚಿಕೊಂಡಿದ್ದಾರೆ. ವೈದ್ಯರು, ಎಂಜಿನಿಯರ್‌ ಮುಂತಾದ ಕ್ಷೇತ್ರದವರು ಕನ್ನಡ ಬಳಸುವುದಿಲ್ಲ ಎಂಬ ಅಪವಾದ ಇದೆ. ಆದರೆ ನಾನು ಗಮನಿಸಿದಂತೆ ತುಂಬಾ ಮಂದಿ ವೈದ್ಯರು, ಎಂಜಿನಿಯರ್‌ಗಳು ಕೂಡ ಕನ್ನಡದಲ್ಲಿ ಬರೆಯುವುದನ್ನು, ಸಾಹಿತ್ಯವನ್ನು ಓದುವುದನ್ನು ಕಾಣಬಹುದು. ನಾನು ಅರ್ಥಶಾಸ್ತ್ರ ಪ್ರಾಧ್ಯಾಪಕನಾದರೂ ಕನ್ನಡ ಸಾಹಿತ್ಯವನ್ನು ನೆಚ್ಚಿಕೊಂಡಿರುವುದು ಕನ್ನಡದ ಮೇಲಿನ ಅಭಿಮಾನವನ್ನು ಹೇಳುತ್ತದೆ. ವೈಯಕ್ತಿಕವಾಗಿ ಹೇಳುವುದಾದರೆ ಕನ್ನಡಕ್ಕೆ ಯಾವುದೇ ತೊಂದರೆಯಾಗದು.

ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳು ಅನುಷ್ಠಾನವಾಗುತ್ತಿಲ್ಲ ಎಂಬ ಆರೋಪಗಳಿವೆಯಲ್ಲ?
ಹೌದು. ಇಂತಹದೊಂದು ಆರೋಪ ಸಾರ್ವಜನಿಕ ವಲಯದಲ್ಲಿದೆ. ಪ್ರಮುಖವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗು ವಂತಹ ನಿರ್ಣಯಗಳನ್ನು ಮಾತ್ರ ಮಂಡಿಸ ಬೇಕು. ಮಂಡಿಸಿದ ಬಳಿಕ ಅದನ್ನು ಹಾಗೇ ಬಿಡುವುದು ಸರಿಯಲ್ಲ. ಬಹುಶಃ ನಿರ್ಣಯಗಳು ಅನುಷ್ಠಾನ ಆಗದಿರಲು ಅವುಗಳ ಮೇಲೆ ನಿಗಾ ಇಡದಿರುವುದು ಮತ್ತು ಆಸಕ್ತಿಯ ಕೊರತೆಯೇ ಕಾರಣ ಎನ್ನಬಹುದು.  

ಸಾಹಿತ್ಯ ಸಮ್ಮೇಳನಗಳಿಂದ ಇತ್ತೀಚೆಗೆ ಯುವ ಸಮೂಹ ವಿಮುಖವಾಗುತ್ತಿದೆ ಎಂದು ಅನಿಸುತ್ತಿಲ್ಲವೇ?
ಯುವ ಸಮೂಹ ಸಾಹಿತ್ಯ ಸಮ್ಮೇಳನಗಳಿಗೆ ಬರುವುದು ಕಡಿಮೆಯಾಗುತ್ತಿರುವುದು ನಿಜ. ಸಮ್ಮೇಳನಗಳನ್ನು ಏರ್ಪಡಿಸುವಾಗ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಪ್ರದೇಶಗಳಲ್ಲಿ ಇಟ್ಟುಕೊಂಡರೆ ಅವರಿಗೆ ಬರಲು ಸಾಧ್ಯವಾಗಬಹುದು. ಅಲ್ಲದೆ ವಿದ್ಯಾರ್ಥಿ, ಯುವಜನರಿಗೆ ಪೂರಕವಾಗುವಂತಹ ಗೋಷ್ಠಿಗಳನ್ನೇ ಹಮ್ಮಿಕೊಳ್ಳಬೇಕು. ಯುವ ಜನರ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದರೆ ಅವರನ್ನು ಸಮ್ಮೇಳನಗಳತ್ತ ಸೆಳೆಯುವುದು ಸಾಧ್ಯವಿದೆ.

