ಸಮಾವೇಶಕ್ಕೆ ಅನುಮತಿ ಸಾಧ್ಯತೆ; ಪೊಲೀಸ್ ಕಟ್ಟೆಚ್ಚರ
Team Udayavani, Sep 6, 2017, 9:35 AM IST
ಮಂಗಳೂರು: ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೆ. 7ರಂದು ನಡೆಯುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಈಗಾಗಲೇ ಅನುಮತಿ ನಿರಾಕರಣೆಯಾಗಿದ್ದು ನಗರದ ನೆಹರೂ ಮೈದಾನಿನಲ್ಲಿ ಸಮಾವೇಶ ನಡೆಸುವುದಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ದೊರೆಯುವ ಸಾಧ್ಯತೆಗಳಿವೆ.
ಈ ಕುರಿತು ಮಂಗಳವಾರ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ “ಮಂಗಳೂರಿನಲ್ಲಿ ಬಿಜೆಪಿಯವರ ಬೈಕ್‌ರ್ಯಾಲಿಗೆ ಈಗಾಗಲೇ ಅನುಮತಿ ನಿರಾಕರಿಸಲಾಗಿದೆ. ಇನ್ನೊಂದೆಡೆ ಸಮಾವೇಶಕ್ಕೆ ಅನುಮತಿ ಕೋರಿ ದ.ಕ. ಯುವಮೋರ್ಚಾ ಅಧ್ಯಕ್ಷರು ಮನವಿ ಸಲ್ಲಿಸಿದ್ದಾರೆ. ಸಮಾವೇಶದ ಕುರಿತು ಅವರಿಂದ ಕೆಲವು ವಿವರಗಳನ್ನು ಕೇಳಿದ್ದು ನೀಡುವುದಾಗಿ ತಿಳಿಸಿದ್ದಾರೆ. ಇವುಗಳನ್ನು ಪರಿಶೀಲಿಸಿದ ಬಳಿಕ ಸಮಾವೇಶಕ್ಕೆ ಅವಕಾಶ ನೀಡುವ ಬಗ್ಗೆ ನಿರ್ಧರಿಸಲಾಗುವುದು’ ಎಂದಿದ್ದಾರೆ.
ಈ ನಡುವೆ ರ್ಯಾಲಿ ಕೈಬಿಟ್ಟು ಕೇವಲ ಸಮಾವೇಶ ನಡೆಸುವುದಕ್ಕೆ ಬಿಜೆಪಿಯಲ್ಲಿ ಒಂದು ವರ್ಗದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರ್ಯಾಲಿ ನಡೆಸುವುದಾದರೆ ಮಾತ್ರ ಸಮಾವೇಶ ಆಯೋಜಿಸಬೇಕು ಎನ್ನುವುದು ಕೆಲವರ ಆಗ್ರಹ ವಾಗಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರುವ ಕುರಿತಂತೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ, ಯುವ ಮೋರ್ಚಾದ ಪ್ರಮುಖರ ಸಭೆ ಸಂಜೆ ಆಯೋಜಿಸಲಾಗಿದ್ದು ತಡರಾತ್ರಿಯವರೆಗೆ ಮುಂದುವರಿದಿದೆ. ಬಿಜೆಪಿ ಸ್ಪಷ್ಟ ನಿರ್ಧಾರ ಬುಧವಾರ ಹೊರ ಬೀಳುವ ಸಾಧ್ಯತೆಗಳಿವೆ.
ಬಿಗು ಬಂದೋಬಸ್ತ್, ಕಟ್ಟೆಚ್ಚರ
ಮಂಗಳೂರು ಚಲೋ ಬೈಕ್ ರ್ಯಾಲಿಗೆ ವಿಧಿಸಿರುವ ನಿರ್ಬಂಧದ ಉಲ್ಲಂಘನೆ ತಡೆಯಲು ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಮಂಗಳೂರು ನಗರ ಹಾಗೂ ದ.ಕ. ಜಿಲ್ಲೆಯಾದ್ಯಂತ ಬಿಗು ಪೊಲೀಸ್ ಬಂದೋಬಸ್ತು ಮಾಡಲಾಗಿದೆ. ಕ್ಷಿಪ್ರ ಕಾರ್ಯಾ ಚರಣೆಯ ಒಂದು ಫÉಟೂನ್, 15 ಕೆಎಸ್‌ಆರ್‌ಪಿ ತುಕುಡಿಗಳು, 15 ಸಿಎಆರ್ ಫÉಟೂನ್‌ಗಳನ್ನು ನಿಯೋ ಜಿಸ ಲಾಗುತ್ತಿದೆ. ಇದಲ್ಲದೆ ಜಿಲ್ಲೆ ಯಲ್ಲಿ ಕಾರ್ಯ ನಿರ್ವಹಿಸಿರುವ ಶಾಂತರಾಜು, ಬಾಲಕೃಷ್ಣ ಸೇರಿದಂತೆ 6 ಎಸ್‌ಪಿ ಗಳನ್ನು ಹೊರ ಜಿಲ್ಲೆಗಳಿಂದ 10 ಇನ್ಸ್ ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ.