ಸಾಹಿತ್ಯ ಸಮ್ಮೇಳನಗಳ ವೇದಿಕೆಗಳು ರಾಜಕೀಯ ಭಾಷಣಗಳಿಗೆ ಸೀಮಿತವಾಗುತ್ತಿವೆ ಎಂಬ ಕೂಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಸಾಹಿತ್ಯ ಸಮ್ಮೇಳನದ ವೇದಿಕೆಗಳು ಸಾಹಿತ್ಯಾಭಿವ್ಯಕ್ತಿಗಷ್ಟೇ ಸೀಮಿತವಾಗಿರಬೇಕೇ ಹೊರತು, ಅಲ್ಲಿ ರಾಜಕೀಯ ಮಾತನಾಡುವುದು ಖಂಡಿತ ತಪ್ಪು. ರಾಜಕೀಯದ ಬಗ್ಗೆ ಮಾತನಾಡುವುದು, ಪಕ್ಷ, ವ್ಯಕ್ತಿ, ಸರಕಾರಗಳ ಯೋಜನೆಗಳ ಬಗ್ಗೆ ಹೊಗಳಿಕೆ-ತೆಗಳಿಕೆ ಮಾಡುವುದರಿಂದ ಆ ಸಮ್ಮೇಳನದ ಮೂಲ ಉದ್ದೇಶವೇ ಹಾಳಾಗುತ್ತದೆ. ಅಲ್ಲದೆ ಇದರಿಂದ ಮನನೊಂದು ನಿಜವಾದ ಸಾಹಿತ್ಯಾಸಕ್ತರು ಸಮ್ಮೇಳನಗಳಿಗೆ ಬರುವುದನ್ನೇ ನಿಲ್ಲಿಸಿ ಬಿಡುತ್ತಾರೆ.

ಡಿಜಿಟಲ್‌ ಪುಸ್ತಕಗಳ ಹಾವಳಿಯಿಂದಾಗಿ ಗ್ರಂಥಾಲಯಗಳಿಗೆ ಹೋಗಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿವೆ. ಈ ಡಿಜಿಟಲ್‌ ಲೈಬ್ರರಿಗಳು ಸಾಹಿತ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾ?
ಡಿಜಿಟಲ್‌ ಪುಸ್ತಕ ಓದುವ ಹವ್ಯಾಸ ಸಾಹಿತ್ಯ ಬೆಳವಣಿಗೆಯ ದೃಷ್ಟಿಯಿಂದ ಉತ್ತಮವಲ್ಲ. ನಾವೆಲ್ಲ ಕೈಯಲ್ಲಿ ಪುಸ್ತಕ ಹಿಡಿದುಕೊಂಡೇ ಬೆಳೆದವರು. ಅದರಲ್ಲಿ ಏನೋ ಒಂದು ರೀತಿಯ ಖುಷಿ ಇದೆ. ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಶಾಂತ ಸ್ಥಳದಲ್ಲಿ ಕುಳಿತು ಓದುವುದರಲ್ಲಿ ಇರುವ ಆನಂದ ಖಂಡಿತ ಡಿಜಿಟಲ್‌ ಲೈಬ್ರರಿ ಅಥವಾ ಆಧುನಿಕ ಅಂತರ್ಜಾಲ ತಾಣಗಳಿಂದ ಸಿಗಲಾರದು. ವಿದ್ಯಾರ್ಥಿಗಳು ಆದಷ್ಟು ಗ್ರಂಥಾಲಯಗಳಿಗೆ ತೆರಳಿ ಓದುವ ಅಭಿರುಚಿಯನ್ನು ರೂಢಿಸಿಕೊಂಡರೆ ಒಳ್ಳೆಯದು.

ವಿದ್ಯಾರ್ಥಿಗಳನ್ನು ಗ್ರಂಥಾಲಯಗಳತ್ತ ಸೆಳೆಯಲು ಏನು ಮಾಡಬಹುದು?
ಇಲ್ಲಿ ಗುರುಗಳ ಪಾತ್ರ ಮತ್ತು ಜವಾಬ್ದಾರಿ ಪ್ರಮುಖವಾಗಿದೆ. ಶಾಲೆ-ಕಾಲೇಜುಗಳಲ್ಲಿ ಪಾಠ ಮಾಡುವಾಗ, ಪಾಠದಲ್ಲಿ ಇಲ್ಲದ ಕೆಲವು ಉತ್ತಮ ವಿಚಾರಗಳನ್ನು ಬೋಧಿಸುವುದರೊಂದಿಗೆ ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಮತ್ತು ಕುತೂಹಲ ಹುಟ್ಟಿಸುವ ಪ್ರಯತ್ನ ಮಾಡಬೇಕು. ಆ ಬಗ್ಗೆ ಇರುವ ಪುಸ್ತಕಗಳ ಬಗ್ಗೆ ಹೇಳಿ, ಓದುವಂತೆ ಪ್ರೇರೇಪಿಸಬೇಕು. ಹೀಗೆ ಮಾಡಿದಲ್ಲಿ ಐವತ್ತು ವಿದ್ಯಾರ್ಥಿಗಳ ಪೈಕಿ ಐದು ವಿದ್ಯಾರ್ಥಿಗಳಾದರೂ ಆ ಪುಸ್ತಕವನ್ನು ಗ್ರಂಥಾಲಯಗಳಲ್ಲಿ ಹುಡುಕುವ ಕೆಲಸ ಮಾಡಿದರೆ ಪ್ರಯತ್ನ ಸಾರ್ಥಕ.

 ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.