ಪೊಲೀಸ್ ಪಡೆಯಿಂದ ಪಥಸಂಚಲನ
ರ್ಯಾಲಿಗೆ ಅನುಮತಿ ನಿರಾಕರಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಯೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 135 ಮಂದಿಯನ್ನು ಒಳಗೊಂಡ ಕ್ಷಿ³ಪ್ರ ಕಾರ್ಯಾಚರಣೆ ಪಡೆಯ (ಆರ್‌ಎಎಫ್) ಒಂದು ಕಂಪೆನಿ, ಕೆಎಸ್‌ಆರ್‌ಪಿಯಯ 10 ಪ್ಲಟೂನ್,ಸಿಎಆರ್‌ನ 5 ಪ್ಲಟೂನ್ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಉಳ್ಳಾಲದ ಮೊಗವೀರ ಪಟ್ಣ , ಕೋಟೆಪುರ, ಕೋಡಿ, ತೊಕ್ಕೊಟ್ಟು ಜಂಕ್ಷನ್, ಕುತ್ತಾರು ಮುಂತಾದೆಡೆ ಪಥಸಂಚಲನ ನಡೆಸಿತು.
ಗಡಿಭಾಗದಲ್ಲಿ ಚೆಕ್‌ಪೋಸ್ಟ್
ನಿರ್ಬಂಧವನ್ನು ಉಲ್ಲಂಘಿಸಿ ಹೊರಜಿಲ್ಲೆಗಳಿಂದ ಬೈಕ್‌ರ್ಯಾಲಿ ಆಗಮಿಸಿದರೆ ಅದನ್ನು ತಡೆಯಲು ಪೊಲೀಸ್ ಇಲಾಖೆ ಈಗಾಗಲೇ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದೆ. ಹೊರಜಿಲ್ಲೆಗಳಲ್ಲಿನ ಗಡಿಭಾಗದಲ್ಲಿ ಅಲ್ಲಿನ ಪೊಲೀಸರು ಹಾಗೂ ದ.ಕ. ಜಿಲ್ಲೆಯ ಪ್ರವೇಶ ಭಾಗದಲ್ಲಿ ತೀವ್ರ ನಿಗಾ ಇರಿಸಿದ್ದಾರೆ. ಈಗಾಗಲೇ ಜಿಲ್ಲೆಯ ಪ್ರವೇಶದ ರೂಟ್‌ಗಳನ್ನು ಗುರತಿಸಲಾಗಿದ್ದು ಪೊಲೀಸರ ಕಣ್ಣುತಪ್ಪಿಸಿ ಬರುವ ಪ್ರಯತ್ನಗಳು ನಡೆದರೆ ಅವರನ್ನು ತಡೆಯುವ ನಿಟ್ಟಿನಲ್ಲಿ ಸಿದ್ದತೆಗಳನ್ನು ಮಾಡಲಾಗಿದೆ.
ಪ್ರತಿಬಂಧಕಾಜ್ಞೆ ಸಾಧ್ಯತೆ
ಒಂದೊಮ್ಮೆ ಸಮಾವೇಶ ನಿರ್ಧಾರವಾಗದಿದ್ದರೆ ನಗರದಲ್ಲಿ 144 ಸೆಕ್ಷನ್ ಅನ್ವಯ ಪ್ರತಿಬಂಧಕಾಜ್ಞೆ ವಿಧಿಸುವ ಸಾಧ್ಯತೆಗಳಿವೆ. ಸಮಾ ವೇಶ ನಡೆಯುವುದಾದರೆ ಪೊಲೀಸ್ ಕಾಯ್ದೆ 35ರಂತೆ ನಿರ್ಬಂಧಕಾಜ್ಞೆ ಹಾಕುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಜೆಪಿಯಿಂದ ಸಿದ್ಧತೆ
ಸಮಾವೇಶದ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಬಿಜೆಪಿ ಯಿಂದ ಪೂರ್ವನಿಗದಿತ ರೀತಿಯಲ್ಲೇ ಬೈಕ್‌ರ್ಯಾಲಿಯನ್ನು ಆಯೋಜಿಸುವ ಕುರಿತು ಸಿದ್ದತೆಗಳು ನಡೆದಿವೆ. ರ್ಯಾಲಿಗೆ ಅನುಮತಿ ನಿರಾಕರಿಸುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಇದನ್ನು ಯಶಸ್ವಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಜಿಲ್ಲಾ ಬಿಜೆಪಿ ಪ್ರಮುಖರನ್ನು ವಿವಿಧ ತಾಲೂಕುಗಳಿಗೆ ಕಳುಹಿಸಿ ಅಲ್ಲಿ ಸಿದ್ದತಾ ಉಸ್ತುವಾರಿಯನ್ನು ವಹಿಸಿಕೊಡಲಾಗಿದ್ದು ಸಭೆಗಳನ್ನು ನಡೆಸಿದ್ದಾರೆ. ಆಯಾ ಊರುಗಳಿಂದ ರ್ಯಾಲಿಗೆ ಹೊರಡುವ ಸಮಯ, ಒಟ್ಟು ಸೇರುವ ಜಾಗಗಳ ಕುರಿತು ಕಾರ್ಯಕರ್ತರಿಗೆ ಮಾಹಿತಿ ನೀಡಿ ಅಂತಿಮಗೊಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.